Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-1)

- Advertisement -
- Advertisement -

ಎಪಾಂಚಿನ್‌ನ ಮೂರೂ ಜನ ಮಕ್ಕಳೂ ಬಹಳ ಚೆನ್ನಾಗಿರುವ, ಆರೋಗ್ಯವಂತ ಹುಡುಗಿಯರಾಗಿದ್ದರು, ಅತ್ಯುತ್ತಮ ಬೆಳವಣಿಗೆಯ ಜೊತೆಗೆ, ಆಕರ್ಷಕ ಮೈಕಟ್ಟನ್ನು ಹೊಂದಿದ್ದರು. ಅವರ ತೋಳುಗಳು ಶಕ್ತಿಯುತವಾಗಿದ್ದು ಬಹುತೇಕ ಪುರುಷರ ಕೈಗಳಂತಿದ್ದವು; ಮೇಲೆ ಹೇಳಿದ ಎಲ್ಲಾ ರೀತಿಯ ಗುಣಲಕ್ಷಣಗಳ ಜೊತೆಗೆ ಅವರು ಸಮೃದ್ಧಿಯ ಆಹಾರ ಸೇವಿಸುವುದನ್ನ ಇಷ್ಟಪಡುತ್ತಿದ್ದರು ಮತ್ತು ಅದರ ಬಗ್ಗೆ ಅವರಿಗೆ ಯಾವುದೇ ರೀತಿಯ ಸಂಕೋಚವಿರಲಿಲ್ಲ.

ಅವರ ಈ ಮುಚ್ಚುಮರೆಯಿಲ್ಲದ ತಿನ್ನುವ ಅಭ್ಯಾಸ ಬಹಳ ಮುಕ್ತವಾದದ್ದೆಂದು ಎಲಿಜಬೆಥ ಪ್ರೊಕೊಫೀವ್ನ ಕೆಲವು ಸಲ ಈ ಹುಡುಗಿಯರಿಗೆ ಸೂಚಿಸುತ್ತಿದ್ದರು, ಮತ್ತು ಆ ಹುಡುಗಿಯರು ತಮ್ಮ ತಾಯಿಯ ಬಗ್ಗೆ ಹೊರನೋಟದ ಗೌರವ ಹೊಂದಿದ್ದರಾಗಿದ್ದರೂ, ಅವರೆಲ್ಲಾ ಒಟ್ಟಿಗೆ ಸೇರಿದಾಗ, ಒಪ್ಪಂದಕ್ಕೆ ಬಂದದ್ದೇನೆಂದರೆ, ತಮ್ಮ ತಾಯಿಗೆ ಇದುವರೆಗೂ ತೋರಿಸುತ್ತಿದ್ದ ಪ್ರಶ್ನಾತೀತವಾದ ವಿಧೇಯತೆಯಲ್ಲಿ ಮಾರ್ಪಾಡನ್ನು ತರಬೇಕೆಂದು; ಈ ವಿಷಯದ ಬಗ್ಗೆ ತನಗೆ ಅರಿವಿದ್ದರೂ, ಮೇಡಮ್ ಜನರಲ್ ಎಪಾಂಚಿನ್ ಅದರ ಬಗ್ಗೆ ಏನನ್ನೂ ಮಾತನಾಡಬಾರದೆಂಬ ತೀರ್ಮಾನಕ್ಕೆ ಬಂದಿದ್ದರು.

