Homeಮುಖಪುಟಜಸ್ಟ್ ಆಸ್ಕಿಂಗ್: Pegasus ಗೂಢಚರ್ಯೆಯ ಅಸಲಿ ಕ್ರೋನಾಲಜಿಯನ್ನು ತಿಳಿಯೋಣವೇ?

ಜಸ್ಟ್ ಆಸ್ಕಿಂಗ್: Pegasus ಗೂಢಚರ್ಯೆಯ ಅಸಲಿ ಕ್ರೋನಾಲಜಿಯನ್ನು ತಿಳಿಯೋಣವೇ?

- Advertisement -
- Advertisement -

ಮೋದಿ ಸರ್ಕಾರವು ಇಸ್ರೇಲಿನ Pegasus ಸೈಬರ್ ಗೂಢಚರ್ಯೆ ಉಪಕರಣವನ್ನು ಬಳಸಿಕೊಂಡು ಭಾರತೀಯ ಪತ್ರಕರ್ತರ ಮೇಲೆ, ವಿರೋಧ ಪಕ್ಷಗಳಮೇಲೆ ಹಾಗು ಸರ್ಕಾರದ ಬೆದರಿಕೆಗೆ ಬಗ್ಗದ ಅಧಿಕಾರಿಗಳು ಮತ್ತು ವಿದ್ವಾಂಸರ ಮೇಲೆ ಹಲವಾರು ವರ್ಷಗಳಿಂದ ಗೂಢಚರ್ಯೆ ಮಾಡುತ್ತಿರುವುದು ಇದೀಗ ಬಯಲಾಗಿಯಷ್ಟೇ..

ಆದರೇನಂತೆ… ಮೋದಿ ಸರ್ಕಾರ ಮಾಮೂಲಿನಂತೆ ಇವೆಲ್ಲಾ ವಿದೇಶಿ ಶಕ್ತಿಗಳ ಜೊತೆಸೇರಿ ಸ್ಥಳೀಯ ವಿರೋಧ ಪಕ್ಷಗಳು ದೇಶದ ವಿರುದ್ಧ ನಡೆಸುತ್ತಿರುವ ಕುತಂತ್ರ ಎಂಬ ಕ್ರೋನಾಲಜಿ ಕಟ್ಟುತ್ತಿದೆ…

ಅಮಿತ್ ಷಾ ಅವರಂತೂ, ಈ ಭಾರತದ ಸಂಸತ್ತು ಸಮಾವೇಶಗೊಳ್ಳುವ ಹಿಂದಿನ ದಿನವೇ ಈ ವರದಿ ಬಿಡುಗಡೆಯಾಗಿರುವ ಹಿಂದಿನ ಕ್ರೋನಾಲಜಿ ಅರ್ಥಮಾಡಿಕೊಳ್ಳಿ ಎಂದು ಸಂಚು ಕಥನ ಹೆಣೆಯಲು ಮುಂದಾಗಿದ್ದಾರೆ…

ಗೃಹಮಂತ್ರಿಗಳು ಇಷ್ಟೆಲ್ಲಾ ಹೇಳಿದ ಮೇಲೆ ಅಸಲೀ ಕ್ರೋನಾಲಜಿಯನ್ನೇ ನೋಡಿಬಿಡೋಣ …

ಗೃಹಮಂತ್ರಿಗಳೇ … ಕ್ರೋನಾಲಜಿ ಹೀಗಿದೆ:

– ಮೊದಲನೆಯದಾಗಿ ಈ ಜಗತ್ತಿನ ಹತ್ತು ದೇಶಗಳ 16 ಮಾಧ್ಯಮ ಸಂಸ್ಥೆಗಳ 80 ಪತ್ರಕರ್ತರು ಜೊತೆಗೂಡಿ ಸಿದ್ಧಪಡಿಸಿದ ಈ ತನಿಖಾ ವರದಿ ಜಗತ್ತಿನಾದ್ಯಂತ ಏಕಕಾಲದಲ್ಲಿ ಜುಲೈ 18 ರಂದು ಬಿಡುಗಡೆಯಾಗಿದೆ.

ಮತ್ತು ಇದು ಭಾರತವನ್ನು ಒಳಗೊಂಡಂತೆ ಇತರ ಹತ್ತು ದೇಶಗಳ ಸರ್ಕಾರ ಗಳು ಪೆಗಾಸಸ್ ಅನ್ನು ಹೇಗೆ ದುರ್ಬಳಕೆ ಮಾಡಿಕೊಂಡಿರಬಹುದು ಎಂಬ ವಿವರಗಳನ್ನು ಕೊಡುತ್ತದೆ. ಕೇವಲ ಭಾರತದ್ದಲ್ಲ…

ಈ ವರದಿಯ ಪ್ರಾಥಮಿಕ ಕಂತು ಸ್ಪಷ್ಟಪಡಿಸುತ್ತಿರುವಂತೆ ಪೆಗಾಸಸ್ ಬಳಿ ಜಗತ್ತಿನ 20 ಬೇರೆಬೇರೆ ದೇಶಗಳಲ್ಲಿ ವಾಸವಾಗಿರುವ 50,000 ಜನರ ಫೋನ್ ನಂಬರ್ಗಳು ಉದ್ದೇಶಿತ ಗೂಢಚರ್ಯೆ ಪಟ್ಟಿಯಲ್ಲಿತ್ತು.

