Homeಚಳವಳಿಕ್ರಾಂತಿಕಾರಿ ಗುಣಸ್ವಭಾವ: ಭಾಗ-3; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಕ್ರಾಂತಿಕಾರಿ ಗುಣಸ್ವಭಾವ: ಭಾಗ-3; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

- Advertisement -
- Advertisement -

ಒಬ್ಬ ವ್ಯಕ್ತಿ ಸ್ವಂತವಾಗಿ ಚಿಂತಿಸಿ, ಭಾವನೆಗಳನ್ನು ಅನುಭವಿಸಿ, ತನ್ನ ನಿರ್ಧಾರಗಳನ್ನು ತಾನೇ ಮಾಡಿದಾಗ ಮಾತ್ರವೇ ಸಂಪೂರ್ಣ ಮುಕ್ತತೆ ಮತ್ತು ಸ್ವಾತಂತ್ರ್ಯ ಅಸ್ತಿತ್ವದಲ್ಲಿ ಇರುತ್ತದೆ. ಅವನು ನೈಜವಾಗಿ ಹೀಗೆ ಮಾಡಲು ಯಾವಾಗ ಸಾಧ್ಯ ಎಂದರೆ, ತನಗೆ ನೈಜವಾಗಿ ಪ್ರತಿಕ್ರಿಯಿಸಲು ಅನುಮತಿ ನೀಡುವ, ತನಗಿಂತ ಹೊರಗಿನ ಪ್ರಪಂಚದೊಂದಿಗೆ ಉತ್ಪಾದಕ ಸಂಬಂಧವನ್ನು ತಲಪಿದಾಗ ಮಾತ್ರ. ಮುಕ್ತತೆ ಮತ್ತು ಸ್ವಾತಂತ್ರ್ಯದ ಈ ಪರಿಕಲ್ಪನೆಯು ಕ್ರಾಂತಿಕಾರಿ ದಾರ್ಶನಿಕರು/ಯೋಗಿಗಳು (Radical mystics) ಮತ್ತು ಕಾರ್ಲ್‌ಮಾರ್ಕ್ಸ್‌ನ ಚಿಂತನೆಗಳಲ್ಲಿ ಕಂಡುಬರುತ್ತದೆ.

ಕ್ರೈಸ್ತ ದಾರ್ಶನಿಕರಲ್ಲಿಯೇ ಅತ್ಯಂತ ಕ್ರಾಂತಿಕಾರಿಯಾದ ಮೀಯ್ಸ್ಟರ್ ಎಕ್ಹಾರ್ಟ್ ಹೇಳುತ್ತಾರೆ: “ನನ್ನ ಜೀವನ ಏನು? ತನ್ನಿಂದ ತಾನಾಗಿ ತನ್ನೊಳಗೆಯೇ ಚಲಿಸಿದಂತದ್ದು. ಹೊರಗಿನಿಂದ ಚಲಿಸಿದಂತದ್ದು ಬದುಕಿರುವುದಿಲ್ಲ.”(5) ಅಥವಾ, “ಒಬ್ಬ ಮನುಷ್ಯ ಹೊರಗಿನಿಂದ ಏನನ್ನಾದರೂ ಹುಟ್ಟಿಸಿಕೊಂಡರೆ ಅಥವಾ ಪಡೆದುಕೊಂಡರೆ, ಅದು ತಪ್ಪು. ಒಬ್ಬ ವ್ಯಕ್ತಿ ದೇವರನ್ನು ಗ್ರಹಿಸಬಾರದು ಅಥವಾ ಆತನನ್ನು ತನ್ನಿಂದ ಹೊರಗಿನವನು ಎಂದು ಪರಿಗಣಿಸಬಾರದು; ಬದಲಾಗಿ, ನಮ್ಮ ಸ್ವಂತ ಮತ್ತು ನಮ್ಮೊಳಗೇ ಇರುವವನೆಂದು ಪರಿಗಣಿಸಬೇಕು.”(6)

ಮಾರ್ಕ್ಸ್ ಇದೇ ರೀತಿಯಲ್ಲಿ, ಆದರೆ ಧಾರ್ಮಿಕವಲ್ಲದ ದಾಟಿಯಲ್ಲಿ ಹೇಳುತ್ತಾರೆ:

