ರಫೇಲ್ ಕುರಿತು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಮತ್ತು ಸಂಜಯ್ ಕಿಶನ್ ಕೌಲ್ ರವರು ತನಿಖೆಯ ಅಗತ್ಯವಿಲ್ಲವೆಂದರೆ ಮತ್ತೊಬ್ಬ ನ್ಯಾಯಾಧೀಶರಾದ ಜೋಸೆಫ್ ರವರು ಈ ವಿಚಾರದಲ್ಲಿ ಸಿಬಿಐ ತನಿಖೆಯ ಅಗತ್ಯವಿದೆ ಎಂದು ತೀರ್ಪು ಬರೆದಿದ್ದಾರೆ. ಮೂರನೇ ಎರಡು ಬಹುಮತದ ಆಧಾರದಲ್ಲಿ ತೀರ್ಪು ಪ್ರಕಟವಾಗಿದೆ.
ತೀರ್ಪಿನ ನಂತರ “ರಾಫೆಲ್ ಹಗರಣದ ತನಿಖೆಗೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಜೋಸೆಫ್ ದೊಡ್ಡ ಬಾಗಿಲು ತೆರೆದಿದ್ದಾರೆ. ತನಿಖೆ ಈಗ ಪೂರ್ಣ ಶ್ರದ್ಧೆಯಿಂದ ಪ್ರಾರಂಭವಾಗಬೇಕು. ಈ ಹಗರಣದ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿಯನ್ನು (ಜೆಪಿಸಿ) ರಚಿಸಬೇಕು” ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
Justice Joseph of the Supreme Court has opened a huge door into investigation of the RAFALE scam.
An investigation must now begin in full earnest. A Joint Parliamentary Committee (JPC) must also be set up to probe this scam. #BJPLiesOnRafale pic.twitter.com/JsqZ53kZFP
— Rahul Gandhi (@RahulGandhi) November 14, 2019
ಕಳೆದ 5 ವರ್ಷಗಳಲ್ಲಿ, ಪ್ರತಿ ಪ್ರಕರಣವನ್ನು ಸಮಗ್ರವಾಗಿ ವಿಶ್ಲೇಷಿಸದೆ ವಿಜಯ ಆಚರಿಸುವ ಕೆಟ್ಟ ಅಭ್ಯಾಸವನ್ನು ಬಿಜೆಪಿ ಮಾಡುತ್ತಿದೆ. ಇಂದು, ರಫೇಲ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಸಮಗ್ರ ಅಪರಾಧ ತನಿಖೆಗೆ ದಾರಿ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.
ಸುಪ್ರೀಂ ಕೋರ್ಟ್ ಇಂದು ರಫೇಲ್ ವಿಚಾರದ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿದೆ. ಆದರೆ ನ್ಯಾಯಾಮೂರ್ತಿ ಜೋಸೆಫ್ ಜೆ ನಮ್ಮ ದೂರು ಗಂಭೀರವಾದುದು ಮತ್ತು ಎಫ್ಐಆರ್ ಅನ್ನು ಸಿಬಿಐ ದಾಖಲಿಸಬೇಕು ಮತ್ತು ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಪಿಸಿ ಕಾಯ್ದೆಯನ್ನು ಸರ್ಕಾರದ ಅನುಮತಿ ಅಗತ್ಯವಿರುವಂತೆ ಬದಲಾಯಿಸಲಾಗಿರುವುದರಿಂದ ಅದನ್ನು ತೆಗೆದುಕೊಳ್ಳಬೇಕು. ಸಿಬಿಐ ಅದನ್ನು ಏಕೆ ಮಾಡುತ್ತಿಲ್ಲ ಎಂದು ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ರವರು ಪ್ರಶ್ನಿಸಿದ್ದಾರೆ.
SC today dismissed review petitions in Rafale. However Joseph J has said that our complaint makes out a serious case&FIR should have been registered&investigation done by CBI. But because PC Act was changed to require govt permission,that must be taken. Why is CBI not seeking it? https://t.co/Cw8eqqs36O
— Prashant Bhushan (@pbhushan1) November 14, 2019


