Homeಕರ್ನಾಟಕಇದು ಜಾತ್ಯತೀತ ರಾಷ್ಟ್ರ, ಹಿಂದೂ ರಾಷ್ಟ್ರ ಬೇಕು ಅನ್ನೋರು ದೇಶ ಬಿಟ್ಟು ಹೋಗಿ: ಬಾಲನ್‌

ಇದು ಜಾತ್ಯತೀತ ರಾಷ್ಟ್ರ, ಹಿಂದೂ ರಾಷ್ಟ್ರ ಬೇಕು ಅನ್ನೋರು ದೇಶ ಬಿಟ್ಟು ಹೋಗಿ: ಬಾಲನ್‌

"ನಮ್ಮ ದೇಶದಲ್ಲಿ ಸಾವಿರ ವರ್ಷಗಳಿಂದ ಹಿಜಾಬ್‌ ಧರಿಸುತ್ತಿದ್ದಾರೆ. ಸುಲ್ತಾನರ ಕಾಲದಲ್ಲಿ, ಮೊಘಲ್‌, ಶಿವಾಜಿ ಕಾಲದಲ್ಲಿ, ವಿಜಯನಗರ ಅರಸರ ಕಾಲದಲ್ಲಿ ಹಿಜಾಬ್‌‌ ಇತ್ತು."

- Advertisement -
- Advertisement -

“ನಾವು ಮರೆತ್ತಿಲ್ಲ. ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್‌ ಧರಿಸಿದ ಮಹಿಳೆಯರಿಗೆ ಥಳಿಸಿದವರು ನೀವು.  ಅಂದು ಏಟು ತಿಂದ ಮಹಿಳೆಯರ್‍ಯಾರೂ ಮುಸ್ಲಿಮರಲ್ಲ, ಶೂದ್ರರು” ಎಂದು ಹೈಕೋರ್ಟ್ ಹಿರಿಯ ವಕೀಲರಾದ ಎಸ್.ಬಾಲನ್‌ ಹೇಳಿದರು.

ಹಿಜಾಬ್‌‌ ಸಂಬಂಧ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ಹೆಣ್ಣುಮಕ್ಕಳು, ಶೂದ್ರರು ಓದಬಾರದೆಂದು ಕಾನೂನು ಮಾಡಿದವರು ನೀವು. ಬ್ರಾಹ್ಮಣ ಮಹಿಳೆಯರಿಗೂ ಓದುವ ಅವಕಾಶ ನೀಡದವರು ನೀವು. ಹಿಂದೂ ಕೋಡ್‌ ಬಿಲ್‌ ಮಂಡಿಸಿ ಮಹಿಳೆಯರಿಗೆ ವಿಚ್ಛೇದನಾ ಹಕ್ಕು, ಆಸ್ತಿಯಲ್ಲಿ ಹಕ್ಕು ಕೊಟ್ಟಿದ್ದು ಅಂಬೇಡ್ಕರ್‌. ಸಂವಿಧಾನ ಶಿಲ್ಪಿ ಅಂಬೇಡ್ಕರ್‌‌ ರವರ ಮನೆಯ ಮುಂದೆ ಧಿಕ್ಕಾರ ಹಾಕಿದವರು ನೀವು” ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮಗಳಲ್ಲಿ ಒಂದು ದನಿ ಬರುತ್ತಿದೆ. ನಾವು ಹಿಂದೂ ರಾಷ್ಟ್ರ ಕಟ್ಟುತ್ತೇವೆ. ಹಾಗಾಗಿ ನೀವು ಹಿಜಾಬ್  ಧರಿಸಬಾರದು. ಹಿಜಾಬ್‌ ಧರಿಸಿದರೆ ನೀವು ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಿದ್ದಾರೆ. ಈ ದೇಶ ಜಾತ್ಯತೀತ ದೇಶ. ಪಾಕಿಸ್ತಾನವಲ್ಲ. ಪಾಕಿಸ್ತಾನ ಧಾರ್ಮಿಕ ದೇಶ. ಹಿಂದೂ ರಾಷ್ಟ್ರ ಬೇಕು ಅನ್ನೋರು ದೇಶ ಬಿಟ್ಟು ಹೋಗಿ ಎಂದು ಬಾಲನ್‌ ಗುಡುಗಿದರು.

