Homeಚಳವಳಿಸಿರಾಜ್‌ ಬಿಸ್ರಳ್ಳಿಯವರ ಕವನ ಇಂಗ್ಲಿಷ್‌, ತೆಲುಗು ಮತ್ತು ಕೊಂಕಣಿ ಭಾಷೆಗೆ ಭಾಷಾಂತರ: ಕವಿಯ ವಿರುದ್ಧದ ದೂರಿಗೆ...

ಸಿರಾಜ್‌ ಬಿಸ್ರಳ್ಳಿಯವರ ಕವನ ಇಂಗ್ಲಿಷ್‌, ತೆಲುಗು ಮತ್ತು ಕೊಂಕಣಿ ಭಾಷೆಗೆ ಭಾಷಾಂತರ: ಕವಿಯ ವಿರುದ್ಧದ ದೂರಿಗೆ ಭಾರೀ ಖಂಡನೆ

ಜನವರಿ 9 ರಂದು ಆನೆಗುಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕೊಪ್ಪಳದ ಸಿರಾಜ್ ಬಿಸ್ರಳ್ಳಿಯವರು ಓದಿದ ’ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ನುವ ಪದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ.

- Advertisement -
- Advertisement -

ಕವಿ ಮತ್ತು ಪತ್ರಕರ್ತ ಸಿರಾಜ್‌ ಬಿಸ್ರಳ್ಳಿಯವರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಕ್ರಮವನ್ನು ನೂರಾರು ಜನರು ಖಂಡಿಸಿದ್ದಾರೆ. ಅಲ್ಲದೇ ಅವರು ಬರೆದ ಕವನವೂ ಈಗಾಗಲೇ ಇಂಗ್ಲಿಷ್‌, ತೆಲುಗು ಮತ್ತು ಕೊಂಕಣಿ ಭಾಷೆಗೆ ಅನುವಾದವಾಗಿದ್ದು ವೈರಲ್‌ ಆಗಿದೆ.

