Homeಮುಖಪುಟಒಂದಿಷ್ಟು ಶಾಯರಿಗಳು

ಒಂದಿಷ್ಟು ಶಾಯರಿಗಳು

- Advertisement -
- Advertisement -

1.
ಬದುಕು ನಡೆಯುವುದು
ತನ್ನ ಕಾಲುಗಳ ಮೇಲೆ ಫರಾಜ್,

ಬೇರೆಯವರ ಸಹಾಯದಿಂದ ಸಾಗುವುದು
ಶವಯಾತ್ರೆ ಮಾತ್ರ.
– ಫರಾಜ್ ಅಹ್ಮದ್

2.
ಎಷ್ಟೊಂದು ಜನರಿಗೆ ಪ್ರೀತಿಸುವೆನೆಂದು
ಮಾತು ಕೊಟ್ಟಿದ್ದೀಯ ಫರಾಜ್?

ಪ್ರತಿದಿನ ಹೊಸಬರೊಬ್ಬರು
ನಿನ್ನ ವಿಳಾಸ ಕೇಳುತ್ತಿದ್ದಾರೆ.
– ಫರಾಜ್ ಅಹ್ಮದ್

3.
ಕೇವಲ ದ್ವೇಷವಷ್ಟೇ ಅಲ್ಲ
ಜಗತ್ತಿನ ದುಃಖಕ್ಕೆ ಕಾರಣ ಫರಾಜ್,

ಪ್ರೇಮವೂ ಸಮಾಧಾನಿಗಳಿಗೆ ಕೊಡುತ್ತದೆ
ಬಹಳ ಕಷ್ಟ.
– ಫರಾಜ್ ಅಹ್ಮದ್

4.
ಯಾರು ಯಾಕೆ ಅಳುತ್ತಾರೆ ಗೆಳೆಯ
ಬೇರೆ ಯಾರದೋ ಸಲುವಾಗಿ,

ಎಲ್ಲ ಅಳುತ್ತಿರುವುದು
ತಮ್ಮದೇ ಯಾವುದೋ ಮಾತಿನ ಕಾರಣವಾಗಿ.
– ಸಾಹಿರ್ ಲುಧಿಯಾನ್ವಿ

5.
ತಾನೇ ಸ್ವತಃ ಒಂದು
ಸಮಸ್ಯೆಯಾಗಿರುವಾಗ,

ಬೇರೆ ಯಾವ ಸಮಸ್ಯೆಗಳಿಗೆ ತಾನೇ
ಪರಿಹಾರವಾದೀತು ಯುದ್ಧ?
– ಸಾಹಿರ್ ಲುಧಿಯಾನ್ವಿ

6.
ಅಕಸ್ಮಾತ್ ಬದುಕಿನಲ್ಲಿ
ಮತ್ತೆ ಭೇಟಿಯಾದರೆ,

ವಿಚಾರಿಸುತ್ತೇನೆ ನನ್ನ ಹತಾಶೆಯ ಬಗ್ಗೆ
ನಿನ್ನ ವಿವಶತೆಯನ್ನ.
– ಸಾಹಿರ್ ಲುಧಿಯಾನ್ವಿ

7.
ಬಿರುಗಾಳಿಯ ದೋಣಿ
ಬದುಕಿಸಿತು ನನ್ನ,

ಮುಳುಗಿಸಿಬಿಡುತ್ತಿದ್ದರು ತೀರದ ಜನ
ನನ್ನ ಹಡಗನ್ನ.
– ಮಜ್ರೂಹ್ ಸುಲ್ತಾನ್‌ಪುರಿ

8.
ನಿನ್ನ ಹೊರತಾಗಿಯೂ ಇದ್ದವು
ಶರಣಾಗುವ ಜಾಗಗಳು, ಮರೆತುಹೋದೆ,

ಹೊರಬಿದ್ದ ಮೇಲೆ ನಿನ್ನ ಸುಂದರ ಸಂಜೆಯಿಂದ
ಎಲ್ಲ ದಾರಿಗಳ ನಾನು, ಮರೆತುಹೋದೆ.
– ಮಜ್ರೂಹ್ ಸುಲ್ತಾನ್‌ಪುರಿ