ನಿಜಾಂಶವೆಂದರೆ ಅವಳ ಸ್ವಭಾವ ಈ ರೀತಿಯ ವಿವೇಚನಾಶೀಲ ಆದೇಶಗಳನ್ನ ಕೆಲವು ಸಾರಿ ಪ್ರತಿರೋಧಿಸುವ ರೀತಿಯದಾಗಿತ್ತು; ಅವಳು ವರ್ಷ ಕಳೆದಂತೆ ಹೆಚ್ಚುಹೆಚ್ಚು ವಿಚಿತ್ರವಾಗಿ ಮತ್ತು ಅಸಹನೆಯಿಂದ ನಡೆದುಕೊಳ್ಳುತ್ತಿದ್ದಳು; ಒಬ್ಬ ಗೌರವಾನ್ವಿತ ಮತ್ತು ಶಿಸ್ತುಬದ್ಧ ಗಂಡ ಅವಳ ನಿಯಂತ್ರಣದಲ್ಲಿ ಸದಾ ಇರುತ್ತಿದ್ದುದರಿಂದ, ಮತ್ತವಳ ಎಲ್ಲಾ ಅಸಹನೆ, ಅಸಂತೋಷಗಳೂ ಗಂಡನ ಬಳಿ ಕೊನೆಗೊಳ್ಳುತ್ತಿದ್ದುದು ನಿಯಮವಾಗಿದ್ದರಿಂದ, ಅದೇ ಕಾರಣಕ್ಕೆ ಮನೆಯಲ್ಲಿ ಸಾಮರಸ್ಯವನ್ನ ಕಾಪಾಡಿಕೊಂಡು ಬರಲು ಸಾಧ್ಯವಾಗಿತ್ತು ಮತ್ತು ಕುಟುಂಬದ ವಿಷಯಗಳಲ್ಲಿ ಎಲ್ಲವೂ ನಿರಾತಂಕವಾಗಿ ಮುಂದುವರಿಯುತ್ತಿತ್ತು.

ಮೇಡಮ್ ಎಪಾಂಚಿನ್‌ಗೇನೆ ತಿನ್ನುವ ವಿಷಯದಲ್ಲಿ ಹೆಚ್ಚಿನ ಆಸಕ್ತಿಯಿತ್ತು, ಮತ್ತು ಹುಡುಗಿಯರಿಗಾಗಿಯೇ ತಯಾರಿಸಿದ ಮಧ್ಯಾಹ್ನದ ಸಮೃದ್ಧವಾದ ಊಟದಲ್ಲಿ ತನ್ನ ಪಾಲನ್ನು ತೆಗೆದುಕೊಳ್ಳದೇ ಇರುತ್ತಿರಲಿಲ್ಲ, ಮತ್ತು ಅದು ರಾತ್ರಿ ಊಟಕ್ಕೆ ಸರಿಸಮಾನವಾಗಿರುತ್ತಿತ್ತು. ಈ ಹುಡುಗಿಯರು ಸಾಮಾನ್ಯವಾಗಿ ಊಟಕ್ಕಿಂತ ಮುಂಚೆ ಒಂದು ಕಪ್ ಕಾಫಿ ಕುಡಿಯುತ್ತಿದ್ದರು; ಅದೂ ಬೆಳಿಗ್ಗೆ ಹತ್ತು ಗಂಟೆಗೆ, ಮಲಗಿದ್ದ ಹಾಸಿಗೆಯಲ್ಲಿಯೇ. ಇದು ಅವರ ನೆಚ್ಚಿನ ಮತ್ತು ಬದಲಾಯಿಸಲಾಗದಂತೆ ರೂಢಿಸಿಕೊಂಡ ಅಭ್ಯಾಸವಾಗಿತ್ತು. ಹನ್ನೆರಡೂವರೆ ಗಂಟೆಗೆ, ಸಣ್ಣ ಊಟದ ಕೋಣೆಯಲ್ಲಿ ಟೇಬಲನ್ನು ಇರಿಸಲಾಗುತ್ತಿತ್ತು, ಮತ್ತು ಸಮಯವಿದ್ದಾಗ ಬಹಳ ವಿರಳವಾಗಿ ಒಮ್ಮೊಮ್ಮೆ ಜನರಲ್ ಕೂಡ ಈ ಕುಟುಂಬದ ಕೂಟಕ್ಕೆ ಬಂದು ಸೇರಿಕೊಳ್ಳುತ್ತಿದ್ದ.