“ತನಗೆ ತಾನೇ ಮಾಲಕ ಆಗಿರದ ತನ್ನ ಮಾಲಕ ತಾನು ಮಾತ್ರವೇ ಆಗಿರದ, ಮತ್ತು ತನ್ನ ಅಸ್ತಿತ್ವಕ್ಕೆ ತಾನೇ ಬಾಧ್ಯ ಎಂದು ಭಾವಿಸಿರದ ಹೊರತು, ಒಬ್ಬ ವ್ಯಕ್ತಿಯು ತನ್ನನ್ನು ಸ್ವತಂತ್ರ ಎಂದು ಪರಿಗಣಿಸುವುದಿಲ್ಲ. ಇನ್ನೊಬ್ಬನ ಉಪಕಾರದಲ್ಲಿ ಬದುಕುವವನು ತನ್ನನ್ನು ಅವಲಂಬಿತ ಮನುಷ್ಯನೆಂದೇ ಪರಿಗಣಿಸುತ್ತಾನೆ. ಆದರೆ, ನನ್ನ ಜೀವನದ ಮುಂದುವರಿಕೆಗೆ, ಮತ್ತು ಅದರ ಸೃಷ್ಟಿಗೂ ನಾನು ಒಬ್ಬ ವ್ಯಕ್ತಿಗೆ ಋಣಿಯಾಗಿದ್ದೇನೆ, ಏಕೆಂದರೆ, ಅವನದರ ಮೂಲವಾಗಿದ್ದಾನೆ ಎಂದಾದಾಗ, ನಾನು ಸಂಪೂರ್ಣವಾಗಿ ಇನ್ನೊಬ್ಬ ವ್ಯಕ್ತಿಯ ಉಪಕಾರದಲ್ಲಿ ಬದುಕುತ್ತಿದ್ದೇನೆ. ಅದು ನನ್ನ ಸ್ವಂತ ಸೃಷ್ಟಿ ಆಗಿರದೇ ಇದ್ದರೆ, ನನ್ನ ಜೀವನಕ್ಕೆ ಅಗತ್ಯವಾಗಿ ಇಂತಾ ಒಂದು ಹೊರಗಿನ ಕಾರಣ ಇರುತ್ತದೆ.”(7)

ಅಥವಾ ಮಾರ್ಕ್ಸ್ ಬೇರೆ ಕಡೆ ಹೇಳಿರುವಂತೆ:

“ನೋಡುವುದು, ಕೇಳುವುದು, ಮೂಸುವುದು, ರುಚಿನೋಡುವುದು, ಅನುಭವಿಸುವುದು, ಭಾವಿಸುವುದು, ಯೋಚಿಸುವುದು, ಬಯಸುವುದು, ಪ್ರೀತಿಸುವುದು- (ಸೇರಿದಂತೆ) ಪ್ರಪಂಚಕ್ಕೆ ತನ್ನ ಪ್ರತಿಯೊಂದು ಸಂಬಂಧಗಳಲ್ಲಿ ಒಬ್ಬ ಪೂರ್ಣ ಮನುಷ್ಯನಾಗಿ ತನ್ನ ವೈಯಕ್ತಿತೆಯನ್ನು ದೃಢಪಡಿಸಿದರೆ ಮಾತ್ರವೇ ಅಥವಾ ಸರಳವಾಗಿ ತನ್ನ ವೈಯಕ್ತಿಕತೆಯ ಪ್ರತಿಯೊಂದು ಎಲ್ಲಾ ಅಂಗಗಳನ್ನು ದೃಢಪಡಿಸಿದರೆ ಮತ್ತು ಅಭಿವ್ಯಕ್ತಗೊಳಿಸಿದರೆ ಮಾತ್ರವೇ ಮನುಷ್ಯನು ಸ್ವತಂತ್ರನಾಗಿರುವುದು.”

ಮುಕ್ತತೆ ಮತ್ತು ಸ್ವಾತಂತ್ರ್ಯಗಳು ಕೇವಲ ದಬ್ಬಾಳಿಕೆಯಿಂದ ವಿಮೋಚನೆಯಾಗಲೀ, ವಾಣಿಜ್ಯ ವಿಷಯಗಳಲ್ಲಿ ಸ್ವಾತಂತ್ರ್ಯ ಮಾತ್ರವೇ ಅಲ್ಲದೆ, ವೈಯಕ್ತಿಕತೆಯ ಸಾಕ್ಷಾತ್ಕಾರವಾಗಿರುತ್ತದೆ.

