Homeಅಂತರಾಷ್ಟ್ರೀಯ'ತೈವಾನ್‌' ಸ್ವಾತಂತ್ರ್ಯವನ್ನು 'ಅಮೆರಿಕ' ಬೆಂಬಲಿಸುವುದಿಲ್ಲ!

‘ತೈವಾನ್‌’ ಸ್ವಾತಂತ್ರ್ಯವನ್ನು ‘ಅಮೆರಿಕ’ ಬೆಂಬಲಿಸುವುದಿಲ್ಲ!

- Advertisement -
- Advertisement -

ತೈವಾನ್ ನೂತನ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪ್ರೋಗ್ರೆಸ್ಸೀವ್ ಪಕ್ಷದ ಲಾಯ್ ಚಿಂಗ್ ಟೆ ನಿನ್ನೆ ಆಯ್ಕೆಯಾಗಿದ್ದಾರೆ. ಚೀನಾದ ತೀವ್ರ ವಿರೋಧ, ಬೆದರಿಕೆ ಮಧ್ಯೆ ತೈವಾನ್ ಪ್ರಜಾಪ್ರಭುತ್ವದಲ್ಲಿ ಲಾಯ್ ಚಿಂಗ್ ಟೆ ಹೊಸ ಅಧ್ಯಾಯ ಬರೆದಿದ್ದಾರೆ. ಮತದಾನಕ್ಕೆ ಮುನ್ನ ಲಾಯ್ ಅವರನ್ನು ಸೋಲಿಸುವಂತೆ ತೈವಾನ್ ಜನರಿಗೆ ‘ಚೀನಾ’ ಕೇಳಿಕೊಂಡಿತ್ತು. ಆದರೆ ತೈವಾನ್‌ನ ಮತದಾರರು ಚೀನಾದ ಬೇಡಿಕೆಯನ್ನು ತಿರಸ್ಕರಿಸಿ ಆಡಳಿತ ಪಕ್ಷಕ್ಕೆ 3ನೇ ಬಾರಿಗೆ ಗೆಲುವನ್ನು ನೀಡಿದ್ದಾರೆ. ತೈವಾನ್‌ನ ಮತದಾರರು ಚೀನಾ ವಿರೋಧಿ ಸರ್ಕಾರವನ್ನು ಆಯ್ಕೆ ಮಾಡಿರುವುದು ‘ಯುಎಸ್‌’ನ ಗೆಲುವು ಎಂದು ಹೇಳಲಾಗುತ್ತಿದ್ದರೂ, ತೈವಾನ್‌ನ ಸ್ವಾತಂತ್ರ್ಯವನ್ನು ಯುಎಸ್ ಬೆಂಬಲಿಸುವುದಿಲ್ಲ ಎಂದು ಬಿಡೆನ್ ಹೇಳಿದ್ದಾರೆ.

ಚೀನಾದೊಂದಿಗೆ ವ್ಯಾಪಾರ ಮತ್ತು ರಾಜತಾಂತ್ರಿಕತೆಯನ್ನು ವಿಸ್ತರಿಸಲು ಪ್ರತಿಜ್ಞೆ ಮಾಡಿದ್ದ ತೈವಾನ್‌ನ ವಿರೋಧ ಪಕ್ಷವಾದ  ನ್ಯಾಶನಲಿಸ್ಟ್ ಪಾರ್ಟಿಯ ಹೌ ಯು-ಇಹ್ ಅವರು ಸೋತಿದ್ದಾರೆ. ಯುಎಸ್‌ನೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿರುವ ಲಾಯ್ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ.