ಇದನ್ನೂ ಓದಿರಿ: ತಾರಕಕ್ಕೇರಿದ ಹಿಜಾಬ್, ಕೇಸರಿ ಶಾಲು ವಿವಾದ: ಶಿವಮೊಗ್ಗದಲ್ಲಿ ಕೇಸರಿ ಧ್ವಜ ಹಾರಿಸಿ ರಾಷ್ಟ್ರಧ್ವಜಕ್ಕೆ ಅವಮಾನ

ಈ ದೇಶ ಈ ಜನರ ದೇಶ. ಜನರ ಹಕ್ಕುಗಳಿಗೆ ಧಕ್ಕೆ ಮಾಡಬೇಡಿ. ನಿಮ್ಮ ರಾಜಕೀಯ ರಕ್ತದ ಮೇಲೆ, ದ್ವೇಶದ ಮೇಲೆ ನಿಂತಿದೆ. ಗುಜರಾತ್‌ನಲ್ಲಿ ಮುಸ್ಲಿಮರನ್ನು ಕೊಂದಿರಿ. ದಲಿತರು, ಹಿಂದುಳಿದವರನ್ನು ಜೈಲಿಗೆ ತಳ್ಳಿದಿರಿ. ವೈಶ್ಯರು, ಬ್ರಾಹ್ಮಣರು ಅಧಿಕಾರ ಹಿಡಿದು ಐಶಾರಾಮಿ ಜೀವನ ಮಾಡಿದಿರಿ ಎಂದು ವಾಗ್ದಾಳಿ ನಡೆಸಿದರು.

ಹಿಜಾಬ್‌, ಖಿಮರ್‌, ಅಬಯ ಎಂದರೆ ಏನು? ಹಿಜಾಬ್‌‌ ಎಂದರೆ ತಲೆಯ ಮೇಲೆ ಬಟ್ಟೆಯನ್ನು ಧರಿಸಿಕೊಳ್ಳುವುದು. ಖಿಮಾರ್‌ ಅಂದರೆ ಚಕ್ರಾಕಾರದ ಬಟ್ಟೆಯನ್ನು ತಲೆಯ ಮೇಲೆ ಹಾಕಿಕೊಳ್ಳುವುದು. ಅಬಯ ಅಂದರೆ ಇಡೀ ದೇಹದ ಮೇಲೆ ಬಟ್ಟೆಯನ್ನು ಧರಿಸುವುದು ಇಷ್ಟೇ. ಇದರ ಬಗ್ಗೆ ಕುರಾನ್‌ನಲ್ಲಿದೆ, ಶರಯತ್‌ನಲ್ಲಿದೆ. ಸಾಧಾರಣ ಉಡುಗೆ ಇರಬೇಕು. ದೇಹಾಕೃತಿ ಹೊರಗೆ ಕಾಣಬಾರದು ಎಂದು ಇಸ್ಲಾಂ ನಂಬಿದೆ. ಇದನ್ನು 1400 ವರ್ಷಗಳಿಂದ ಇಸ್ಲಾಂ ಅನುಯಾಯಿಗಳು ಅನುಸರಿಸುತ್ತಾ ಬಂದಿದ್ದಾರೆ. ಇದರ ಬಗ್ಗೆ ತಿಳಿಯಬೇಕಾದರೆ ಕುರಾನ್‌ ಓದಬೇಕು. ಚಾಪ್ಟರ್‌ 24 ವರ್ಸಸ್‌ 31 ಓದಿ, 34 ವರ್ಸಸ್‌‌ 59 ಓದಿ. ಇದರಲ್ಲಿ ಹಿಜಾಬ್‌, ಖಿಮೂರ್‌‌, ಹಿಜಾಬ್‌ ಕುರಿತು ವಿವರಗಳಿವೆ. ಇದೊಂದು ಧಾರ್ಮಿಕ ಆಚರಣೆ. ಇದೊಂದು ಧಾರ್ಮಿಕ ‍ವಸ್ತ್ರ. ಅದು ಅವರ ಧಾರ್ಮಿಕ ಹಕ್ಕು ಎಂದು ಪ್ರತಿಪಾದಿಸಿದರು.

