Homeಕರ್ನಾಟಕಕೆ.ಬಿ ಸಿದ್ದಯ್ಯ ಕವಿಯೂ, ಸಂತನೂ, ರಾಜಕೀಯ ವ್ಯಕ್ತಿಯೂ ಆಗಿದ್ದರು - ದಿನೇಶ್ ಅಮೀನ್ ಮಟ್ಟು

ಕೆ.ಬಿ ಸಿದ್ದಯ್ಯ ಕವಿಯೂ, ಸಂತನೂ, ರಾಜಕೀಯ ವ್ಯಕ್ತಿಯೂ ಆಗಿದ್ದರು – ದಿನೇಶ್ ಅಮೀನ್ ಮಟ್ಟು

- Advertisement -
- Advertisement -

ಕವಿ ಕೆ.ಬಿ.ಸಿದ್ದಯ್ಯ ಏಕಕಾಲಕ್ಕೆ ಕವಿಯೂ, ಸಂತನೂ, ಸಂಸಾರಿಯೂ ಮತ್ತು ರಾಜಕೀಯ ವ್ಯಕ್ತಿಯಾಗಿ ಕಾಣುತ್ತಿದ್ದರು. ಬಿಳಿಗಡ್ಡ ಮತ್ತು ಬಿಳಿ ಕೂದಲು ಕಂಡರೆ ಎಷ್ಟೇ ಜನರಿರಲಿ ಕೆ.ಬಿ ಅವರನ್ನು ಗುರುತಿಸಬಹುದಾಗಿತ್ತು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತುಮಕೂರಿನ ಅಮಾನಿಕೆರೆ ಎದುರಿನಲ್ಲಿರುವ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕೆ.ಬಿ.ಸಿದ್ದಯ್ಯನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆ.ಬಿ. ಪ್ರಯತ್ನಿಸಿದ್ದರೆ ರಾಜ್ಯಸಭಾ ಸದಸ್ಯರಾಗುವ ಎಲ್ಲಾ ಲಕ್ಷಣಗಳು ಅವರಲ್ಲಿದ್ದವು. ಆದರೆ ಕೆಬಿ ಗಂಭೀರವಾಗಿ ಪ್ರಯತ್ನ ಮಾಡಲಿಲ್ಲ ಅನಿಸುತ್ತದೆ ಎಂದರು.

ನಾನು ಕೆ.ಬಿ.ಸಿದ್ದಯ್ಯನವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಬೇಕೆಂಬ ಆಸೆ ಇತ್ತು. ಆದರೆ ನುಡಿನಮನ ಸಮಾರಂಭದಲ್ಲಿ ಭಾಗವಹಿಸುತ್ತೇನೆಂಬ ನಂಬಿಕೆ ಇರಲಿಲ್ಲ. ಹೀಗಾಗಿ ಇದು ಹೆಮ್ಮೆಯ, ಸಂತೋಷದ ವಿಚಾರವಲ್ಲ. ನಾನು ತುಮಕೂರುನಲ್ಲಿದ್ದಾಗ ಕೆಬಿ.ಸಿದ್ದಯ್ಯ ಒಡನಾಟವಿದ್ದರೂ ಹೆಚ್ಚು ಭೇಟಿ ಆಗುತ್ತಿರಲಿಲ್ಲ ಎಂದು ಸ್ಮರಿಸಿಕೊಂಡರು.

ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದ ಕೆ.ಬಿ.ಸಿದ್ದಯ್ಯ ಎಂದೂ ವಿಧಾನಸೌಧದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಸಿದ್ದರಾಮಯ್ಯ ಮನೆಗೆ ಬರುತ್ತಿದ್ದರು. ಅಲ್ಲಿ ನಾನು ಅವರನ್ನು ನೋಡಿದ್ದೆ. ಅವರ ಬಿಳಿಯ ಗಡ್ಡ, ಬಿಳಿಯ ಕೂದಲ ಮತ್ತು ಇತ್ತೀಗೆ ಹಾಕಿಕೊಳ್ಳುತ್ತಿದ್ದ ಕಪ್ಪು ಕನ್ನಡ ಎಲ್ಲರ ನಡುವೆ ಅವರನ್ನು ಗುರುತಿಸುವಂತಹ ವ್ಯಕ್ತಿತ್ವವಾಗಿತ್ತು. ಅಷ್ಟೇ ಅಲ್ಲ ಅವರಲ್ಲಿ ಆತ್ಮಸ್ಥೈರ್ಯ ಕೂಡ ಇತ್ತು. ಅವರು ಎಂದೂ ತಲೆತಗ್ಗಿಸಿದವರಲ್ಲ. ಬೇಸರದಿಂದ, ನೋವಿನಿಂದ ಅವರು ಇದ್ದದ್ದು ಕಾಣಲಿಲ್ಲ. ಅವರ ಮಾತುಗಳಲ್ಲಿ ನಿರಾಸೆ, ಸಿನಿಕತೆ ಕಾಣಲಿಲ್ಲ ಎಂದು ವಿವರಿಸಿದರು.

ಕೆಬಿಯವರವನ್ನು ನೋಡಿದಾಗ ಅವರ ಗುರು ಅನಂತಮೂರ್ತಿ ನೆನಪಾಗುತ್ತಿದ್ದರು. ಅನಂತಮೂರ್ತಿ ಕೊನೆಯ ದಿನಗಳಲ್ಲಿ ಮುಂದಿನ ಎರಡು ವರ್ಷಗಳ ಹೇಗೆ ನರೇಂದ್ರ ಮೋದಿ ಅವರನ್ನು ಎದರಿಸಬೇಕು ಎಂಬ ಜೀವನೋತ್ಸಾಹ ಇತ್ತು. ಅದೇ ಜೀವನೋತ್ಸಾಹ ಕೆ.ಬಿ.ಸಿದ್ದಯ್ಯ ಅವರಲ್ಲೂ ಇತ್ತು. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ನಾವೂ ನಿರೀಕ್ಷಿಸಿರಲಿಲ್ಲ. ಅವರು ಅದನ್ನು ಅಂದುಕೊಂಡಿರಲಿಲ್ಲ. ಸಾವನ್ನು ಯಾರೂ ನಿರೀಕ್ಷಿಸುವುದಿಲ್ಲವಲ್ಲ ಎಂದರು.

ಕವಿ ಕೆ.ಬಿ.ಸಿದ್ದಯ್ಯ ಸಂತನೋ, ಸಂಸಾರಿಯೋ ರಾಜಕಾರಣಿಯೋ ಏನೆಂದು ತಿಳಿಯುವ ಮೊದಲೇ ಅವರು ಹೊರಟು ಹೋದರು. ಸಾಹಿತಿಗಳ ಸುತ್ತಮುತ್ತ ಒಂದು ಪ್ರಭಾವಳಿ ಇರುತ್ತದೆ. ಆ ಪ್ರಭಾವಳಿಯ ಹತ್ತಿರ ಹೋಗಲು ಸಾಧ್ಯವಾಗದಂತಹ ಸ್ಥಿತಿ ಇರುತ್ತದೆ. ಆದರೆ ದೇವನೂರು ಮಹಾದೇವ ಮತ್ತು ಕೆ.ಬಿ.ಸಿದ್ದಯ್ಯ ಅವರಲ್ಲಿ ಅಂತಹ ಯಾವುದೇ ಪ್ರಭಾವಳಿ ಇರಲಿಲ್ಲ. ತುಂಟತನ ಇತ್ತು, ಎಲ್ಲರೊಂದಿಗೆ ಬೆರೆಯುತ್ತಿದ್ದರು ಎಂದು ಹೇಳಿದರು.

