Homeಕರ್ನಾಟಕಸ್ಪೀಕರ್ ದಾಳ ಉರುಳಿಸಿದ ರಮೇಶ್ ಕುಮಾರ್: ಮುಂದಿನ ಐದು ದಿನಗಳ ಕಾಲ ಏನೂ ಆಗೋಲ್ಲ

ಸ್ಪೀಕರ್ ದಾಳ ಉರುಳಿಸಿದ ರಮೇಶ್ ಕುಮಾರ್: ಮುಂದಿನ ಐದು ದಿನಗಳ ಕಾಲ ಏನೂ ಆಗೋಲ್ಲ

- Advertisement -
- Advertisement -

ಇಂದು ಎಲ್ಲಾ ರಾಜಿನಾಮೆ ಪತ್ರಗಳನ್ನು ಪರಿಶೀಲಿಸಿ ತಮ್ಮ ನಿಲುವನ್ನು ತಿಳಿಸುವುದಾಗಿ ಹೇಳಿದ್ದ ರಮೇಶ್ ಕುಮಾರ್ ರವರು ಇಂದು ವಿಧಾನ ಸೌಧದ ತಮ್ಮ ಕಚೇರಿಗೆ ಬಂದು ಎಲ್ಲಾ ರಾಜಿನಾಮೆ ಪತ್ರಗಳನ್ನು ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಅದರಂತೆ ಮುಂದಿನ ಐದು ದಿನಗಳ ಕಾಲ ರಾಜ್ಯ ಸರ್ಕಾರ ಸಂಪೂರ್ಣ ಸೇಫ್ ಎಂಬುದು ನಿಚ್ಚಳವಾಗಿದೆ.

ಸಲ್ಲಿಸಿರುವ 13 ರಾಜೀನಾಮೆ ಪತ್ರಗಳಲ್ಲಿ 8 ಕ್ರಮಬದ್ಧವಾಗಿಲ್ಲ, 5 ಮಾತ್ರವೇ ಕ್ರಮಬದ್ಧವಾಗಿವೆ ಎಂದು ಸ್ಪೀಕರ್ ರಮೇಶ್ ಕುಮಾರ್ ರವರು ಸ್ಪಷ್ಟವಾಗಿ ನುಡಿದಿದ್ದಾರೆ. ಇದಕ್ಕೆ ಮುಂಚೆ ಸದರಿ ಶಾಸಕರುಗಳಿಗೆ ಖುದ್ದಾಗಿ ರಾಜೀನಾಮೆ ಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ ಎಂಬ ಸುದ್ದಿ ಹೊರಟಿತ್ತು. ಅದಕ್ಕೆ ಮುಂಬೈನ ಸೋಫಿಟಲ್ ಹೋಟೆಲ್‍ನಿಂದಲೇ ಪ್ರತಿಕ್ರಿಯಿಸಿದ್ದ ಅತೃಪ್ತ ಶಾಸಕರು ಅಗತ್ಯಬಿದ್ದರೆ ನಾಳೆಯೇ ಬೆಂಗಳೂರಿಗೆ ಧಾವಿಸಿ ಮತ್ತೇ ರಾಜೀನಾಮೆ ನೀಡುತ್ತೇವೆಂದು ಗುಡುಗಿದ್ದರು. ಈ ಮಧ್ಯೆ ವಿಧಾನಸೌಧದ ಕಛೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ರಮೇಶ್ ಕುಮಾರ್ ನಾಮಪತ್ರಗಳಲ್ಲಿ 8 ಕ್ರಮಬದ್ದವೇ ಆಗಿಲ್ಲವೆಂದು ಹೇಳುವ ಮುಖಾಂತರ ಎಲ್ಲರನ್ನು ಚಕಿತಗೊಳಿಸಿದ್ದಾರೆ.