ಟೀ ಮತ್ತು ಕಾಫಿಯ ಜೊತೆಗೆ, ಚೀಸ್, ಜೇನುತುಪ್ಪ, ಬೆಣ್ಣೆ, ವಿವಿಧ ರೀತಿಯ ಪ್ಯಾನ್ ಕೇಕುಗಳು (ಮನೆಯ ಯಜಮಾನಿ ಇದನ್ನ ಬಹಳ ಇಷ್ಟಪಡುತ್ತಿದ್ದರು), ಕಟ್ಲೆಟ್‌ಗಳು ಮುಂತಾದವುಗಳು ಇರುತ್ತಿದ್ದವು. ಅದಲ್ಲದೇ ಬಹಳ ಖಾರವಾದ ಬೀಫ್ ಸೂಪ್ ಇರುತ್ತಿತ್ತು, ಮತ್ತು ಬೇರೆ ಗಣನೀಯವಾದ ತಿನಿಸುಗಳು ಕೂಡ.

ನಮ್ಮ ಈ ಕಥೆಯು ಪ್ರಾರಂಭವಾದ ದಿನದ ಆ ನಿರ್ಧಿಷ್ಟ ಬೆಳಿಗ್ಗೆ, ಇಡೀ ಕುಟುಂಬದವರು ಡೈನಿಂಗ್ ರೂಮಿನಲ್ಲಿ ಸೇರಿದ್ದರು, ಮತ್ತು ಜನರಲ್‌ನ ಬರುವಿಗಾಗಿ ಕಾಯುತ್ತಿದ್ದರು; ಜನರಲ್ ಈ ದಿನ ಬರುತ್ತೇನೆಂದು ಆಶ್ವಾಸನೆ ಕೊಟ್ಟಿದ್ದ. ಅವನು ಬರುವುದು ಒಂದು ಕ್ಷಣ ನಿಧಾನವಾದರೂ ಅವನಿಗೆ ಹೇಳಿಕಳುಹಿಸಿಬಿಡುತ್ತಿದ್ದರು; ಆದರೆ ಅವನು ಸಮಯಕ್ಕೆ ಸರಿಯಾಗಿ ಬಂದುಬಿಟ್ಟ. ಮಾಮೂಲಿಯಂತೆ ತನ್ನ ಹೆಂಡತಿಯ ಕೈಗಳನ್ನು ಚುಂಬಿಸಿ ಗುಡ್ ಮಾನಿಂಗ್ ಹೇಳಲು ಆತ ಮುಂದೆ ಬಂದಾಗ, ಆಕೆಯ ನೋಟದಲ್ಲಿ ಏನೋ ಸರಿಯಿಲ್ಲ ಎಂಬುದನ್ನು ಸೂಚಿಸುವಂತಹುದನ್ನ ಗಮನಿಸಿದ. ಅದಕ್ಕೆ ಕಾರಣ ತನಗೆ ತಿಳಿದಿದೆಯೆಂದು ಆತ ಯೋಚಿಸಿದ ಮತ್ತು ಅದನ್ನ ನಿರೀಕ್ಷಿಸಿದ್ದ ಕೂಡ; ಆದರೂ ಅವನು ಒಟ್ಟಾರೆಯಾಗಿ ಆರಾಮವಾಗಿ ಇರಲಿಲ್ಲ. ಅವನ ಹೆಣ್ಣು ಮಕ್ಕಳು ಅವನನ್ನು ಚುಂಬಿಸಲು ಮುಂದೆ ಬಂದರು, ಮತ್ತು ಅವರು ನಿಖರವಾಗಿ ಕೋಪಗೊಂಡಿರದೇ ಇದ್ದರೂ, ಅವರ ನೋಟದಲ್ಲೂ ಕೂಡ ಯಾವುದೋ ವಿಚಿತ್ರವಾದ ಮುಖಭಾವವನ್ನು ಗಮನಿಸಿದ.