ಪ್ರತಿಯೊಬ್ಬ ವ್ಯಕ್ತಿಯ ಸಮಸ್ಯೆ ಎಂದರೆ, ನಿರ್ದಿಷ್ಟವಾಗಿ ಆತನು ತಲಪಿರುವ ಸ್ವಾತಂತ್ರ್ಯದ ಮಟ್ಟ. ಸಂಪೂರ್ಣವಾಗಿ ಜಾಗೃತಗೊಂಡರೆ, ಒಬ್ಬ ಉತ್ಪಾದಕ ಮನುಷ್ಯನು ಸ್ವತಂತ್ರ ಮನುಷ್ಯ; ಏಕೆಂದರೆ, ತನ್ನ ಸ್ವಂತಿಕೆಯೇ ತನ್ನ ಜೀವನದ ಮೂಲವಾಗಿ ಅವನು ನೈಜವಾಗಿ ಬದುಕಲು ಅವನಿಗೆ ಸಾಧ್ಯ. (ಒಬ್ಬ ಸ್ವತಂತ್ರ ಮನುಷ್ಯನೆಂದರೆ ಒಬ್ಬ ಪ್ರತ್ಯೇಕಿತ ಮನುಷ್ಯನೆಂದು ಇದರ ಅರ್ಥವಲ್ಲ ಎಂದು ಹೇಳಬೇಕಾದ ಅಗತ್ಯವಿಲ್ಲ; ಯಾಕೆಂದರೆ, ಇತರರಿಗೆ ಮತ್ತು ಪ್ರಪಂಚಕ್ಕೆ ಸಂಬಂಧಿತನಾಗಿ ಮತ್ತು ಆಸಕ್ತನಾಗಿ ಇರುವ ಪ್ರಕ್ರಿಯೆಯಲ್ಲಿಯೇ ವ್ಯಕ್ತಿತ್ವದ ಬೆಳವಣಿಗೆಯು ನಡೆಯುತ್ತದೆ. ಆದರೆ, ಈ ರೀತಿ ಸಂಬಂಧಿತನಾಗಿರುವುದು, ಅವಲಂಬಿತನಾಗಿರುವುದಕ್ಕಿಂತ ಸಂಪೂರ್ಣವಾಗಿ ಬೇರೆ.) ಸ್ವಯಂಸಾಕ್ಷಾತ್ಕಾರ ಅಥವಾ ಸ್ವಯಂ ಅನುಭೂತಿಯೆಂಬ ಸ್ವಾತಂತ್ರ್ಯದ ಸಮಸ್ಯೆ ಮಾರ್ಕ್ಸ್‌ರಿಗೆ ಬೂರ್ಜ್ವಾ ಅಥವಾ ಮಧ್ಯಮ ವರ್ಗದ ಕುರಿತು ಆತನ ಟೀಕೆ ಅಥವಾ ವಿಮರ್ಶೆಗೆ ದಾರಿಮಾಡಿ ಕೊಡುತ್ತದೆ. ಫ್ರಾಯ್ಡ್ ತನ್ನ ಸಿದ್ಧಾಂತದ ಚೌಕಟ್ಟಿನ ಒಳಗೆಯೇ, ಇದೇ ಸಮಸ್ಯೆಯನ್ನು ಈಡಿಪಸ್ ಕಾಂಪ್ಲೆಕ್ಸ್‌ಗೆ (Oedipus complex) ಸಂಬಂಧಿಸಿ ನೋಡಿದ್ದಾರೆ.

ಇದನ್ನೂ ಓದಿ: ಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಮಾನಸಿಕ ಆರೋಗ್ಯದ ದಾರಿಯು ತಾಯಿಯ ಕುರಿತ ಇರುವ ಅಗಮ್ಯ ಲೈಂಗಿಕ ಸಂಬಂಧದ (incestuous) ಮೋಹದ ಕೊಂಡಿಯನ್ನು ಕಳಚುವುದರಲ್ಲಿ ಇದೆ ಎಂದು ನಂಬಿದ ಫ್ರಾಯ್ಡ್, ಮಾನಸಿಕ ಆರೋಗ್ಯ ಮತ್ತು ಪ್ರೌಢತೆಗಳು ವಿಮೋಚನೆ ಮತ್ತು ಸ್ವಾತಂತ್ರ್ಯಗಳ ಮೇಲೆ ಆಧರಿತವಾಗಿವೆ ಎಂದು ಹೇಳಿದರು. ಆದರೆ, ಅವರಿಗೆ ಈ ಪ್ರಕ್ರಿಯೆಯು ತಂದೆಯು ತನ್ನನ್ನು ನಪುಂಸಕಗೊಳಿಸುವ (castration) ಭಯದಿಂದ ಆರಂಭಗೊಳ್ಳುತ್ತದೆ ಮತ್ತು ತಂದೆಯ ಆದೇಶ ಮತ್ತು ನಿಷೇಧಗಳನ್ನು ತನ್ನ ಸ್ವಂತ ಒಳಮನಸ್ಸಿನಲ್ಲಿ (Superego) ಆಳವಡಿಸಿಕೊಳ್ಳುವುದರಲ್ಲಿ ಮುಕ್ತಾಯವಾಗುತ್ತದೆ. ಆದುದರಿಂದ, ತಾಯಿಯಿಂದ ಒಬ್ಬನ ಸ್ವಾತಂತ್ರ್ಯವು ಭಾಗಶಃ ಆಗಿ ಉಳಿದರೆ, ಒಬ್ಬನ ತಂದೆ ಮತ್ತು ಸಾಮಾಜಿಕ ಅಧಿಕಾರಸ್ಥರ ಮೇಲಿನ ಅವಲಂಬನೆಯು ಸೂಪರ್ ಇಗೋ ಮೂಲಕ ಮುಂದುವರಿಯುತ್ತದೆ.

