ಧಾರ್ಮಿಕ ಪ್ರಚೋದಾನಾಕಾರಿ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಒಳಗಾಗಿದ್ದ ಬಳ್ಳಾರಿಯ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ತೊಡೆ ತಟ್ಟಿ ಸವಾಲು ಹಾಕಿದ್ದಾರೆ. ಆ ಮೂಲಕ ಪ್ರಕರಣ ಮತ್ತಷ್ಟು ವಿವಾದಕ್ಕೆ ಒಳಗಾಗಿದೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್ ಏಕವಚನದಲ್ಲಿ ಸೋಮಶೇಖರ್ ರೆಡ್ಡಿಯನ್ನು ತರಾಟೆಗೆ ತೆಗೆದಕೊಂಡರು. ಮುಂದಿನ ಸೋಮವಾರ ಬಳ್ಳಾರಿಗೆ ನಾನೊಬ್ಬನೆ ಬರ್ತಿನಿ ಅದು ಯಾವ್ ಖಡ್ಗ ತಗೊಂಡ್ ಬರ್ತಿರೋ ಬಾ ಎಂದು ಸವಾಲು ಹಾಕಿದ್ದಾರೆ. ಅವರಾಡಿದ ಮಾತುಗಳು ಈ ಕೆಳಗಿನಂತಿವೆ.
17 ಕೋಟಿ ಜನರು ಬಿಟ್ಟಾಕ್ಕಿ. ನನ್ನೊಬ್ಬನನ್ನು ಉಫ್ ಅನ್ನಲ್ಲಿ, ಅದು ಯಾವ್ ಖಡ್ಗ ತರ್ತಾನೋ ತರಲಿ, ಮಿಸ್ಟರ್ ಸೋಮಶೇಖರ್ ರೆಡ್ಡಿ ಐ ಅಮ್ ಕಮಿಂಗ್ ನೆಕ್ಸ್ಟ್ ಮಂಡೆ.
ನಮ್ಮ ದೇಶ ಅಲ್ಲದೇ ಬೇರೆ ಎಲ್ಲಾ ದೇಶಾಗಳನ್ನು ನೋಡಿದ್ದೀನಿ. ಎಲ್ಲಾ ಕಡೆಗಳಿಗಿಂತ ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಶಾಂತಿಯಿಂದ ಇದ್ದಾರೆ. ಆದರೆ ಎಲ್ಲಾಕ್ಕಿಂತ ಹೆಚ್ಚಾಗಿ ಪ್ರೀತಿಯಿಂದ ಬಾಳುತ್ತಿರುವುದು ನಮ್ಮ ಭಾರತ ದೇಶದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ.
ಈ ಸೋಮಶೇಖರ್ ರೆಡ್ಡಿ ಆಂದ್ರದಿಂದ ಬಂದವನು, ಅವನು ಕರ್ನಾಟಕದವನು ಅಲ್ಲವೇ ಅಲ್ಲ. ಈ ಥರದ ಹೇಳಿಕೆ ಎಲ್ಲಿಯಾದರೂ ಕೊಡುತ್ತಾರ? ನೆಮ್ಮದಿ ಶಾಂತಿಯಿಂದ ಬಾಳುತ್ತಾ ಇದ್ದೀವಿ. ಏನೋ ಖಡ್ಗ ತಗೊಂಡು ಬರ್‍ತಾನಂತೆ. ನಾವೇನು ಬಳೆ ಹಾಕಿದ್ದೀವಾ ಖಡ್ಗ ತಗೊಂಡು ಬಂದ್ರೆ?…
ಅವನ ಮನೇ ಮುಂದೆನೇ ಕುಳಿದುಕೊಳ್ಳುತ್ತೇನೆ ನಾನು, ನಾವೆಂದೂ ಜಾತಿ ಮಾಡಿಲ್ಲ ನಾವು. ಅದನ್ನು ನಮ್ಮ ಇಸ್ಲಾಂ ಧರ್ಮ ಯಾವತ್ತೂ ಜಾತಿ ಮಾಡಿ ಅಂತ ಹೇಳಿಕೊಟ್ಟಿಲ್ಲ. ನಮ್ಮ ಧರ್ಮ ಮುಕ್ತವಾಗಿದೆ. ಹಿಂದೆಯೇ ಹಮ್, ಹಿಂದೂಸ್ತಾನ್ ಹಮಾರ, ಸಾರೇ ಜಹಾಂಸೆ ಅಚ್ಚಾ ಹಿಂದೂಸ್ತಾನ್ ಹಮಾರ..
ಇವರು ಯಾರೋ ರಾಜಕೀಯ ಅನುಕೂಲಕ್ಕೋಸ್ಕರ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಸರ್ಕಾರ ಈ ವಾರ ಅಂದ್ರೆ ಸೋಮವಾರದೊಳಗೆ ಅವನನ್ನು ಬಂಧಿಸಿಲ್ಲ ಎಂದರೆ ಬಳ್ಳಾರಿಯ ಅವರ ಮನೆ ಮುಂದೆ ಹೋಗ್ತಿನಿ. ಅದು ಏನ್ ಮಾಡ್ರಾನೋ ನೋಡ್ತಿನಿ.
ಇದಿಷ್ಟು ಶಾಸಕ ಜಮೀರ್ ಅಹ್ಮದ್ ಆಡಿರುವ ಮಾತುಗಳು. ಒಟ್ಟಿನಲ್ಲಿ ಪೌರತ್ವ ಕಾಯ್ದೆ ಹಬ್ಬಿಸಿರುವ ಕಿಚ್ಚು ಮತ್ತಷ್ಟು ವ್ಯಾಪಿಸುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ.