ಅದರಲ್ಲಿ 1000 ನಂಬರ್ ಗಳು ಭಾರತಕ್ಕೆ ಸೇರಿದ್ದವಾಗಿದ್ದರೆ 15,000 ಮೆಕ್ಸಿಕೋಗೆ ಸೇರಿದ್ದವು. ಮೆಕ್ಸಿಕೋಗೆ ಸಂಬಂಧಪಟ್ಟ ವಿವರಗಳು ಸಹಾ ಜುಲೈ 18ರಂದೇ ಜಾಗತೀಕವಾಗಿ ಬಿಡುಗಡೆಯಾಗಿದೆ.

ಹಾಗೆಯೇ ಅಜರ್ಬೈಜಾನ್ ಬಹರೈನ್, ಸೌದಿ ಅರೇಬಿಯಾ, ಹಂಗೇರಿ, ಮೆಕ್ಸಿಕೋ ಇನ್ನಿತರ ಹತ್ತು ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಹೇಗೆ ತನ್ನ ಭಿನ್ನಮತೀಯರ ಮೇಲೆ ಬೇಹುಗಾರಿಕೆ ನಡೆಸಿದೆ ಎಂದು ಈ ವರದಿ ಬಯಲು ಮಾಡಿದೆ.

ಭಾರತವನ್ನು ಬಿಟ್ಟರೆ ಬೇರೆ ಯಾವ ದೇಶದಲ್ಲೂ ಸಂಸತ್ ಅಧಿವೇಶನ ಇರಲಿಲ್ಲ… ಜಗತ್ತು ಎಂದರೆ ಭಾರತವೇ ಅಲ್ಲ ಅಲ್ಲವೇ ಗೃಹ ಮಂತ್ರಿಗಳೇ..??

– ಇನ್ನು ಕೆಲವು ಅಸಲಿ ಕ್ರೋನಾಲಜಿಗಳು ಹೀಗಿವೆ..:

– ಸೌದಿ ಅರೇಬಿಯಾದ ಸಾಮ್ರಾಟರಿಗೆ ತಲೆನೋವಾಗಿದ್ದ ಜಮಾಲ್ ಕಶೊಗಿ ಎಂಬ ಪತ್ರಕರ್ತನ ಪ್ರೇಯಸಿಯ ಫೋನಿನಲ್ಲಿ ಪೆಗಾಸಸ್ ಸ್ಪೈವೇರ್ ಕೂಡಿಸಿದ ನಾಲ್ಕೇ ದಿನಗಳಲ್ಲಿ ಕಶೋಗಿ ಟರ್ಕಿಯ ಸೌದಿ ಅರೇಬಿಯಾದ ರಾಯಭಾರ ಕಚೇರಿಯಲ್ಲಿ 2018ರ ಅಕ್ಟೊಬರ್ ನಲ್ಲಿ ಹೆಣವಾಗುತ್ತಾನೆ..
ಇದು ಅಸಲಿ ಕ್ರೋನಾಲಜಿ

– ಮೆಕ್ಸಿಕೋದ ಸಿಸಿಲಿಯೋ ಪಿನೆಡಾ ಎಂಬ ಪತ್ರಕರ್ತ 2017ರಲ್ಲಿ ಮೆಕ್ಸಿಕೋದ ಬೀದಿಯಲ್ಲಿ ಕೊಲೆಯಾಗಿದ್ದ. ಕಾರಣ ಆಡಳಿತಾರೂಢ ಸರ್ಕಾರಕ್ಕೂ ಡ್ರಗ್ ಮಾಫಿಯಾಗಳಿಗೂ ಇದ್ದ ಸಂಬಂಧಗಳ ಬಗ್ಗೆ ಆತ ಬರೆಯಲು ಶುರು ಮಾಡಿದ್ದ. ಮರು ವರ್ಷ ಚುನಾವಣೆಯಿತ್ತು. ಆತನು ಸಾಯುವ ಕೆಲವು ವಾರಗಳ ಮುನ್ನ ಆತನ ಫೋನಿನಲ್ಲಿ, ಹಾಗೂ ಆತನ ಆಪ್ತರ ಫೋನುಗಳಲ್ಲಿ ಪೆಗಾಸಸ್ ಸ್ಪೈವೇರ್ ಸ್ಥಾಪಿಸಲಾಗಿತ್ತು. ಇದು ಅಸಲಿ ಕ್ರೋನಾಲಜಿ