ಕ್ರಾಂತಿಕಾರಿ ಗುಣಸ್ವಭಾವವೆಂದರೆ, ಮಾನವೀಯತೆಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿತ್ವ, ಆದುದರಿಂದ ಆತ ತನ್ನ ಸ್ವಂತ ಸಮಾಜದ ಸಂಕುಚಿತ ಮಿತಿಗಳನ್ನು ಮೀರುತ್ತಾನೆ ಮತ್ತು ಈ ಕಾರಣದಿಂದ ಆತ ತರ್ಕ ಮತ್ತು ಮಾನವೀಯತೆಯ ನೆಲೆಯಿಂದ ತನ್ನ ಮತ್ತು ಇತರ ಸಮಾಜಗಳನ್ನು ಟೀಕಿಸಲು ಮತ್ತು ವಿಮರ್ಶಿಸಲು ಶಕ್ತನಾಗುತ್ತಾನೆ. ಅವನು, ಕೇವಲ ಕಾಲ ಮತ್ತು ದೇಶದ ಆಕಸ್ಮಿಕದ ಹೊರತು ಹೆಚ್ಚೇನೂ ಅಲ್ಲದ ಕಾರಣದಿಂದ ಮಾತ್ರವೇ ತಾನು ಹುಟ್ಟಬೇಕಾಗಿಬಂದ ಸಂಸ್ಕೃತಿಯ ಸಂಕುಚಿತ ಆರಾಧನೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಅವನು ಒಬ್ಬ ಜಾಗೃತ ಮನುಷ್ಯನಾಗಿ ತೆರೆದ ಕಣ್ಣುಗಳಿಂದ ತನ್ನ ಪರಿಸರವನ್ನು ನೋಡಲು ಮತ್ತು ಮಾನವ ಕುಲದಲ್ಲಿ ಹಾಗೂ ಆ ಕುಲಕ್ಕಾಗಿ ಇರುವ ನಿಯಮ, ಕಟ್ಟುಪಾಡುಗಳಲ್ಲಿ ಯಾವುದು ಆಕಸ್ಮಿಕ, ಯಾವುದು ಆಕಸ್ಮಿಕವಲ್ಲ (ತಾರ್ಕಿಕ) ಎಂದು ನಿರ್ಧರಿಸುವ ಮಾನದಂಡವನ್ನು ಕಂಡುಕೊಳ್ಳಲು ಶಕ್ತನಾಗುತ್ತಾನೆ.

