Homeಅಂಕಣಗಳುಮಲೆನಾಡಿನ ವೈವಿಧ್ಯಮಯ ಬೆಳೆಗಳು ಮತ್ತು ಅವುಗಳ ವಿಶೇಷಗಳು

ಮಲೆನಾಡಿನ ವೈವಿಧ್ಯಮಯ ಬೆಳೆಗಳು ಮತ್ತು ಅವುಗಳ ವಿಶೇಷಗಳು

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -17

ಕೊನೆಗೂ ಉಳಿದು ಕೊಳ್ಳುವ ಪ್ರಶ್ನೆ ಕಾಫಿಯನ್ನು ಜನರು ಯಾಕೆ ಕುಡಿಯಬೇಕು ಎಂಬುದು. ಹೌದು ಅದು ಜನರ ಆಯ್ಕೆ. ಚಹಾ ಕುಡಿಯಬೇಕೆ? ಅಡಿಕೆ ಜಗಿಯಬೇಕೆ?ತಂಬಾಕು, ಗಾಂಜಾ ಮುಂತಾದವನ್ನು ಹೊರತು ಪಡಿಸಿ,

ಮದ್ಯವನ್ನು ಕುಡಿಯಬೇಕೇ ಬೇಡವೇ? ಕುಡಿದರೆ ಎಷ್ಟು ಕುಡಿಯಬೇಕು? ಮದ್ಯಪಾನ ಸಂಸ್ಕೃತಿಯಿರುವ ನಮ್ಮ ಅನೇಕ ಜನಪದಗಳಿದ್ದಾವಲ್ಲ (ಕುಡುಕರಲ್ಲ) ಅವರೇನು ಮಾಡಬೇಕು ?

ಕಾಫಿ, ಕೋಕೋ, ಬಾಳೆ, ಮೆಣಸು ಗಳ ಮಿಶ್ರ ಬೆಳೆ

ಕಾಫಿ ಬೆಳೆಗಾರರು, ಬೇರೆ ಬೆಳೆಯನ್ನು ಯಾಕೆ ಬೆಳೆಯಬಾರದು? ಕಾಫಿ ಅಹಾರ ಬೆಳೆಯೇನಲ್ಲ, ಜನರು ಕಾಫಿ ಕುಡಿಯದಿದ್ದರೂ ನಡೆಯುತ್ತದೆ. ಇತ್ಯಾದಿ ಮಾತುಗಳಿವೆ. ಹೌದು ಖಂಡಿತ ಇದೇ ಪ್ರಶ್ನೆಯನ್ನು ಅನೇಕ ವಾಣಿಜ್ಯ ಬೆಳೆಗಳಿಗೂ ಕೇಳಬಹುದು. ಟೀ, ಕೋಕೋ, ಅಡಿಕೆ, ಚಿಕೊರಿ (ಹೌದು ಚಿಕೊರಿಯನ್ನೂ ಭಾರತದಲ್ಲಿ ಬೆಳೆಯುತ್ತಾರೆ) ಮುಂತಾದ ಬೆಳೆಗಳು ಈ ಸಾಲಿಗೆ ಸೇರುತ್ತವೆ. ರಬ್ಬರ್ ವಾಣಿಜ್ಯ ಬೆಳೆಯಾದರೂ ಅದು ಇಂದು ಅನಿವಾರ್ಯ ಬೆಳೆ. ನಮ್ಮ ಕೈಗಾರಿಕೆ ಮತ್ತು ವೈದ್ಯಕೀಯ ಬಳಕೆಗಾಗಿಯಾದರೂ ರಬ್ಬರ್ ಬೇಕೇ ಬೇಕು. ಇನ್ನು ನಮ್ಮ ಸಾಂಬಾರ ಬೆಳೆಗಳು ಮತ್ತು ಕಬ್ಬು ಇವು ಅರೆ ವಾಣಿಜ್ಯ ಬೆಳೆಗಳು. ಇವುಗಳಲ್ಲಿ ಏಲಕ್ಕಿ ಮತ್ತು ಮೆಣಸು ಸೇರಿದೆ. ಇವುಗಳೆಲ್ಲವೂ ಆಹಾರದಲ್ಲಿ ಬಳಕೆಯಾದರೂ ವಾಣಿಜ್ಯದಲ್ಲೂ ಪ್ರಮುಖ ಪಾತ್ರ ಹೊಂದಿವೆ. ಶುದ್ಧ ಆಹಾರ ಬೆಳೆಗಳಾದ ಭತ್ತ, ಗೋಧಿ, ರಾಗಿ, ಜೋಳ, ಹಣ್ಣು-ತರಕಾರಿಗಳು ಮುಂತಾದವು. ಇವುಗಳೂ ಅಲ್ಲದೆ ಅಪಾಯಕಾರಿಯಾದ ಆದರೆ ವೈದ್ಯಕೀಯ ಮತ್ತು ಕೈಗಾರಿಕಾ ಬಳಕೆಗಾಗಿಯಾದರೂ ಅನಿವಾರ್ಯವಾಗಿ ಮತ್ತು ನಿಯಂತ್ರಿತವಾಗಿ ಬೆಳೆಯಬೇಕಾದ ಹೊಗೆಸೊಪ್ಪ, ಅಫೀಮು, ಗಾಂಜಾ ದಂತಹ ಬೆಳೆಗಳು. ಇದರೊಂದಿಗೆ  ವೈದ್ಯಕೀಯದಲ್ಲಿ, ಸುಗಂಧ ದ್ಯವ್ಯಗಳ ತಯಾರಿಕೆಯಲ್ಲಿ ಮತ್ತು ಅಲಂಕಾರಕ್ಕೆ ಬಳಕೆಯಾಗುವ ಹೂವಿನ ಬೆಳೆಗಳು.