ಜನವರಿ 9 ರಂದು ಆನೆಗುಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕೊಪ್ಪಳದ ಸಿರಾಜ್ ಬಿಸ್ರಳ್ಳಿಯವರು ’ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ನುವ ಪದ್ಯ ಓದಿದ್ದರು. ಇದನ್ನೇ ದೇಶದ್ರೋಹವೆಂದು ಕರೆದು ಬಿಜೆಪಿಯು ದೂರು ನೀಡಿದ್ದು, ಗಂಗಾವತಿ ಪೊಲೀಸರು ದೂರು ಸಹ ದಾಖಲಿಸಿದ್ದಾರೆ. ಇದರ ವಿರುದ್ಧ ನಾಡಿನ ಕವಿಗಳು, ಸಾಹಿತಿಗಳು, ಜನಪರ ಹೋರಾಟಗಾರರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ನಿನ್ನ ದಾಖಲೆ ಯಾವಾಗ ನೀಡುತ್ತಿ?..( ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ವಾಚನ ಮಾಡಿದ ಕವಿತೆ)ಆಧಾರು, ರೇಷನ್ ಕಾರ್ಡಗಳ ಕ್ಯೂನಲ್ಲಿಥಂಬಿನ, ಸರ್ವರಿನ ಮಂಗನಾಟದಲ್ಲಿಬದುಕ ಕಳೆದುಕೊಳ್ಳು ತ್ತಿರುವವರ ದಾಖಲೆಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ? ನಾಡಿನ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ನೇಣಿಗೇರಿದವರ ,ಹೆಸರೂ ಬೇಡವೆಂದು ಹುತಾತ್ಮರಾದವರ ಇತಿಹಾಸದ ಹಾಳೆಗಳ ಹರಿಯುತ್ತಿರುವವನೇನಿನ್ನ ದಾಖಲೆ ಯಾವಾಗ ನೀಡುತ್ತಿ ? ತಾಜ್ ಮಹಲ್, ಚಾರ್ ಮಿನಾರು ಗುಂಬಜಗಳಿಗೆಕೆಂಪು ಕೋಟೆ ಕುತುಬ್ ಮಿನಾರುಗಳಿಗೆ ಸಾಕ್ಷಿ ಕೇಳುತ್ತಿರುವವನೇನಿನ್ನ ದಾಖಲೆ ಯಾವಾಗ ನೀಡುತ್ತಿ? ಬ್ರಿಟಿಷರ ಬೂಟು ನೆಕ್ಕಿದ ತಲೆಹಿಡುಕರಧರ್ಮ ದ್ವೇಷದ ಅಮಲಿನಲ್ಲಿ ರಕ್ತ ಕುಡಿಯುತ್ತಿರುವಗೊಬೆಲ್ ಸಂತತಿಯವನೇನಿನ್ನ ದಾಖಲೆ ಯಾವಾಗ ನೀಡುತ್ತಿ? ಪಕೋಡ ಮಾರಿ ಬದುಕಿದವನುಚಾ ಮಾರಿ ಬದುಕಿದವನು ನನ್ನೂರಿನಲ್ಲಿಮನುಷ್ಯತ್ವ ಮಾರಿಕೊಂಡಿಲ್ಲಸ್ವಾಭಿಮಾನ ಮಾರಿಕೊಂಡಿಲ್ಲ, ಸುಳ್ಳಿನ ಕಂತೆಗಳ ಕತೆ ಕಟ್ಟಿಲ್ಲಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ? ಮುಳ್ಳು ಚುಚ್ಚಿ, ಹರಿದು, ಸಿಡಿದು ಹೋದಟ್ಯೂಬುಗಳ, ಟೈಯರುಗಳ ತಿದ್ದಿ ತೀಡಿ ಗಾಳಿ ತುಂಬಿದಪಂಚರ್ ನವನು ತನ್ನತನವನ್ನು ಮಾರಿಕೊಳ್ಳಲಿಲ್ಲನೀನು ದೇಶವನ್ನೇ ಮಾರಿಬಿಟ್ಟೆಯಲ್ಲಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ? ದೇಶವನ್ನೇ ಯಾಮಾರಿಸಿದ ನಿನಗೆನಕಲಿ ದಾಖಲೆಗಳು ದೊಡ್ಡದಲ್ಲ ಬಿಡುಕನಿಷ್ಠ ಮನುಷ್ಯತ್ವವೂ ನಿನಗಿದೆಎನ್ನುವ ದಾಖಲೆ ಯಾವಾಗ ನೀಡುತ್ತಿ ?

Posted by Siraj Bisaralli on Tuesday, January 14, 2020

ಕೇಸು ಹಾಕುವುದಾದರೆ ನಮ್ಮ ಮೇಲೆಯೂ ಕೇಸು ಹಾಕಿ ಎಂದು ಸವಾಲು ಹಾಕಿರುವ ಜಾಲತಾಣಿಗರು ಅದೇ ಕವನವನ್ನು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಷೇರ್‌ ಮಾಡಿ ವೈರಲ್‌ ಮಾಡಿದ್ದಾರೆ. ಆ ಮೂಲಕ ಸಿರಾಜ್‌ ಬಿಸ್ರಳ್ಳಿಯವರಿಗೆ ನೈತಿಕ ಬೆಂಬಲ ನೀಡಿದ್ದಾರೆ.

ಈ ಕವನವನ್ನು ದೇಶದ್ರೋಹ ಎಂದು ಕರೆಯುವುದಾದರೆ ಶೇ.90% ಕಥೆ, ಕವನಗಳು ದೇಶದ್ರೋಹದ ಪಟ್ಟಿಗೆ ಸೇರುತ್ತವೆ. ಈ ಕವನವನ್ನು ಸಂಕುಚಿತವಾಗಿ ಅರ್ಥೈಸಿಕೊಂಡಿರುವ ಬಿಜೆಪಿ ಮತ್ತು ಪೊಲೀಸರ ಮನಸ್ಥಿತಿ ಖಂಡನೀಯ ಎಂದು ದೂರಿದ್ದಾರೆ. ಕವಿ ಚಿದಂಬರ ನರೇಂದ್ರರವರು ಗೃಹ ಸಚಿವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಅದರ ಪೂರ್ಣ ಪಾಠ ಕೆಳಗಿನಂತಿದೆ.

