Homeಅಂತರಾಷ್ಟ್ರೀಯಭಾರತದಲ್ಲಿ ಪತ್ರಕರ್ತರಿಗೆ ಕಿರುಕುಳ: ಮೋದಿಗೆ ಪತ್ರ ಬರೆದ ಅಂತರಾಷ್ಟ್ರೀಯ ಪತ್ರಿಕಾ ಸಂಘಗಳು!

ಭಾರತದಲ್ಲಿ ಪತ್ರಕರ್ತರಿಗೆ ಕಿರುಕುಳ: ಮೋದಿಗೆ ಪತ್ರ ಬರೆದ ಅಂತರಾಷ್ಟ್ರೀಯ ಪತ್ರಿಕಾ ಸಂಘಗಳು!

ಆರೋಗ್ಯ ಬಿಕ್ಕಟ್ಟು ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರದ ಪ್ರತಿಕ್ರಿಯೆಯಲ್ಲಿನ ನ್ಯೂನತೆಯನ್ನು ಬಹಿರಂಗಪಡಿಸಿದ ಭಾರತದ ಪತ್ರಕರ್ತರನ್ನು ಶಮನಗೊಳಿಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

- Advertisement -
- Advertisement -

ಎರಡು ಅಂತರಾಷ್ಟ್ರೀಯ ಪತ್ರಿಕಾ ಸಂಘಗಳು ಪ್ರಧಾನಿ ನರೇಂದ್ರ ಮೋದಿಗೆ ಜಂಟಿ ಪತ್ರ ಬರೆದಿದ್ದು, “ಪತ್ರಕರ್ತರು, ಕಿರುಕುಳ ಮತ್ತು ಪ್ರತೀಕಾರದ ಭಯವಿಲ್ಲದೆ ಕೆಲಸ ಮಾಡುವುದಕ್ಕೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಆಸ್ಟ್ರಿಯಾ ಮೂಲದ ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್ (ಐಪಿಐ) ಮತ್ತು ಬೆಲ್ಜಿಯಂ ಮೂಲದ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್ (ಐಎಫ್‌ಜೆ) ಎಂಬ ಎರಡು ಪತ್ರಿಕಾ ಸಂಘಗಳು ಮಂಗಳವಾರ ಬರೆದಿರುವ ಪತ್ರದಲ್ಲಿ, “ಪತ್ರಕರ್ತರ ಮೇಲೆ ದೇಶದ್ರೋಹ ಕಾನೂನುಗಳನ್ನು ಹೇರಿ ಅವರ ಕೆಲಸಕ್ಕೆ ಅಡ್ಡಿಮಾಡಲಾಗುತ್ತಿದೆ” ಎಂದು ಆರೋಪಿಸಿದೆ.

“ಸಾಂಕ್ರಾಮಿಕ ರೋಗ ಹರಡಿದ ನಂತರ ಪತ್ರಕರ್ತರ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ ಅಗಾಧವಾಗಿ ಹೆಚ್ಚಾಗಿದೆ. ಆರೋಗ್ಯ ಬಿಕ್ಕಟ್ಟು ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರದ ಪ್ರತಿಕ್ರಿಯೆಯಲ್ಲಿನ ನ್ಯೂನತೆಯನ್ನು ಬಹಿರಂಗಪಡಿಸಿದ ಪತ್ರಕರ್ತರನ್ನು ಶಮನಗೊಳಿಸಲಾಗುತ್ತಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕಟೀಲ್ ವಿರುದ್ಧ ಟೀಕಾಸ್ತ್ರ: ಸಿದ್ದರಾಮಯ್ಯ ಕಾಂಗ್ರೆಸ್ ’ವಿದೂಷಕ’ ಎಂದ ಬಿಜೆಪಿ!

“ಸ್ವತಂತ್ರ, ವಿಮರ್ಶಾತ್ಮಕ ಪತ್ರಕರ್ತರಿಗೆ ಕಿರುಕುಳ ನೀಡಲು ದೇಶದ್ರೋಹ ಕಾನೂನುಗಳನ್ನು ಬಳಸುವುದು ದೇಶದ ಅಂತರರಾಷ್ಟ್ರೀಯ ಬದ್ಧತೆಗಳ ಸಂಪೂರ್ಣ ಉಲ್ಲಂಘನೆ ಮಾತ್ರವಲ್ಲದೇ, ತನ್ನ ವಿರುದ್ಧದ ಟೀಕೆಗಳನ್ನು ಎದುರಿಸಲಾಗದ ಸರ್ಕಾರದ ಕೆಟ್ಟ ಪ್ರಯತ್ನವೂ ಆಗಿದೆ. ಪತ್ರಿಕೋದ್ಯಮ ಕಾರ್ಯವನ್ನು ದೇಶದ್ರೋಹ ಅಥವಾ ಭದ್ರತೆಯನ್ನು ದುರ್ಬಲಗೊಳಿಸುವುದಕ್ಕೆ ಸಮೀಕರಿಸಲಾಗುವುದಿಲ್ಲ” ಎಂದು ಹೇಳಲಾಗಿದೆ.

ಮಾರ್ಚ್ 25 ರ ನಡುವೆ ಭಾರತದಲ್ಲಿ 55 ಪತ್ರಕರ್ತರನ್ನು ಇದಕ್ಕೆ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದರ ನಡುವೆ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಬುಧವಾರ ತನ್ನ ಹೇಳಿಕೆಯಲ್ಲಿ,  ದೆಹಲಿ ಪೊಲೀಸರನ್ನು ಟೀಕಿಸಿದ್ದು, “ಕಾರವಾನ್ ನಿಯತಕಾಲಿಕದ ಪತ್ರಕರ್ತ ಅಹನ್ ಪೆಂಕರ್ ಪತ್ರಿಕಾ ಸದಸ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅವರ ಮೇಲೆ ನಡೆಸಿರುವ ದಾಳಿಯನ್ನು  ಖಂಡಿಸಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಪ್ರತಿಭಟನೆಯೊಂದರಲ್ಲಿ ಭಾರತದ ಬಾವುಟವನ್ನು ಬಳಸಲಾಗಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...