Homeಕರ್ನಾಟಕಭಾರಿ ವಿರೋಧದ ನಡುವೆಯೂ ಐಟಿ ಕಂಪನಿಗಳಿಗೆ ನೇಮಕಾತಿ ನಿಯಮದಲ್ಲಿ ಮತ್ತೆ ವಿನಾಯ್ತಿ: ಉದ್ಯೋಗಿಗಳಿಗೆ ಶಾಕ್

ಭಾರಿ ವಿರೋಧದ ನಡುವೆಯೂ ಐಟಿ ಕಂಪನಿಗಳಿಗೆ ನೇಮಕಾತಿ ನಿಯಮದಲ್ಲಿ ಮತ್ತೆ ವಿನಾಯ್ತಿ: ಉದ್ಯೋಗಿಗಳಿಗೆ ಶಾಕ್

ಸದ್ಯ ಸಿಗುವ ಸಂಬಳ ಮತ್ತು ಸವಲತ್ತನ್ನಷ್ಟೇ ಸಮಾಜದ ಎದುರು ಪ್ರತಿಷ್ಠೆ ಎಂಬಂತೆ ವೈಭವೀಕರಣ ಮಾಡಿಕೊಳ್ಳುತ್ತಿರುವ ಐಟಿ/ಐಟಿಇಎಸ್ ಕಂಪನಿಗಳ ಉದ್ಯೋಗಿಗಳು ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ‘ಹೈಟೆಕ್ ಬಾಂಡೆಡ್ ಲೇಬರ್’ಗಳಾಗಿ ಹೋಗಿದ್ದಾರೆ.

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ರಾಜ್ಯ ಮೈತ್ರಿ ಸರ್ಕಾರ ಮೇಲಿಂದ ಮೇಲೆ ಎಡವಟ್ಟು ಮಾಡುತ್ತ ಬಂಡವಾಳಶಾಹಿಗಳ ಮುಂದೆ ಬಗ್ಗುತ್ತಿದೆ. ಕಾನೂನು ಇಲಾಖೆಯ ವ್ಯತಿರಿಕ್ತ ಅಭಿಪ್ರಾಯದ ನಂತರವೂ ಜಿಂದಾಲ್ ಕಂಪನಿಗೆ ರಾಜ್ಯದ 3,667 ಎಕರೆ ಭೂಮಿಯನ್ನು ಜಜುಬಿ ಬೆಲೆಗೆ ಮಾರಲು ಒಪ್ಪಿರುವ ಅದು, ಈಗ ಟ್ರೇಡ್ ಯುನಿಯನ್‍ಗಳ ಭಾರಿ ವಿರೋಧದ ನಡವೆಯೂ ಐಟಿ/ಐಟಿಇಎಸ್ ಕಂಪನಿಗಳ ಲಾಬಿಗೆ ಮಣಿದು ನೇಮಕಾತಿ ನಿಯಮಗಳಲ್ಲಿ ಇನ್ನೂ ಐದು ವರ್ಷಗಳ ವಿನಾಯ್ತಿ ನೀಡುವ ಆದೇಶ ಹೊರಡಿಸಿದೆ…

ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ‘ಎಚ್ಚೆತ್ತು’ಕೊಂಡಿರುವ ರಾಜ್ಯ ಸರ್ಕಾರ ಪ್ರತಿ ದಿನವೂ ಹೊಸ ಹೊಸ ಆದೇಶಗಳನ್ನು ಹೊರಡಿಸುತ್ತಿದೆ. ಆದರೆ ಅದರ ಆದ್ಯತೆ ಬಲಿತ ಬಂಡವಾಳಶಾಹಿಗಳ ಬೇಡಿಕೆಗಳಿಗೆ ಸ್ಪಂದಿಸುವುದೇ ಹೊರತು, ರಾಜ್ಯದ ಬರ ಪರಿಸ್ಥಿತಿ, ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಗೆ ಪರಿಹಾರ ರೂಪಿಸುವ ರಚನಾತ್ಮಕ ಕೆಲಸವಲ್ಲ. ರಾಷ್ಟ್ರೀಯ ಬಿಜೆಪಿ ಇಂತಹ ನೀತಿಗಳ ಕಾರಣದಿಂದಾಗಿಯೇ ಅಭೂತಪೂರ್ವ ಪಾರ್ಟಿ ಫಂಡು ಸಂಗ್ರಹಿಸಿದ್ದೇ ರಾಜ್ಯದ ಮೈತ್ರಿ ಪಕ್ಷಗಳಿಗೂ ಆದರ್ಶ ಎನಿಸಿದೆಯೇನೋ?