ಕಾಫಿ ಯಾಲಕ್ಕಿ ಮಿಶ್ರ ಬೆಳೆ

ಮೇಲಿನ ಅಷ್ಟೂ ಬೆಳೆಗಳಲ್ಲಿ ಎರಡು ಮುಖ್ಯ ವಿಭಾಗಗಳಿವೆ. ಗುಡ್ಡ ಮತ್ತು ಕಾಡುಗಳಲ್ಲಿ ಬೆಳೆಯುವ ಬೆಳೆಗಳು ಮತ್ತು ಬಯಲಿನಲ್ಲಿ ಬೆಳೆಯುವ ಬೆಳೆಗಳು. ಕಾಫಿ, ಟೀ, ಕೋಕೊ, ರಬ್ಬರ್, ಏಲಕ್ಕಿ, ಮೆಣಸು ಇವು ಬೆಟ್ಟಗಳ ಬೆಳೆ ಮೆಣಸನ್ನು ಸ್ವಲ್ಪ ಮಟ್ಟಿಗೆ ಬಯಲಿನಲ್ಲೂ ಬೆಳೆಯುತ್ತಾರೆ. ಕಾಫಿ, ಟೀ, ಕೋಕೊ ಮುಂತಾದವನ್ನು ಬಯಲಿನಲ್ಲಿ ಬೆಳೆಯಲು ಪ್ರಯತ್ನಿಸಿದರೂ ಅವೆಲ್ಲ ಸಣ್ಣ ಪ್ರಯತ್ನಗಳು ಅಷ್ಟೆ. ಬಯಲಿನಲ್ಲಿ ಬೆಳೆದಾಗ ಅವುಗಳ ಗುಣಮಟ್ಟವೂ ತುಂಬ ಕಡಿಮೆಯಿರುತ್ತದೆ.