9.
ದೂರ ಕುಳಿತಿದ್ದೆ ಆದರೂ ಬಿತ್ತು
ನನ್ನ ಮೇಲೆ ಸಾಕಿಯ ಕಣ್ಣು,

ದಾಹ ನಿಜವಾಗಿದ್ದರೆ ಬಂದೇ ಬರುತ್ತದೆ
ಮಧುಪಾತ್ರೆಯೂ ಹುಡುಕಿಕೊಂಡು.
– ಮಜ್ರೂಹ್ ಸುಲ್ತಾನ್‌ಪುರಿ

10.
ನಾನು ಸತ್ತಮೇಲೆಯೂ
ತೆರೆದುಕೊಂಡೇ ಇರಲಿ ನನ್ನ ಕಣ್ಣು,

ನಿನಗಾಗಿ ಕಾಯುವ ಹವ್ಯಾಸ
ಬಿಟ್ಟುಹೋಗಿಲ್ಲ ನನ್ನ ಇನ್ನೂ.
– ಫೈಜ್ ಅಹ್ಮದ್ ಫೈಜ್

11.
ಲೆಕ್ಕ ಹಾಕುತ್ತಿದ್ದೆ ಜಗತ್ತು ಕರುಣಿಸಿರುವ
ನೋವುಗಳ ಮತ್ತೆ ಮತ್ತೆ,

ಯಾಕೋ ನೆನಪಾಗುತ್ತಿರುವೆ ನೀನು
ಲೆಕ್ಕವಿಲ್ಲದಷ್ಟು ಬಾರಿ ಮತ್ತೆ ಮತ್ತೆ.
– ಫೈಜ್ ಅಹ್ಮದ್ ಫೈಜ್

12.
ಬಂದು ನೆಲೆಸಿದ ಮೇಲೆ ಹಿಂದೂ ಮುಸಲ್ಮಾನರು
ನಮ್ಮ ಓಣಿಯೊಳಗೆ,

ಮನುಷ್ಯರ ಮುಖಗಳನ್ನು ಕಾಣುವ ತಹತಹ
ತೀವ್ರವಾಯಿತು ಮನದೊಳಗೆ.
– ಕೈಫಿ ಅಝ್ಮಿ

13.
ಒಂದು ಹಿಂಜರಿಕೆ ಮಾತ್ರ
ಮನಸಿನ ಮಾತು ಹೇಳುವಾಗ ನನಗೆ

ನಿನ್ನ ಹೆಸರು ಬಂದೇ ಬರುವದು
ನನ್ನ ಈ ಕಥೆಯೊಳಗೆ.
– ಕೈಫಿ ಅಝ್ಮಿ

14.
ಏನಾಗಿದೆ ನಿನಗೆ, ಅಷ್ಟು ನಗುವಂಥದು
ಯಾವ ನೋವದು ನನ್ನಿಂದ ಬಚ್ಚಿಡುವಂಥದು.