5 ಜನರ ರಾಜೀನಾಮೆ ಪತ್ರ ಮಾತ್ರ ಕ್ರಮಬದ್ಧವಾಗಿದ್ದು, ಆ ಐದು ಜನರಿಗೂ ನೋಟಿಸ್ ಕೊಟ್ಟಿದ್ದು ಅವರುಗಳು ಬಂದು ತಮ್ಮ ಅನಿಸಿಕೆಯೆನೆಂದು ಹೇಳಬೇಕೆಂದು ತಿಳಿಸಿದ್ದಾರೆ. ಇದಲ್ಲದೇ ಉಳಿದವರಿಗೆ ಕೂಡ ಸಮಯ ನಿಗಧಿ ಮಾಡಿದ್ದು ನಂತರದಲ್ಲಿ 10 ಮತ್ತು 11 ರಜಾದಿನಗಳಾದ್ದರಿಂದ 12 ತಾರೀಕು ಆನಂದ್ ಸಿಂಗ್ ಮತ್ತು ನಾರಾಯಣಗೌಡರವರಿಗೆ ತಮ್ಮ ಅನಿಸಿಕೆಗಳನ್ನು ಬಂದು ತಿಳಿಸಲು ಹೇಳಿದ್ದಾರೆ. 15ಕ್ಕೆ ರಾಮಲಿಂಗಾರೆಡ್ಡಿಯವರಿಗೆ ವೈಯಕ್ತಿಕ ವಿಚಾರಣೆಗೆ ಕರೆದಿದ್ದೇನೆ ಎಂದಿದ್ದಾರೆ.

ತಮ್ಮ ಕಚೇರಿಯ ನಡಾವಳಿಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ ರಮೇಶ್ ಕುಮಾರ್ ರವರು ತಾನು 6ನೇ ಆರನೇ ತಾರೀಕು ಮಧ್ಯಾಹ್ನದವರೆಗೂ ಕಛೇರಿಯಲ್ಲಿಯೇ ಇದ್ದೆ. ಅಲ್ಲಿಯವರೆಗೂ ಯಾರು ನನ್ನನ್ನು ಸಂಪರ್ಕಿಸಿಲ್ಲ ಮಾತ್ರವಲ್ಲ, ಸಮಯವನ್ನೂ ಸಹ ಕೇಳಿರಲಿಲ್ಲ. ನಾನು ವ್ಯಕ್ತಿಗತ ಕೆಲಸಗಳ ಕಾರಣಕ್ಕೆ ಹೊರಟ ನಂತರ ಅವರು ನನ್ನ ಕಛೇರಿಗೆ ಬಂದು ರಾಜೀನಾಮೆಗಳನ್ನು ನೀಡಿದ್ದಾರೆ. ನಂತರ ಮಾನ್ಯ ರಾಜ್ಯಪಾಲರನ್ನು ಭೇಟಿಯಾಗಿ ಅವರಿಗೂ ಇದೇ ಪತ್ರಗಳನ್ನು ನೀಡಿದ್ದಾರೆ. ರಾಜ್ಯಪಾಲರು ಆ ಕುರಿತು ನನಗೆ ಪತ್ರವೊಂದನ್ನು ಬರೆದು, ಆ ಪತ್ರದಲ್ಲಿ ಅವರು ಬಂದು ರಾಜೀನಾಮೆ ನೀಡಿದ್ದಾರೆ ಮತ್ತು ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು ಮತ್ತು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕೆಂದು ತಿಳಿಸಿದ್ದಾರೆ. ಸಂವಿಧಾನದ ಆಶಯಗಳನ್ನು ನಿಷ್ಠೆಯಿಂದ ಎತ್ತಿ ಹಿಡಿಯುತ್ತೇನೆಂದು ನಾನು ಕೂಡ ಅವರಿಗೆ ಪತ್ರ ಬರೆದಿದ್ದೇನೆ ಎಂದು ರಮೇಶ್ ಕುಮಾರ್ ರವರು ತಿಳಿಸಿದರು.

ಇದಲ್ಲದೇ ನಾಗೇಶ್ ಎಂಬ ಪಕ್ಷೇತರ ಶಾಸಕ ಮತ್ತು ಸಚಿವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆಂದು ಮತ್ತು ಬಿಜೆಪಿಯನ್ನು ಬೆಂಬಲಿಸಿದ್ದಾರೆಂದು ಆ ಕುರಿತು ತನಗೆ ಪತ್ರ ಕೊಟ್ಟಿದ್ದಾರೆಂದು ರಾಜ್ಯಪಾಲರು ಆ ಪತ್ರವನ್ನು ಸಹ ನನಗೆ ಕಳಿಸಿದ್ದಾರೆ. ಆದರೆ ಆ ಪತ್ರವನ್ನು ನನಗೆ ಯಾಕೆ ಕಳಿಸಿದ್ದಾರೆಂದು ನನಗೆ ಗೊತ್ತಿಲ್ಲ, ಏಕೆಂದರೆ ಅದರ ಬಗ್ಗೆ ಸಚಿವ ಸಂಪುಟಕ್ಕೆ ಸಂಬಂಧಿಸಿದ ತೀರ್ಮಾನವನ್ನು ಮುಖ್ಯಮಂತ್ರಿಗಳು ಮಾಡಬೇಕು ಮತ್ತು ವಿಧಾನ ಸಭೆಯ ಅಂಗಳದಲ್ಲಿ ವಿಶ್ವಾಸಮತ ಯಾಚನೆ ನಡೆದಾಗ ನಾಗೇಶ್ ರವರು ತಮಗೆ ಇಷ್ಟ ಬಂದವರಿಗೆ ಬೆಂಬಲ ಸೂಚಿಸಬಹುದು, ಬಿಜೆಪಿಯವರಿಗೂ ಸಹ ಬೆಂಬಲವನ್ನು ಸೂಚಿಸಬಹುದು. ಆದರೆ ಆ ಪತ್ರವನ್ನು ನನಗ್ಯಾಕೆ ಕಳಿಸಿದ್ದಾರೋ ಗೊತ್ತಿಲ್ಲ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.