– ಭಾರತದಲ್ಲಿ…

– indian Express ನ ಸುಶಾಂತ್ ಸಿಂಗ್ ಅವರು 2017 ರಿಂದ ರಫೇಲ್ ಯುದ್ಧ ವಿಮಾನ ಹಗರಣದ ಬಗ್ಗೆ ತನಿಖಾ ಲೇಖನ ಬರೆಯಲು ಪ್ರಾರಂಭಿಸುತ್ತಾರೆ. 2018ರ ಪ್ರಾರಂಭದಿಂದಲೇ ಅವರ ಫೋನಿನಲ್ಲಿ ಪೆಗಾಸಸ್ ಪತ್ತೆಯಾಗಿದೆ.

– 2019ರ ಚುನಾವಣೆಯಲ್ಲಿ ಭಾರತದ ಚುನಾವಣಾ ಆಯೋಗದ ಹಿರಿಯ ಸದಸ್ಯರಾಗಿದ್ದ ಅಶೋಕ್ ಲಾವಾಸಾ ಅವರು ಮೋದಿಯವರ ಚುನಾವಣಾ ಭಾಷಣಗಳ ಬಗೆ ತೀವ್ರವಾದ ತಕರಾರು ಎತ್ತುತ್ತಾರೆ. ಅದರ ಮರು ತಿಂಗಳಿಂದಲೇ ಅವರ ಹೆಸರು ಪೆಗಾಸಸ್ ನ ಸಂಭಾವ್ಯ ಗೂಢಚರ್ಯೆ ಪಟ್ಟಿ ಸೇರಿಕೊಳ್ಳುತ್ತದೆ.

– ಮೋದಿ ಕ್ಯಾಬಿನೆಟ್ಟಿನ ಹಾಲಿ ಮಂತ್ರಿ ಒರಿಸ್ಸಾದ ಅಷ್ವಿನಿ ವೈಷ್ಣವ್ ಅವರು ಅಧಿಕಾರಿಯಾಗಿದ್ದಾಗ ವಾಜಪೇಯಿಯವರ ಆಪ್ತ ಸಹಾಯಕನಾಗಿದ್ದರೂ ಬಿಜು ಜನತಾ ದಾಳಕ್ಕೆ ಆಪ್ತರಾಗಿದ್ದವರು. 2017ರಿಂದಲೇ ಅವರ ಫೋನ್ ನಂಬರ್ ಸಂಭಾವ್ಯ ಪೆಗಾಸಸ್ ಗೂಢಚರ್ಯೆ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅದಾದ ಮರುವರ್ಷದಲ್ಲೆ ಅವರು ಬಿಜೆಪಿ ಸೇರಿಕೊಳ್ಳುತ್ತಾರೆ.

-ಮಾಜಿ ಮುಖ್ಯ ನ್ಯಾಯಾಧೀಶ ಹಾಲಿ ಬಿಜೆಪಿ ನಾಮನಿರ್ದೇಶಿತ ರಾಜ್ಯ ಸಭಾ ಸದಸ್ಯ ರಂಜನ್ ಗೊಗೋಯ್ ಅವರು ತನ್ನ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಮಹಿಳಾ ಉದ್ಯೋಗಿಯೊಬ್ಬರು ದೂರು ನೀಡಿದ ಮರು ವಾರದಿಂದಲೇ ಆಕೆಯ ಹಾಗೂ ಆಕೆಯ ಸಂಬಂಧಿಕರ ಹೆಸರುಗಳು ಪೆಗಾಸಸ್ ಪಟ್ಟಿ ಸೇರಿಕೊಳ್ಳುತ್ತದೆ.

ಆ ನಂತರ ಗೊಗೋಯ್ ಕೊಟ್ಟ ತೀರ್ಪು ಗಳೆಲ್ಲ ಮೋದಿ ಸರ್ಕಾರದ ಪರವೇ.

ಈ ಕ್ರೋನಾಲಜಿಯನ್ನು ಹೇಗೆ ಅರ್ಥಮಾಡಿಕೊಳ್ಳುವುದು ಅಮಿತ್ ಷಾ ಅವರೇ?????

  • ಶಿವಸುಂದರ್‌

ಇದನ್ನೂ ಓದಿ: Explainer: ಏನಿದು ಪೆಗಾಸಸ್? ಹೇಗೆ ಫೋನ್ ಹ್ಯಾಕ್ ಮಾಡುತ್ತದೆ? ಅಪಾಯಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...