ನಮ್ಮ ದೇಶದಲ್ಲಿ ಸಾವಿರ ವರ್ಷಗಳಿಂದ ಹಿಜಾಬ್‌ ಧರಿಸುತ್ತಿದ್ದಾರೆ. ಸುಲ್ತಾನರ ಕಾಲದಲ್ಲಿ, ಮೊಘಲ್‌, ಶಿವಾಜಿ ಕಾಲದಲ್ಲಿ, ವಿಜಯನಗರ ಅರಸರ ಕಾಲದಲ್ಲಿ ಹಿಜಾಬ್‌‌ ಇತ್ತು. ಮುಸ್ಲಿಂ ಮಹಿಳೆಯರು ತಮ್ಮ ಗುರುತು ಎಂಬಂತೆ ಹಿಜಾಬ್‌ ಧರಿಸುತ್ತಲೇ ಬಂದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹಜರತ್ ಬೇಗಂ ಥರದ ವೀರ ಮಹಿಳೆಯರೂ ಹಿಜಾಬ್‌ ಧರಿಸಿ ಹೋರಾಡಿದ್ದರು ಎಂದು ಹೇಳಿದರು.

ಇದನ್ನೂ ಓದಿರಿ: Hijab Live | ಹಿಜಾಬ್‌ ಅರ್ಜಿ ವಿಚಾರಣೆ ಲೈವ್‌ | ಇರಿ ನಾನು ಕೆಲವು ಟಿಪ್ಪಣಿ ಮಾಡುತ್ತೇನೆ: ನ್ಯಾಯಮೂರ್ತಿ ದೀಕ್ಷಿತ್‌

ಸಿಖ್‌ಗಳು ಶೇ. 1.8 ಇದ್ದಾರೆ. ಇಸ್ಲಾಮಿಯರ ಸಂಖ್ಯೆ ಶೇ. 15ರಷ್ಟು ಇದೆ. ಅಂದರೆ ದೇಶದಲ್ಲಿ ಇಪ್ಪತ್ತು ಕೋಟಿ ಜನರಿದ್ದಾರೆ. ಸಿಖ್‌ಗಳು ಆರ್ಮಿಯಲ್ಲಿ ಗಡ್ಡ ಬಿಟ್ಟಿರುತ್ತಾರೆ. ಟರ್ಬನ್ ಹಾಕಿರುತ್ತಾರೆ. ಅವರನ್ನು ಶಾಲೆಗಳಲ್ಲಿ ಸೇರಿಸಿಕೊಳ್ಳುತ್ತೀರಿ. ಸಿಖ್‌ಗಳು ಗಡ್ಡ ಬಿಡುವುದು, ಮುಸ್ಲಿಮರು ಹಿಜಾಬ್‌ ಧರಿಸುವುದು ಎರಡೂ ಒಂದೇ. ಅವರು ಗಡ್ಡ ಬಿಡಬಹುದು, ಇವರು ಹಿಜಾಬ್ ಹಾಕಬಾರದು. ಹಿಂದೂ ಮಹಿಳೆಯರು ಹಣೆಗೆ ಬಿಂದಿ ಇಡುತ್ತಾರೆ, ಕೈಗೆ ಬಳೆ ಹಾಕುತ್ತಾರೆ.  ಹೂ ಮುಡಿಯುತ್ತಾರೆ. ಸೆರಗು ಹಾಕಿಕೊಳ್ಳುತ್ತಾರೆ. ಅದು ಅವರ ಧಾರ್ಮಿಕ ಹಕ್ಕು ಎಂದು ತಿಳಿಸಿದರು.

ನೀವು ತಂದಿರುವ ಆದೇಶ ಬಾಂಬೇ ಹಾಗೂ ಕೇರಳ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಿದೆ. ಹಿಜಾಬ್‌ ಧರಿಸುವುದು ಧಾರ್ಮಿಕರ ಹಕ್ಕು. ಆ ಧಾರ್ಮಿಕ ಗುರುತನ್ನು ಕೆಡಿಸಬೇಡಿ.

“ಇವರಿಗೂ ಭಯೋತ್ಪಾದನೆ ಸಂಘಟನೆಗೂ ಸಂಬಂಧ ಇದೆಯಾ ಹುಡುಕಿ, ಕಾಲ್ ಡೀಟೆಲ್ ತೆಗೆದುಕೊಳ್ಳಿ” ಎಂದು ಉನ್ನತ ಅಧಿಕಾರಿಗಳಿಗೆ ಹೋಮ್‌ ಮಿನಿಸ್ಟರ್‌ ಆದೇಶ ಮಾಡಿದ್ದಾರಂತೆ. ಇವರನ್ನು (ಹೆಣ್ಣುಮಕ್ಕಳನ್ನು) ಯುಎಪಿಎ ಕಾಯ್ದೆಯಡಿ ಸಿಕ್ಕಿಸಲು ನೀವು ಪ್ಲಾನ್ ಮಾಡ್ತಾ ಇದ್ದೀರಾ. ದೇಶದ್ರೋಹದ ಅಡಿಯಲ್ಲಿ ಬಂಧಿಸಲು ಪ್ಲಾನ್ ಮಾಡ್ತಾ ಇದ್ದೀರಿ. ಇದನ್ನು ಒಪ್ಪುವುದಿಲ್ಲ” ಎಂದರು.

ಇವತ್ತು ಮುಸ್ಲಿಮರ ಮೇಲೆ, ಕ್ರೈಸ್ತರ ಮೇಲೆ, ಕಮ್ಯುನಿಸ್ಟರು, ಕಾರ್ಮಿಕರು, ಆದಿವಾಸಿಗಳ ಮೇಲೆ ಎರಗಿದ್ದೀರಿ. ನಾಳೆ ನೀವು ಸಿಖ್‌ಗಳ ಮೇಲೆ ಬರುತ್ತೀರಿ. ದೇಶವನ್ನು ಕಟ್ಟಿರುವ ಶೇ. 95ರಷ್ಟು ಜನರಿಗೆ ತೊಂದರೆ ಕೊಡುತ್ತಿದ್ದೀರಿ. ಕಾರ್ಮಿಕರು, ರೈತರ ಹಕ್ಕನ್ನು ಕಿತ್ತುಕೊಂಡಿದ್ದೀರಿ. ವ್ಯಾಪಾರಿಗಳ ಹಕ್ಕನ್ನು ಜಿಎಸ್‌ಟಿ ಹಾಕಿ ಕಿತ್ತುಕೊಂಡಿದ್ದೀರಿ. ಜನರ ಹಕ್ಕನ್ನು ಡಿಮಾಟೈಷೇಷನ್‌ ಮಾಡಿ ಕಿತ್ತುಕೊಂಡಿದ್ದೀರಿ. ಏರೋಪ್ಲೇನ್‌, ರೋಡ್‌, ಟೆಲಿಫೋನ್‌ ಎಲ್ಲವನ್ನೂ ಮಾರುತ್ತಿದ್ದೀರಿ. ಇದನ್ನು ಮುಚ್ಚಿಹಾಕಲು ಹಿಜಾಬ್‌ ಎನ್ನುತ್ತಿದ್ದೀರಿ. ಇದು ಸರಿಯಲ್ಲ. ಜನ ನಿಮಗೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.


ಇದನ್ನೂ ಓದಿರಿ: ಹಿಜಾಬ್ ವಿವಾದ: ಮುಸ್ಲಿಂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಜೈ ಶ್ರೀರಾಮ್ ಘೋಷಣೆ, ವಿದ್ಯಾರ್ಥಿನಿಯರ ತಿರುಗೇಟು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬಾಲನ್ ಅವರೇ ಇದು ಹಿಂದೂ ನೆಲಗಟ್ಟಿನ ಮೇಲೆ ನಿರ್ಮಾಣ ಆಗಿರುವ ದೇಶ ,ಇಲ್ಲಿ ಹಿಂದೂಗಳೇ ಸಾರ್ವಭೌಮ ನೀನು ದೇಶ ಬಿಟ್ಟು ಹೋಗಬಹುದು

  2. ಬಾಲನ್ ಅವರೇ ಇದು ಹಿಂದೂ ನೆಲಗಟ್ಟಿನ ಮೇಲೆ ನಿರ್ಮಾಣ ಆಗಿರುವ ದೇಶ ,ಇಲ್ಲಿ ಹಿಂದೂಗಳೇ ಸಾರ್ವಭೌಮ ನೀನು ದೇಶ ಬಿಟ್ಟು ಹೋಗಬಹುದು

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...