ರಾಷ್ಟ್ರಮಟ್ಟದಲ್ಲಿ ಮಾಹಿತಿ ತಂತ್ರಾಜ್ಞಾನ (ಐಟಿ) ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ ಸೇವಾ (ಐಟಿಇಎಸ್) ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡಲೆಂದೇ ಇರುವ ನ್ಯಾಸ್ಕಾಮ್ ಎಂಬ ಸಂಸ್ಥೆಯು ಕೆಂದ್ರ ಮತ್ತು ವಿವಿಧ ರಾಜ್ಯಗಳ ಬಜೆಟ್‍ಗಳಿಗೂ ಮೊದಲು ಸರ್ಕಾರಗಳ ಎದುರು ತನ್ನ ಹಿತಾಸಕ್ತಿಗಳಿಗೆ ಧಕ್ಕೆ ಬರದಂತೆ ವ್ಯವಸ್ಥೆ ಮಾಡುತ್ತ ಬಂದಿದೆ. ಇಂತಹ ‘ಸಾಫ್ಟ್’ ಲಾಬಿ ಮಾಡುವುದೇ ಈ ನ್ಯಾಸ್ಕಾಮ್‍ನ ಮೂಲ ಕಸುಬುದಾಂತಿದೆ.

ಈಗ ಆಗಿರುವುದೇನು?
ಕಳೆದ ಎರಡು ದಶಕಗಳಿಂದ ಈ ಐಟಿ/ಐಟಿಇಎಸ್ ಕಂಪನಿಗಳಿಗೆ 1946ರ ಕೈಗಾರಿಕಾ ಉದ್ಯೋಗ (ಸ್ಟ್ಯಾಂಡರ್ಡ್ ಆರ್ಡರ್ಸ್) ಕಾಯ್ದೆಯಿಂದ ವಿನಾಯ್ತಿ ನೀಡುತ್ತ ಬರಲಾಗಿದೆ. ಈ ಕಾಯ್ದೆ ಎಲ್ಲ ಕೈಗಾರಿಕೆಗಳಿಗೂ ಅನ್ವಯ ಆದರೂ ನವ ಉದ್ಯಮ ಎಂಬ ಕಾರಣಕ್ಕಾಗಿ ಮತ್ತು ಈ ಉದ್ಯಮದಲ್ಲಿ ಕಾರ್ಯನಿರ್ವಹಣೆಯ ಪ್ರಕ್ರಿಯೆಗಳು ಅಂತರಾಷ್ಟ್ರೀಯ ಕಾಲಮಾನಕ್ಕೆ ಸಂಬಂಧವನ್ನೂ ಹೊಂದಿವೆ ಎಂಬ ಕಾರಣಕ್ಕಾಗಿ ಈ ಉದ್ಯಮಗಳಿಗೆ ಇಪ್ಪತ್ತು ವರ್ಷಗಳಿಂದ ಈ ಕಾಯ್ದೆಯಿಂದ ವಿನಾಯ್ತಿ ನೀಡುತ್ತ ಬರಲಾಗಿದೆ. ಈ ಕಾಯ್ದೆಯು ಯಾವುದೇ ಕೈಗಾರಿಕಾ ಘಟಕದ ಉದ್ಯೋಗಿಗಳ/ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲೆಂದು ಇರುವ ಮಹತ್ವದ ಕಾಯ್ದೆ.