ಬಾಕಿ ಎಲ್ಲಾ ಬೆಳೆಗಳು ಬಯಲಿನ ಬೆಳೆಗಳು. ಇವುಗಳನ್ನು ಬೆಟ್ಟಸೀಮೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆದರೂ, ಬೆಟ್ಟದ ತಪ್ಪಲಿನ ಬಯಲಿನಲ್ಲಿ ಬೆಳೆಯುತ್ತಾರೆ. ಉದಾ ಗದ್ದೆಗಳಲ್ಲಿ ಅಡಿಕೆ ತೋಟಗಳು ಗದ್ದೆಗಳೇ.

ಕಾಫಿ, ಟೀ, ರಬ್ಬರ್, ಏಲಕ್ಕಿ ಬೆಳೆಯುವ ಪ್ರದೇಶ ಬೆಟ್ಟ ಸೀಮೆ. ಹಿಂದೆ ಅಲ್ಪಪ್ರಮಾಣದಲ್ಲಿ ಬೆಳೆಯುತ್ತಿದ್ದ ಕಾಫಿಯನ್ನು ವಿದೇಶಿ ವಿನಿಮಯ ತರುವ ಬೆಳೆಯಾಗಿ ಮಾಡಿ ವಿಸ್ತರಿಸಿದವರು ಬ್ರಿಟಿಷರು. ಟೀಯನ್ನೂ ಮತ್ತು ರಬ್ಬರನ್ನೂ ಕೂಡಾ ಅವರೇ ಮೊದಲು ಭಾರತದಲ್ಲಿ ವಾಣಿಜ್ಯ ಉದ್ದೇಶದಿಂದ ಬೆಳೆದರು.

ಜತ್ರೋಪ ಬೆಳೆ ಪ್ರಯತ್ನದ ಪಳೆಯುಳಿಕೆ

ಆದರೆ ಬ್ರಿಟಿಷರಲ್ಲಿ ಒಂದು ವೈಜ್ಞಾನಿಕವಾದ ಪರಿಸರ ಪ್ರಜ್ಞೆಯೂ ಇತ್ತು ನಾವು ಬ್ರಿಟಿಷರ ಕಾಲದ ಯಾವುದೇ ಪ್ಲಾಂಟೇಷನ್ ಬೆಳಗಳನ್ನು ನೋಡಿ. ಬೆಟ್ಟದ ಕೆಳಭಾಗದಿಂದ ಸುಮಾರಾಗಿ ಬೆಟ್ಟದ ಅರ್ಧ ಭಾಗದವರೆಗೆ ಮಾತ್ರ ಕೃಷಿಮಾಡಿ ಮೇಲಿನ ಭಾಗದ ಕಾಡನ್ನು ಮುಟ್ಟದೆ ಹಾಗೆಯೇ ಬಿಟ್ಟಿರುತ್ತಿದ್ದರು. ಇದಕ್ಕೆ ಎರಡು ಕಾರಣಗಳಿದ್ದವು. ಕೆಳಗೆ ಬೆಳೆಯುತ್ತಿದ್ದ ಬೆಳೆಗೆ ಮೇಲಿನ ಭಾಗದ ಸಹಜ ಕಾಡಿನ ಸಾರಾಂಶ ಮಳೆನೀರಿನ ಮೂಲಕ ಇಳಿದು ಬಂದು ಏಕ ಬೆಳೆಯಿಂದ (ಮೋನೋ ಕಲ್ಚರ್) ಆಗುವ ಮಣ್ಣಿನ ಹಾನಿಯನ್ನು ಕಡಿಮೆ  ಮಾಡುತ್ತಿತ್ತು. ಹಾಗೇಯೇ ಭೂ ಸವಕಳಿ ಮತ್ತು ಕುಸಿತವನ್ನು ತಡೆಯುತ್ತಿತ್ತು. ವರ್ಷವಿಡೀ ಭೂಮಿಯನ್ನು ತಂಪಾಗಿಡುತ್ತಿತ್ತು. ಇದನ್ನೆಲ್ಲ ಬಿಟ್ಟು ಬೆಟ್ಟದ ತುದಿಯವರೆಗೆ ನಾವು ಕೃಷಿಮಾಡಿದ ಪರಿಣಾಮವನ್ನು ಈಗ ಅನುಭವಿಸುತ್ತಿದ್ದೇವೆ.

