2021-22ರ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರದ ಆರೋಪದಲ್ಲಿ ಬಂಧಿತರಾಗಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಬೆಂಬಲ ನೀಡುವ ಕುರಿತು ಕಾಂಗ್ರೆಸ್‌ನ ದೆಹಲಿ ಘಟಕ ಮತ್ತು ಪಕ್ಷದ ರಾಷ್ಟ್ರೀಯ ನಾಯಕತ್ವದ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿವೆ.
दिल्ली का दुर्भाग्य
जो शिक्षा मंत्री है, वही शराब मंत्री भी है pic.twitter.com/68F4zUNxus— Delhi Congress (@INCDelhi) February 27, 2023
ದೆಹಲಿ ಕಾಂಗ್ರೆಸ್ ಘಟಕವು ಸಿಬಿಐ ಕ್ರಮವನ್ನು ಸ್ವಾಗತಿಸಿದರೆ, ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಸೋಮವಾರ ರಾತ್ರಿ ಸಿಬಿಐ ಕ್ರಮವನ್ನು ದೂಷಿಸಿದ್ದಾರೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಎಲ್ಲಾ ತನಿಖಾ ಸಂಸ್ಥೆಗಳನ್ನು “ಕಿರುಕುಳ ನೀಡುವ ಸಾಧನಗಳು” ಎಂದು ಕರೆದಿದ್ದಾರೆ.
ಮೂಲಗಳ ಪ್ರಕಾರ, ರಮೇಶ್ ಅವರು ಆಪ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂದು ಕೆಲವರು ಖಾಸಗಿಯಾಗಿ ಆರೋಪಿಸಿ ಸಾರ್ವಜನಿಕವಾಗಿ ನಿಂದಿಸಿರುವ ಬಗ್ಗೆ ರಾಜ್ಯ ನಾಯಕರು ಅಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ: ಆರು ತಿಂಗಳಲ್ಲಿ ಭಾರತ ಆರ್ಥಿಕ ಹಿಂಜರಿತ ಎದುರಿಸಬಹುದು: ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿರುವ ಬಗ್ಗೆ ಕಾಂಗ್ರೆಸ್, ”ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಆದಾಯ ತೆರಿಗೆ ಇಲಾಖೆಯನ್ನು ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಿರುಕುಳ ಸಾಧನಗಳು’” ಎಂದು ಸೋಮವಾರ ಬಣ್ಣಿಸಿದೆ.
.@INCIndia has always held the belief that institutions like ED, CBI & Income Tax Dept have become instruments of political vendetta & harassment under Modi Sarkar. These institutions have lost all professionalism. Oppn leaders are selectively targeted to destroy their reputation
— Jairam Ramesh (@Jairam_Ramesh) February 27, 2023
“ED, CBI ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳು ‘ಮೋದಿ ಸರ್ಕಾರ’ದ ಅಡಿಯಲ್ಲಿ ರಾಜಕೀಯ ಸೇಡು ಮತ್ತು ಕಿರುಕುಳದ ಸಾಧನಗಳಾಗಿವೆ ಎಂಬ ನಂಬಿಕೆಯನ್ನು ಕಾಂಗ್ರೆಸ್ ಯಾವಾಗಲೂ ಹೊಂದಿದೆ. ಈ ಸಂಸ್ಥೆಗಳು ಎಲ್ಲಾ ವೃತ್ತಿಪರತೆಯನ್ನು ಕಳೆದುಕೊಂಡಿವೆ. ಪ್ರತಿಪಕ್ಷದ ನಾಯಕರ ಪ್ರತಿಷ್ಠೆಯನ್ನು ನಾಶಮಾಡುವ ಗುರಿಯನ್ನು ಹೊಂದಿದ್ದಾರೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನದ ಬಗ್ಗೆ ಏನನ್ನೂ ಉಲ್ಲೇಖಿಸದೆ ಹೇಳಿದರು.
ಭಾನುವಾರ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದ 24 ಗಂಟೆಗಳ ನಂತರ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಪಕ್ಷದ ದೆಹಲಿ ಘಟಕದ ನಾಯಕರು ಈ ಕ್ರಮವನ್ನು ಸ್ವಾಗತಿಸಿದ್ದಾರೆ..


