Homeಮುಖಪುಟಆರು ತಿಂಗಳಲ್ಲಿ ಭಾರತ ಆರ್ಥಿಕ ಹಿಂಜರಿತ ಎದುರಿಸಬಹುದು: ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್

ಆರು ತಿಂಗಳಲ್ಲಿ ಭಾರತ ಆರ್ಥಿಕ ಹಿಂಜರಿತ ಎದುರಿಸಬಹುದು: ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್

- Advertisement -
- Advertisement -

“ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಿಂದ ಏನನ್ನು ಮರೆಮಾಚುತ್ತಿದ್ದಾರೆ” ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಅವರ ಹೇಳಿಕೆಯ ನಂತರ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು, ಜೂನ್ ನಂತರ ಭಾರತ ಆರ್ಥಿಕ ಹಿಂಜರಿತವನ್ನು ಎದುರಿಸಬಹುದು ಎಂದು ಕೇಂದ್ರ ಸಚಿವರ ಹೇಳಿಕೆಗಳು ಸೂಚಿಸುತ್ತವೆ ಎಂದು ಹೇಳಿದ್ದಾರೆ.

“ಭಾರತವು ಆರ್ಥಿಕ ಹಿಂಜರಿತವನ್ನು ಎದುರಿಸಿದರೆ, ಅದು ಜೂನ್ ನಂತರವೇ ಸಂಭವಿಸುತ್ತದೆ. ಆದರೆ ಅಂತಹ ಪರಿಸ್ಥಿತಿಯನ್ನು ತಪ್ಪಿಸಲು ಕೇಂದ್ರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈಗಾಗಲೇ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ” ಎಂದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಸಚಿವರು ಸೋಮವಾರ ಪುಣೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

“‘2014ರಿಂದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ನಾಶವಾಗಿದೆ. ಇದು 6 ತಿಂಗಳ ನಂತರ ಭಾರತದಲ್ಲಿ ಆರ್ಥಿಕ ಹಿಂಜರಿತವನ್ನು ಎದುರಿಸುವ ಮುನ್ಸೂಚನೆಯಾಗಿದೆ. ಪುಣೆಯಲ್ಲಿ ನಡೆದ ಜಿ-20 ಸಮಾವೇಶದಲ್ಲಿ ರಾಣೆ ಈ ವಿಷಯ ತಿಳಿಸಿದ್ದಾರೆ. ಪ್ರಧಾನಿ ಮತ್ತು ವಿತ್ತ ಸಚಿವೆ ದೇಶದ ಜನರಿಂದ ಏನು ಮರೆಮಾಚುತ್ತಿದ್ದಾರೆ?” ಎಂದು ರಮೇಶ್ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮೋದಿಯವರ 8 ವರ್ಷದ ಆಡಳಿತದಲ್ಲಿ ದೇಶದ ಅಭಿವೃದ್ದಿ 20 ವರ್ಷ ಹಿಂದಕ್ಕೆ ಕುಸಿದಿದೆ: ಸಿದ್ದರಾಮಯ್ಯ

ಪ್ರಸ್ತುತ G20 ಗುಂಪಿನ ಅಧ್ಯಕ್ಷರು ಭಾರತೀಯದವರೇ ಆಗಿದ್ದಾರೆ. G20 ಯ 1 ನೇ IWGಅನ್ನು ಉದ್ಘಾಟಿಸಿದ ನಂತರ ರಾಣೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ:- “ನಾನು ಸಂಪುಟದಲ್ಲಿರುವುದರಿಂದ ನಮಗೆ ಈ ಬಗ್ಗೆ ಕೆಲವು ಮಾಹಿತಿಗಳು ಲಭ್ಯವಾಗಿದೆ. ಪ್ರಧಾನಿ ಮೋದಿಜಿ ಅವರಿಂದ ನಾವು ಸಲಹೆಯನ್ನು ಪಡೆಯುತ್ತೇವೆ. ಈಗಾಗಲೇ ದೊಡ್ಡದೊಡ್ಡ ದೇಶಗಳಲ್ಲಿ ಆರ್ಥಿಕ ಹಿಂಜರಿತವಿದೆ ಎಂದು ನಾವು ಹೇಳಬಹುದು, ಇದು ವಾಸ್ತವವೂ ಹೌದು.” ಎಂದು ಸುದ್ದಿಗಾರರಿಗೆ ತಿಳಿಸಿದರು.