ಕೆ.ಬಿ ತುಮಕೂರು ಬಿಟ್ಟು ಬೆಂಗಳೂರಿಗೆ ಬಂದಿದ್ದರೆ ಮಹತ್ವದ ಸ್ಥಾನ ಪಡೆಯುತ್ತಿದ್ದರು. ಬೆಂಗಳೂರಿಗೆ ಬಂದರೆ ಸಂಜೆಗೆ ತುಮಕೂರಿಗೆ ಬರುತ್ತಿದ್ದರು. ಅವರಿಗೆ ತುಮಕೂರು ಸೆಳೆಯುತ್ತಿತ್ತು. ಸಿದ್ದರಾಮಯ್ಯ ಎಷ್ಟೇ ಜನರ ನಡುವೆ ಕೂತು ಮಾತನಾಡುತ್ತಿರಲಿ ಬಿಳಿಗಡ್ಡ ಮತ್ತು ಬಿಳಿತಲೆಯ ಸಿದ್ದಯ್ಯ ಅವರನ್ನು ಕಂಡರೆ ಏನ್ ಪ್ರೊಫೆಸರ್ ಎನ್ನುತ್ತಿದ್ದರು ಎಂದು ನೆನಪಿಸಿದರು.

ಕೆ.ಬಿ. ಸಿದ್ದಯ್ಯ ಭಾಷಣದಲ್ಲಿ ಕಟುವಾಗಿ ಮಾತನಾಡುತ್ತಿದ್ದರೋ ಅವರ ಮನಸ್ಸಿನಲ್ಲಿ ಅಂತಹ ಯಾವುದೇ ಭಾವನೆ ಇರುತ್ತಿರಲಿಲ್ಲ. ಬೇರೆಯವರನ್ನು ಟೀಕೆ ಮಾಡಿ ಏಕೆ ತಮ್ಮ ಮೇಲೆ ಎಳೆದುಕೊಳ್ಳುತ್ತಿರಿ ಎಂದರೆ ಬಿಡೋ ಎನ್ನುತ್ತಿದ್ದರು. ಮೇಲ್ನೋಟಕ್ಕೆ ಕಟುವಾಗಿ ಟೀಕಿಸಿದರೂ ಅವರ ಒಳಗಡೆ ಅಂತಹ ಕಹಿ ಇರಲಿಲ್ಲ. ಇಂತಹ ಸಾಧಕರನ್ನು ನೆನೆಸಿಕೊಳ್ಳುವುದು ಕಡಿಮೆ. ಇಂಥವರು ಬಹಳಷ್ಟು ಮಂದಿ ಇದ್ದಾರೆ. ಅವರು ಇದ್ದಾಗಲೇ ತಮ್ಮ ಸಾಧನೆಗಳನ್ನು ಹೇಳುವ ಕೆಲಸ ಆಗಬೇಕು ಎಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಮಾತನಾಡಿ ಕೆ.ಬಿ.ಸಿದ್ದಯ್ಯ ಇನ್ನೂ ಎತ್ತರಕ್ಕೆ ಬೆಳೆಯಬಹುದಿತ್ತು. ಆದರೆ ಹಾಗೆ ಆಗಲಿಲ್ಲ. ಅವರೊಂದು ಪುಷ್ಪಕವಿಮಾನವಿದ್ದಂತೆ. ಅದರಲ್ಲಿ ಯಾರೂ ಹತ್ತಲಿಲ್ಲ. ಅದು ಮೇಲಕ್ಕೂ ಹೋಗಲಿಲ್ಲ. ಪುಷ್ಪಕ ವಿಮಾನ ಹತ್ತಿದ್ದರೆ ಮೇಲಕ್ಕೆ ಹೋಗುತ್ತಿದ್ದರು ಎಂದು ಮೆಲುಕು ಹಾಕಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಮ್ಮ ಹಟ್ಟಿ’ ಕೇವಲ ದೊರೈರಾಜು ಅವರ ಕಥೆಯಲ್ಲ, ಒಂದು ಸಾಂಸ್ಕೃತಿಕ ಲೋಕವನ್ನೇ ಕಟ್ಟಿಕೊಡುವ ಕೃತಿ’: ಕೋಟಿಗಾನಹಳ್ಳಿ ರಾಮಯ್ಯ 

‘ಸಾಮಾನ್ಯವಾಗಿ ಆತ್ಮಕಥನಗಳು ಅಂದರೆ ಒಬ್ಬ ವ್ಯಕ್ತಿಯ ವಿವರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಆದರೆ ‘ನಮ್ಮ ಹಟ್ಟಿ’ ಆತ್ಮಕಥಾನಕದಲ್ಲಿ ಒಂದು ಹಟ್ಟಿಯ ವಿವರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅಲ್ಲಿರುವ ಅನೇಕ ಕುಶಲ ಕರ್ಮಿಗಳು, ಹಾಗೂ ವಿಶಿಷ್ಟ ಲೋಕವೇ...

