ಕರ್ನಾಟಕ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದೆ. ಪ್ರಮುಖ ಪಕ್ಷಗಳ ಟಿಕೆಟ್‌ಗಾಗಿ ದೊಡ್ಡ ಕೋಲಾಹಲವೇ ಏರ್ಪಟ್ಟಿತ್ತು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದ್ದು, 27 ಜನ ಟಿಕೆಟ್ ವಂಚಿತರು ಜೆಡಿಎಸ್ ಪಕ್ಷ ಸೇರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಮಂಗಳೂರು ಉತ್ತರ, ಚಿತ್ರದುರ್ಗ, ಮೂಡಿಗೆರೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿಯೇ ಈ ವಲಸೆ ನಡೆದಿದೆ. ಆ ಪಟ್ಟಿ ಇಲ್ಲಿದೆ.
ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷ ಬಿಟ್ಟು ಜೆಡಿಎಸ್ ಸೇರಿ ಟಿಕೆಟ್ ಪಡೆದವರು
- ಶಿವಮೊಗ್ಗ: ಬಿಜೆಪಿ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ್‌ರವರು ಶಿವಮೊಗ್ಗದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಅವರು ಜೆಡಿಎಸ್ ಸೇರಿ ಟಿಕೆಟ್ ಪಡೆದಿದ್ದಾರೆ.
2. ಮೂಡಿಗೆರೆ: ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಮೂಡಿಗೆರೆಯಲ್ಲಿ ಹಾಲಿ ಬಿಜೆಪಿ ಶಾಸಕರಾಗಿದ್ದ ಎಂ.ಪಿ ಕುಮಾರಸ್ವಾಮಿಯವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತು. ಅವರು ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ.
3. ಜೇವರ್ಗಿ: ಮಾಜಿ ಶಾಸಸ ದೊಡಪ್ಪಗೌಡ ಶಿವಲಿಂಗಪ್ಪನವರಿಗೆ ಬಿಜೆಪಿ ಟಿಕೆಟ್ ಸಿಗದುದ್ದರಿಂದ ಅವರು ಜೆಡಿಎಸ್ ಸೇರಿದ್ದಾರೆ.
4. ಕೊಪ್ಪಳ: ಚಂದ್ರ ಶೇಖರ್‌ರವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದುದ್ದರಿಂದ ಅವರು ಜೆಡಿಎಸ್‌ಗೆ ಬಂದು ಟಿಕೆಟ್ ಗಿಟ್ಟಿಸಿದ್ದಾರೆ.
5. ಅರಸೀಕರೆ: ಎನ್ ಆರ್ ಸಂತೋಷ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದುದ್ದರಿಂದ ಅವರು ಜೆಡಿಎಸ್‌ಗೆ ಬಂದು ಟಿಕೆಟ್ ಗಿಟ್ಟಿಸಿದ್ದಾರೆ.
6. ವರುಣ: ಭಾರತೀ ಶಂಕರ್
7. ಅರಕಲಗೂಡು: ಎ.ಮಂಜು
8. ಕೂಡ್ಲಿಗಿ: ಕೋಡಿಹಳ್ಳಿ ಭೀಮಪ್ಪ
9. ಹಗರಿಬೊಮ್ಮನಹಳ್ಳಿ: ನೇಮಿರಾಜ್ ನಾಯಕ್
10. ಬೀದರ್: ಸೂರ್ಯಕಾಂತ್ ನಾಗಮಾರಪಲ್ಲಿ
11. ಯಾದಗಿರಿ: ಎ.ಬಿ ಮಲಕರೆಡ್ಡಿ
12. ಶಹಾಪುರ: ಗುರುಲಿಂಗಪ್ಪ ಗೌಡ
13. ಬಸವನ ಬಾಗೇವಾಡಿ: ಸೋಮನಗೌಡ ಪಾಟೀಲ್
14. ಕಾರವಾರ: ಚೈತ್ರ ಕೋಟೇಕಾರ್
ಕಾಂಗ್ರೆಸ್ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷ ಬಿಟ್ಟು ಜೆಡಿಎಸ್ ಸೇರಿ ಟಿಕೆಟ್ ಪಡೆದವರು
- ಮಂಗಳೂರು ಉತ್ತರ: ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾಗಿದ್ದ ಮೊಹಿದ್ದೀನ್ ಭಾವರವರ ಬದಲು ಇನಾಯತ್ ಉಲ್ಲಾರವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಇದರಿಂದ ಕುಪಿತಗೊಂಡ ಅವರು ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ.
2. ಚಿತ್ರದುರ್ಗ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಘು ಆಚಾರ್ ಟಿಕೆಟ್ ಸಿಗದುದ್ದರಿಂದ ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ.
3. ಕಡೂರು: ಮಾಜಿ ಶಾಸಕರಾದ ವೈಎಸ್‌ವಿ ದತ್ತಾರವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್‌ನಲ್ಲಿಯೂ ಟಿಕೆಟ್ ಸಿಗದಿದ್ದರಿಂದ ಅವರು ಮರಳಿ ಜೆಡಿಎಸ್‌ಗೆ ಬಂದು ಅಭ್ಯರ್ಥಿಯಾದರು.
4. ಬಳ್ಳಾರಿ ನಗರ: ಅನಿಲ್ ಲಾಡ್
5. ಬಾಗಲಕೋಟೆ: ಡಾ. ದೇವರಾಜ್ ಪಾಟೀಲ್
6. ಬೆಂಗಳೂರು ದಕ್ಷಿಣ: ರಾಜಗೋಪಾಲ ರೆಡ್ಡಿ
7. ಹಾನಗಲ್: ಮನೋಹರ್ ತಹಸೀಲ್ದಾರ್
8. ಹಳಿಯಾಳ: ಎಸ್.ಎಲ್. ಘೋಟ್ನೇಕರ್
9. ನವಲಗುಂದ: ಕಲ್ಲಪ್ಪ ನಾಗಪ್ಪ ಗಡ್ಡಿ
10. ಸವದತ್ತಿ ಯಲ್ಲಮ್ಮ: ಸೌರವ್ ಆನಂದ್ ಚೋಪ್ರಾ
11. ರಾಯಬಾಗ: ಪ್ರದೀಪ್ ಮಾಳಗಿ
12. ಕುಡಚಿ: ಆನಂದ್ ಮಾಳಗಿ
13. ಹೊಸದುರ್ಗ: ಎಂ.ತಿಪ್ಪೇಸ್ವಾಮಿ
ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ…