ಕಣ್ಣಂಚಲ್ಲಿ ಹಸಿ, ತುಟಿ ಮೇಲೆ ನಗು
ಏನಾಗಿದೆ ನಿನಗೆ, ಏನೋ ಹಾಡುವಂಥದು.
– ಕೈಫಿ ಅಝ್ಮಿ

15.
ಒಂದಿಷ್ಟು ಸಮಯದಿಂದ
ನಿನ್ನ ನೆನಪಾಗುತ್ತಿಲ್ಲ ಎನ್ನುವುದು ನಿಜವಾದರೂ,

ನಿನ್ನ ಮರೆತುಬಿಟ್ಟಿರುವೆ ಎನ್ನುವುದು ಮಾತ್ರ
ಸಂಪೂರ್ಣ ಸುಳ್ಳು.
– ಫಿರಕ್ ಗೋರಕ್‌ಪುರಿ

16.
ಬಹಳ ಮೊದಲೇ ಆ ಹೆಜ್ಜೆಗಳ
ಸಂಕೋಚವನ್ನು ಗುರುತಿಸುತ್ತೇನೆ,

ಹೇ ಬದುಕು! ಬಹಳಷ್ಟು ದೂರದಿಂದಲೇ
ನಿನ್ನನ್ನು ಗುರುತಿಸುತ್ತೇನೆ.
– ಫಿರಕ್ ಗೋರಕ್‌ಪುರಿ

17.
ವೈರಿಯಲ್ಲೂ
ಸ್ವಾಭಿಮಾನದ ನಿರೀಕ್ಷೆ ನನಗೆ,

ತಲೆ ಯಾರದಾದರೇನು
ಕಾಲುಗಳ ಮೇಲೆ ಇಷ್ಟವಾಗುವುದಿಲ್ಲ ನನಗೆ.
– ಜಾವೇದ್ ಅಖ್ತರ್

18.
ಎಲ್ಲರಿಂದಲೂ ಖುಷಿ
ಒಂದು ಹೆಜ್ಜೆ ದೂರ ಇದೆ,

ಪ್ರತಿ ಮನೆಯಲ್ಲೂ ಕೋಣೆ
ಒಂದೇ ಒಂದು ಕಡಿಮೆ ಇದೆ.
– ಜಾವೇದ್ ಅಖ್ತರ್

19.
ಕದ್ದು ತರುತ್ತಿದ್ದೆವು ಕೂಡಲು
ನಾವಿಬ್ಬರೂ ಸಮಯವನ್ನ ಆಗ,

ಈಗ ಭೇಟಿಯಾಗುತ್ತೇವೆ
ಯಾವಾಗಲಾದರೂ ಸಮಯ ಸಿಕ್ಕಾಗ.
– ಜಾವೇದ್ ಅಖ್ತರ್

20.
ಬದುಕುವ ರೀತಿಗಳೇ ವಿಚಿತ್ರ
ಈ ಶಹರದಲ್ಲಿ,

ಮಾತುಗಳಲ್ಲೇನೋ ಭರ್ತಿ ತಮಾಶೆ
ನೋವಿನ ಗಾಯಗಳು ದನಿಯಲ್ಲಿ.
– ಜಾವೇದ್ ಅಖ್ತರ್

21.
ಹೋಗಿ ಹೇಳಿ ಯಾರಾದರೂ
ಜ್ವಾಲೆಗಳಿಗೆ, ಕಿಡಿಗಳಿಗೆ

ಪುರುಸೊತ್ತು ಮಾಡಿಕೊಂಡು,

ಅರಳಿನಿಂತಿವೆ ಹೂಗಳು
ಈ ಸಲ
ಪೂರ್ತಿ ತಯಾರಿ ಮಾಡಿಕೊಂಡು.
– ರಾಹತ್ ಇಂದೂರಿ

22.
ಪ್ರತಿರಾತ್ರಿ
ನಕ್ಷತ್ರಗಳಿಗೆ ತಮ್ಮ ಮೆರೆದಾಟದಲ್ಲಿ
ಅಡಚಣಿಯಾಗುತ್ತದೆ,

ಕತ್ತಲೆಯಾದೊಡನೆ
ತಲೆತಿರುಕ ಚಂದ್ರನ ಸವಾರಿ
ಮನೆಯಿಂದ ಹೊರಗೆ ಬೀಳುತ್ತದೆ.
– ರಾಹತ್ ಇಂದೂರಿ

23.
ನನ್ನ ಚಹರೆಯ ಬದಲಾಗುವ ಬಣ್ಣಗಳನ್ನು