ಐಟಿ/ಐಟಿಇಎಸ್ ಕಂಪನಿಗಳಿಗೆ ಇದರಿಂದ ವಿನಾಯ್ತಿ ಎಂದರೆ, ಅವು ಸರ್ಕಾರದ ಯಾವ ನೇಮಕಾತಿಯ ನಿಯಮವನ್ನು ಪಾಲಿಸದೇ ತಮ್ಮ ಮಾನದಂಡಗಳಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬಹುದು, ಉದ್ಯೋಗಿಗಳಿಗೆ ಸಂಬಳ ಇತ್ಯಾದಿ ಸವಲತ್ತನ್ನು ತಮ್ಮ ನಿಯಮಗಳ ಅಡಿಯಲ್ಲಿ ಕೊಡಬಹುದು, ಸ್ತ್ರೀಯರು ಸೇರಿದಂತೆ ಎಲ್ಲ ಉದ್ಯೋಗಿಗಳೂ ರಾತ್ರಿ ಪಾಳಯ ಮತ್ತು ರಜಾದಿನಗಳಲ್ಲಿ ಕೆಲಸ ಮಾಡಬೇಕು… ಎಲ್ಲಕ್ಕಿಂತ ಅಮಾನವೀಯವಾದದು ಎಂದರೆ, ಯಾವ ಕಾರಣವನ್ನೂ ನೀಡದೇ, ಮುನ್ಸೂಚನೆಯನ್ನೂ ನೀಡದೇ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಬಹುದು. ಇಲ್ಲಿ ಟ್ರೇಡ್ ಯುನಿಯನ್‍ಗಳನ್ನು ಕಟ್ಟಲು ಅವಕಾಶವೇ ಇರದಂತಾಗಿರುವುದರಿಂದ ಉಚ್ಛಾಟಿತ ಯಾವ ನೌಕರನೂ ಪ್ರತಿಭಟನೆ ಸಲ್ಲಿಸಲಾರ. ಕಾಯ್ದೆಯೇ ಈ ಕಂಪನಿಗಳ ಪರ ಇರುವುದರಿಂದ ಕಂಪನಿಯ ತೀರ್ಮಾನವೇ ಅಂತಿಮ! ಒಟ್ಟಿನಲ್ಲಿ ಯಾವ ಕಾರ್ಮಿಕ ಕಾನೂನುಗಳೂ ಈ ಕಂಪನಿಗಳಿಗೆ ಅನ್ವಯವಾಗದು.

ಕೃಷ್ಣ-ಬಾಬು ಎಂಬ ಐಟಿ ‘ಸ್ಪೂನ್’ಗಳು!
ಈ ಉದ್ಯಮ ತಂತ್ರಜ್ಞಾನದಲ್ಲಿ ತನ್ನದೇ ಛಾಪು ಮೂಡಿಸಲಿ ಎಂಬ ಸದುದ್ದೇಶದಿಂದ ವಿವಿಧ ರಾಜ್ಯ ಸರ್ಕಾರಗಳು ಮೇಲಿನ ವಿನಾಯ್ತಿಗಳನ್ನು ಸ್ಪರ್ಧೆಗೆ ಬಿದ್ದವರಂತೆ ನೀಡುತ್ತ ಬಂದವು. 1999-2004ರ ಅವಧಿಯಲ್ಲಿ ಎಸ್‍ಎಂ ಕೃಷ್ಣ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ಕರ್ನಾಟಕ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಈ ಕಂಪನಿಗಳ ಓಲೈಕೆಗೆ ಬಿದ್ದು ತಮ್ಮ ತಮ್ಮ ರಾಜ್ಯಗಳ ಗ್ರಾಮೀಣ ಭಾಗಗಳನ್ನೆಲ್ಲ ನಿರ್ಲಕ್ಷಿಸಿ, ಕೇವಲ ಬೆಂಗಳೂರು ಮತ್ತು ಹೈದರಾಬಾದ್ ಅಭಿವೃದ್ಧಿಯೇ ತಮ್ಮ ಗುರಿ ಎಂಬಂತೆ ವರ್ತಿಸಿದವು. ಆ ಕಾರಣಕ್ಕೇ ಈ ಇಬ್ಬರು ನಾಯಕರು ಇಂಗ್ಲಿಷ್ ಮೀಡಿಯಾಗಳ ಡಾರ್ಲಿಂಗ್ ಆದರು. ಎರಡೂ ಸರ್ಕಾರಗಳ ಇತರ ನೀತಿಗಳನ್ನು ನಿರ್ಧರಿಸುವ ಹಂತಕ್ಕೂ ಇನ್ಪೋಸಿಸ್ ನಾರಾಯಣಮೂರ್ತಿ ಮತ್ತು ‘ಸತ್ಯಂ’ನ ರಾಮಲಿಂಗರಾಜು ‘ವರ್ಚಸ್ಸು’ ಬೆಳೆಸಿಕೊಂಡಿದ್ದರು. (ಮುಂದೆ ಶೇರು ಅಕ್ರಮದಿಂದಾಗಿ ಸತ್ಯಂನ ರಾಮಲಿಂಗರಾಜು ಜೈಲು ಪಾಲಾದರು, ಅದೇ ಒಂದು ದೊಡ್ಡ ಕತೆ ಬಿಡಿ!)… 2004ರ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣ ಮತ್ತು ಬಾಬು ಎಂಬ ಈ ಎರಡು ‘ಮಾಡೆಲ್’ ನಾಯಕರನ್ನು ಜನ ಕಿತ್ತೊಗೆದಿದ್ದರು.

