Homeಮುಖಪುಟಜಯನಗರದ ಎಂಎಲ್‍ಎ ಸೌಮ್ಯರೆಡ್ಡಿ ಡೆಲ್ಲಿಯಲ್ಲಿ ಮಾಡಿದ್ದೇನು? ವಿಡಿಯೋ ನೋಡಿ

ಜಯನಗರದ ಎಂಎಲ್‍ಎ ಸೌಮ್ಯರೆಡ್ಡಿ ಡೆಲ್ಲಿಯಲ್ಲಿ ಮಾಡಿದ್ದೇನು? ವಿಡಿಯೋ ನೋಡಿ

- Advertisement -
- Advertisement -

ಕಾಂಗ್ರೆಸ್‍ನ ರೆಬೆಲ್ ನಾಯಕ ರಾಮಲಿಂಗಾರೆಡ್ಡಿಯವರ ಪುತ್ರಿ, ಜಯನಗರದ ಶಾಸಕಿ ಸೌಮ್ಯರೆಡ್ಡಿಯವರು ದೆಹಲಿಗೆ ತೆರಳಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದು ನಿಮಗೆಲ್ಲಾ ತಿಳಿದ ವಿಚಾರ. ಅದಾದ ನಂತರ ಅವರು ಮಾಡಿದ್ದೇನು ಗೊತ್ತೇ? ಅವರು ಎಲ್ಲಿಗೆ ಹೋಗಿದ್ದರು? ಏನು ಮಾಡಿದರು ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ

ರಾಜಕೀಯ ಬಿಟ್ಟು ಸೌಮ್ಯರೆಡ್ಡಿಯವರು  ಪ್ರಸಿದ್ದವಾಗಿರುವ ದೆಹಲಿ ಸರ್ಕಾರಿ ಶಾಲೆ ಕಡೆ ಹೆಜ್ಜೆ ಹಾಕಿದ್ದಾರೆ. ಅಲ್ಲಿನ ಶಿಕ್ಷಕರು, ಮಕ್ಕಳು, ಮೂಲಭೂತ ಸೌಕರ್ಯಗಳನ್ನು ನೋಡಿ ನಿಬ್ಬೆರಗಾಗಿದ್ದಾರೆ. ಆನಂತರ ಅಲ್ಲಿನವರ ಕೋರಿಕೆಯ ಮೇಲೆ ವಿಡಿಯೋವೊಂದರಲ್ಲಿ ಮಾತಾಡಿದ್ದಾರೆ. ಅದರಲ್ಲಿ ಅವರೇಳುವದು ಇಷ್ಟು.

ಇಂದು ನಾನು ದೆಹಲಿಯ ರಾಜ್‍ಪೂತ್ ನಗರದ ಸರ್ಕಾರ ಶಾಲೆಯೊಂದಕ್ಕೆ ಬಂದು ಮಕ್ಕಳೊಡನೆ ಸಮಯ ಕಳೆಯುತ್ತಿದ್ದೇನೆ. ಇಲ್ಲಾಗಿರುವ ಬದಲಾವಣೆಗಳನ್ನು ನೋಡಿದರೆ ಬಹುದೊಡ್ಡ ಸ್ಫೂರ್ತಿಯೆನಿಸುತ್ತಿದೆ. ನಾನು ಇಲ್ಲಿನ ಮುಖ್ಯಶಿಕ್ಷಕರನ್ನು, ಸಹಶಿಕ್ಷಕರನ್ನು ಮಾತಾಡಿಸಿದೆ. ಇಲ್ಲಿರುವ ಮೂಲಭೂತ ಸೌಲಭ್ಯಗಳನ್ನು ಗಮನಿಸಿದೆ. ಕೇವಲ 4 ವರ್ಷದಲ್ಲಿ ಇಲ್ಲಾಗಿರುವ ಬದಲಾವಣೆಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಅದು ಶಿಕ್ಷಕರ ತರಬೇತಿ ಇರಬಹುದು, ಕಟ್ಟಡ, ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳು, ಇಲ್ಲಿನ ವ್ಯವಸ್ಥೆ, ಮಕ್ಕಳ ಉತ್ತಮ ಕಲಿಕೆ, ಡ್ರಾಪ್‍ಔಟ್ ಕಡಿಮೆಯಾಗಿರುವುದು ಇವೆಲ್ಲವೂ ಒಳ್ಳೆಯ ಸಾಧನೆಗಳಾಗಿವೆ.

ಇದರಿಂದ ನಾನು ವಿಶೇಷವಾಗಿ ಪ್ರಭಾವಿತನಾಗಿದ್ದೇನೆ. ನಾನು ಕೂಡ ಕರ್ನಾಟಕದ ಜಯನಗರದ ಶಾಸಕಿಯಾಗಿದ್ದು ನಮ್ಮಲ್ಲಿಯೂ 14 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿವೆ. ಇದೇ ಮಾದರಿಯನ್ನು ಅಲ್ಲಿಯೂ ಅಳವಡಿಸಲು ಬಯಸಿದ್ದೇನೆ. ಏಕೆಂದರೆ ಶಿಕ್ಷಣವೂ ಬಹಳ ಮುಖ್ಯವಾದ ಅಂಶವಾಗಿದ್ದು ಆ ತಳಹದಿಯನ್ನು ನಾವು ಗಟ್ಟಿ ಮಾಡಿದರೆ ಮಕ್ಕಳು ಏನನ್ನು ಬೇಕಾದರೂ ಸಾಧಿಸುತ್ತಾರೆ.

“ಈ ನಿಟ್ಟಿನಲ್ಲಿ ಇಲ್ಲಿ ನೀವೆಲ್ಲರೂ ಬಹಳ ಕಾಳಜಿಯಿಂದ ಮತ್ತು ತಾದ್ಯಾತ್ಮವಾಗಿ ಇಲ್ಲಿನ ಶಿಕ್ಷಣ ಪದ್ದತಿಯನ್ನು ಬದಲಾಯಿಸಲು ತೊಡಗಿಸಿಕೊಂಡಿದ್ದೀರಿ. ಇಲ್ಲಿನ ಸರ್ಕಾರವೂ ಇದಕ್ಕೆ ಒತ್ತಾಸೆಯಾಗಿ ನಿಂತಿದೆ. ಶೈಕ್ಷಣಿಗೆ ಕ್ರಾಂತಿಗೆ ತೊಡಗಿರುವ ನಿಮಗೆ ಧನ್ಯವಾದಗಳು” ಎಂದಿದ್ದಾರೆ.

ಕರ್ನಾಟಕದ ಆಮ್ ಆದ್ಮಿ ಪಕ್ಷದ ವಕ್ತಾರರಾದ ಮೋಹನ್ ದಾಸರಿಯವರು ಈ ವಿಡಿಯೋವನ್ನು ಹಂಚಿಕೊಂಡಿದ್ದು ನೀವು ಕರ್ನಾಟಕದಲ್ಲಿ ದೆಹಲಿ ಶಿಕ್ಷಣ ಮಾದರಿಯನ್ನು ಜಾರಿಗೊಳಿಸುವುದಾದರೆ ಅಗತ್ಯ ನೆರವು ನೀಡಲು ಸಿದ್ದವಿದ್ದೇವೆ ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...