ಜನ ಗಂಭೀರವಾಗಿ ಗಮನಿಸುತ್ತಾರೆ

ನಿನ್ನ ಹೆಸರ ಮುಂದೆ ಮಾಡಿ
ಜನ ನನ್ನ ತಮಾಶೆ ಮಾಡುತ್ತಾರೆ
– ರಾಹತ್ ಇಂದೂರಿ

24.
ಜನ ಮಾತಾಡಿಕೊಳ್ಳುವಂತೆ ನಿನಗೆ ಇನ್ನೂ
ನನ್ನ ಮೇಲಿನ ಮುನಿಸು ಕಡಿಮೆಯಾಗಿಲ್ಲ,

ಆದರೆ ನಿನ್ನ ಕಣ್ಣುಗಳು ಮಾತ್ರ ನನಗೆ
ಬೇರೆ ಏನೋ ಹೇಳುತ್ತಿವೆಯಲ್ಲ.
– ಜನ್ ನಿಸಾರ್ ಅಖ್ತರ್

25.
ನೂರಕ್ಕೆ ನೂರು ನಿಜ
ನನ್ನ ಕವಿತೆಗಳು ಇಡೀ ಜಗತ್ತಿಗಾಗಿ,

ಆದರೆ ಕೆಲವು ಸಾಲುಗಳು ಮಾತ್ರ
ಕೇವಲ ಅವಳಿಗಾಗಿ.
– ಜನ್ ನಿಸಾರ್ ಅಖ್ತರ್

26.
ಇವತ್ತು ಮಾತ್ರ
ನಿನ್ನ ಮುಟ್ಟಿ ಮಾತನಾಡಿಸಿದರೂ
ನೀನು ಸಿಗಲಿಲ್ಲ ನನಗೆ,

ಹಿಂದೊಮ್ಮೆ
ನಿನ್ನ ಭೇಟಿ ಮಾಡುವ ಆಲೋಚನೆಯೇ
ತಬ್ಬಿಬ್ಬು ಮಾಡುತ್ತಿತ್ತು ನನ್ನ !
– ಜನ್ ನಿಸಾರ್ ಅಖ್ತರ್

27.
ಗೊತ್ತಿರಲಿ ನಿಮಗೆ ಇಷ್ಟು
ಪ್ರೀತಿ ಅಷ್ಟು ಸುಲಭವಲ್ಲ

ಬೆಂಕಿಯ ನದಿ ಇದು
ಮುಳುಗಿ ಈಜದೆ ಬೇರೆ ದಾರಿ ಇಲ್ಲ .
– ಜಿಗರ್ ಮೊರಾದಾಬಾದಿ

28.
ಎಲ್ಲ ಕಡೆ ಮೆರೆಯುತ್ತಿವೆ
ಪ್ರೇಮದ ಸಂದೇಶಗಳಾಗಿ,

ನೋಡಿ ಹೇಗಿದೆ ನನಗಿಂತಲೂ
ನನ್ನ ಕಥೆಗಳ ಅದೃಷ್ಟವೇ
ಜಬರ್ದಸ್ತಾಗಿ.
– ಜಿಗರ್ ಮೊರಾದಾಬಾದಿ

29.
ನನ್ನ ಬದುಕೇನೋ ಕಳೆದು ಹೋಯಿತು
ನಿನ್ನ ವಿರಹದ ನೆರಳಲ್ಲಿ,

ನನ್ನ ಸಾವಿಗೂ ಒಂದು ಪ್ರಿಯವಾದ
ಕಾರಣ ಬೇಕಲ್ಲ.
-ಜಿಗರ್ ಮೊರಾದಾಬಾದಿ

 

ಇದನ್ನೂ ಓದಿ: ಗುಲ್ಜಾರ್ ಅವರ ಪದ್ಯಗಳು

 

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ
ಕವಿ, ಅನುವಾದಕ. ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ‘ಹೂಬಾಣ’, ‘ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...