ಮತ್ತೆ ಐದು ವರ್ಷ ರಿಯಾಯ್ತಿ!
ಆ ನಂತರ ನೇರ ಕಾರ್ಯಾಚರಣೆ ಮಾಡದ ಈ ನವೋದ್ಯಮ ಕಂಪನಿಗಳು ತಮ್ಮ ಪ್ರಾತಿನಿಧಿಕ ಸಂಸ್ಥೆ ನ್ಯಾಸ್ಡಾಕ್ ಮೂಲಕ ಐಟಿ ಮತ್ತು ಐಟಿಇಎಸ್ ಕಂಪನಿಗಳ ಹಿತ ಕಾಪಾಡಲು ಸರ್ಕಾರದ ಜೊತೆ ಲಾಬಿ ನಡೆಸುತ್ತಿವೆ. ಈ ಸಲವೂ ಅವು 1946ರ ಕೈಗಾರಿಕಾ ಉದ್ಯೋಗ (ಸ್ಟ್ಯಾಂಡರ್ಡ್ ಆರ್ಡರ್ಸ್) ಕಾಯ್ದೆಯಿಂದ ವಿನಾಯ್ತಿ ಪಡೆಯುವಲ್ಲಿ ಸಫಲವಾಗಿವೆ. ಮೊದಲಿಂದಲೂ ಇತರ ಕ್ಯಗಾರಿಕೆಗಳ ಎಲ್ಲ ಟ್ರೇಡ್ ಯುನಿಯನ್‍ಗಳು ಸರ್ಕಾರ ಈಗಲೂ ಐಟಿ ಕಂಪನಿಗಳಿಗೆ ನೀಡುತ್ತಿರುವ ಈ ಕಾರ್ಮಿಕ ವಿರೋಧಿ ವಿನಾಯ್ತಿಯನ್ನು ವಿರೋಧಿಸುತ್ತ ಬಂದಿವೆ. ಈ ಸಲವಂತೂ ಈ ಯುನಿಯನ್‍ಗಳು ಇದಕ್ಕೆ ಸಾಕಷ್ಟು ವಿರೋಧ ಮಾಡಿದ್ದವು. ಆದರೆ ಸದ್ದಿಲ್ಲದೇ, ಐಎಎಸ್ ಲಾಬಿಯ ಮೂಲಕ ಸರ್ಕಾರವನ್ನು ‘ಅಂದರ್’ ಮಾಡಿಕೊಳ್ಳುವ ನ್ಯಾಸ್ಡಾಕ್ ಸಂಸ್ಥೆ ಈ ಸಲವೂ ತನ್ನ ಕಾರ್ಯಾಚರಣೆಯಲ್ಲಿ ಸಫಲವಾಗಿದೆ.

ಈ ಜನವರಿ 24ಕ್ಕೆ ಈ ವಿನಾಯ್ತಿ ಅವಧಿ ಮುಗಿದಿತ್ತು. ಆದರೆ ಇದೀಗ ರಾಜ್ಯ ಸರ್ಕಾರವು ಹೊಸ ನೊಟೊಫಿಕೇಷನ್ ಹೊರಡಿಸಿ ಇದೇ ಮೇ 25ರಿಂದ ಇನ್ನೂ ಐದು ವರ್ಷಗಳ ಕಾಲ ಈ ವಿನಾಯ್ತಿಯನ್ನು ಮುಂದುವರೆಸಲು ಕಾರ್ಮಿಕ ಇಲಾಖೆಯ ಮೂಲಕ ಆದೇಶ ಹೊರಡಿಸಿದೆ. ಸದ್ಯ ಸಿಗುವ ಸಂಬಳ ಮತ್ತು ಸವಲತ್ತನ್ನಷ್ಟೇ ಸಮಾಜದ ಎದುರು ಪ್ರತಿಷ್ಠೆ ಎಂಬಂತೆ ವೈಭವೀಕರಣ ಮಾಡಿಕೊಳ್ಳುತ್ತಿರುವ ಐಟಿ/ಐಟಿಇಎಸ್ ಕಂಪನಿಗಳ ಉದ್ಯೋಗಿಗಳು ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ‘ಹೈಟೆಕ್ ಬಾಂಡೆಡ್ ಲೇಬರ್’ಗಳಾಗಿ ಹೋಗಿದ್ದಾರೆ. ಈ ಉದ್ಯೋಗಿಗಳಲ್ಲಿ ಶೇ 60ಕ್ಕೂ ಹೆಚ್ಚಿನ ಇಂಜಿನಿಯರ್‍ಗಳು ಮತ್ತು ಪದವೀಧರರು ಕೇವಲ ‘ಕಟ್ ಆ್ಯಂಡ್ ಪೇಸ್ಟ್’ ಕೆಲಸಕ್ಕೆ ಸಿಮೀತವಾಗಿ ಅಥವಾ ಕೋಡ್ ಮೆಂಟೆನನ್ಸ್ ತರಹದ ಪುನರಾವರ್ತಿ ಕೆಲಸಕ್ಕೆ ನಿಯೋಜನೆಗೊಂಡು ತಮ್ಮ ಜೀವನ ಸೃಜನಶೀಲತೆಯನ್ನೇ ಕಳದುಕೊಳ್ಳ ತೊಡಗಿದ್ದಾರೆ. ಇಂತಹ ಸಾಫ್ಟಿಗಳೇ ಇವತ್ತು ಅಧಿಕ ಪ್ರಮಾಣದ ಮೋದಿ ಭಕ್ತರು ಎಂಬುದರಲ್ಲಿ ಅನುಮಾನವೇ ಬೇಡ!