ಇವೆಲ್ಲ ಬೇರೆ ಬೇರೆ ವಿಚಾರಗಳು. ಈಗ ಕಾಫಿ ಬೆಳೆ ವಿಚಾರಕ್ಕೆ ಬಂದರೆ, ಕಾಫಿ ಬೆಳೆಯುವುದು ಸಮುದ್ರ ಮಟ್ಟದಿಂದ 2500 ಅಡಿಗಳಿಂದ ಸುಮಾರು 4500 ಅಡಿಗಳ ವರೆಗಿನ ಬೆಟ್ಟಗಳಲ್ಲಿ ಈ ಎತ್ತರದ ಪ್ರದೇಶ ಮಾತ್ರ ಕಾಫಿ ಬೆಳೆಗೆ ಸೂಕ್ತವಾದುದು. ಹೆಚ್ಚೂ ಕಡಿಮೆ ಏಲಕ್ಕಿ ಬೆಳಗೂ ಅಷ್ಟೆ. ಟೀ ಇನ್ನೂ ಎತ್ತರದಲ್ಲಿಯೂ ಬೆಳೆದರೆ ರಬ್ಬರ್ ಬೆಳಗೆ 1000 ರಿಂದ 1500 ಅಡಿಗಳ ಪ್ರದೇಶ ಒಳ್ಳೆಯದು. ಇವುಗಳಲ್ಲಿ ಒಂದು ಮುಖ್ಯ ವ್ಯತ್ಯಾಸವೆಂದರೆ ರಬ್ಬರ್ ಮತ್ತು ಟೀ ಮೋನೋ ಕಲ್ಚರ್ ಬೆಳೆಗಳು. ಕಾಫಿ ಏಲಕ್ಕಿ ಮರಗಿಡಗಳ ಮಧ್ಯೆ ಬೆಳೆಯುತ್ತದೆ.

ಕಾಫಿ ಬೆಳೆಯುವ ಪ್ರದೇಶದಲ್ಲಿ ಬೆಳೆಯಲು ಸಾಧ್ಯವಿರುವುದು, ಅಂದರೆ 2500 ರಿಂದ 4500 ಅಡಿ ಎತ್ತರದ ಬೆಟ್ಟಪ್ರದೇಶದಲ್ಲಿ ಕಾಫಿ, ಏಲಕ್ಕಿ ಮತ್ತು ಸ್ವಲ್ಪ ಮಟ್ಟಿಗೆ ಕಿತ್ತಳೆ ಮಾತ್ರ. ಇನ್ನು ಒಂದಷ್ಟು ಬಾಳೆ, ಅಡಿಕೆಯನ್ನು ಇಲ್ಲಿಯೂ ಬೆಳೆಯುತ್ತಾರೆ ಇವೆಲ್ಲ ಬೆಟ್ಟದ ತಗ್ಗಿನಲ್ಲಿ ಮತ್ತು ಕೆಳಗಿನ ಬಯಲಿನಲ್ಲಿ ಮಾತ್ರ ಉಳಿದಂತೆ ನಗಣ್ಯ.

ಬಾಳೆ ಬೆಳೆ ಈಗ ಆನೆಗಳಿಗೆ ಆಹ್ವಾನ

ಏಲಕ್ಕಿಯಂತೂ ಈಗ ನಾಮಾವಶೇಷದ ಸ್ಥಿತಿ ತಲುಪಿದೆ ಇದಕ್ಕೆ ಕಾರಣಗಳು ಹಲವಾರು. ಅರಣ್ಯನಾಶ, ಪ್ರಾಣಿಗಳ ಕಾಟ, ಹಲವು ರೋಗಗಳು ಮತ್ತು ವಾತಾವರಣದಲ್ಲಿ ಆದ ಬದಲಾವಣೆ ಇವುಗಳಲ್ಲಿ ಕೆಲವು. ಹಾಗಾಗಿ ಹೆಚ್ಚಿನ ಏಲಕ್ಕಿ ತೋಟಗಳು ಇಂದು ಕಾಫಿ ತೋಟಗಳಾಗಿವೆ.