ಜನರಲ್ ಕೆಲವು ಪರಿಸ್ಥಿತಿಗಳ ಕಾರಣದಿಂದ ತನ್ನ ಮನೆಯಲ್ಲಿಯೇ ಅತಿಯಾಗಿ ಸಂಶಯಿಸುವಂತಾಗಿದ್ದ ಮತ್ತು ಕಾರಣಗಳಿಲ್ಲದೇ ಧೃತಿಗೆಡುತ್ತಿದ್ದ; ಆದರೆ ಒಬ್ಬ ಅನುಭವಸ್ಥನಾದ ಗಂಡ ಮತ್ತು ತಂದೆಯಾಗಿ, ತನಗೆ ಉಂಟಾಗಬಹುದಾದಂತಹ ಅಪಾಯಗಳ ಸೂಚನೆಗಳನ್ನ ಗಮನಿಸಿ ತನ್ನನ್ನ ಕಾಪಾಡಿಕೊಳ್ಳುವ ದಾರಿಗಳನ್ನ ಹುಡುಕಿಕೊಳ್ಳುತ್ತಿದ್ದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-3: ಭಾಗ-4)

ಏನೇ ಆದರೂ, ನಾನು ನನ್ನ ನಿರೂಪಣೆಯ ಸರಿಯಾದ ಕ್ರಮಾನುಗತಿಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡುತ್ತಿಲ್ಲ ಎಂದುಕೊಳ್ಳುತ್ತೇನೆ; ಜನರಲ್ ಎಪಾಂಚಿನ್‌ನ ಕುಟುಂಬದವರಿಗೂ ಮತ್ತು ಈ ಚರಿತ್ರೆಯಲ್ಲಿನ ಮುಖ್ಯ ಪಾತ್ರದಾರರಿಗೂ ಇರುವ ಪರಸ್ಪರ ಸಂಬಂಧಗಳನ್ನ ವಿವರಿಸುವುದಕ್ಕೋಸ್ಕರ, ಸ್ವಲ್ಪ ನಿರೂಪಣೆಯಿಂದ ತಿರುವು ಪಡೆದುಕೊಂಡರೂ, ಅದು ಅವರ ವಿಧಿಯ ಬಗೆಗಿನ ಈ ಎಳೆಯನ್ನ ಕೈಗೆತ್ತಿಕೊಳ್ಳುವುದಕ್ಕೋಸ್ಕರ. ನಾನಾಗಲೇ ತಿಳಿಸಿದ್ದಂತೆ ಜನರಲ್, ಬಡಕುಟುಂಬದ ಮೂಲದಿಂದ ಬಂದ, ಅತ್ಯಂತ ಕಡಿಮೆ ವಿದ್ಯಾಭ್ಯಾಸವನ್ನ ಪಡೆದಿದ್ದ, ಅದೆಲ್ಲದರ ಹೊರತಾಗಿಯೂ ಅವನೊಬ್ಬ ಅನುಭವಸ್ಥ ಮತ್ತು ಪ್ರತಿಭಾವಂತ ಪತಿ ಹಾಗೂ ತಂದೆಯಾಗಿದ್ದ. ಈ ಎಲ್ಲಾ ವಿಷಯಗಳ ನಡುವೆಯೂ, ಅವನು ತನ್ನ ಹೆಣ್ಣುಮಕ್ಕಳನ್ನು ಆತುರದಿಂದ ವೈವಾಹಿಕ ಜೀವನದೆಡೆಗೆ ತಳ್ಳುವುದು ಅನಪೇಕ್ಷಿತವಾದದ್ದು ಎಂದು ಪರಿಗಣಿಸಿದ್ದ ಮತ್ತು ಸಾಮಾನ್ಯವಾಗಿ ಎಲ್ಲ ತಂದೆತಾಯಂದಿರದೂ ಬೆಳೆದು ನಿಂತ ಹೆಣ್ಣುಮಕ್ಕಳ ಬಗ್ಗೆ ನಡೆದುಕೊಳ್ಳುವಂತೆ, ತಂದೆಯ ಆಕಾಂಕ್ಷೆಗಳನ್ನು ಮಕ್ಕಳ ಸಂತೋಷಗಳ ಮೇಲೆ ಹೇರಿ ಅವರನ್ನು ಚಿಂತೆಗೀಡು ಮಾಡುತ್ತಿರಲಿಲ್ಲ. ಈ ವಿಷಯದಲ್ಲಿ ತನ್ನ ಹೆಂಡತಿಯ ಆಲೋಚನೆಯನ್ನೂ ತನ್ನದೇ ದಾರಿಗೆ ತಂದುಕೊಳ್ಳುವುದರಲ್ಲಿ ಸಫಲನಾಗಿದ್ದ; ಆ ರೀತಿ ಮಾಡುವುದು ಅಸ್ವಾಭಾವಿಕವಾಗಿದ್ದ ಕಾರಣ, ಈ ಪ್ರಯತ್ನ ಬಹಳಷ್ಟು ಪ್ರಯಾಸಕರವಾದರೂ ಕೂಡ, ಜನರಲ್‌ನ ವಾದ ನಿರ್ಣಾಯಕವಾಗಿತ್ತು ಮತ್ತು ಅದು ಸ್ಪಷ್ಟವಾದ ಹಾಗೂ ಸತ್ಯಾಂಶದ ತಳಹದಿಯಿಂದ ಹೊರಹೊಮ್ಮಿದ್ದರಿಂದ ಅದು ಸಾಧ್ಯವಾಗಿತ್ತು. ಹುಡುಗಿಯರ ಅಭಿರುಚಿ ಮತ್ತು ಒಳ್ಳೆಯ ಗುಣ, ಸ್ವಾಭಾವಿಕವಾಗಿ ವೃದ್ಧಿಸಿ ಪರಿಪಕ್ವವಾಗಬೇಕೆಂದು ಜನರಲ್ ಪರಿಗಣಿಸಿದ್ದ; ತಂದೆತಾಯಿಗಳ ಕರ್ತವ್ಯವೆಂದರೆ, ಮಕ್ಕಳು ವಿಚಿತ್ರವಾದ ಅಥವಾ ಅನಪೇಕ್ಷಿತವಾದ ಆಯ್ಕೆಯನ್ನ ಮಾಡದೇ ಇರಲಿ ಅನ್ನುವ ಕಾರಣಕ್ಕೋಸ್ಕರ, ಅವರ ಮೇಲೆ ಗಮನವಿಟ್ಟು ಜಾಗರೂಕತೆಯಿಂದ ಕಾಯುವುದು ಮಾತ್ರ, ಆದರೆ ಅವರದೇ ಆದ ಆಯ್ಕೆಯನ್ನ ಮಾಡಿಕೊಂಡುಬಿಟ್ಟರೆ, ತಂದೆ ತಾಯಿಗಳಿಬ್ಬರೂ ಆ ಕ್ಷಣದಿಂದ ಸಂಪೂರ್ಣವಾಗಿ ತಮ್ಮ ಹೃದಯವನ್ನ ಮತ್ತು ಆತ್ಮವನ್ನ ಮಕ್ಕಳ ಒಳಿತಿಗೆ ಅರ್ಪಿಸಿಕೊಳ್ಳುವುದಕ್ಕೆ ಬದ್ಧರಾಗಿರಬೇಕು, ಮತ್ತು ಅದರ ಸಂಬಂಧಿತ ವಿಷಯಗಳೆಲ್ಲಾ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುವಂತೆ ಮದುವೆಯಾಗುವವರೆಗೂ ಜವಾಬ್ದಾರಿಯನ್ನು ಹೊತ್ತಿಕೊಳ್ಳಬೇಕಾಗುತ್ತದೆ.