ಈಗಲೂ ವಿನಾಯ್ತಿ. ರಿಯಾಯ್ತಿ ಬೇಕಾ?
ಕಳೆದ ಎರಡು ವರ್ಷಗಳಿಂದ ಕಾರ್ಮಿಕ ನೀತಿಗಳಲ್ಲಿ ಎಲ್ಲ ರಿಯಾಯ್ತಿಗಳನ್ನು, ಸರ್ಕಾರದಿಂದ ಭೂಮಿ ಮತ್ತು ವಿದ್ಯುತ್ ಪಡೆಯುವಲ್ಲಿ ರಿಯಾಯ್ತಿಗಳನ್ನು ಪಡೆದು ‘ದೈತ್ಯ, ಆದರ್ಶ’ ಕಂಪನಿಗಳೆಂದು ಬೀಗುತ್ತಿರುವ ಮತ್ತು ಮೀಡಿಯಾಗಳಿಂದ ಜೈಪರಾಕ್ ಹೇಳಿಸಿಕೊಳ್ಳುತ್ತಿರುವ ಕಂಪನಿಗಳು ಈ ರಿಯಾಯ್ತಿ, ವಿನಾಯ್ತಿಗಳೆಲ್ಲ ನಮಗಿನ್ನು ಸಾಕು ಎಂದು ಏಕೆ ಹೇಳುತ್ತಿಲ್ಲ? ಇಲ್ಲೇ ಇರುವುದು ಅವುಗಳ ಕಾರ್ಯ ವಿಧಾನದ ಅಸಲಿಯತ್ತು. ಕಾರ್ಮಿಕ ನೀತಿಗಳೆಲ್ಲ ಅನ್ಯವಾದರೆ ಅಲ್ಲಿ ಟ್ರೇಡ್ ಯುನಿಯನ್‍ಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಈಗಿನಂತೆ ಕಂಪನಿ ಹಿನ್ನಡೆ ಅನುಭವಿಸಿದಾಗ ಉದ್ಯೋಗಿಗಳನ್ನು ಬೇಕಾಬಿಟ್ಟಿ ತೆಗೆದು ಹಾಕುವಂತಿಲ್ಲ. ರಾತ್ರಿ ಪಾಳೆಯದ ನಿಯಮಗಳೂ ಬದಲು ಆಗುತ್ತವಾದ್ದರಿಂದ ಈ ಕಂಪನಿಗಳ ಉಸಿರೇ ನಿಲ್ಲುತ್ತದೆ.