ಕ್ರಾಂತಿಕಾರಿ ಗುಣಸ್ವಭಾವವು ಮಾನವೀಯತೆಯೊಂದಿಗೆ ಗುರುತಿಸಿಕೊಳ್ಳುತ್ತದೆ. ಅವನು “ಜೀವನದ ಬಗ್ಗೆ ಆಳವಾದ ಗೌರವಭಾವ” ಹೊಂದಿರುತ್ತಾನೆ. ಆಲ್ಬರ್ಟ್ ಶ್ವೇಯ್ಟ್ಝರ್‌ನ ಪರಿಭಾಷೆಯಲ್ಲಿ ಹೇಳಬೇಕೆಂದರೆ, ಜೀವನದ ಕುರಿತು ಆಳವಾದ ತಾದಾತ್ಮ್ಯ ಮತ್ತು ಜೀವಪ್ರೇಮ. ನಾವೆಲ್ಲರೂ, ಇತರ ಎಲ್ಲಾ ಪ್ರಾಣಿಗಳಂತೆ ಜೀವನಕ್ಕೆ ಅಂಟಿಕೊಂಡಿರುತ್ತೇವೆ ಮತ್ತು ಸಾವಿನ ಜೊತೆ ಹೋರಾಡುತ್ತೇವೆ ಎಂಬುದು ನಿಜ. ಆದರೂ, ಜೀವನಕ್ಕೆ ಅಂಟಿಕೊಳ್ಳುವುದು ಎಂಬುದು ಜೀವನವನ್ನು ಪ್ರೀತಿಸುವುದು ಎಂಬುದಕ್ಕಿಂತ ಸಂಪೂರ್ಣವಾಗಿ ಬೇರೆಯಾಗಿರುವಂತದ್ದು. ಜೀವನಕ್ಕಿಂತ ಹೆಚ್ಚಾಗಿ ಸಾವು, ವಿನಾಶ ಮತ್ತು ಕೊಳೆಯುವಿಕೆಯಿಂದ ಆಕರ್ಷಿತವಾಗುವ ಒಂದು ವಿಧದ ವ್ಯಕ್ತಿತ್ವ ಇದೆ ಎಂಬ ವಾಸ್ತವದಿಂದ ಇದು ಇನ್ನಷ್ಟು ಸ್ಪಷ್ಟವಾಗಬಹುದು. (ಇದಕ್ಕೆ ಹಿಟ್ಲರ್ ಒಬ್ಬ ಒಳ್ಳೆಯ ಐತಿಹಾಸಿಕ ಉದಾಹರಣೆ.) ಈ ವಿಧದ ಗುಣಸ್ವಭಾವವನ್ನು, “ಸಾವು ಚಿರಾಯುವಾಗಲಿ” ಎಂಬ ಘೋಷಣೆಯನ್ನು ತನ್ನ ನೆಚ್ಚಿನ ಧ್ಯೇಯವನ್ನಾಗಿಸಿಕೊಂಡಿದ್ದ ಸ್ಪಾನಿಷ್ ಸರ್ವಾಧಿಕಾರಿ ಫ್ರಾಂಕೋನ ಜನರಲ್ ಒಬ್ಬನಿಗೆ 1936ರಲ್ಲಿ ಉನಾಮುನೋ ನೀಡಿದ್ದ ಪ್ರಸಿದ್ಧ ಉತ್ತರದಲ್ಲಿ ಇದ್ದ ಪದವನ್ನು ಬಳಸಬೇಕೆಂದರೆ, ಗೊಬ್ಬರದ ಹುಳುವಿನ ಅಥವಾ ನೆಕ್ರೋಫಿಲಸ್ (necrophilous) ಸ್ವಭಾವ ಎಂದು ಕರೆಯಬಹುದು.

ಸಾವು ಮತ್ತು ವಿನಾಶದತ್ತ ಆಕರ್ಷಣೆಯು ಒಬ್ಬ ವ್ಯಕ್ತಿಯ ಪ್ರಜ್ಞೆಯಲ್ಲಿ ಇಲ್ಲದೇ ಇರಬಹುದು. ಅದರೆ, ಅದು ಅವನಲ್ಲಿ ಇರುವುದನ್ನು ಆತನ ನಡವಳಿಕೆಯಿಂದ ಕಂಡುಕೊಳ್ಳಬಹುದು. ಕತ್ತು ಹಿಸುಕಿ, ಅಪ್ಪಚ್ಚಿ ಮಾಡಿ, ಜೀವನವನ್ನು ನಾಶ ಮಾಡುವುದು ಆತನಿಗೆ- ಒಬ್ಬ ಜೀವನ ಪ್ರೀತಿಯ ಮನುಷ್ಯನಿಗೆ ಜೀವನ ಬೆಳೆದು ವಿಸ್ತರಿಸುವಾಗ, ಅಭಿವೃದ್ಧಿಗೊಳ್ಳುವಾಗ ಆಗುವಷ್ಟೇ ಖುಷಿಯನ್ನು ಉಂಟುಮಾಡುತ್ತದೆ. ನೆಕ್ರೋಫಿಲಿಯಾ ಎಂಬುದು ಜೀವಂತ ಇರುವಾಗಲೇ ವಿನಾಶದ ಗುರಿ ಹೊಂದಿರುವ ನಿಜವಾದ ಮನೋವಿಕೃತಿ.