ಇವೆಲ್ಲವೂ ಅಲ್ಲದೇ, ಎಪಾಂಚಿನ್‌ಗಳ ಸ್ಥಿತಿಗತಿ ಪ್ರತಿ ವರ್ಷವೂ ಅಭಿವೃದ್ಧಿಗೊಳ್ಳುತ್ತಾಹೋಯಿತು, ಅಂದರೆ ಗಣನೀಯವಾದ ನಿಖರತೆಯಿಂದ; ಆರ್ಥಿಕವಾದ ಸದೃಢತೆ ಮತ್ತು ಸಾಮಾಜಿಕವಾದ ಮನ್ನಣೆಯನ್ನ ಗಳಿಸುವ ವಿಷಯದಲ್ಲಿ. ಆದದ್ದರಿಂದ ಹುಡುಗಿಯರು ಹೆಚ್ಚು ಕಾಲ ತಮ್ಮ ಮದುವೆಗೆ ಕಾದಷ್ಟೂ, ಅವರಿಗೆ ಉತ್ತಮ ಹೊಂದಾಣಿಕೆಯ ಜೋಡಿ ದೊರಕುವ ಸಾಧ್ಯತೆ ಜಾಸ್ತಿಯಾಗುತ್ತಿತ್ತು.

ಆದರೆ ಪುನಃ, ಇಲ್ಲಿಯವರೆಗೂ ದಾಖಲಿಸಿದ ನಿರ್ವಿವಾದವಾದ ಸತ್ಯಾಂಶಗಳ ನಡುವೆ, ಇನ್ನೊಂದು ಅಷ್ಟೇ ಗಮನಾರ್ಹವಾದ ಸಂಗತಿ ಈ ಕುಟುಂಬವನ್ನ ಎದುರಿಸಲು ಸಜ್ಜಾಯಿತು; ಅದೇನೆಂದರೆ ಅವರ ಮೊದಲನೆಯ ಮಗಳು, ಅಲೆಕ್ಸಾಂಡ್ರ, ಗೊತ್ತಾಗದಂತೆಯೇ ತನ್ನ ಇಪ್ಪತ್ತೈದನೇ ವರ್ಷದ ಹುಟ್ಟುಹಬ್ಬಕ್ಕೆ ಕಾಲಿಟ್ಟಿದ್ದಳು. ಬಹುತೇಕ ಅದೇ ಸಮಯದಲ್ಲಿ, ಅಪಾರವಾದ ಸಂಪತ್ತನ್ನು ಹೊಂದಿದ್ದ, ಮತ್ತು ಉನ್ನತ ಜನಗಳ ಸಂಪರ್ಕದಲ್ಲಿರುತ್ತಿದ್ದ ಮತ್ತು ಒಳ್ಳೆಯ ಹೆಸರನ್ನು ಗಳಿಸಿದ್ದ ಮನುಷ್ಯ ಅಫಾನಾಸಿ ಇವಾನೊವಿಚ್ ಟೋಟ್ಸ್ಕಿ, ಮದುವೆಯಾಗುವ ತನ್ನ ಇಚ್ಛೆಯನ್ನ ಪ್ರಕಟಿಸಿದ. ಅಫಾನಾಸಿ ಇವಾನೊವಿಚ್ ಒಬ್ಬ ಐವತ್ತೈದು ವರ್ಷ ವಯಸ್ಸಿನ ಸಜ್ಜನ, ಕಲಾತ್ಮಕವಾದ ಪ್ರತಿಭಾನ್ವಿತ, ಮತ್ತು ಸುಸಂಸ್ಕೃತ ಅಭಿರುಚಿ ಉಳ್ಳವನಾಗಿದ್ದ. ಅವನು ಮದುವೆಯನ್ನ ವಿಜೃಂಭಣೆಯಿಂದ ಮಾಡಿಕೊಳ್ಳಲು ಇಷ್ಟಪಡುತ್ತಿದ್ದ ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಸೌಂದರ್ಯೋಪಾಸಕನಾಗಿದ್ದ.

ಈಗ, ಟೋಟ್ಸ್ಕಿ ಇತ್ತೀಚೆಗಷ್ಟೇ, ಎಪಾಂಚಿನ್ ಜೊತೆಯಲ್ಲಿ ಬಹಳಷ್ಟು ಸೌಹಾರ್ದತೆಯಿಂದ ಇರುತ್ತಿದ್ದ, ಮತ್ತು ಅವರಿಬ್ಬರ ಅತ್ಯುತ್ತಮವಾದ ಸಂಬಂಧ ತೀವ್ರವಾಗಿದ್ದು ಅವರು ಅನೇಕ ಆರ್ಥಿಕ ಸಂಸ್ಥೆಗಳಲ್ಲಿ ಸಹಭಾಗಿತ್ವ ಹೊಂದಿದ್ದರಿಂದ. ಇತ್ತೀಚಿನ ದಿನಗಳಲ್ಲಿ ಟೋಟ್ಸ್ಕಿ ತಾನು ನಿಭಾಯಿಸುತ್ತಿರುವ ಮುಖ್ಯವಾದ ವಿಷಯಗಳಲ್ಲಿ ಅಮೂಲ್ಯವಾದ ಸಲಹೆಯನ್ನ ನೀಡುವಂತೆ ಜನರಲ್‌ನನ್ನು ಕೇಳುತ್ತಿದ್ದ. ಅಕಸ್ಮಾತ್ ತನ್ನ ಮದುವೆಯನ್ನ ಜನರಲ್‌ನ ಹೆಣ್ಣುಮಕ್ಕಳಲ್ಲಿ ಒಬ್ಬರ ಜತೆ ಮಾಡಿಕೊಳ್ಳುವಂತಹದನ್ನೂ ಕೂಡ ಜನರಲ್ ಸೂಚಿಸಬಹುದೆಂದು ಕೂಡ?

