ಕೊರೊನಾ ಎರಡನೆ ಅಲೆಯು ದೇಶದಾದ್ಯಂತ ತೀವ್ರವಾಗಿ ಹೆಚ್ಚುತ್ತಿದೆ. ಇಂದು ದೇಶದಲ್ಲಿ 3.86 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಸೋಂಕಿನ ಎರಡನೆ ಅಲೆಯ ಬಗ್ಗೆ ತಜ್ಞರು ಬಿಜೆಪಿಯ ನರೇಂದ್ರ ಮೋದಿ ಸರ್ಕಾರವನ್ನು ಈ ಹಿಂದೆಯೆ ಎಚ್ಚರಿಸಿದ್ದರು. ಆದರೆ ಕೇಂದ್ರ ಸರ್ಕಾರ ಮಾತ್ರ ಯಾವುದೆ ತಯಾರಿಗಳನ್ನು ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ದೇಶದಲ್ಲಿ ಕನಿಷ್ಠ ಆರೋಗ್ಯ ಸೌಲಭ್ಯ ಸಿಗದ ಸಾಮಾನ್ಯ ಜನರ ಆಕ್ರಂದನ ಮುಗಿಲು ಮುಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಉಲ್ಲೇಖಿಸದೆ, “ನೋವು ಕೇಳಲು ಸಿದ್ದರಿಲ್ಲದ ಹೃದಯ ಹೃದಯವೇ ಅಲ್ಲ, ಅದು ಕಲ್ಲು” ಎಂದು ಗುರುವಾರ ಕುಟುಕಿದ್ದಾರೆ.
ಇದನ್ನೂ ಓದಿ: ‘ಕೊಲೆ ಪ್ರಕರಣ’- ವರದಿ ನಿಲ್ಲಿಸುವಂತೆ ಕೋರ್ಟ್ ಮೆಟ್ಟಿಲೇರಿದ ಚುನಾವಣಾ ಆಯೋಗ!
ಅವರು ಟ್ವಿಟರ್‌ನಲ್ಲಿ, “ಭಾವನೆಗಳಿಂದ ತುಂಬಿಲ್ಲದ, ನೋವು ಕೇಳಲು ಯಾರು ಸಿದ್ಧರಿಲ್ಲದ, ಹೃದಯವು ಹೃದಯವೇ ಅಲ್ಲ, ಅದು ಕಲ್ಲು. ಈ ‘ವ್ಯವಸ್ಥೆ’ಗೆ ಜನರೊಂದಿಗೆ ಪ್ರೀತಿಯೆ ಇಲ್ಲ” ಎಂದು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
जो भरा नहीं है भावों से,
जो दर्द सुनने को तैयार नहीं,
वह हृदय नहीं है पत्थर है,
जिस ‘सिस्टम’ को जन से प्यार नहीं!— Rahul Gandhi (@RahulGandhi) April 29, 2021
ಶುಕ್ರವಾರ ಮತ್ತೆ ಟ್ವೀಟ್ ಮಾಡಿರುವ ಅವರು, ಚಿಕಿತ್ಸೆ ಸಿಗದೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿರುವ ಭಾರತೀಯರಿಗೆ ಸಂತಾಪ ವ್ಯಕ್ತಪಡಿಸಿದ್ದು, ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಎಕ್ಸಿಟ್ ಪೋಲ್: ತಮಿಳುನಾಡಿನಲ್ಲಷ್ಟೇ ಬದಲು, ಉಳಿದೆಡೆ ಅವೇ ಸರ್ಕಾರ ಮುಂದುವರಿಕೆ
ಅವರು, “ಚಿಕಿತ್ಸೆಯ ಕೊರತೆಯಿಂದಾಗಿ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿರುವ ದೇಶವಾಸಿಗಳಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ. ಈ ದುರಂತದಲ್ಲಿ ನೀವು ಒಬ್ಬಂಟಿಯಲ್ಲ. ದೇಶದ ಪ್ರತಿಯೊಂದು ರಾಜ್ಯದಿಂದಲೂ ಪ್ರಾರ್ಥನೆ ಮತ್ತು ಸಹಾನುಭೂತಿ ನಿಮ್ಮೊಂದಿಗೆ ಇರುತ್ತದೆ. ನಾವು ಒಟ್ಟಿಗೆ ಇದ್ದರೆ, ಭರವಸೆ ಇದ್ದಂತೆ” ಎಂದು ಹೇಳಿದ್ದಾರೆ.
इलाज की कमी के चलते अपने प्रियजन खो रहे देशवासियों को मेरी संवेदनाएँ।
इस त्रासदी में आप अकेले नहीं हैं- देश के हर राज्य से प्रार्थना व सहानुभूति आपके साथ है।
साथ हैं तो आस है।
— Rahul Gandhi (@RahulGandhi) April 30, 2021
ಇದನ್ನೂ ಓದಿ: ಇತಿಹಾಸ: 60 ಲಕ್ಷ ಜನರ ಹತ್ಯಾಕಾಂಡದ ರೂವಾರಿ ‘ಅಡಾಲ್ಫ್ ಹಿಟ್ಲರ್’ ಆತ್ಮಹತ್ಯೆ ಮಾಡಿಕೊಂಡ ದಿನವಿಂದು!