ತೈವಾನ್ ದ್ವೀಪವು ತನ್ನ ಭೂಪ್ರದೇಶ ಎಂದು ಚೀನಾ ದೀರ್ಘಕಾಲ ಹೇಳಿಕೊಂಡಿದೆ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಏಕೀಕರಣಕ್ಕಾಗಿ ಪ್ರತಿಪಾದಿಸಿದ್ದರು ಮತ್ತು ಮಿಲಿಟರಿ ಹಸ್ತಕ್ಷೇಪವನ್ನು ತಳ್ಳಿಹಾಕಲು ನಿರಾಕರಿಸಿದ್ದರು. 1949ರಲ್ಲಿ ಚೀನಾದಿಂದ ಬೇರ್ಪಟ್ಟ ತೈವಾನ್‌ ಬಳಿಕ ಚೀನಾವನ್ನು ಸೇರಿಕೊಂಡೇ ಇಲ್ಲ. ಆದರೆ ತೈವಾನ್ ಯಾವತ್ತಿದ್ದರೂ ತನ್ನ ಭಾಗವೇ ಎಂದು ಚೀನಾ ಹೇಳುತ್ತಿದೆ. ಯಾವುದೇ ರಾಷ್ಟ್ರ ತೈವಾನ್‌ನೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವುದನ್ನು ತಾನು ಒಪ್ಪುವುದಿಲ್ಲ ಎಂದು ಚೀನಾ ಹೇಳಿಕೊಂಡಿತ್ತು.

ಯುಎಸ್ 1970 ರಿಂದ ‘ಒನ್ ಚೀನಾ ನೀತಿ’ಯನ್ನು ನಿರ್ವಹಿಸುತ್ತಿದೆ ಮತ್ತು ತೈವಾನ್‌ನ್ನು ಚೀನಾದ ಭಾಗವಾಗಿ ಗುರುತಿಸಿದೆ. ಆದರೆ ಅದೇ ಸಮಯದಲ್ಲಿ ಅವರು ತೈವಾನ್ ಜೊತೆಗೆ ಅನಧಿಕೃತ ಸಂಬಂಧವನ್ನು ಸಹ ಇಟ್ಟುಕೊಂಡಿದೆ. ಈ ಬೆಳವಣಿಗೆಯ ಉದ್ದೇಶ ಅಸ್ಪಷ್ಟವಾಗಿದೆ ಎಂದು ಹೇಳಲಾಗಿದೆ. ಚೀನಾ ತೈವಾನ್ ಮೇಲೆ ಆಕ್ರಮಣ ಮಾಡಿದರೆ ಯುಎಸ್ ಮಿಲಿಟರಿ ಮಧ್ಯಪ್ರವೇಶಿಸುತ್ತದೆ ಎಂಬ ಬಿಡೆನ್ ಅವರ ಹೇಳಿಕೆಗಳು ಯುಎಸ್ ಮತ್ತು ಬೀಜಿಂಗ್ ನಡುವಿನ ಸಂಬಂಧವನ್ನು ಹದಗೆಡಿಸಿವೆ. ತೈವಾನ್‌ ಮೇಲೆ ಯುಎಸ್‌ಗೆ ಇರುವ ಕಾಳಜಿಯನ್ನು ಬಹಿರಂಗಪಡಿಸುತ್ತದೆ.

ಈ ಚುನಾವಣೆಯು ತೈವಾನ್‌ನ ದೃಢವಾದ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿಯನ್ನು ತೋರಿಸುತ್ತದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದರು. ಯುಎಸ್ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಬಲಾತ್ಕಾರ ಮತ್ತು ಒತ್ತಡದಿಂದ ಮುಕ್ತವಾಗಿ ಭಿನ್ನಾಭಿಪ್ರಾಯಗಳ ಬಗ್ಗೆ ಶಾಂತಿಯುತ ಪರಿಹಾರವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ಯುಎಸ್ ನ ಒನ್‌-ಚೀನಾ ನೀತಿಗೆ ಅನುಗುಣವಾಗಿ ನಮ್ಮ ದೀರ್ಘಕಾಲದ ಸಂಬಂಧವನ್ನು ಹೆಚ್ಚಿಸಲು ಲೈ ಮತ್ತು ತೈವಾನ್‌ನ ಎಲ್ಲಾ ಪಕ್ಷದ ನಾಯಕರೊಂದಿಗೆ ಯುಎಸ್ ಕೆಲಸ ಮಾಡುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತೈವಾನ್ ದ್ವೀಪ:

