Homeಮುಖಪುಟಪಕ್ಷಾಂತರಕ್ಕೆ ಶಾಶ್ವತ ಮರಣಶಾಸನ ಬರೆಯುವ ಅವಕಾಶವನ್ನು ಸುಪ್ರೀಂ ಕಳೆದುಕೊಂಡಿತು: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌

ಪಕ್ಷಾಂತರಕ್ಕೆ ಶಾಶ್ವತ ಮರಣಶಾಸನ ಬರೆಯುವ ಅವಕಾಶವನ್ನು ಸುಪ್ರೀಂ ಕಳೆದುಕೊಂಡಿತು: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌

- Advertisement -
- Advertisement -

ಶಾಶ್ವತವಾಗಿ ಪಕ್ಷಾಂತರ ಚಟುವಟಿಕೆ ನಡೆಸುವುದನ್ನು ಕೊನೆಗೊಳಿಸಲು ಸಿಕ್ಕ ಅವಕಾಶವನ್ನು ಸುಪ್ರೀಂಕೋರ್ಟ್‌ ಮಿಸ್‌ ಮಾಡಿಕೊಂಡಿತು ಎಂದು  ಕರ್ನಾಟಕದ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಅವರು 2023 ರವರೆಗೆ ರಾಜ್ಯದ 17 ಬಂಡಾಯ ಶಾಸಕರನ್ನು ಅನರ್ಹಗೊಳಿದ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಅನರ್ಹತೆಯ ಅವಧಿಯನ್ನು ಡಿಕ್ಟೇಟ್‌ ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ತನಗಿದ್ದ ಪಕ್ಷಾಂತರಕ್ಕೆ ಶಾಶ್ವತ ಮರಣಶಾಸನ ಬರೆಯುವ ಅತ್ಯಮೂಲ್ಯ ಅವಕಾಶವನ್ನು ಕಳೆದುಕೊಂಡಿತು ಎಂದಿದ್ದಾರೆ.

ಆನ್‌ಲೈನ್‌ ಪತ್ರಿಕೆ ದಿ ಪ್ರಿಂಟ್ ಜತೆ ಮಾತನಾಡಿದ ರಮೇಶ್‌ ಕುಮಾರ್, ತಾವು ತೆಗೆದುಕೊಂಡಿದ್ದ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದರು. ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಿ, ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರಿದ ಅನರ್ಹ ಶಾಸಕರಿಗೆ ಶಿಕ್ಷೆ ನೀಡುವ ಅವಶ್ಯಕತೆಯಿದೆ ಎಂದಿದ್ದಾರೆ.

’ನಾನು ತೆಗೆದುಕೊಂಡ ನಿರ್ಧಾರಕ್ಕೆ ತುಂಬಾ ದೃಢವಾಗಿದ್ದೇನೆ. ಇದು ನನ್ನ ಕಾನೂನು ವ್ಯಾಖ್ಯಾನ ಮತ್ತು ಸಂವಿಧಾನದ ನಿಬಂಧನೆಗಳಾಗಿತ್ತು. ನಾನು ಹೊಂದಿರುವ ದೃಷ್ಟಿಕೋನಕ್ಕಿಂತ ಭಿನ್ನವಾದ ಅಭಿಪ್ರಾಯ ನೀಡಿರುವುದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

ಇದನ್ನೂ ಓದಿ: ಕೆ.ಬಿ ಸಿದ್ದಯ್ಯ ಕವಿಯೂ, ಸಂತನೂ, ರಾಜಕೀಯ ವ್ಯಕ್ತಿಯೂ ಆಗಿದ್ದರು – ದಿನೇಶ್ ಅಮೀನ್ ಮಟ್ಟು

’ನಾನು ಏನು ಮಾಡಿದ್ದೇನೆ ಎಂಬುದು ಚೆ‌ನ್ನಾಗಿ ಗೊತ್ತಿದೆ. ನ್ಯಾಯಾಲಯದ ದೃಷ್ಟಿಯಲ್ಲಿ, ಅವರು ಹೇಳಿದಂತೆ ಎಲ್ಲವೂ ನಡೆದಿದೆ ಎಂಬಂತೆ ಕಾಣಿಸಿರಬಹುದು. ಆದರೆ ಇದೆಲ್ಲವನ್ನೂ ನಾನು ಒಪ್ಪುವುದಿಲ್ಲ. ಆದರೆ ಸುಪ್ರೀಂಕೋರ್ಟ್‌ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಯಾಕೆಂದರೆ ಅದು ಸುಪ್ರೀಂಕೋರ್ಟ್‌ ಎಂದು ಹೇಳಿದರು.

ಇನ್ನು ಪಕ್ಷಾಂತರ ವಿರೋಧಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ 17 ಶಾಸಕರನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅನರ್ಹಗೊಳಿಸಿದ್ದರು. ವಿಶ್ವಾಸ ಮತಯಾಚನೆಗೂ ಮೊದಲು ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡ ನಂತರ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಿತ್ತು. ನಂತರ ಬಿಜೆಪಿಯ ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಿತ್ತು.

ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಸಿ, ತೀರ್ಪು ನೀಡಿದ ಸುಪ್ರೀಂಕೋರ್ಟ್‌, ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ್ದ ರಮೇಶ್‌ ಕುಮಾರ್‌ ಅವರ ನಿರ್ಧಾರವನ್ನು ಎತ್ತಿ ಹಿಡಿದಿದೆ. ಆದರೆ ಅನರ್ಹತೆ ಅವಧಿಯನ್ನು ಸುಪ್ರೀಂಕೋರ್ಟ್‌ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...