ಪ. ಬಂಗಾಳ ಎಸ್‌ಐಆರ್ | ಮೈಕ್ರೋ ಅಬ್ಸರ್ವರ್ಸ್ ಬದಲಿಗೆ 8,505 ಗ್ರೂಪ್ ಬಿ ಅಧಿಕಾರಿಗಳನ್ನು ಒದಗಿಸುತ್ತೇವೆ : ಚು. ಆಯೋಗಕ್ಕೆ ತಿಳಿಸಿದ ಮಮತಾ ಸರ್ಕಾರ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕಾಗಿ ಮೈಕ್ರೋ ಅಬ್ಸರ್ವರ್ಸ್ ಬದಲಿಗೆ ತನ್ನ ಅಧೀನದ ಸುಮಾರು 8,505 ಗ್ರೂಪ್ ಬಿ ಅಧಿಕಾರಿಗಳನ್ನು ನಿಯೋಜಿಸಲು ಸಿದ್ಧವಿರುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರ...

ಸಿಎಂ ಶರ್ಮಾ ಮುಸ್ಲಿಮರಿಗೆ ಗುಂಡಿಕ್ಕಿದಂತೆ ತೋರಿಸುವ ವಿಡಿಯೋ ಹಂಚಿಕೊಂಡ ಅಸ್ಸಾಂ ಬಿಜೆಪಿ!

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಸ್ಲಿಮರಿಗೆ ಗುಂಡಿಕ್ಕಿದಂತೆ ತೋರಿಸುವ ವಿಡಿಯೋವನ್ನು ಅಸ್ಸಾಂ ಬಿಜೆಪಿಯ ರಾಜ್ಯ ಘಟಕ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಶನಿವಾರ (ಫೆ.7) ಹಂಚಿಕೊಂಡಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಅದನ್ನು...

ಯಾವುದೇ ಕಾರಣಕ್ಕೂ ಕೇರಳದಲ್ಲಿ ಎನ್‌ಪಿಆರ್ ಜಾರಿಯಾಗುವುದಿಲ್ಲ : ಸಿಎಂ ಪಿಣರಾಯಿ ವಿಜಯನ್

ಕೇರಳದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ (ಫೆ.7) ಪುನರುಚ್ಚರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಅವರು, "ಯಾವುದೇ ಸಂದರ್ಭದಲ್ಲೂ...

ಕೋಗಿಲು ಬಡಾವಣೆ ಮನೆಗಳ ನೆಲಸಮ : ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಎಷ್ಟು ಮನೆಗಳನ್ನು ನೆಲಸಮ ಮಾಡಲಾಗಿದೆ. ಇದರಿಂದಾಗಿ ಎಷ್ಟು ಕುಟುಂಬಗಳು ನಿರಾಶ್ರಿತರಾಗಿದ್ದಾರೆ ಮತ್ತು ಪುನರ್ವವಸತಿಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಒಳಗೊಂಡ ವರದಿ ಸಲ್ಲಿಸುವಂತೆ ಪ್ರಕರಣದಲ್ಲಿ ನ್ಯಾಯಾಲಯದ ನೆರವುಗಾರರಾಗಿರುವ...