ಚೀನಾದ ಆಗ್ನೇಯ ಕರಾವಳಿಯಿಂದ ಸುಮಾರು 160 ಕಿಮೀ ದೂರದಲ್ಲಿ ತೈವಾನ್ ದ್ವೀಪವಿದೆ, ಅದರ ಮುಂದೆ ಚೀನಾದ ಫುಝೌ, ಕ್ವಾಝೌ ಮತ್ತು ಕ್ಸಿಯಾಮೆನ್ ನಗರಗಳಿವೆ. ಇಲ್ಲಿ ಮೊದಲು ರಾಜವಂಶದ ಸಾಮ್ರಾಜ್ಯವಿತ್ತು, ಆದರೆ 1895ರಲ್ಲಿ ಅದು ಜಪಾನ್‌ನ ಆಕ್ರಮಣಕ್ಕೆ ಒಳಗಾಯಿತು. ಎರಡನೆಯ ಮಹಾಯುದ್ಧದಲ್ಲಿ ಚೀನಾ ಜಪಾನ್‌ನ್ನು ಸೋಲಿಸಿದ ನಂತರ ಈ ದ್ವೀಪದ ನಿಯಂತ್ರಣವು ಚೀನಾದ ಕೈಗೆ ಬಂದಿತ್ತು. ಇದರ ನಂತರ ಕಮ್ಯುನಿಸ್ಟ್ ನಾಯಕ ಮಾವೋ ಝೆಡಾಂಗ್ ಚೀನಾದ ಮೇನ್‌ಲ್ಯಾಂಡ್‌ನಲ್ಲಿ ಅಂತರ್ಯುದ್ಧವನ್ನು ಗೆದ್ದರು, ಈ ಸಮಯದಲ್ಲಿ ನ್ಯಾಶನಲಿಸ್ಟ್ ಕೌಮಿಂಟಾಂಗ್ ಪಕ್ಷದ ನಾಯಕ ಚಿಯಾಂಗ್ ಕೈ-ಶೆಕ್ 1949ರಲ್ಲಿ ತೈವಾನ್‌ಗೆ ಪಲಾಯನಗೈದಿದ್ದರು.

ಚಿಯಾಂಗ್ ಕೈ-ಶೇಕ್ ಈ ದ್ವೀಪದಲ್ಲಿ ಚೀನಾ ಗಣರಾಜ್ಯದ ಸರ್ಕಾರವನ್ನು ಸ್ಥಾಪಿಸಿದರು ಮತ್ತು 1975ರವರೆಗೆ ಅದರ ಅಧ್ಯಕ್ಷರಾಗಿದ್ದರು. ಬೀಜಿಂಗ್ ತೈವಾನ್‌ನ್ನು ಸ್ವತಂತ್ರ ದೇಶವೆಂದು ಎಂದಿಗೂ ಒಪ್ಪಿಕೊಂಡಿಲ್ಲ ಮತ್ತು ಅದನ್ನು ಯಾವಾಗಲೂ ಚೀನಾದ ಅವಿಭಾಜ್ಯ ಅಂಗವೆಂದೇ ಹೇಳಿಕೊಂಡು ಬಂದಿದೆ. ಮತ್ತೊಂದೆಡೆ ತೈವಾನ್ ಆಧುನಿಕ ಚೀನೀ ರಾಜ್ಯವು 1911ರ ಕ್ರಾಂತಿಯ ನಂತರ ಅಸ್ತಿತ್ವಕ್ಕೆ ಬಂದಿತು. ತೈವಾನ್ ಕಮ್ಯುನಿಸ್ಟ್ ಕ್ರಾಂತಿಯ ನಂತರ ಸ್ಥಾಪಿತವಾದ ರಾಜ್ಯ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿರಲಿಲ್ಲ ಎಂದು ವಾದಿಸುತ್ತದೆ. ಅಂದಿನಿಂದ ಈ ರಾಜಕೀಯ ಉದ್ವಿಗ್ನತೆ ಮುಂದುವರಿದಿದೆ, ಚೀನಾ ಮತ್ತು ತೈವಾನ್ ನಡುವೆ ಆರ್ಥಿಕ ಸಂಬಂಧಗಳು ಸಹ ಇದ್ದವು. ಅನೇಕ ತೈವಾನ್‌  ವಲಸಿಗರು ಚೀನಾದಲ್ಲಿ ಕೆಲಸ ಮಾಡುತ್ತಾರೆ ಮತ್ತು ಚೀನಾ ಕೂಡ ತೈವಾನ್‌ನಲ್ಲಿ ಹೂಡಿಕೆ ಮಾಡಿದೆ.

