ಮಧ್ಯಪ್ರದೇಶ-ರಾಜಸ್ಥಾನ ಗಡಿಯಲ್ಲಿರುವ ಪಶ್ಚಿಮ ಮಧ್ಯಪ್ರದೇಶದ ನೀಮಚ್ ಜಿಲ್ಲೆಯ ಹಳ್ಳಿಯೊಂದರ ಹನುಮಾನ್ ದೇವಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮೂವರು ಶ್ವೇತಾಂಬರ ಜೈನ ಮುನಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ. 16 ವರ್ಷದ ಬಾಲಕ ಸೇರಿದಂತೆ ಎಲ್ಲಾ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದು, ಅವರೆಲ್ಲರೂ ಪಕ್ಕದ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯವರು ಎಂದು ತಿಳಿಸಿದ್ದಾರೆ. ಹನುಮಾನ್ ಮಂದಿರಲ್ಲಿದ್ದ
ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯೊಂದಿಗಿನ ರಾಜ್ಯದ ಗಡಿಯ ಸಮೀಪವಿರುವ ನೀಮಚ್ ಜಿಲ್ಲೆಯ ಸಿಂಗೋಲಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಇದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೂ ಮುನ್ನ ಪೊಲೀಸರು ಆರು ಯುವಕರನ್ನು ಬಂಧಿಸಿದ್ದಾರೆ.
ಸಿಂಗೋಲಿ ಪಟ್ಟಣದ ನಿವಾಸಿ ಭವರ್‌ಲಾಲ್ ಮೆಹ್ತಾ ಅವರ ದೂರಿನ ಮೇರೆಗೆ ಸಲ್ಲಿಸಲಾದ ಎಫ್‌ಐಆರ್ ಪ್ರಕಾರ, ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ನೀಮಚ್ ಜಿಲ್ಲೆಯ ಸಿಂಗೋಲಿ ಪ್ರದೇಶದ ಕಚ್ಚಲಾ ಗ್ರಾಮದ ದೇವಾಲಯದೊಳಗೆ ಮುನಿಗಳು ವಿಶ್ರಾಂತಿ ಪಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಮುನಿಗಳು ಮರುದಿನ ಬೆಳಿಗ್ಗೆ ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಲಿದ್ದರು. ಈ ವೇಳೆ ಮುನಿಗಳ ಬಳಿ ಬಂದ ಯುವಕರು ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕೇಳಿದ್ದಾರೆ.
ಈ ವೇಳೆ ಯುವಕರಿಗೆ, ತಾವು ಧಾರ್ಮಿಕ ಯಾತ್ರೆಯಲ್ಲಿರುವ ಜೈನ ಮುನಿಗಳೆಂದು ಅವರು ಹೇಳಿದಾಗ, ದುಷ್ಕರ್ಮಿಗಳು ಅವರ ಮೇಲೆ ಲಾಠಿ ಮತ್ತು ರಾಡ್‌ಗಳಿಂದ ನಿರ್ದಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡಿದ್ದರೂ, ಮುನಿಗಳು ಮುಖ್ಯ ರಸ್ತೆಗೆ ತಪ್ಪಿಸಿಕೊಂಡು ಸ್ಥಳೀಯ ನಿವಾಸಿಗಳಿಂದ ಸಹಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ನಂತರ ಗ್ರಾಮಸ್ಥರು ಘಟನೆ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
3 Jain monks resting at a Hanuman Temple, attacked by anti social elements at a village in MP’s Neemuch district, close to Rajasthan border. Local residents protest against the late night incident in Singoli town of Neemuch. @santwana99 @NewIndianXpress @jayanthjacob pic.twitter.com/LlNzHM27Xv
— Anuraag Singh (@anuraag_niebpl) April 14, 2025
ಘಟನೆಯ ನಂತರ ಪೊಲೀಸರು ಸ್ಥಳದಲ್ಲಿರುವ ಸುಮಾರು 2.20 ನಿಮಿಷಗಳ ವೀಡಿಯೊ ವೈರಲಾಗಿದ್ದು, ಅದರಲ್ಲಿ ಸಂತ್ರಸ್ತ ಮುನಿಗಳ ಬೆನ್ನು, ತಲೆ, ಕುತ್ತಿಗೆ ಮತ್ತು ಮುಖಗಳ ಮೇಲೆ ಅನೇಕ ಗಾಯಗಳನ್ನು ತೋರಿಸುವ ದೃಶ್ಯಗಳಿವೆ. ನಿರ್ದಿಷ್ಟ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಪೊಲೀಸ್ ತಂಡವು ಕೆಲವು ಗಂಟೆಗಳ ನಂತರ ಆರೋಪಿಯನ್ನು ಪತ್ತೆಹಚ್ಚಿದ್ದಾರೆ ಎಂದು ವರದಿಯಾಗಿದೆ.