ಮಾನ್ಯ ಗೃಹಮಂತ್ರಿ ಬಸವರಾಜ್ ಬೊಮ್ಮಾಯಿಯವರೇ,

ಎಂ.ಎನ್. ರಾಯ್ ರಂಥ ಧೀಮಂತ ನಾಯಕನ ಶಿಷ್ಯರಾದ ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿಗಳಾದ ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರ ಸುಪುತ್ರರಾದ ತಮ್ಮ ಅಧಿಕಾರಾವಧಿಯಲ್ಲಿ ಇಂತಹ ಅನ್ಯಾಯಗಳು ಜರುಗುವುದು ನಮ್ಮ ಸಂವಿಧಾನಕ್ಕೂ, ತಾವು ನಂಬಿಕೊಂಡಿರುವ ಬಸವ ತತ್ವಕ್ಕೂ ಮತ್ತು ಸ್ವತಃ ತಮ್ಮ ತೀರ್ಥರೂಪರ ಘನ ವ್ಯಕ್ತಿತ್ವಕ್ಕೂ ಅಪಮಾನವೆಂದು ತಿಳಿದು, ಈ ಮನವಿ ಸಲ್ಲಿಸುತ್ತಿದ್ದೇನೆ.

ಜನವರಿ 9 ರಂದು ಆನೆಗುಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕೊಪ್ಪಳದ ಸಿರಾಜ್ ಬಿಸ್ರಳ್ಳಿಯವರು ’ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ನುವ ಪದ್ಯ ಓದಿದ್ದಾರೆ. ಈ ದೇಶದ ಸಂವಿಧಾನದ ಕಲಂ 14 ರ ಸಮಾನತೆಯ ಆಶಯಕ್ಕೆ ವಿರುದ್ಧವಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶವಾಸಿಯಾಗಿ ತನ್ನ ವಿರೋಧವನ್ನು ಅಭಿವ್ಯಕ್ತಿಸಿದ್ದಾರೆ. ಇದನ್ನು ವಿರೋಧಿಸಿ ಬಿಜೆಪಿಯ ಕೊಪ್ಪಳ ನಗರ ಘಟಕವು ಜನವರಿ 15 ರಂದು ಕೊಪ್ಪಳದ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಕೇಂದ್ರ ಸರಕಾರದ ಯೋಜನೆ, ಪ್ರಧಾನಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರಿಗೆ, ಹಿಂಧೂ ಧರ್ಮಕ್ಕೆ ಅವಮಾನಿಸಿದ್ದಾಗಿ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಈ ದೂರಿನನ್ವಯ ಜಿಲ್ಲಾಧಿಕಾರಿಗಳು ಕಾರಣ ಕೇಳಿ ಕವಿಗೆ ನೋಟಿಸ್ ಜಾರಿ ಮಾಡಿರುತ್ತಾರೆ. ಕವಿಯು ಈ ನೋಟಿಸಿಗೆ ತನ್ನ ಪ್ರತಿಕ್ರಿಯೆ ನೀಡುವ ಮೊದಲೆ ಜನವರಿ 24 ರ ರಾತ್ರಿ ಗಂಗಾವತಿ ಪೋಲಿಸ್ ಸ್ಟೇಷನ್ನಿನಲ್ಲಿ ಎಫ್.ಐ.ಆರ್ ಕೂಡ ದಾಖಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಹಾಗಾಗಿ ನಾವುಗಳು ಖಂಡಿಸುತ್ತೇವೆ.

ಕಾವ್ಯ ಎಲ್ಲಾ ಕಾಲಕ್ಕೂ ಎದೆಯ ದನಿಯಾಗಿ ಮಾತನಾಡಿದೆ. ಯಾವುದೇ ಕವಿ ಅಥವಾ ಕವಯಿತ್ರಿ ತನ್ನ ಕಾಲದ ಒಳಗಿನ ಬಿಕ್ಕಟ್ಟುಗಳಿಂದಲೇ ಮೈಪಡೆಯುತ್ತಾರೆ. ಹೀಗೆ ಜಗತ್ತಿನ ಎಲ್ಲಾ ಬಿಕ್ಕಟ್ಟುಗಳ ಕಾಲದಲ್ಲಿಯೂ ಅಲ್ಲಿಯದೇ ಕವಿಗಳು ತಮ್ಮದೇ ನುಡಿಗಟ್ಟುಗಳಲ್ಲಿ ಕಾವ್ಯ ಕಟ್ಟಿದ್ದಾರೆ. ಇದೀಗ ಸಿಎಎ/ಎನ್.ಆರ್.ಸಿ ವಿರುದ್ಧವೂ ದೇಶವ್ಯಾಪಿ ಕಾವ್ಯ ಹುಟ್ಟಿದೆ. ಈ ನೆಲೆಯಲ್ಲಿ ಸಿರಾಜ್ ಅವರ ಕವಿತೆ ಈ ಕಾಲದ ಬಿಕ್ಕಟ್ಟುಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಪ್ರಶ್ನಿಸಿದ್ದಾರೆ. ಅಲ್ಲಿ ಯಾವುದೇ ಪಕ್ಷ, ನಿರ್ದಿಷ್ಠ ವ್ಯಕ್ತಿ ಎನ್ನುವುದಕ್ಕಿಂತ ಇದು ಸಾಂಕೇತಿಕವಾಗಿದೆ.

ಪ್ರಜಾಪ್ರಭುತ್ವದ ಸರಕಾರದಲ್ಲಿ ಕವಿಯೊಬ್ಬ ತನ್ನ ಆಳುವ ಸರಕಾರದ ನೀತಿಗಳನ್ನೂ, ಆಳುವ ಪ್ರಭುವನ್ನು ಪ್ರಶ್ನಿಸುವುದು ಸಂವಿಧಾನಿಕ ಹಕ್ಕು. ಅಂತೆಯೇ ಪ್ರಜಾಪ್ರಭುತ್ವದ ಸೌಂದರ್ಯ. ಹಾಗಾಗಿ ಸಿರಾಜ್ ಅವರ ಕವಿತೆ ದೇಶದ ನಾಗರೀಕರು ಕೇಳುವ ಪ್ರಶ್ನೆಯನ್ನು ಪ್ರಾತಿನಿಧಿಕವಾಗಿ ಕೇಳಿದ್ದಾರೆ. ಇದೊಂದು ಸಮೂಹದ ಪ್ರಶ್ನೆ. ಈ ಕೇಸ್ ದಾಖಲಿಸುವುದಾದರೆ ಈ ದೇಶದ ಶೇ 99% ಪ್ರಜಾಪ್ರಭುತ್ವವಾದಿಗಳ ವಿರುದ್ಧ ದಾಖಲಿಸಿಕೊಳ್ಳಬೇಕಿದೆ. ಕವಿತೆಯನ್ನು ವಾಚ್ಯವಾಗಿ ಅರ್ಥಮಾಡಿಕೊಂಡು ದೂರು ದಾಖಲಿಸಿದ ಕ್ರಮವನ್ನು ನಾನು ಖಂಡಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರದ ವಿರುದ್ಧದ ದುರುದ್ದೇಶಪೂರಿತ ದೂರನ್ನು ಕೈಬಿಡಬೇಕೆಂದು ಆಗ್ರಹಿಸುತ್ತೇನೆ.