ಹೌದು ಕಾಫಿಯನ್ನು ಅಂತರ ಬೆಳೆಯಾಗಿ ಬೆಳೆಯಬಾರದೇ ಎಂಬುದೊಂದು ಪ್ರಶ್ನೆ. ಹೌದು ಇಂದು ಕಾಫಿ ಹೆಚ್ಚೂ ಕಡಿಮೆ ಅಂತರ ಬೆಳೆಯಾಗಿದೆ ಯಾಕೆಂದರೆ ಹಲವಾರು ಕಾಫಿತೋಟಗಳನ್ನು ನೋಡಿದರೆ ಮೆಣಸಿನ ತೋಟದ ಮಧ್ಯೆ ಕಾಫಿ ಬೆಳೆದಂತೆಯೇ ಕಾಣಿಸುತ್ತದೆ. ಹಾಗಾದರೆ ಮೆಣಸನ್ನೇ ಮುಖ್ಯ ಬೆಳೆಯಾಗಿ ಬೆಳೆಯಬಹುದಲ್ಲ?  ಇನ್ನೂ ಕೃಷಿಕ ಕಾಫಿಯನ್ನು ನಂಬಿಕೊಂಡಿರುವುದೇಕೆಂದರೆ. ಮೆಣಸು ಅನಿಶ್ಚಿತ ಬೆಳೆ. ಒಂದೇ ಒಂದು ವರ್ಷದಲ್ಲಿ ಸೊರಗು ರೋಗ ಇಡೀ ತೋಟವನ್ನೇ ನಾಶ ಮಾಡಬಲ್ಲದು. ಈ ವರ್ಷ ಬಂಪರ್ ಬೆಳೆ ನೀಡಿದ ತೋಟದಲ್ಲಿ ಮುಂದಿನ ವರ್ಷ ಮುಂದಿನ ವರ್ಷ ಹೊಸದಾಗಿ ಗಿಡ ನೆಡಬೇಕಾದ ಪರಿಸ್ಥಿತಿ. ಮತ್ತೆ ಫಸಲಿಗೆ ಆರೇಳು ವರ್ಷ ಕಾಯಬೇಕು. ಹಾಗಾಗಿ ಬಹುವಾರ್ಷಿಕ ಅದರಲ್ಲೂ ಕಡಿಮೆ ರೋಗಗಳಿರುವ ರೋಬಸ್ಟ ಕಾಫಿ ಬೆಳೆ ಇಂದು ಕಾಫಿ ಬೆಳಗಾರರನ ಅನಿವಾರ್ಯ ಆಯ್ಕೆ. ಇದರಿಂದ ನೂರಾರು ಅರೆಬಿಕಾ ಕಾಫಿತೋಟಗಳು ರೊಬಸ್ಟಕ್ಕೆ ಬದಲಾಯಿಸುತ್ತಿವೆ. ಕಾಫಿ ಬೆಳೆಯೇ(ಏಲಕ್ಕಿ ಕೂಡಾ) ಒಂದು ರೀತಿಯ ಅಂತರ ಬೆಳೆಯೇ, ಯಾಕೆಂದರೆ ಇದು ಮರಗಳ ನೆರಳಿನಲ್ಲಿ ಬೆಳಯುತ್ತದೆ. ಕೊಡಗಿನಿಂದ ಚಿಕ್ಕಮಗಳೂರಿನವರೆಗೆ ಇಂದು ಮರಗಿಡಗಿಡಗಳು ದೊಡ್ಡ ಪ್ರಮಾಣದಲ್ಲಿ ಉಳಿದಿದ್ದರೆ ಅದಕ್ಕೆ ಪ್ರಮುಖ ಕಾರಣವೇ ಕಾಫಿ ಬೆಳೆ. ಕಾಫಿ ಇಲ್ಲದಿರುತ್ತಿದ್ದರೆ ಎಲ್ಲವೂ ಬೋಳು ಗುಡ್ಡಗಳಾಗಿರುತ್ತಿದ್ದವು. ಇಲ್ಲವೇ ಅಕೇಸಿಯಾ ತೋಪುಗಳಾಗುತ್ತಿದ್ದವು.