“16 ವರ್ಷದ ಬಾಲಕ ಸೇರಿದಂತೆ ಎಲ್ಲಾ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಅವರೆಲ್ಲರೂ ಪಕ್ಕದ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯವರು. ಅವರ ಮೇಲೆ ಬಿಎನ್‌ಎಸ್‌ನ ಪ್ರಮುಖ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಅವರು ಈ ಹಿಂದೆ ಅಪರಾಧ ಘಟನೆಗಳಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ನಾವು ಕೆಲಸ ಮಾಡುತ್ತಿದ್ದೇವೆ” ಎಂದು ನೀಮುಚ್ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಅಂಕಿತ್ ಜೈಸ್ವಾಲ್ ಸೋಮವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಒಬ್ಬನಿಗೆ 16 ವರ್ಷ ವಯಸ್ಸಾಗಿದ್ದು, ಉಳಿದ ಐದು ಜನರನ್ನು (ಎಲ್ಲರೂ 20 ವರ್ಷದವರು) ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯ ನಿವಾಸಿಗಳಾದ ಗಣಪತ್ ನಾಯಕ್, ಗೋಪಾಲ್ ಭೋಯ್, ಕನ್ಹಯ್ಯಾಲಾಲ್ ಭೋಯ್, ರಾಜು ಭೋಯ್ ಮತ್ತು ಬಾಬು ಶರ್ಮಾ ಎಂದು ಗುರುತಿಸಲಾಗಿದೆ. ಬಂಧಿತರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 115(2), 119(1), 3(5), 191(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗಾಯಾಳುಗಳನ್ನು ಧರ್ಮಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ಭಾನುವಾರ ತಡರಾತ್ರಿ ನಡೆದ ಘಟನೆಯಿಂದ ಉದ್ರಿಕ್ತರಾದ ಸ್ಥಳೀಯ ನಿವಾಸಿಗಳು ಸೋಮವಾರ ಬೆಳಿಗ್ಗೆ ಸಿಂಗೋಲಿ ಪಟ್ಟಣವನ್ನು ಬಂದ್ ಮಾಡಿದ್ದಾರೆ. ಆದರೆ ಪೊಲೀಸರ ಕ್ರಮ ಮತ್ತು ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರೊಂದಿಗೆ ಸಭೆ ನಡೆಸಿದ ನಂತರ ಬಂದ್ ಅನ್ನು ಹಿಂಪಡೆಯಲಾಯಿತು. ರಾಜ್ಯದ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಬರೆದಿರುವ ಮನವಿ ಪತ್ರವನ್ನು ಜೈನ ಸಮುದಾಯದ ಧಾರ್ಮಿಕ ಸಂಸ್ಥೆಗಳು ಪಶ್ಚಿಮ ಮಧ್ಯಪ್ರದೇಶದ ಮಂದ್ಸೌರ್ ಮತ್ತು ನೀಮಚ್ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿವೆ.
Pro-Govt Propaganda News Agency @ANI neither reported when the three Jain monks were attacked while resting on the Hanuman temple, Nor did they report on who the attackers were. They just went to get a video byte from Dy CM. The Six accused are Babu Sharma, Ganpat Naik, Gopal… https://t.co/X2dPS4ZSoZ pic.twitter.com/YUJJ4BsKqt
— Mohammed Zubair (@zoo_bear) April 14, 2025
ಹ
ನುಮಾನ್ ಮಂದಿರಲ್ಲಿದ್ದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಕ್ಫ್ ಕಾಯ್ದೆ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ; ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಬಂಧನ
ವಕ್ಫ್ ಕಾಯ್ದೆ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ; ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಬಂಧನ

