Homeಮುಖಪುಟಸಾರಿಪುತ್ರನ ಕಡೆಯ ದಿನಗಳು: ವೈದಿಕರ ತಿರುಚಿದ ಕಥೆ

ಸಾರಿಪುತ್ರನ ಕಡೆಯ ದಿನಗಳು: ವೈದಿಕರ ತಿರುಚಿದ ಕಥೆ

- Advertisement -
- Advertisement -

ನನ್ನ ಸ್ನೇಹಿತರೊಬ್ಬರು ಇತ್ತೀಚೆಗೆ ನನಗೊಂದು ವಿಡಿಯೋವನ್ನು ನೋಡಲು ಸೂಚಿಸಿದರು. ಬೌದ್ಧ ತತ್ವಗಳಲ್ಲಿ ಅಪಾರ ಶ್ರದ್ಧೆ ಇಟ್ಟುಕೊಂಡ ಅವರು, ವಿಡಿಯೋ ಕಂಟೆಂಟ್‌ನಿಂದ ತುಂಬಾ ಬೇಸರಗೊಂಡಿದ್ದರು. ’ನೋಡಿ, ಬುದ್ಧರನ್ನು ಮತ್ತು ಅವರ ತತ್ವಗಳನ್ನು ಹೇಗೆ ವಿಕೃತಗೊಳಿಸುತ್ತಾರೆ?’ ಎಂದರು. ಇದು ವಾಸವಿ ಸಾಹಿತ್ಯ ಕಲಾ ವೇದಿಕೆಯಿಂದ ’ಕಥಾವಚನ 185’ ಮಾಸ್ತಿಯವರ ಸಣ್ಣಕಥೆಗಳ ಮಾಲಿಕೆಯಲ್ಲಿ 18ನೆಯ ಕಥೆಯನ್ನು ಡಾ. ವಾಣಿ ಎಂಬವರು ಓದುತ್ತಿದ್ದರು. ಅದು “ಸಾರಿಪುತ್ರನ ಕಡೆಯ ದಿನಗಳು” ಎಂಬ ಕಥೆ. ಶ್ರೀಯುತ ಮಾಸ್ತಿಯಂತಹ ಪ್ರಸಿದ್ಧ ಲೇಖಕರು ಬೌದ್ಧ ಧರ್ಮದ ಬಗ್ಗೆ ಯಾವ ಅಧ್ಯಯನವನ್ನೂ ಮಾಡದೆ, ಸಾರಿಪುತ್ತರ ಜೀವನದ ಬಗ್ಗೆಯೂ ತಿಳಿದುಕೊಳ್ಳದೇ ಬೌದ್ಧ ತತ್ವಗಳಲ್ಲಿ ಕೇವಲ ತಮ್ಮ ವೈದಿಕ ನಂಬಿಕೆಗಳನ್ನು ತುರುಕಿ ವಿಕೃತಗೊಳಿಸಿ ವಿಜೃಂಭಿಸಲೆತ್ನಿಸಿರುವದು ನಿಜಕ್ಕೂ ವಿಷಾದನೀಯ. ಈ ಕಥೆ ಬೌದ್ಧ ತತ್ವಗಳಿಗೂ ಬದ್ದವಾಗಿಲ್ಲ, ಸಾರಿಪುತ್ತರ ಐತಿಹಾಸಿಕ ಘಟನೆಗಳಿಗೂ ಬದ್ದವಾಗಿಲ್ಲ. ಈ ಕಥೆಗೆ ಬರುವದಕ್ಕಿಂತ ಮೊದಲು ಭಗವಾನ್ ಬುದ್ಧರ ಮುಖ್ಯ ಶಿಷ್ಯರಾದ ಸಾರಿಪುತ್ತರ ಜೀವನಚರಿತ್ರೆಯ ಮೂಲ ಐತಿಹ್ಯದ ಬಗ್ಗೆ ಒಂದು ಕಣ್ಣೋಟ; ಇದು ಪೂಜ್ಯ ಭಂತೆ ನ್ಯಾನಪೋಲಿಕಾ ಥೇರಾರವರು (ಮೂಲ ಜರ್ಮನ್, ಶ್ರಿಲಂಕಾದಲ್ಲಿ ಬಿಕ್ಖುವಾದವರು) ತಿಪೀಟಕ ಮತ್ತು ಬೌದ್ಧ ಸಾಹಿತ್ಯದಿಂದ ಸಂಗ್ರಹಿಸಿ ಬರೆದದ್ದು.

ಸಾರಿಪುತ್ತ ಮತ್ತು ಮಹಾ ಮೊಗ್ಗಲಾನ ಇಬ್ಬರೂ ಭಗವಾನ್ ಬುದ್ಧರ ಮುಖ್ಯ ಶಿಷ್ಯರು. ಇಬ್ಬರೂ ಸಮಾನ ವಯಸ್ಕರು, ಗೆಳೆಯರು ಮತ್ತು ಅಕ್ಕಪಕ್ಕದ ಊರಿನವರು ಆಗಿದ್ದರು. ಸಾರಿಪುತ್ತರ ಊರು ರಾಜಗೃಹದ ಪಕ್ಕದ ಹಳ್ಳಿ ನಾಲಕ. ಇದನ್ನು ನಾಲ ಅಥವಾ ನಾಲಕ ಎಂದು ಚೀನಿಯಾತ್ರಿ ಫಾಹಿಯಾನ್ ವಿವರಿಸಿದ್ದಾನೆ. ಬ್ರಿಟಿಶ್ ಅಧಿಕಾರಿ ಕನ್ನಿಂಗ್‌ಹ್ಯಾಮ್ ಈಗಿನ ನಾಲಂದಾವೇ ಆ ಸ್ಥಳ ಎಂದು ಉತ್ಖತನದ ಮೂಲಕ ತೋರಿಸಿದ್ದಾನೆ. ಸಾರಿಪುತ್ತರ ಮೊದಲ ಹೆಸರು ಉಪತಿಸ್ಸ, ತಾಯಿ ಸಾರಿ. ಅದರಿಂದಾಗಿಯೆ ಮುಂದೆ ಬಿಕ್ಖುವಾದ ಮೇಲೆ ತನ್ನ ಹೆಸರನ್ನು ಸಾರಿಪುತ್ತ ಎಂದಿಟ್ಟುಕೊಳ್ಳುತ್ತಾರೆ. ಸಾರಿಪುತ್ತ ಮತ್ತು ಮೊಗ್ಗಲಾನ ಇಬ್ಬರೂ ಬೇರೆಬೇರೆ ಗುರುಗಳಲ್ಲಿ ಅಧ್ಯಯನ ಮಾಡಿ ಯಾವುದರಲ್ಲಿಯೂ ಸತ್ಯದ ದಾರಿಕಾಣದೆ ಕೊನೆಗೆ ಬುದ್ಧರನ್ನು ಕಾಣಲು ನಿರ್ಧರಿಸುತ್ತಾರೆ. ಬುದ್ಧರು ಆಗ ಗಯೆಯಿಂದ ರಾಜಗೃಹಕ್ಕೆ ಹೋಗುವ ದಾರಿಯಲ್ಲಿ ವೇಲುವನದಲ್ಲಿ ತಂಗಿರುತ್ತಾರೆ. ಬುದ್ಧರ ಶಿಷ್ಯರಾದ ಹಿರಿಯ ಅಸ್ಸಾಜಿ ಭಿಕ್ಷೆಗೆ ಹೊರಟಿರುವ ಸಮಯದಲ್ಲಿ ಉಪತಿಸ್ಸನು ಅವರನ್ನು ಸಂಧಿಸಿ ಪ್ರಶ್ನೆ ಮಾಡುತ್ತಾನೆ. ಇಷ್ಟೊಂದು ತೇಜೋವಂತರಾದ ತಮ್ಮ ಗುರುಗಳು ಯಾರು? ಆಗ ಅಸ್ಸಾಜಿ ಬಿಕ್ಖುವು ಮಹಾಸಮಣ ಬುದ್ಧರು ತಮ್ಮ ಗುರುಗಳೆಂದು ಹೇಳಲು, ಅವರ ಮುಖ್ಯವಾದ ಉಪದೇಶವೇನೆಂದು ಸಾರಿಪುತ್ತ ಕೇಳುತ್ತಾನೆ. ಆಗ ಅಸ್ಸಾಜಿ ಹೇಳುತ್ತಾರೆ: “ಮಹಾಸಮಣರು ಹೀಗೆ ಹೇಳಿದ್ದಾರೆ; ಯೇ ಧಮ್ಮಾ ಹೇತುಪ್ಪಭವಾ; ತೇಸಂ ಹೇತುಂ ತಥಾಗತೋ ಆಹ| ತೇಸಂ ಚ ಯೋ ನಿರೋಧೋ ಏವಂ ವಾದಿ ಮಹಾಸಮಣೋ||” – “ಕಾರಣದಿಂದ ಕಾರ್ಯವಿಧಾನವು ಉತ್ಪನ್ನವಾಗುತ್ತದೆ. ಜ್ಞಾನೋದಯ ಪಡೆದವರು ಕಾರಣವನ್ನೂ ಅದರ ನಿವಾರಣೆಯನ್ನೂ ಬಿಡಿಸಿ ಹೇಳಿದ್ದಾರೆ. ಇದು ಮಹಾಸಮಣರ ಉಪದೇಶ.” (ವಿನಯ)

(ಇದು ಸಾರನಾಥದ ಅಶೋಕನ ಧಮ್ಮಲಿಪಿಯ ಶಿಲಾಶಾಸನದಲ್ಲಿದ್ದನ್ನು ಮೊದಲ ಬಾರಿಗೆ ಧಮ್ಮಲಿಪಿಯಲ್ಲಿ ಓದಿದ್ದು ಜೇಮ್ಸ್ ಪ್ರಿನ್ಸೆಪ್. ಬೋಧಗಯಾದಲ್ಲಿನ ಇದೇ ಶ್ಲೋಕದ ಸಂಸ್ಕೃತ ಶಾಸನವನ್ನು ಕಂಡುಹಿಡಿದದ್ದು ಬುಖಾನನ್.)

ಉಪತಿಸ್ಸನು ಅದನ್ನು ಅರ್ಥಮಾಡಿಕೊಂಡು ಪ್ರಭಾವಿತನಾಗಿ ಅಲ್ಲಿಂದ ಬೀಳ್ಕೊಟ್ಟು ಮುಂದೆ ತನ್ನ ಗೆಳೆಯ ಕೋಲಿತನ ಜೊತೆಗೂಡಿ ಭಗವಾನರಲ್ಲಿಗೆ ಬಂದು ಅವರ ಶಿಷ್ಯರಾಗುತ್ತಾರೆ. ಉಪತಿಸ್ಸನು ಸಾರಿಪುತ್ತನಾಗಿಯೂ, ಕೋಲಿತನು ಮಹಾಮೊಗ್ಗಲಾನನಾಗಿಯೂ ಶಿಷ್ಯತ್ವವನ್ನು ಸ್ವೀಕರಿಸುತ್ತಾರೆ. ಬುದ್ಧ ತತ್ವಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ಇಬ್ಬರೂ ಉಳಿದ ಶಿಷ್ಯರಿಗೂ ಮಾರ್ಗದರ್ಶಕರಾಗುತ್ತಾರೆ. ಬುದ್ಧರು ಸಾರಿಪುತ್ತನನ್ನು ತನ್ನ ಬಲಗಣ್ಣೆಂದು ಮೊಗ್ಗಲಾನನನ್ನು ಎಡಗಣ್ಣೆಂದು ವರ್ಣಿಸಿದ್ದಾರೆ. ಸಾರಿಪುತ್ತ ಭಗವಾನರಿಂದ ಅತ್ಯಂತ ಕ್ಲಿಷ್ಟವಾದ ಅಭಿಧಮ್ಮವನ್ನು ಅರ್ಥಮಾಡಿಕೊಂಡು ಅಭಿಧಮ್ಮದ ಮೂಲ ಸಿದ್ಧಾಂತವನ್ನು ವಿವರಿಸಿದ್ದಾರೆ.

ಸಾರಿಪುತ್ತ ಬುದ್ಧರೊಡನೆ ನಲವತ್ತು ವರ್ಷಗಳ ಕಾಲ ಇದ್ದು ಅವರ ಸೇವೆ ಮಾಡುತ್ತಾ ಮತ್ತು ಶಿಷ್ಯರಿಗೆ, ಜನರಿಗೆ ಧಮ್ಮ ಮತ್ತು ಅಷ್ಟಾಂಗ ಮಾರ್ಗವನ್ನು ತಿಳಿಸಿದರು. ಭಗವಾನರ ಪರಿನಿಬ್ಬಾಣದ ಮುಂಚೆಯೇ ತನ್ನ ಅಂತ್ಯಕಾಲ ಸಮೀಪಿಸಿದುದನ್ನು ತಿಳಿದು ಬುದ್ಧರಿಂದ ಅಪ್ಪಣೆ ಪಡೆದು ತನ್ನ ಹುಟ್ಟೂರಾದ ನಾಲಂದಕ್ಕೆ ಮರಳಿ ಅಲ್ಲಿ ತನ್ನ ತಾಯಿಗೆ ಧಮ್ಮದೇಸನವನ್ನು ಕೊಟ್ಟು ಅಲ್ಲಿಯೇ ಪರಿನಿಬ್ಬಾಣವನ್ನು ಹೊಂದುತ್ತಾರೆ. ಅವರೊಡನೆ ಹೋಗಿದ್ದ ಚುಂದನೆಂಬ ಶಿಷ್ಯನು ಸಾರಿಪುತ್ತರ ಅಸ್ತಿ ಅವಶೇಷಗಳು, ಅವರ ಭಿಕ್ಷಾಪಾತ್ರೆ ಬಟ್ಟೆಗಳನ್ನು ತಂದು ಭಗವಂತರಿಗೆ ಒಪ್ಪಿಸುತ್ತಾನೆ. ಅವರಿಗೆ ಅಲ್ಲಿ ಜೇತವನ ವಿಹಾರದಲ್ಲಿ ಸ್ತೂಪವನ್ನು ನಿರ್ಮಿಸುತ್ತಾರೆ. ಮುಂದೆ ಅಶೋಕನ ಕಾಲದಲ್ಲಿ ಆ ಅಸ್ತಿಗಳ ಭಾಗ ಮಾಡಿ ಅಶೋಕನು ಬೇರೆಬೇರೆ ಕಡೆಗೆ ಅವರ ಗೌರವಾರ್ಥ ಸ್ತೂಪಗಳನ್ನು ನಿರ್ಮಿಸಲಾಗುತ್ತದೆ.

1857ರಲ್ಲಿ Allexander Cunningham ಮತ್ತು Maisey ಎಂಬ ಅಧಿಕಾರಿಗಳು ಉತ್ಖತನ ನಡೆಸುತ್ತಿದ್ದಾಗ ಸಾಂಚಿಯಲ್ಲಿ ಎರಡು ಕಡೆಗೆ ಮತ್ತು ಅಲ್ಲಿಯೇ ಹತ್ತಿರದ ಸಾತಧಾರಾ ಎಂಬಲ್ಲಿ ಸಾರಿಪುತ್ತ ಮತ್ತು ಮೊಗ್ಗಲಾನರ ಅವಶೇಷಗಳು ಸಿಗುತ್ತವೆ. ಸ್ಪಷ್ಟವಾಗಿ ಅವಶೇಷಗಳನ್ನು ಹೊತ್ತ ಕರಂಡಕಗಳ ಮೇಲೆ ಧಮ್ಮಲಿಪಿಯಲ್ಲಿ ಬರೆದ ’ಸಾರಿಪುತಸ’ ಮತ್ತು ’ಮಹಾ ಮೊಗಲಾನಸ’ ಎಂಬ ಹೆಸರುಗಳು ಸಿಕ್ಕಿವೆ.

ಇನ್ನು ಮಾಸ್ತಿಯವರ ಕಥೆಯಲ್ಲಿನ ಅಸಂಗತತೆಗಳನ್ನು ನೋಡೋಣ

1) ಗುರುದೇವರ ಪರಿನಿರ್ವಾಣದ ನಂತರ ಸಾರಿಪುತ್ರನು ಊರ ಕಡೆಗೆ ತಿರುಗಿದನು.

ಬುದ್ಧರ ಪರಿನಿಬ್ಬಾಣದ ಮುಂಚೆಯೇ ತನ್ನ ಅಂತ್ಯಕಾಲದ ಸೂಚನೆಯನ್ನರಿತ ಸಾರಿಪುತ್ತರು ತಮ್ಮ ತಾಯಿಯನ್ನು ನೋಡಿ ಅವರಿಗೂ ಬುದ್ಧರ ಉಪದೇಶಗಳನ್ನು ಕೊಡಬೇಕೆಂದು ತನ್ನೂರ ಕಡೆಗೆ ಹೋಗುತ್ತಾರೆ. ಸಾರಿಪುತ್ತರು ಬುದ್ಧರ ಮುಂಚೆಯೇ ಪರಿನಿಬ್ಬಾಣವನ್ನು ಹೊಂದುತ್ತಾರೆ. ನಂತರ ಚುಂದನು ಸಾರಿಪುತ್ತರ ಅಸ್ತಿ ಮತ್ತು ಇತರ ಅವಶೇಷಗಳನ್ನು ಜೇತವನದಲ್ಲಿದ್ದ ಬುದ್ಧರಲ್ಲಿಗೆ ತರುತ್ತಾನೆ. ಇದು ಸಂಯುತ್ತ ನಿಕಾಯದ ಚುಂದ ಸುತ್ತದಲ್ಲಿ ವಿವರಿಸಲಾಗಿದೆ.

2) ಸಾರಿಪುತ್ರನ ಮೊದಲ ಹೆಸರು ನರಸಿಂಹ ಶರ್ಮ ಎಂದು. ಅವನು ನರಸಿಂಹೇಶ್ವರ ಅಗ್ರಹಾರದ ಸಂಸ್ಕೃತ ಪಂಡಿತನಾಗಿದ್ದನು.

ಇದನ್ನೂ ಓದಿ: ವೈದಿಕರಿಂದ ಗೌತಮ ಬುದ್ಧನ ಅಪಹರಣ

ಅವರ ಮೊದಲ ಹೆಸರು ಉಪತಿಸ್ಸ ಎಂದು. ಆ ಕಾಲದ ಎಲ್ಲ ಹೆಸರುಗಳೂ ಪಾಲಿ ಮೂಲವೇ ಇರುತ್ತಿತ್ತು. ಅವರು ಬ್ರಾಹ್ಮಣ ಎಂದು ತೋರಿಸಲು ಸಂಸ್ಕೃತದ ಹೆಸರನ್ನು ಕಲ್ಪಿಸಲಾಗಿದೆ.

3) ಹೆಂಡತಿ ವೇದವತಿ, ಮಗಳು ಕುಮುದ್ವತಿ.

ತಿಪೀಟಕಗಳಲ್ಲಿ ಎಲ್ಲಿಯೂ ಅವರಿಗೆ ಹೆಂಡತಿ ಮಗಳು ಇದ್ದ ಪ್ರಸ್ತಾಪ ಇಲ್ಲ. ತಾಯಿ ಇದ್ದರು.

4) ಬುದ್ಧರನ್ನು ಭೆಟ್ಟಿಯಾದಾಗ ಅವರ ಸುತ್ತಲು ನಾಲ್ಕು ವೈದಿಕ ಪಂಡಿತರು ಕುಳಿತಿದ್ದರು. ಅವರ ಜೊತೆಗಿನ ಮಾತುಗಳನ್ನು ಕೇಳಿದ ಮೇಲೆ ಸಾರಿಪುತ್ರನಿಗೆ ಅನಿಸಿದ್ದು “ಇವನೇ ಒಂಬತ್ತನೆಯ ಅವತಾರ. ದೇವರಲ್ಲದವನಿಗೆ ಈ ಪ್ರಜ್ಞೆಯು ಬರುವದು ಹೇಗೆ? ನಾನು ದೇವರನ್ನು ಕಣ್ಣಾರೆ ಕಂಡೆ” ಎನ್ನುತ್ತಾನೆ. ಶಿಷ್ಯನಾದ ಮೇಲೂ ಬುದ್ಧರನ್ನು ದೇವರೆಂದೇ ನಂಬುತ್ತಾನೆ ಮತ್ತು ಅದಕ್ಕೆ ಬುದ್ಧರು ಒಪ್ಪಿಗೆ ಕೊಡುತ್ತಾರೆ. ದಿನಕಳೆದಂತೆ ಬುದ್ಧರು ದೇವರ ಅವತಾರವೆಂದು ಅವನಿಗೆ ಮನವರಿಕೆಯಾಗುತ್ತದೆ.

ದೇವರನ್ನು ಖಡಾಖಂಡಿತವಾಗಿ ನಿರಾಕರಿಸುವ ಬುದ್ಧರು ಅನಿತ್ಯ, ಅನಾತ್ಮ ಹಾಗು ದುಃಖ ಇವು ವಿಶ್ವಾತ್ಮಕ ಸತ್ಯಗಳೆಂದು ಹೇಳಿದರು. ಆದರೆ ಈ ನಿರಾಕರಣೆ nihilistic ಆಗಿರಲಿಲ್ಲ. ನಮ್ಮ ಕರ್ಮಗಳಿಂದುಂಟಾದ ವಿಭವವು ಮುಂದಿನ ಭವಕ್ಕೆ ಸುತ್ತಿಸುತ್ತದೆ ಎಂದು ವಿವರಿಸಿದರು. ಶಾಶ್ವತವಾದ ಆತ್ಮ, ಪರಮಾತ್ಮವಾದವನ್ನು ತಿರಸ್ಕರಿಸಿದರು. ಇಲ್ಲಿ ಮೇಲಿಂದ ಮೇಲೆ ಬುದ್ಧರನ್ನು ದೇವರ ಅವತಾರ ಎನ್ನುವದು ಒಂದು ವರ್ಗದ ಸ್ವಾರ್ಥದ ಬಹು ದೊಡ್ಡ ಧಾರ್ಮಿಕ ರಾಜಕಾರಣದ ಭಾಗವಾಗಿತ್ತು. ಶಂಕರಾಚಾರ್ಯರ ನಂತರ ಭಾರತದ ರಾಜರುಗಳು ನಾನಾ ಕಾರಣಗಳಿಂದ ವೈದಿಕ ಧರ್ಮದ ಕಡೆಗೆ ವಾಲಿ, ಬೆಂಬಲ ಕೊಡುತ್ತಾ ಬರುತ್ತಾರೆ. ಇದೇ ಅವಕಾಶವನ್ನು ಬಳಸಿಕೊಂಡು ಬೌದ್ಧ ಬಿಕ್ಖುಗಳನ್ನು ಹತ್ಯೆ ಮಾಡುವಲ್ಲಿ, ಗಡಿಯಿಂದ ಹೊರಹಾಕುವಲ್ಲಿ ವೈದಿಕರು ಸಫಲರಾಗುತ್ತಾರೆ. ಆಗ ವಾರಸುದಾರರಿಲ್ಲದೇ ಹೋಗುವ ವಿಹಾರಗಳನ್ನು ಮತ್ತು ಬೌದ್ಧ ಮಂದಿರಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ, ಬುದ್ಧರನ್ನು ವಿಷ್ಣುವಿನ ಅವತಾರವೆಂದು ಪ್ರಚಾರ ಮಾಡಿದರೆ ಈ ಕೆಲಸ ಸುಲಭ ಎನ್ನಿಸಿ ವೈದಿಕರು ಈ ತಂತ್ರಕ್ಕೆ ಕೈಹಾಕಿದರು ಮತ್ತು ಯಶಸ್ವಿಯೂ ಆದರು. ಬುದ್ಧ ಅವಲೋಕಿತೇಶ್ವರರ ಮೂರ್ತಿಗಳು ಶಿವನ, ವಿಷ್ಣುವಿನ ಮೂರ್ತಿಗಳಾದವು. ಈಗಲೂ ಅದೇ ತಂತ್ರವನ್ನು ಮಾಡುತ್ತಿದ್ದಾರೆ. ಒಂದು ಕಡೆ ತಮ್ಮ ಧರ್ಮಗ್ರಂಥಗಳಲ್ಲಿ ಬುದ್ಧರನ್ನು ನಿಂದಿಸುತ್ತಾ ಇನ್ನೊಂದು ಕಡೆಗೆ ಅವರನ್ನು ದೇವರ ಅವತಾರ ಎನ್ನುವದು.

5) ಯಾರಾದರೂ ವೇದ ಪಂಡಿತರು ಬಂದರೆ ಬುದ್ಧರು ’ನಾನು ವೇದಗಳನ್ನು ಓದಿಲ್ಲ. ಸಾರಿಪುತ್ರನು ಅದರಲ್ಲಿ ಪಾರಂಗತನಾಗಿದ್ದಾನೆ. ನೀವು ಅವನೊಂದಿಗೆ ಮಾತನಾಡಿ’ ಎನ್ನುತ್ತಿದ್ದರಂತೆ.

ಇವು ತಿಳಿವಳಿಕೆಯಿಲ್ಲದ ಅಹಂಕಾರನ ಮಾತುಗಳಲ್ಲದೆ ಮತ್ತೇನು? ಬ್ರಾಹ್ಮಣನ ಎದುರು ಬುದ್ಧರು ಕಡಿಮೆ ಜ್ಞಾನಿ ಎಂದು ಹೇಳುವ ರೀತಿಯಿದು. ಬುದ್ಧರ ಕಾಲದಲ್ಲಿ ವೇದಗಳೇ ಇರಲಿಲ್ಲ. ಸಾಕಷ್ಟು ಮೂಢನಂಬಿಕೆಗಳು, ಬಲಿಪ್ರಥಾ ಇದ್ದವು. ಬೇರೆಬೇರೆ ಪಂಗಡಗಳ ಪುರೋಹಿತರು ಇದ್ದರು. ಅವರು ಜನರನ್ನು ಸಾಕಷ್ಟು ಶೋಷಣೆ ಮಾಡುತ್ತಿದ್ದರು. ತೇವಿಜ್ಜ ಸುತ್ತದಲ್ಲಿ ಮೂರು ವಿದ್ಯೆಗಳನ್ನು ತಿಳಿದ ಪಂಡಿತರು ಎನ್ನುವ ಮಾತು ಬರುತ್ತದೆ. ಅದನ್ನು ಮೂರು ವೇದಗಳು ಎಂದು ಇಂಗ್ಲಿಷ್ ಹಾಗೂ ಎಲ್ಲ ಭಾಷೆಗಳಲ್ಲಿ ತಪ್ಪಾಗಿ ಅನುವಾದಿಸಿದ್ದಾರೆ. ಈ ಮೂರು ವಿದ್ಯೆಗಳು ಯಾವವು ಎನ್ನುವದನ್ನು ಸಂಗೀತಿ ಮತ್ತು ದಸುತ್ತರ ಸುತ್ತಗಳಲ್ಲಿ ವಿವರಿಸಲಾಗಿದೆ.

6) ಆತ ತನ್ನ ಬಾಲ್ಯದ ನರ್ಮದಾ ನದೀ ತೀರಕ್ಕೆ ಬರುತ್ತಾನೆ.

ಅವರ ಊರು ನಾಲಂದ, ಸ್ಪಷ್ಟವಾಗಿ ರಾಜಗೃಹದ ಹತ್ತಿರ ಎಂದಿದೆ. ಅದು ನರ್ಮದಾ ತೀರವಲ್ಲ.

7) ಎಲ್ಲವೂ ಭಗವಂತನ ಅನುಗ್ರಹ ಎಂದುಕೊಂಡನು. ಸಾರಿಪುತ್ರನು ಬೌದ್ಧನಾದರೂ ಭಗವಂತನನ್ನು ಬಿಡಲಿಲ್ಲ.

ವೈದಿಕರ ದೃಷ್ಟಿಯಲ್ಲಿ ಭಗವಂತ ಎಂದರೆ ಶಾಶ್ವತನಾದ ದೇವರೆಂದೇ ಅರ್ಥ. ಆದರೆ ಬೌದ್ಧ ಅಥವಾ ಸಮಣ ಪರಂಪರೆಯಲ್ಲಿ ಭಗವನ್/ ಭಗವಂತ ಎಂದರೆ ಭಗ್ನವಾನ್ ಅಂದರೆ ಎಲ್ಲ ಬಂಧಗಳನ್ನು ಕತ್ತರಿಸಿಕೊಂಡವನು ಎಂದರ್ಥ.

ಈ ಕಥೆಯ ಮುಖ್ಯ ಉದ್ದೇಶವೇ ಬೌದ್ಧ ತತ್ವಗಳನ್ನು ವಿಕೃತಗೊಳಿಸುವದು. ಅವರ ಸಮಾನತೆ, ಕರುಣೆ, ವೈಜ್ಞಾನಿಕ ನಿಲುವುಗಳನ್ನು ಎದುರಿಸಲಾಗದೇ ಕಾಲ್ಪನಿಕ ಕಥೆಗಳನ್ನು ಹೆಣೆದು ಜನರಿಗೆ ಬುದ್ಧರನ್ನು ಕಾಣದಂತೆ ಮಾಡುವದು. ಮಾಸ್ತಿಯವರು ತಮ್ಮ ಕಾಲದ (ತಪ್ಪು) ತಿಳಿವಳಿಕೆಯಲ್ಲಿ ಬರೆದಿರಬಹುದು ಎಂದಿಟ್ಟುಕೊಳ್ಳೋಣ. ಈಗ ಮತ್ತೆ ವಿಡಿಯೋ ಮುಖಾಂತರ ಅದೇ ಕಥೆಯನ್ನು ಹೇಳುವ ಉದ್ದೇಶ ಏನು? ಮತ್ತೆ ಇನ್ನೂ ಬುದ್ಧರನ್ನು ದೇವರನ್ನಾಗಿಸುವ ಅಜೆಂಡಾ ಜಾರಿಯಲ್ಲಿದೆ ಅಂತಾಯಿತಲ್ಲ! ಇಂತಹ ತಂತ್ರಗಳನ್ನು ಬಯಲು ಮಾಡಿ ಬುದ್ಧ ತತ್ವಗಳನ್ನು ಜನರ ಅರಿವಿಗೆ ತರಬೇಕಾಗಿದೆ.

ಎಲ್ಲರ ಎದೆಗಳಲ್ಲಿಯೂ ಬುದ್ಧ ಜ್ಯೋತಿ ಬೆಳಗಲಿ.

ರಮಾಕಾಂತ ಪುರಾಣಿಕ

ರಮಾಕಾಂತ ಪುರಾಣಿಕ
ಮೂಲತಃ ವಿಜಯಪುರ ಜಿಲ್ಲೆಯವರು. BSNLನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೌದ್ಧ ಸಾಹಿತ್ಯ, ವಚನ ಸಾಹಿತ್ಯ ಮತ್ತು ಕಾವ್ಯದಲ್ಲಿ ಆಸಕ್ತಿ, ಓದು ಮತ್ತು ಬರಹ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...