ಸ್ಪಷ್ಟವಾಗಿ ಸದ್ದಿಲ್ಲದ, ಆಹ್ಲಾದತೆಯಿಂದ ಕೂಡಿದ ಈ ಎಪಾಂಚಿನ್ ಕುಟುಂಬದ ಜೀವನದ ಹರಿವು ಸದ್ಯದಲ್ಲೇ ಒಂದು ಬದಲಾವಣೆಯನ್ನು ಕಾಣುವ ಸ್ಥಿತಿ ಉಂಟಾಯಿತು.

ಅನುಮಾನವೇ ಇಲ್ಲದ ಈ ಕುಟುಂಬದ ಸರ್ವಶ್ರೇಷ್ಠ ಸುಂದರಿ ಮೊದಲೇ ಹೇಳಿದಂತೆ ಎಲ್ಲರಿಗಿಂತ ಚಿಕ್ಕವಳಾದ ಅಗ್ಲಾಯ. ಆದರೆ ಟೋಟ್ಸ್ಕಿ ಒಬ್ಬ ವಿಪರೀತವಾದ ಅಹಂಕಾರ ಸ್ವಭಾವದವನಾದರೂ, ಆಗ್ಲಾಯಳ ವಿಷಯದಲ್ಲಿ ಅವನಿಗೆ ಯಾವುದೇ ಅವಕಾಶವಿಲ್ಲ ಎನ್ನುವುದನ್ನ ಅರಿತ; ಅಗ್ಲಾಯ ಇವನಂತಹವನಿಗೆ ಖಂಡಿತವಾಗಿಯೂ ಹೇಳಿಮಾಡಿಸಿದವಳಲ್ಲ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-2)

ಬಹುಶಃ ಮೂರೂ ಜನ ಅಕ್ಕತಂಗಿಯರಲ್ಲಿದ್ದ ಪರಸ್ಪರ ವಾತ್ಸಲ್ಯ ಮತ್ತು ಗೆಳೆತನ, ಅಗ್ಲಾಯ ಮುಂದೆ ಕಾಣಬಹುದಾದಂತಹ ಸಂತೋಷದ ಪ್ರಮಾಣವನ್ನ ಉತ್ಪ್ರೇಕ್ಷಿಸಿಬಿಟ್ಟಿತ್ತು. ಅವರುಗಳ ಪ್ರಕಾರ ಅಗ್ಲಾಯಳ ಭವಿಷ್ಯ ಕೇವಲ ಅತಿಯಾದ ಸಂತೋಷದಿಂದಿರುವುದೊಂದೇ ಅಲ್ಲ; ಅವಳು ಭೂಮಿಯ ಮೇಲಿನ ಸ್ವರ್ಗದಲ್ಲಿ ಜೀವಿಸುವಳೆಂದು ನಿರ್ಧರಿಸಿದ್ದರು. ಅಗ್ಲಾಯಳ ಗಂಡ ಸದ್ಗುಣಗಳ ಸಂಕ್ಷೇಪದಂತಿರಬೇಕು, ಮತ್ತು ಎಲ್ಲದರಲ್ಲೂ ಯಶಸ್ವಿಯಾಗಿರಬೇಕು, ಮತ್ತು ಅಸಾಧಾರಣವಾದ ಐಶ್ವರ್ಯವಂತನಾಗಿರಬೇಕು ಅನ್ನುವುದನ್ನ ಹೇಳಲೇಬೇಕಾಗಿಲ್ಲ. ಅಗತ್ಯ ಬಿದ್ದಾಗ ತಂಗಿಗೋಸ್ಕರ ತಮ್ಮದೆಲ್ಲವನ್ನೂ ತ್ಯಾಗ ಮಾಡಬೇಕೆಂದು, ಇಬ್ಬರೂ ಹಿರಿಯ ಅಕ್ಕಂದಿರು ಒಡಂಬಡಿಕೆ ಮಾಡಿಕೊಂಡಿದ್ದರು; ಅವಳ ವರದಕ್ಷಿಣೆ ಎಷ್ಟಿರಬೇಕೆಂದರೆ ಹಿಂದೆ ಕೇಳಿಲ್ಲದಷ್ಟು ಬೃಹತ್ ಪ್ರಮಾಣದ್ದಾಗಿರಬೇಕೆಂದು;

ಜನರಲ್ ಮತ್ತು ಅವನ ಹೆಂಡತಿ ಈ ರೀತಿಯ ಹೆಣ್ಣುಮಕ್ಕಳೊಳಗಿನ ಒಡಂಬಡಿಕೆಯ ಬಗ್ಗೆ ಅರಿತವರಾಗಿದ್ದರು. ಅದೇ ಕಾರಣಕ್ಕೆ ಟೋಟ್ಸ್ಕಿ ಮೂರೂ ಜನ ಹೆಣ್ಣುಮಕ್ಕಳಲ್ಲಿ ಒಬ್ಬರನ್ನು ವರಿಸುವ ಆಸಕ್ತಿಯನ್ನ ತೋರಿಸಿದಾಗ, ಇಬ್ಬರು ಹಿರಿಯ ಹುಡುಗಿಯರಲ್ಲಿ ಒಬ್ಬಳು ಬಹುಶಃ ಈ ಪ್ರಸ್ತಾವನೆಯನ್ನ ಒಪ್ಪಿಕೊಳ್ಳಬಹುದು ಎಂದು ಜನರಲ್ ಮತ್ತು ಅವನ ಹೆಂಡತಿ ತಿಳಿದಿದ್ದರು; ಟೋಟ್ಸ್ಕಿ ವರದಕ್ಷಿಣೆಯ ಬಗ್ಗೆ ಯಾವುದೇ ರೀತಿಯ ತಕರಾರನ್ನು ಎತ್ತುವುದಿಲ್ಲ ಅನ್ನುವ ಕಾರಣಕ್ಕೆ. ಈ ಸಂಬಂಧವು ಅತಿ ಹೆಚ್ಚಿನ ಮೌಲ್ಯಾಧಾರಿತವಾದದ್ದು ಎಂದು ಜನರಲ್ ಪರಿಗಣಿಸಿದ್ದ. ಅವನು ಜೀವನವನ್ನ ಬಲ್ಲವನಾಗಿದ್ದ, ಮತ್ತು ಈ ಸಂಬಂಧ ಎಷ್ಟು ಬೆಲೆಬಾಳುವಂತಹದು ಎನ್ನುವುದನ್ನ ಮನಗಂಡ.

ಇದರ ಬಗೆಗಿನ ಸಂವಹನಕ್ಕೆ ಸೋದರಿಯರ ಉತ್ತರ ನಿರ್ಣಾಯಕವಾದದ್ದಾಗದೇ ಇದ್ದರೂ, ಕಡೇ ಪಕ್ಷ ಸಾಂತ್ವನದಾಯಕ ಮತ್ತು ಆಶಾದಾಯಕವಾಗಿತ್ತು. ತಂದೆ ತಾಯಿಯರ ಗಮನಕ್ಕೆ ಬಂದಿದ್ದು ಹಿರಿಯಳಾದ ಅಲೆಕ್ಸಾಂಡ್ರ ಈ ಪ್ರಸ್ತಾವನೆಗೆ ಸಮ್ಮತಿಸಬಹುದು ಎನ್ನುವುದು.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...