ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಾಲ್ಡೀವ್ಸ್ ಸಚಿವ ಮೂಸಾ ಜಮೀರ್ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ, ಅಧ್ಯಕ್ಷ ಮೊಹಮದ್ ಮುಯಿಝು ಅವರು ನಿಗದಿಪಡಿಸಿದ ಮೇ 10 ರ ಗಡುವಿನ ಮುಂಚೆಯೇ ಭಾರತವು ದ್ವೀಪ ರಾಷ್ಟ್ರದಿಂದ ತನ್ನ ಎಲ್ಲ ಸೈನಿಕರನ್ನು ಹಿಂತೆಗೆದುಕೊಳ್ಳುವಿಕೆಯನ್ನು ಪೂರ್ಣಗೊಳಿಸಿದೆ.
ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದ ಭಾರತೀಯ ಸೈನಿಕರ ಕೊನೆಯ ಬ್ಯಾಚ್ ಅನ್ನು ವಾಪಸ್ ಕಳುಹಿಸಲಾಗಿದೆ ಎಂದು ಹೀನಾ ವಲೀದ್ ದೃಢಪಡಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಮುಖ್ಯ ವಕ್ತಾರರು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಭಾರತವು ಈ ಹಿಂದೆ ಉಡುಗೊರೆಯಾಗಿ ನೀಡಿದ್ದ ಎರಡು ಹೆಲಿಕಾಪ್ಟರ್‌ಗಳು, ಡೋರ್ನಿಯರ್ ವಿಮಾನಗಳನ್ನು ನಿರ್ವಹಿಸಲು ಮಾಲ್ಡೀವ್ಸ್‌ನಲ್ಲಿ ನೆಲೆಸಿರುವ ಸುಮಾರು 89 ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ವಾಪಸು ಕಳುಹಿಸುವುದು 2023 ರಲ್ಲಿ ಅವರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಮುಯಿಝು ಅವರ ಪ್ರಮುಖ ಪ್ರತಿಜ್ಞೆಯಾಗಿತ್ತು.
ಠಿಕಾಣಿ ಹೂಡಿರುವ ಸೈನಿಕರ ಸಂಖ್ಯೆಯ ವಿವರಗಳನ್ನು ನಂತರ ಬಹಿರಂಗಪಡಿಸಲಾಗುವುದು ಎಂದು ವಲೀದ್ ಹಂಚಿಕೊಂಡಿದ್ದಾರೆ. ಈ ಹಿಂದೆ 51 ಸೈನಿಕರನ್ನು ಸೋಮವಾರ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ಅದರ ಸರ್ಕಾರ ಘೋಷಿಸಿತ್ತು. ಗುರುವಾರ ನವದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತೀಯ ಸಿಬ್ಬಂದಿಯ ಮೊದಲ ಮತ್ತು ಎರಡನೇ ಬ್ಯಾಚ್‌ಗಳು ಹಿಂತಿರುಗಿದ್ದಾರೆ ಎಂದು ದೃಢಪಡಿಸಿದರು.
ಕಳೆದ ನವೆಂಬರ್‌ನಲ್ಲಿ ‘ಇಂಡಿಯಾ ಔಟ್’ ಪೋಲ್ ಪ್ಲಾಂಕ್‌ನಲ್ಲಿ ಅಧಿಕಾರಕ್ಕೆ ಬಂದ ಮುಯಿಜ್ಜು ಅವರ ಮೊದಲ ಕಾರ್ಯಗಳಲ್ಲಿ ಒಂದಾದ ಮೇ 10 ರೊಳಗೆ ಸುಮಾರು 80 ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವುದಾಗಿತ್ತು. ಸೈನಿಕರು ಎರಡು ಹೆಲಿಕಾಪ್ಟರ್‌ಗಳು ಮತ್ತು ಡೋರ್ನಿಯರ್ ವಿಮಾನವನ್ನು ನಿರ್ವಹಿಸಲು ಅಲ್ಲಿ ನೆಲೆಸಿದ್ದರು.
ಮಾಲ್ಡೀವ್ಸ್ ಸರ್ಕಾರದ ಚೀನಾ ಪರವಾದ ಒಲವನ್ನು ಉಲ್ಲೇಖಿಸಿ ಮಾತನಾಡಿದ ಜೈಶಂಕರ್, ‘ಜಮೀರ್ ಅವರಿಗೆ ಭಾರತ-ಮಾಲ್ಡೀವ್ಸ್ ಸಂಬಂಧಗಳ ಅಭಿವೃದ್ಧಿಯು ಪರಸ್ಪರ ಹಿತಾಸಕ್ತಿಗಳು ಮತ್ತು ಪರಸ್ಪರ ಸೂಕ್ಷ್ಮತೆಯನ್ನು ಆಧರಿಸಿದೆ” ಎಂದು ಹೇಳಿದರು.
ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಸಕ್ಕರೆ, ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆಕಾಳುಗಳು, ನದಿ ಮರಳು ಮತ್ತು ಕಲ್ಲುಗಳನ್ನು ಮಾಲ್ಡೀವ್ಸ್‌ಗೆ ವಿಶಿಷ್ಟ ದ್ವಿಪಕ್ಷೀಯ ಕಾರ್ಯವಿಧಾನದ ಅಡಿಯಲ್ಲಿ 2024-25 ಕ್ಕೆ ಅತ್ಯಧಿಕ ರಫ್ತು ಕೋಟಾಗಳನ್ನು ಭಾರತವು ಇತ್ತೀಚೆಗೆ ಅನುಮೋದಿಸಿದೆ. ಈ ವ್ಯವಸ್ಥೆಯು 1981 ರಲ್ಲಿ ಜಾರಿಗೆ ಬಂದ ನಂತರ ಅನುಮೋದಿತ ಪ್ರಮಾಣಗಳು ಅತ್ಯಧಿಕವಾಗಿದೆ.
ಇದನ್ನೂ ಓದಿ; ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, 3 ಮಂದಿ ಖುಲಾಸೆ