ಕಾಫಿ ಕೃಷಿಕರು ಪರ್ಯಾಯವಾಗಿ ಏನೇನು ಬೆಳೆಯಬಹುದೋ ಎಲ್ಲವನ್ನೂ ಪ್ರಯತ್ನಿಸಿ ನೋಡಿದ್ದಾರೆ. ವೆನಿಲ್ಲಾ, ಪಚೋಲಿ, ಜತ್ರೋಪಾ, ಹಣ್ಣಿನ ಗಿಡಗಳು, ಅಗರ್ ವುಡ್, ಎಲ್ಲವನ್ನೂ ಪ್ರಯೋಗ ಮಾಡಿದ್ದಾರೆ. ಮತ್ತೆ ಕೊನೆಗೂ ಈ ಪ್ರದೇಶದಲ್ಲಿ ಅವರ ಕೈಹಿಡಿಯುವುದು. ಕಾಫಿ ಮೆಣಸು ಏಲಕ್ಕಿ ಒಂದಷ್ಟು ಬಾಳೆ ಮಾತ್ರ. ಹಾಗಾಗಿ ಬೇರೆ ಬೆಳೆ ಬೆಳೆಯುವುದು ಸಧ್ಯದಲ್ಲಿ ಕಾಣುತ್ತಿಲ್ಲ.

ಬೆಟ್ಟದ ನೆತ್ತಿಯವರೆಗಿನ ಕೃಷಿ ಭೂಕುಸಿತಕ್ಕೆ ಆಹ್ವಾನ

ಹೌದು ಕಾಫಿ ಬೆಳೆಗಾರರು ಭೂಮಿ ಒತ್ತುವರಿ ಮಾಡಿದ್ದಾರೆ. ಆದರೆ ಮೀಸಲು ಅರಣ್ಯವನ್ನು ಅಲ್ಲ ಮೀಸಲು ಅರಣ್ಯವನ್ನು ಹಾಳುಮಾಡಿದ್ದು ನಮ್ಮ ಅಭಿವೃದ್ಧಿ ಯೋಜನೆಗಳು. ರೆವಿನ್ಯೂ ನೆಲವನ್ನು ದೊಡ್ಡ ಪ್ರಮಾಣದಲ್ಲಿಯೇ ಒತ್ತುವರಿ ಮಾಡಿದ್ದಾರೆ. ಆದರೆ ಅದು ಕಾಡು ಮಾತ್ರವಲ್ಲ ದೀಣೆ ಎಂದು ಕರೆಯುವ ಬೋಳು ಗುಡ್ಡಗಳೂ ದೊಡ್ಡ ಪ್ರಮಾಣದಲ್ಲಿವೆ. ಇವೆಲ್ಲ ಇಂದು ಕಾಫಿ ಬೆಳೆಯಿಂದಾಗಿ ಮರಗಿಡಗಳಿಂದ ತುಂಬಿವೆ, ಬ್ರಿಟಿಷರು ದಟ್ಟ ಕಾಡಿದ್ದ ಜಾಗಗಳಲ್ಲಿ ಮಾತ್ರ ಕಾಫಿ ಬೆಳೆದಿದ್ದರು. ಆದರೆ ಇಂದು ಸ್ವಂತ ಹಿಡುವಳಿಗಳಲ್ಲಿದ್ದ ದೀಣೆಗಳೂ  ತೋಟಗಳಾಗಿ ಮರಗಳಿಂದ ತುಂಬಿವೆ.

