Homeಕರ್ನಾಟಕ'ಶೈಕ್ಷಣಿಕ ವಲಯದ ಮಹಾ ದುರಂತ': ಕೇಂದ್ರೀಯ ವಿವಿಯಲ್ಲಿ ಆರ್‌ಎಸ್‌ಎಸ್‌ ಸಭೆಗೆ ಜಾಗೃತ ನಾಗರಿಕರ ಖಂಡನೆ

‘ಶೈಕ್ಷಣಿಕ ವಲಯದ ಮಹಾ ದುರಂತ’: ಕೇಂದ್ರೀಯ ವಿವಿಯಲ್ಲಿ ಆರ್‌ಎಸ್‌ಎಸ್‌ ಸಭೆಗೆ ಜಾಗೃತ ನಾಗರಿಕರ ಖಂಡನೆ

- Advertisement -
- Advertisement -

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್‌ ಸಭೆ ನಡೆಸಿರುವುದನ್ನು ‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆ ಖಂಡಿಸಿದೆ.

ಕೇಂದ್ರೀಯ ವಿಶ್ವ ವಿದ್ಯಾಲಯವನ್ನು ಕೋಮುವಾದದ ಆಡುಂಬೊಲ ಮಾಡಲು ಹೊರಟಿರುವ ಅಲ್ಲಿನ ಆಡಳಿತ ಮಂಡಳಿಯ ಈ ಕುಕೃತ್ಯ ಶೈಕ್ಷಣಿಕ ವಲಯದ ಮಹಾ ದುರಂತವಾಗಿದೆ. ವಿವಿಯಲ್ಲಿ ಸಂಘಿಗಳ ಸಭೆ, ಚಟುವಟಿಕೆ ನಡೆಸುವುದು, ಸಂಘದ ಗೀತೆಯಾಗಿರುವ ನಮಸ್ತೇ ಸದಾ ವತ್ಸಲೇ ಹಾಡಿಸುವುದು ದೇಶದ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ ಎಂದು ಸಂಘಟನೆಯ ಕೆ. ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ಎಸ್‌.ಜಿ ಸಿದ್ದರಾಮಯ್ಯ, ವಿಜಯಾ, ಬಿ.ಶ್ರೀಪಾದ ಭಟ್, ಕೆ.ಎಸ್‌. ವಿಮಲಾ, ಟಿ ಸುರೇಂದ್ರ ರಾವ್, ಮೀನಾಕ್ಷಿ ಬಾಳಿ, ಬಿ.ಎನ್‌ ಯೋಗಾನಂದ, ಎನ್‌.ಗಾಯತ್ರಿ ಹೇಳಿದ್ದಾರೆ.

ವಿವಿಯಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಚಟುವಟಿಕೆಗಳು, ಜನೋಪಯೋಗಿ ಸಂಶೋಧನೆಗಳು, ವರ್ತಮಾನದ ತಲ್ಲಣಗಳ ಕುರಿತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಚಿಂತನ-ಮಂಥನಗಳನ್ನು ನಡೆಸುವುದು ಅದರ ಶ್ರೇಯಸ್ಸಿಗೆ ಅಗತ್ಯವಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳ ಬೆಳವಣಿಗೆಯಾಗುತ್ತದೆ. ಆದರೆ, ಇಲ್ಲಿ ಸಂಕುಚಿತ ಮನಸ್ಥಿತಿಯನ್ನು ಮೂಡಿಸುವ, ಧರ್ಮದ್ವೇಷ, ಹಗೆತನ, ದೇಶದ ಸಂವಿಧಾನ ಎಂದಿಗೂ ಒಪ್ಪಲಾರದ ಕೋಮುದ್ವೇಷಗಳನ್ನು ತುಂಬುವ ಆರ್‌ಎಸ್‌ಎಸ್‌ ಪ್ರತಿಪಾದಿಸುವ ದೇಶ ವಿಭಜಕ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ ಎಂಬುದು ಮತ್ತೆ ಮತ್ತೆ ದೃಢಪಡುತ್ತಿದೆ ಎಂದಿದ್ದಾರೆ.

ಈ ಮೊದಲೇ ಇಂಥಹ ಚಟುವಟಿಕೆಗಳು ನಡೆದಾಗ ಸ್ಥಳೀಯ ಸಂವಿಧಾನ ಪರ, ಪ್ರಗತಿಶೀಲರು ಬೃಹತ್ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದರು. ಸ್ವಲ್ಪ ದಿನ ಸಮ್ಮನಿದ್ದಂತೆ ನಟಿಸಿ, ಮತ್ತೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಿದೆ ಎಂಬ ಕಾರಣಕ್ಕೆ ತಮ್ಮ ಚಟುವಟಿಕೆಗಳನ್ನು ಶುರು ಮಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಕೇಂದ್ರೀಯ ವಿಶ್ವ ವಿದ್ಯಾಲಯ ದೇಶದ ಆಸ್ಥಿಯೇ ಹೊರತು, ಯಾವುದೇ ಒಂದು ಪಕ್ಷದ ಅಥವಾ ಕೋಮುವಾದಿ ಸಿದ್ದಾಂತವನ್ನು ಪ್ರತಿಪಾದಿಸುವ ಸಂಘಟನೆಯ ಆಸ್ತಿಯಲ್ಲ. ವಿವಿ 140 ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆಯಾಗಿ ದೇಶದ ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸಬೇಕೇ ಹೊರತು, ಕೇಶವ ಕೃಪಾ ಅಥವಾ ನಾಗಪುರದ ಕಛೇರಿಯಾಗಿ ಅಲ್ಲ ಎಂದಿರುವ ಸಂಘಟನೆಯ ಪ್ರಮುಖರು, ಕಲಬುರಗಿಯ ಪ್ರಜ್ಞಾವಂತ ಜನರು ಕೋಮುವಾದಿ ಸಂಘಿಗಳ ಹುನ್ನಾರದ ವಿರುದ್ಧ ನಡೆಸುವ ಎಲ್ಲಾ ಸಂವಿಧಾನ ಪರ, ನಿಜ ಭಾರತದ ಉಳಿವಿನ ಪರವಾದ ಕೆಲಸಗಳು, ಮತ್ತು ಪ್ರತಿಭಟನೆಗೆ ಬೆಂಬಲ ಸೂಚಿಸುತ್ತೇವೆ ಎಂದಿದ್ದಾರೆ.

ಜುಲೈ 18,2024ರಂದು ವಿಶ್ವ ವಿದ್ಯಾಲಯದ ಅತಿಥಿ ಗೃಹದಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಸಭೆ ನಡೆದಿದ್ದು, ಇದನ್ನು ಖಂಡಿಸಿದ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಈ ಕುರಿತು ಜುಲೈ 19ರಂದು ನಾನುಗೌರಿ ಪ್ರಕಟಿಸಿದ ವರದಿಯ ಲಿಂಕ್ ಕೆಳಗಿದೆ.

ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಆರ್‌ಎಸ್‌ಎಸ್‌ ಸಭೆ: ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಬೆದರಿಕೆ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...