ಇದರಿಂದ ಸದ್ಯಕ್ಕೆ ಬಂಡಾಯವೆದ್ದ ಶಾಸಕರು ಗೊಂದಲಕ್ಕೆ ಬಿದ್ದಿದ್ದಾರೆ. ಸೌಮ್ಯ ರೆಡ್ಡಿಯವರು ಕೂಡ ರಾಜೀನಾಮೆ ನೀಡದಿರುಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಸಹ ಹೊರಬಿದ್ದಿದೆ. ಸೌಮ್ಯರೆಡ್ಡಿಯವರು ಇನ್ನು ರಾಜೀನಾಮೆ ಸಲ್ಲಿಸಿಲ್ಲ ಮತ್ತು ರಾಮಲಿಂಗರೆಡ್ಡಿಯವರ ರಾಜೀನಾಮೆ ಪತ್ರ ಕ್ರಮಬದ್ಧವಾಗಿರುವುದರಿಂದ ಇವರ ಮುಂದಿನ ನಡೆಗಳು ಹೇಗಿರುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ.

ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯ ಸರ್ಕಾರ ಬಿದ್ದು ಹೋಗುವ ಅಪಾಯದಿಂದ ಪಾರಾಗಿದ್ದು, ಇನ್ನು ಕನಿಷ್ಠ ಐದಾರು ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು ಸ್ಪೀಕರ್ ರಮೇಶ್ ಕುಮಾರ್ ಇದೆಲ್ಲದರ ಕೇಂದ್ರ ಬಿಂದುವಾಗಿದ್ದಾರೆ. ರಮೇಶ್ ಕುಮಾರ್‍ರವರು ಕಾನೂನು ಮತ್ತು ಮಾತು ಬಲ್ಲವರಾಗಿದ್ದು ಕಾನೂನಿನ ಒಳಗಿನ ಅಂಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮತ್ತು ಅದನ್ನು ಚಾರಿತ್ರಿಕವಾಗಿ ಮತ್ತು ಸಾಂವಿಧಾನಿಕವಾಗಿ ಅವುಗಳನ್ನು ಸಮರ್ಥಿಸಿಕೊಳ್ಳುವ ಛಾತಿ ಅವರಿಗಿದೆ. ಮತ್ತು ಇಂದು ಪತ್ರಿಕಾಗೋಷ್ಠಿಯನ್ನು ಏನು ನಡಾವಳಿ ನಡೆದಿದೆ ಎಂಬುದನ್ನು ಮುಂದಿಟ್ಟಿರುವುದು ಸಹ ತನ್ನ ಕಛೆರಿಯ ಕಡೆಯಿಂದ ಮತ್ತು ತನ್ನ ಕಡೆಯಿಂದ ಯಾವುದೇ ಸಾಂವಿಧಾನಿಕ ಅಥವಾ ನಿಯಮಾವಳಿಗಳ ಲೋಪ ಆಗಿಲ್ಲವೆಂದು ಸ್ಪಷ್ಟೀಕರಿಸುವ ಇರಾದೆ ಅವರಿಗಿದ್ದಿದ್ದನ್ನು ತೋರಿಸುತ್ತದೆ. ಹೀಗಾಗಿ ಬಂಡಾಯ ಶಾಸಕರು ಅಥವಾ ಬಿಜೆಪಿಗೆ ತಕ್ಷಣದಲ್ಲೇ ಏನಾದರೂ ಬದಲಾವಣೆಗಳನ್ನು ನಿರೀಕ್ಷಿಸುವುದು ಕಷ್ಟಕರ ಎಂಬ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಈಗಲೇ ಹೇಳಲಾಗದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...