ಯುಎಸ್-ತೈವಾನ್:

ಯುಎಸ್ ತೈವಾನ್ ಅನ್ನು ಪ್ರತ್ಯೇಕ ದೇಶವೆಂದು ಗುರುತಿಸುವುದಿಲ್ಲ. ವಿಶ್ವದ ಕೇವಲ 13 ದೇಶಗಳು ತೈವಾನ್ ಅನ್ನು ಒಂದು ದೇಶವೆಂದು ಗುರುತಿಸುತ್ತಿವೆ. ಇದರಲ್ಲಿ ಮುಖ್ಯವಾಗಿ ದಕ್ಷಿಣ ಅಮೇರಿಕಾ, ಕೆರಿಬಿಯನ್, ಓಷಿಯಾನಿಯಾ ಮತ್ತು ವ್ಯಾಟಿಕನ್ ದೇಶಗಳು ಸೇರಿವೆ. ಈ ವಿಷಯದಲ್ಲಿ ಅಮೆರಿಕ ಯಾವಾಗಲೂ ತನ್ನ ಕಾರ್ಯತಂತ್ರವನ್ನು ಅಸ್ಪಷ್ಟವಾಗಿ ಇರಿಸಿದೆ. ಜೂನ್‌ನಲ್ಲಿ ಅಧ್ಯಕ್ಷ ಬೈಡೆನ್ ಅವರು ತೈವಾನ್‌ನ ಮೇಲೆ ದಾಳಿಯಾದರೆ ಅದನ್ನು ಯುಎಸ್ ರಕ್ಷಿಸುತ್ತದೆ ಎಂದು ಹೇಳಿದ್ದರು. ಆದರೆ ತೈವಾನ್‌ನ ಸ್ವಾತಂತ್ರ್ಯವನ್ನು ಯುಎಸ್ ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ತೈವಾನ್ ಜೊತೆ US ಯಾವುದೇ ಔಪಚಾರಿಕ ಸಂಬಂಧವನ್ನು ಹೊಂದಿಲ್ಲ. ಯುಎಸ್‌ ಅಂತಾರಾಷ್ಟ್ರೀಯವಾಗಿ ತೈವಾನ್‌ಗೆ  ಬೆಂಬಲಿಸುತ್ತದೆ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಮಾಡುತ್ತದೆ.

ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಈ ಹಿಂದೆ ತೈವಾನ್‌ಗೆ ತೆರಳಿದ್ದರು. ತೈವಾನ್‌ನಲ್ಲಿ ಅಮೆರಿಕದ ಹಿರಿಯ ವ್ಯಕ್ತಿಯ ಉಪಸ್ಥಿತಿಯು ಯುಎಸ್ ತನ್ನ ಸ್ವಾತಂತ್ರ್ಯಕ್ಕಾಗಿ ತೈವಾನ್‌ನ್ನು ಬೆಂಬಲಿಸುತ್ತದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಚೀನಾ ಭಾವಿಸಿತ್ತು.

ಇದನ್ನು ಓದಿ: ‘ಒಬಿಸಿ’ ಸಮುದಾಯವನ್ನು ಅವಮಾನಿಸಿದ ಬಾಬಾ ರಾಮ್‌ದೇವ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...