ಫೈಝಾನ್ ಸಾವು ಪ್ರಕರಣ : ಆರು ವರ್ಷಗಳ ಬಳಿಕ ಇಬ್ಬರು ಪೊಲೀಸರಿಗೆ ಕೋರ್ಟ್ ಸಮನ್ಸ್

ಈಶಾನ್ಯ ದೆಹಲಿಯ 2020ರ ಗಲಭೆ ವೇಳೆ ಮುಸ್ಲಿಂ ಯುವಕ ಫೈಝಾನ್ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಸಾವನ್ನಪ್ಪುವ ಮುನ್ನ ಇತರ ನಾಲ್ಕೈದು ಯುವಕರೊಂದಿಗೆ...

ಗಂಗಾವತಿ : ವಿದೇಶಿ ಮಹಿಳೆ ಸೇರಿ ಇಬ್ಬರ ಅತ್ಯಾಚಾರ, ಓರ್ವನ ಕೊಲೆ ಪ್ರಕರಣ : ಮೂವರು ದೋಷಿಗಳು ಎಂದ ಕೋರ್ಟ್

ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿ ಸ್ಥಳೀಯ ಹೋಮ್‌ ಸ್ಟೇ ಮಾಲಕಿ ಮತ್ತು ಇಸ್ರೇಲಿ ಯುವತಿ ಮೇಲೆ ಅತ್ಯಾಚಾರವೆಸಗಿ, ಅವರ ಜೊತೆಗಿದ್ದ ಯುವಕನನ್ನು ಕೊಲೆಗೈದ ಪ್ರಕರಣದ ಮೂವರು ಆರೋಪಿಗಳನ್ನು ಒಂದನೇ ಹೆಚ್ಚುವರಿ...

ರಾಜಸ್ಥಾನದ ಬುಂಡಿಯಲ್ಲಿ ಎರಡು ಬಾಲ್ಯ ವಿವಾಹಗಳು ಸ್ಥಗಿತ; ಬಾಲಕಿಯರ ದೂರಿನ ಮೇರೆಗೆ ಅಧಿಕಾರಿಗಳ ಮಧ್ಯಪ್ರವೇಶ

ಕೋಟಾ: ಫೆಬ್ರವರಿ 10ರಂದು ನಿಗದಿಯಾಗಿದ್ದ ತಮ್ಮ ವಿವಾಹಗಳನ್ನು ನಿಲ್ಲಿಸುವಂತೆ ರಾಜಸ್ಥಾನದ ಬುಂಡಿ ಜಿಲ್ಲೆಯ 12ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಹುಡುಗಿಯರು ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. 17 ವರ್ಷದ ಬಾಲಕಿಯೊಬ್ಬಳು ತನ್ನ...

ಮುಂಬೈ ಮೇಯರ್ ಅಭ್ಯರ್ಥಿಯಾಗಿ ಬಿಜೆಪಿಯ ರಿತು ತಾವ್ಡೆ, ಉಪಮೇಯರ್ ಹುದ್ದೆಗೆ ಶಿವಸೇನೆಯ ಸಂಜಯ್ ಶಂಕರ್ ಘಾಡಿ ಹೆಸರು ಘೋಷಣೆ

ಮುಂಬೈ: ಭಾರತೀಯ ಜನತಾ ಪಕ್ಷ (ಬಿಜೆಪಿ) ಶನಿವಾರ ಮುಂಬೈ ಮೇಯರ್ ಚುನಾವಣೆಗೆ ಕಾರ್ಪೊರೇಟರ್ ರಿತು ತವಾಡೆ ಅವರನ್ನು ನಾಮನಿರ್ದೇಶನ ಮಾಡಿದ್ದರೆ, ಅದರ ಮಿತ್ರ ಪಕ್ಷ ಶಿವಸೇನೆ ಸಂಜಯ್ ಘಾಡಿ ಅವರನ್ನು ಉಪ ಮೇಯರ್...

ಪಾಕಿಸ್ತಾನದ ಶಿಯಾ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿ ಹೊಣೆ ಹೊತ್ತ ಐಸಿಸ್ 

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಎಂದು ಕರೆಯಲ್ಪಡುವ ಗುಂಪು ಹೊತ್ತುಕೊಂಡಿದೆ, ಈ ಬಾಂಬ್ ಸ್ಫೋಟದಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಮತ್ತು 169...