ಕ್ರಾಂತಿಕಾರಿ ಗುಣಸ್ವಭಾವವು ಸಂಗೀತದ ಪ್ರತಿಮೆ ಬಳಸುವುದಾದಲ್ಲಿ, ಒಂದು ನಿರ್ಣಾಯಕ ಸ್ವರ ಎಂದು ಕರೆಯಬಹುದಾದ “ವಿಮರ್ಶಾತ್ಮಕ ಲಯ”ದಲ್ಲಿ ಯೋಚಿಸುತ್ತದೆ, ಭಾವಿಸುತ್ತದೆ. “motto De omnibus est dubitandum” ಎಂಬ ಲ್ಯಾಟಿನ್ ಭಾಷೆಯ ನುಡಿಯಂತೆ, “ಪ್ರತಿಯೊಂದನ್ನೂ ಸಂಶಯದಿಂದ ಕಾಣಬೇಕು” ಎಂಬುದು- ಪ್ರಪಂಚಕ್ಕೆ ಆತನ ಪ್ರತಿಕ್ರಿಯೆ ಆಗಿರುತ್ತದೆ. ನಾನಿಲ್ಲಿ ಚರ್ಚಿಸುತ್ತಿರುವ “ವಿಮರ್ಶಾತ್ಮಕ ಲಯ”ವು ಯಾವುದೇ ರೀತಿಯಲ್ಲಿ ಸಿನಿಕತನವಲ್ಲ. ಬದಲಾಗಿ, ಅದು ವಾಸ್ತವಿಕತೆ ಕುರಿತ ಒಂದು ಒಳನೋಟ. ಇದು ವಾಸ್ತವಿಕತೆಗೆ ಬದಲಿಯಾಗಿ ಸೃಷ್ಟಿಸಲಾದ ಕಟ್ಟುಕತೆಗೆ ತದ್ವಿರುದ್ಧವಾಗಿರುತ್ತದೆ.

ಇದನ್ನೂ ಓದಿ: ಅನುವಾದ; ಕ್ರಾಂತಿಕಾರಿ ಗುಣಸ್ವಭಾವ-ಎರಿಕ್ ಫ್ರಾಮ್ ; ಭಾಗ-1

(5) ಸೆರ್ಮನ್ 16, ಮೀಯ್ಸ್ಟರ್ ಎಕ್ಹಾರ್ಟ್, ಅನ್ ಇಂಟ್ರೊಡಕ್ಷನ್ ಟು ದಿ ಸ್ಟಡಿ ಆಫ್ ವರ್ಕ್ಸ್, ವಿತ್ ಅನ್ ಆಂಥಾಲಜಿ ಆಫ್ ಹಿಸ್ ಸೆರ್ಮನ್ಸ್, ಆಯ್ಕೆ: ಜೇಮ್ಸ್ ಎಂ ಕ್ಲಾರ್ಕ್, ಥಾಮಸ್ ನೆಲ್ಸನ್ & ಸನ್ಸ್, ಲಂಡನ್, 1957, ಪುಟ: 235

(6) ದೇವರಿಂದ ಸ್ವಾತಂತ್ರ್ಯದ ಬಗೆಗಿನ ಪ್ರಶ್ನೆಗಳ ಬಗ್ಗೆ ಬುದ್ಧ ಮತ್ತು ಇತರ ಅಧಿಕಾರಗಳಿಂದ ಇದೇ ಬಗೆಯ ಮನೋವೃತ್ತಿಯನ್ನು ಜೆನ್ ಬುದ್ಧಿಸಂನಲ್ಲಿ ಕಾಣಬಹುದು.

(7) ಕಾರ್ಲ್ ಮಾರ್ಕ್ಸ್, ಎಕನಾಮಿಕ್ ಅಂಡ್ ಫಿಲಾಸಾಫಿಕಲ್ ಮ್ಯಾನುಸ್ಕ್ರಿಪ್ಟ್ಸ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಎರಿಕ್ ಫ್ರಾಮ್

ಎರಿಕ್ ಫ್ರಾಮ್
20ನೇ ಶತಮಾನದ ಖ್ಯಾತ ಚಿಂತಕ ಮತ್ತು ಸಾಮಾಜಿಕ ಮನಃಶಾಸ್ತ್ರಜ್ಞ. ’ದ ಆರ್ಟ್ ಆಫ್ ಲವಿಂಗ್’, ’ಎಸ್ಕೇಪ್ ಫ್ರಂ ಫ್ರೀಡಂ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...