ಇವತ್ತಿಗೂ ಈ ಕಂಪನಿಗಳಲ್ಲಿ ಬಹುಪಾಲು ಜನ ಕಾಂಟ್ರ್ಯಾಕ್ಟ್ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಉದ್ಯೋಗಿಗಳನ್ನು ‘ಕನ್ಸಲ್ಟನ್ಸಿ’ ಎಂಬ ಆಧುನಿಕ ದಲ್ಲಾಳಿಗಳ ಮೂಲಕ ನೇಮಿಸಿಕೊಳ್ಳುತ್ತಿದ್ದು, ಇವರೆಲ್ಲತಮ್ಮ ಸಂಬಳಗಳನ್ನು ಈ ಕನ್ಸಲ್ಟನ್ಸಿಗಳ ಮೂಲಕ ಪಡೆಯುತ್ತಿದ್ದಾರೆ. ಈ ಹೊಂದಾಣಿಕೆ ಬೆವರೇ ಹರಿಸದ ಕನ್ಸಲ್ಟನ್ಸಿಗಳಿಗೂ ಮತ್ತು ಉದ್ಯೋಗಿಗಳನ್ನು ಜೀತಕ್ಕೆ ದುಡಿಸಿಕೊಳ್ಳುತ್ತಿರುವ ಐಟಿ/ಐಟಿಇಎಸ್ ಕಂಪನಿಗಳಿಗೆ ವರದಾನವಾಗಿದೆ. ರಿಯಾಯ್ತಿಯಲ್ಲಿ ಭೂಮಿ, ವಿದ್ಯುತ್ ಮತ್ತು ಇತರ ವಿನಾಯ್ತಿ ಪಡೆಯಲರಂದೇ ನೂರಾರು ರಿಯಲ್ ಎಸ್ಟೇಟ್ ಕಂಪನಿಗಳು ಐಟಿ/ಐಟಿಇಎಸ್ ಕಂಪನಿಗಳ ಹೆಸರಲ್ಲಿ ಅಖಾಡಕ್ಕೆ ಧುಮುಕಿ ದಂಧೆ ನಡೆಸಿವೆ. ಇದರಲ್ಲಿ ರಾಜಕಾರಣಿಗಳ ನೇತೃತ್ವದ ಬಿಸಿನೆಸ್ ಕಂಪನಿಗಳೂ ಪಾಲುದಾರಿಕೆ ಹೊಂದಿವೆ.

1946ರ ಕೈಗಾರಿಕಾ ಉದ್ಯೋಗ (ಸ್ಟ್ಯಾಂಡರ್ಡ್ ಆರ್ಡರ್ಸ್) ಕಾಯ್ದೆಯಿಂದ ವಿನಾಯ್ತಿ ಪಡೆದಾಗ ಮಾತ್ರ ಈ ಎಲ್ಲ ಕಾರ್ಮಿಕ ವಿರೋಧಿನ ನೀತಿಗಳನ್ನು ಅನುಸರಿಸಲು ಅವಕ್ಕೆ ಸಾಧ್ಯವಾಗಿದೆ. ಈ ಮೋಸಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾನೂನಿನ ಮಾನ್ಯತೆ ನೀಡಿರುವುದರಿಂದ ಈ ಕಂಪನಿಗಳು ಸಿಕ್ಕಾಪಟ್ಟೆ ಲಾಭ ಹೊಂಚುತ್ತಿವೆ. ಭೂಮಿ, ವಿದ್ಯುತ್, ವಿದೇಶಿ ರಫ್ತು ಸುಂಕ-ಹೀಗೆಲ್ಲ ರಿಯಾಯ್ತಿ, ವಿನಾಯ್ತಿ ಪಡೆಯುತ್ತಿರುವ ಈ ಕಂಪನಿಗಳ ಒಕ್ಕೂಟಗಳು ಪ್ರಮುಖ ಮುಖ್ಯವಾಹಿನಿ ಪಕ್ಷಗಳಿಗೆಲ್ಲ ಗುಟ್ಟಾಗಿ ಫಂಡ್ ನೀಡುತ್ತ ಭ್ರಷ್ಟಾಚಾರ ಎಸಗುತ್ತಲೇ ಬಂದಿವೆ.

ಇಂತಹ ಕಂಪನಿಗಳಿಗೆ ನಮ್ಮರಾಜ್ಯ ಸರ್ಕಾರ ಮತ್ತೆ ಐದು ವರ್ಷಗಳ ಕಾಲ ಕಾರ್ಮಿಕ ನೀತಿಗಳಿಂದ ವಿನಾಯ್ತಿ ನೀಡಿದ್ದೂ ಆಶ್ಚರ್ಯದ ವಿಷಯವೂ ಅಲ್ಲ, ವಿಸ್ಮಯವೂ ಅಲ್ಲ! ಈಗ ಕಾರ್ಮಿಕ ಪರವಿರುವ ಟ್ರೇಡ್ ಯುನಿಯನ್‍ಗಳು ಸರ್ಕಾರದ ಈ ನಡೆಯ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧವಾಗುವ ಕಾಲ ಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...