ಎಂಬ ಪತ್ರವೂ ಸಹ ವೈರಲ್‌ ಆಗಿದ್ದು ನೂರಾರು ಜನ ಅದನ್ನು ಖಂಡಿಸಿ ಸಹಿ ಮಾಡಿದ್ದಾರೆ. ಅವರಲ್ಲಿ ವಿಜಯಮ್ಮ ಸುಕನ್ಯಾ ಮಾರುತಿ ವಸುಂಧರಾ ಭೂಪತಿ ಎಲ್.ಸಿ.ಸುಮಿತ್ರ ಕೆ.ಶರೀಫಾ ಎಮ್.ಎಸ್.ಆಶಾದೇವಿ ಕೆ.ನೀಲಾ ಮೀನಾಕ್ಷಿ ಬಾಳಿ ಪಿ.ಭಾರತೀದೇವಿ ಎಸ್.ಜಿ.ಸಿದ್ಧರಾಮಯ್ಯ ದಿನೇಶ್ ಅಮಿನಮಟ್ಟು ಎನ್.ಎಸ್.ಶಂಕರ ಪುರುಷೋತ್ತಮ ಬಿಳಿಮಲೆ ಪಿಚ್ಚಳ್ಳಿ ಶ್ರೀನಿವಾಸ ಬಸವರಾಜು ಅನಂತ ನಾಯಕ ಬಿ.ಶ್ರೀನಿವಾಸ ಹಸನ್ ನಯೀಂ ಸುರಕೋಡ ಬಿ.ಪೀರಬಾಷ ಎ.ಎಸ್.ಪ್ರಭಾಕರ ಶಶಿ ಸಂಪಳ್ಳಿ ಎಂ.ಡಿ.ಒಕ್ಕುಂದ ಪ್ರಭು ಖಾನಾಪುರೆ ಆರ್.ಕೆ.ಹುಡುಗಿ ವಡ್ಡಗೆರೆ ನಾಗರಾಜಯ್ಯ ಬಿ.ಶ್ರೀಪಾದ ಭಟ್ ಆರಿಫ್ ರಾಜಾ ರಝಾಕ್ ಉಸ್ತಾದ್ ಅಕ್ಷತಾ ಹುಂಚದಕಟ್ಟೆ ಅರುಣ್ ಜೋಳದಕೂಡ್ಲಿಗಿ, ಬಿ.ಸುರೇಶ್, ಕೆ.ಫಣಿರಾಜ್ ಪ್ರಮುಖರಾಗಿದ್ದಾರೆ.

ವರಕವಿ ದ.ರಾ.ಬೇಂದ್ರೆಯವರು ಸ್ವಾತಂತ್ರ್ಯಪೂರ್ವದಲ್ಲಿ ‘ನರಬಲಿ’ ಎಂಬ ಕವಿತೆ ರಚಿಸಿದ್ದರು. ಕವಿತೆಯಲ್ಲಿ ಮಹಾಕಾಳಿಯ ರೂಪಕವನ್ನು ಬಳಸಿ, ಬ್ರಿಟಿಷರ ದಬ್ಬಾಳಿಕೆಯನ್ನು ವರ್ಣಿಸಿದ್ದರು. ಭಾರತೀಯರು ತಮ್ಮನ್ನು ತಾವು ‘ನರಬಲಿ’ ಕೊಟ್ಟುಕೊಂಡಾದರೂ ಸ್ವಾತಂತ್ರ್ಯ ಪಡೆಯಬೇಕು ಎಂಬುದು ಕವಿತೆಯ ಆಶಯವಾಗಿತ್ತು. ಸಹಜವಾಗಿಯೇ ಪ್ರಭುತ್ವ ಸಹಿಸಲಿಲ್ಲ. ಬೇಂದ್ರೆಯವರನ್ನು ಪೊಲೀಸರು ಕರೆದೊಯ್ದರು. ಹಿಂಡಲಗಿ ಜೈಲಿನಲ್ಲಿ ಬೇಂದ್ರೆ ಮೂರು ತಿಂಗಳ ಶಿಕ್ಷೆ ಅನುಭವಿಸಿದರು. ಅದಾದಮೇಲೂ ಕ್ಷಮಾಪಣೆ ಕೇಳಲು (ಮುಚ್ಚಳಿಕೆ) ಒಪ್ಪದೆ ನಜರ್ ಬಂದಿ ಶಿಕ್ಷೆಗೆ ಒಳಗಾದರು. ಬ್ರಿಟಿಷರು ಕವಿತೆಗೆ ಹೆದರಿದರು, ಈಗ ನಮ್ಮನ್ನಾಳುವವರೂ ಬೆದರುತ್ತಿದ್ದಾರೆ. ಹೇಡಿಗಳಿಗೆ ಬಣ್ಣದ ಹಂಗೆಲ್ಲಿ? ಎಂದು ಪತ್ರಕರ್ತ ದಿನೇಶ್‌ ಕುಮಾರ್‌ ದಿನೂರವರು ಪ್ರಶ್ನಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...