ಕಾಫಿಬೆಳೆಯಿಂದಾಗಿಯೇ ಮರಗಿಡಗಳು ಉಳಿದಿರುವ ಪ್ರದೇಶ ಇಂದು ಲಕ್ಷ ಎಕರೆಗಳಿಗೂ ಹೆಚ್ಚು. ಪರಿಸರದ ವಿಚಾರದಲ್ಲಿ ಹೇಳುವುದಾದರೂ ಕಾಫಿ ಅತ್ಯಂತ ಹೆಚ್ಚು ಪರಿಸರ ಸ್ನೇಹಿ ಬೆಳೆ ಬರಿಯ ಮರಗಿಡಗಳ ಕಾರಣಕ್ಕಾಗಿ ಮಾತ್ರವಲ್ಲ. ರೊಬಸ್ಟ ಕಾಫಿ ಎಲ್ಲ ಬೆಳೆಗಳಿಗಿಂತಲೂ ಕಡಿಮೆ ರಾಸಾಯನಿಕ ಪಯೋಗಿಸುವ ಬೆಳೆ ರಾಸಾಯನಿಕ ಗೊಬ್ಬರವೊಂದನ್ನು ಬಳಸದಿದ್ದರೆ ಅದು ಶೇ.100 ಸಾವಯವ ಕೃಷಿ. ಅದಕ್ಕೆ ಬೇರೆ ಯಾವುದೇ ವಿಷವನ್ನೂ ಬಳಸುವುದಿಲ್ಲ. ಕೆಲವು ಕಾಲ ಬೆರ್ರಿ ಬೋರರ್ ಹೆಚ್ಚಾಗಿದ್ದಾಗ ಕೆಲವರು ಕೀಟನಾಶಕವನ್ನು ಬಳಸತೊಡಗಿದವರೂ ನಂತರ ಅದನ್ನು ನಿಲ್ಲಿಸಿದ್ದಾರೆ ಹಾಗೆಯೇ ಕೆಲಸಗಾರರ ಅಭಾವದಿಂದ  ಕಳೆನಾಶಕ ಬಳಸತೊಡಗಿದ್ದವರೂ ಅದರಿಂದಾಗುವ ಹಾನಿ ಅರಿತು ಈಗ ಯಂತ್ರ ಬಳಸತೊಡಗಿದ್ದಾರೆ. ಅರೇಬಿಕ ಕಾಫಿಯಲ್ಲಿ ಕಾಂಡ ಕೊರಕ ಹುಳಗಳ ನಿಯಂತ್ರಣಕ್ಕಾಗಿ ಕೀಟನಾಶಕ ಬಳಸುತ್ತಾರೆ, ಆದರೆ ಇತರ ಪ್ಲಾಂಟೇಷನ್ ಬೆಳೆಗಳಲ್ಲಿ ಅಪಾರ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸುತ್ತಾರೆ.

ಬೆಟ್ಟ ಪ್ರದೇಶವನ್ನೆಲ್ಲ ಖಾಲಿ ಮಾಡಿ ಅರಣ್ಯವನ್ನಾಗಿಸಬೇಕು, ಎಂಬ ಮಾತೂ ಇದೆ, ಅದು ನಮ್ಮ ಸಧ್ಯದ ಪರಿಸ್ಥಿತಿಯಲ್ಲಿ ದೂರದ ಮಾತು. ಒಂದು ವೇಳೆ ಹಾಗೇನಾದರೂ ಅದರೆ ನಂತರ ಆ ಪ್ರದೇಶವನ್ನು ನಮ್ಮ ಸರ್ಕಾರಗಳು ಏನು ಮಾಡಿಯಾವು ಊಹಿಸಿ.

* ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಾಫಿ, ಯಾಲಕ್ಕಿ, ಮೆಣಸು, ವೆನಿಲ್ಲಾ, ಶುಂಠಿಯಂತಹ ಬೆಳೆ ಬದಲಾವಣೆಗಳು ಮತ್ತು ಕಷ್ಟನಷ್ಟಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...