“ಭಾರತದ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಅಥವಾ ಜೂನ್ ನಂತರ ಬರುವ ನಿರೀಕ್ಷೆಯಿರುವ ಆರ್ಥಿಕ ಮಂದಗತಿ ನಿಲ್ಲಿಸಲು ಮೋದಿಜಿ ಮತ್ತು ಕೇಂದ್ರವು ದೇಶದ ಜನರನ್ನು ನಿಧಾನಗತಿಯಿಂದ ಪ್ರಭಾವಿತವಾಗದಂತೆ ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ರಾಣೆ ಹೇಳಿದರು.

ಭಾರತದ ಆರ್ಥಿಕ ಪರಿಸ್ಥಿತಿ ವಿಚಾರದಲ್ಲಿ ಸರ್ಕಾರದ ನಡೆ ನೋಡುತ್ತಿದ್ದರೆ ಹಲವು ಅನುಮಾನಗಳು ಜನಸಾಮಾನ್ಯರಲ್ಲಿ ಮೂಡಿವೆ. ಇತ್ತೀಚೆಗೆ ಶ್ರೀಲಂಕಾ ಎದುರಿಸಿದ ಆರ್ಥಿಕ ಬಿಕ್ಕಟ್ಟಿನಿಂದ ಆ ದೇಶದ ಜನರು ಬೀದಿಗೆ ಬರುವಂತಾಗಿತ್ತು. ಈಗಲೂ ಕೂಡ ಅಲ್ಲಿಯ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಕೆಲವು ದಿನಗಳಿಂದ ಪಕ್ಕದ ಪಾಕಿಸ್ಥಾನ ಹಾಗೂ ನೇಪಾಳದಲ್ಲೂ ಆರ್ಥಿಕ ಹಿಂಜರಿತದಿಂದ ಆ ದೇಶದ ಪ್ರಜೆಗಳು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

‘ಪ್ರಧಾನಿ ಮತ್ತು ವಿತ್ ಸಚಿವರು ದೇಶದ ಜನರಿಂದ ಏನನ್ನೋ ಮರೆಮಾಚುತ್ತಿದ್ದಾರೆ’ ಎಂದು ಕೇಂದ್ರದ ಸಚಿವರೇ ಹೇಳುತ್ತಿರುವಾಗ ಸಹಜವಾಗಿ ಜನರಲ್ಲಿ ಆರ್ಥಿಕತೆಯ ಅಧಃಪತನದ ಆತಂಕ ದೂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ರಾಹುಲ್ ಗಾಂಧಿ ಪ್ರದರ್ಶಿಸಿದ್ದು ‘ಚೀನಾ ಸಂವಿಧಾನದ’ ಪ್ರತಿಯಲ್ಲ

0
"ಭಾರತದ ಸಂವಿಧಾನದ ಮೂಲ ಪ್ರತಿಯ ಬಣ್ಣ ನೀಲಿಯಾಗಿದೆ. ಚೀನಾದ ಸಂವಿಧಾನದ ಮೂಲ ಪ್ರತಿಯ ಬಣ್ಣ ಕೆಂಪು. ರಾಹುಲ್ ಗಾಂಧಿ ಚೀನಾದ ಸಂವಿಧಾನ ತೋರಿಸಿದ್ದಾರೆಯೇ? ನಾವು ಈ ಬಗ್ಗೆ ಪರಿಶೀಲಿಸಬೇಕಿದೆ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿರುವ...