Homeಕರ್ನಾಟಕಕಾಪು ಮಾರಿಗುಡಿ ಜಾತ್ರೆ: ಸಂಘಪರಿವಾರದ ಬೆದರಿಕೆಗೆ ಸೊಪ್ಪು ಹಾಕದೆ ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿದ ಭಕ್ತಾದಿಗಳು!

ಕಾಪು ಮಾರಿಗುಡಿ ಜಾತ್ರೆ: ಸಂಘಪರಿವಾರದ ಬೆದರಿಕೆಗೆ ಸೊಪ್ಪು ಹಾಕದೆ ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿದ ಭಕ್ತಾದಿಗಳು!

ದೇವಸ್ಥಾನದ ಬಳಿ ಅಂಗಡಿಯಿಟ್ಟಿದ್ದ ಸಂಘಪರಿವಾರದ ಕಾರ್ಯಕತರಿಂದ ದುಪ್ಪಟ್ಟು ಬೆಲೆಗೆ ಕೋಳಿ & ಮಲ್ಲಿಗೆ ಮಾರಾಟ ಮಾಡಿ ಹಿಂದೂ ಭಕ್ತಾದಿಗಳಿಗೆ ವಂಚನೆ

- Advertisement -
- Advertisement -

➤ ಪರಂಪರೆಯಂತೆ ಮುಸ್ಲಿಂ ಸಮುದಾಯದ ವ್ಯಕ್ತಿಯಿಂದಲೇ ದೇವಿಯ ‘ವಾಲಗ ಚಾಕರಿ’
➤ ಪರಿಸ್ಥಿತಿಯ ಲಾಭ ಪಡೆದು ಕೆಜಿ.ಗೆ 250 ರೂ. ಇದ್ದ ನಾಟಿ ಕೋಳಿಯನ್ನು ಕೆಜಿ.ಗೆ 400 ರೂ.ಗೆ ಮಾರಾಟ ಮಾಡಿ ಭಕ್ತರನ್ನು ವಂಚಿಸಿದ ಸಂಘಪರಿವಾರದ ಕಾರ್ಯಕರ್ತರು: ಆರೋಪ

ಉಡುಪಿ ಜಿಲ್ಲೆಯ ಕಾಪು ಬಳಿಯ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ, ‘ಸುಗ್ಗಿ ಮಾರಿ ಪೂಜೆ’ ಜಾತ್ರೆಯು ಬಿಜೆಪಿ ಬೆಂಬಲಿತ ಸಂಘಪರಿವಾರದ ಸಂಘಟನೆಗಳ ಬೆದರಿಕೆಯ ನಡುವೆಯು ಸಾಂಗಾವಾಗಿ ನಡೆದು ಸಂಪನ್ನಗೊಂಡಿದೆ. ಈ ನಡುವೆ ದೇವಸ್ಥಾನದ ವಠಾರದಲ್ಲಿ ಅಂಗಡಿಯನ್ನು ಇಟ್ಟಿದ್ದ ಸಂಘಪರಿವಾದ ಕಾರ್ಯಕರ್ತರು ಮಾರುಕಟ್ಟೆ ಬೆಲೆಗಿಂತಲೂ ದುಪ್ಪಟ್ಟು ಬೆಲೆಗೆ ಕೋಳಿ ಮತ್ತು ಮಲ್ಲಿಗೆ ಹೂವುಗಳನ್ನು ಮಾರಿದ್ದು, ಭಕ್ತಾದಿಗಳನ್ನು ವಂಚಿಸಿದ್ದಾರೆ ಎಂದು ವರದಿಯಾಗಿದೆ.

ಜಾತ್ರೆಯಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಸಂಘಪರಿವಾರ ಮುಸ್ಲಿಮರ ವಿರುದ್ಧ ದ್ವೇಷ ಹರಡಿ, ಕೋಮು ಸೌಹಾರ್ದವನ್ನು ಹಾಳುಗೆಡವಿತ್ತು. ಆದರೆ ಜಾತ್ರೆಗೆ ಬಂದಿದ್ದ ಭಕ್ತಾದಿಗಳು ಸಂಘಪರಿವಾದ ಬೆದರಿಕೆಗಳಿಗೆ ಸೊಪ್ಪು ಹಾಕದೆ ಮುಸ್ಲಿಂ ವ್ಯಾಪಾರಿಗಳೊಂದಿಗೆ ವ್ಯಾಪಾರ ಮಾಡಿದ್ದು, ಜಾತ್ರೆಯ ‘ವಾಲಗ ಚಾಕರಿ’ಯನ್ನು ಸಂಪ್ರದಾಯದಂತೆ ಮುಸ್ಲಿಂ ಸಮುದಾಯದ ವ್ಯಕ್ತಿಗಳೆ ಎರಡು ದಿನದ ವಾಲಗ ಊದಿ ‘ತುಳುನಾಡಿನ ಪರಂಪರೆ’ಯನ್ನು ಎತ್ತಿಹಿಡಿದಿದ್ದಾರೆ.

ಇದನ್ನೂ ಓದಿ: ಉಡುಪಿ: ಕಾಪು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿದ ದೇವಸ್ಥಾನ ಸಮಿತಿ; ‘ಸಹಬಾಳ್ವೆ ಉಡುಪಿ’ ವಿರೋಧ

ಮಾರಿಗುಡಿ ವಾರ್ಷಿಕ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಸಂಘಪರಿವಾರವು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪುರಸಭೆಗೆ ಒತ್ತಡ ಹೇರಿತ್ತು. ದೇವಸ್ಥಾನದ ಆಡಳಿತ ಮಂಡಳಿ ಸಂಘಪರಿವಾರದ ಬೆದರಿಕೆಗಳಿಗೆ ಜಗ್ಗಿ ದೇವಸ್ಥಾನದ ವಠಾರದಲ್ಲಿ ಮುಸ್ಲಿಮರಿಗೆ ಯಾವುದೆ ಅಂಗಡಿ ಮುಂಗ್ಗಟ್ಟುಗಳನ್ನು ನೀಡಿರಲಿಲ್ಲ. ಆದರೆ ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಅವರು, “ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಎಲ್ಲ ಸಮುದಾಯದ ವರ್ತಕರು ಅಂಗಡಿಗಳನ್ನು ತೆರೆಯಬಹುದಾಗಿದೆ” ಎಂದು ಹೇಳಿದ್ದರು.

ಅದರಂತೆ ದೇವಸ್ಥಾನದ ವಠಾರದಲ್ಲಿ ಅವಕಾಶ ನೀಡದ್ದರಿಂದ ಅಲ್ಲಿ ಯಾವುದೆ ಮುಸ್ಲಿಮರ ಅಂಗಡಿಗಳು ಇರಲಿಲ್ಲ. ಆದರೆ ಹೊರಗಡೆಯ ಸಾವರ್ಜನಿಕ ಸ್ಥಳಗಳಲ್ಲಿ ಮುಸ್ಲಿಮರು ತಮ್ಮ ಅಂಗಡಿಗಳಲ್ಲಿ ಕೋಳಿ ಮತ್ತು ಇತರ ವಸ್ತುಗಳನ್ನು ಇಟ್ಟು ಮಾರಾಟ ಮಾಡಿದ್ದರು. ಅವರೊಂದಿಗೆ ಜಾತ್ರೆಗೆ ಆಗಮಿಸಿದ್ದ ಭಕ್ತರು ವ್ಯಾಪಾರವನ್ನೂ ಮಾಡಿದ್ದರು.

ಆದರೆ, ದೇವಸ್ಥಾನದ ಬಳಿಯಲ್ಲಿ ಕೋಳಿ ಮತ್ತು ಮಲ್ಲಿಗೆ ಅಂಗಡಿಗಳನ್ನು ಇಟ್ಟಿದ್ದ ಸಂಘಪರಿವಾರದ ಕಾರ್ಯಕರ್ತರು ಪರಿಸ್ಥಿತಿಯ ಲಾಭವನ್ನು ಪಡೆದು ಭಕ್ತಾದಿಗಳನ್ನು ವಂಚಿಸಿದ್ದಾರೆ ಎಂದು ಆರೋಪಗಳು ಎದ್ದಿದೆ.

ಇದನ್ನೂ ಓದಿ:RSS ಹೊರತುಪಡಿಸಿ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಜೈನ, ಬೌದ್ಧ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ: ತೇಜಸ್ವಿ ಯಾದವ್ 

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸ್ಥಳೀಯ ಪತ್ರಕರ್ತರೊಬ್ಬರು, “ಮಾರಿ ಪೂಜೆಗೆ ಕೋಳಿ ಮತ್ತು ಮಲ್ಲಿಗೆ ಬಹಳ ಮುಖ್ಯವಾಗಿ ಬೇಕಾದ ವಸ್ತುಗಳಾಗಿವೆ. ಸಂಘಪರಿವಾರವು ಪರಿಸ್ಥಿಯನ್ನು ಬಿಗಡಾಯಿಸುವಂತೆ ಮಾಡಿ ಅದನ್ನು ಲಾಭ ಮಾಡಿಕೊಂಡು ಭಕ್ತಾದಿಗಳನ್ನು ವಂಚಿಸಿದೆ. ಈ ವಂಚನೆಯ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ದೂರು ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ.

“ನಾನು ಪೂಜೆಗೆ ಹೋದಾಗ ದೇವಸ್ಥಾನದ ಬಳಿಯ ಸಂಘಪರಿವಾರದ ಕಾರ್ಯಕರ್ತರ ಅಂಗಡಿಗಳಲ್ಲಿ ನಾಟಿ ಕೋಳಿಗೆ ಒಂದು ಕೆ.ಜಿ.ಗೆ 400 ರೂ.ಗಳಿಗೆ ಮಾರುತ್ತಿದ್ದರು. ಆದರೆ ಮುಸ್ಲಿಮರ ಅಂಗಡಿಗಳಲ್ಲಿ 1 ಕೆ.ಜಿ. ನಾಟಿ ಕೋಳಿಗೆ 250 ರೂ.ಗಳು ಇತ್ತು. ಅಲ್ಲದೆ ಅದನ್ನು ಕೊಯ್ದು ಕೊಡಲು ಸಂಘಪರಿವಾದ ಅಂಗಡಿಗಳಲ್ಲಿ ಹೆಚ್ಚುವರಿಯಾಗಿ 50 ರಿಂದ 75 ರೂ.ಗಳ ವರೆಗೆ ಪಾವತಿಸಬೇಕಾಗಿತ್ತು. ಆದರೆ ಮುಸ್ಲಿಮರ ಅಂಗಡಿಗಳಲ್ಲಿ ಇದಕ್ಕೆ ಯಾವುದೆ ಹೆಚ್ಚುವರಿ ಹಣವನ್ನು ಪಡೆದುಕೊಳ್ಳುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ಮಲ್ಲಿಗೆ ವ್ಯಾಪಾರದ ವಿಚಾರದಲ್ಲೂ ಸಂಘಪರಿವಾರದ ಕಾರ್ಯಕರ್ತರು ಹೀಗೆ ನಡೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮುಸ್ಲಿಮರ ಜೊತೆಗೆ ವ್ಯಾಪಾರ ಮಾಡಬಾರದು ಎಂದು ಭಕ್ತಾದಿಗಳನ್ನು ಉದ್ರಿಕ್ತಗೊಳಿಸಲು ಸಂಘಪರಿವಾರವು ಪ್ರಯತ್ನಿಸಿದರೂ, ಭಕ್ತಾದಿಗಳು ಅದಕ್ಕೆ ಯಾವುದೆ ಸೊಪ್ಪು ಹಾಕಿಲ್ಲ. ದೇವಸ್ಥಾನದ ಹೊರಗಡೆ ಇದರ ಯಾವುದೆ ಪರಿವೆ ಇಲ್ಲದೆ ಭಕ್ತಾದಿಗಳು ಎಲ್ಲರೊಂದಿಗೂ ವ್ಯಾಪಾರದಲ್ಲಿ ತೊಡಗಿದ್ದರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಸಾಂವಿಧಾನಿಕ ಹಕ್ಕು ಮತ್ತು ಕರ್ನಾಟಕ ಸರ್ಕಾರದ ವೈಫಲ್ಯ

ಈ ಮಧ್ಯೆ ಸಾವಿರಾರು ವರ್ಷಗಳ ಸಂಪ್ರದಾಯದಂತೆ ಮಾರಿ ಗುಡಿಯ ಜಾತ್ರೆಯ ಎರಡು ದಿನಗಳಲ್ಲೂ ವಾಲಗವನ್ನು ಮುಸ್ಲಿಂ ಸಮುದಾಯದ ವ್ಯಕ್ತಿಗಳೇ ಊದಿದ್ದಾರೆ ಎಂದು ವರದಿಯಾಗಿದೆ. ಕಾಪು ಹೊಸ ಮಾರಿಗುಡಿ, ಮೂರನೇ ಮಾರಿಗುಡಿ ಮತ್ತು ಜನಾರ್ಧನ ದೇವಸ್ಥಾನದಲ್ಲಿ ತಲತಲಾಂತರದಿಂದ ವಾಲಗ ಊದುವ ‘ಚಾಕರಿ’ ಮಾಡಿಕೊಂಡು ಬರುತ್ತಿರುವ ಮುಸ್ಲಿಂ ಕುಟುಂಬದ ಜಲೀಲ್ ಸಾಹೇಬ್ ಅವರು ಮಾರಿಗುಡಿಯ ಈ ಬಾರಿಯ ಜಾತ್ರೆಯಲ್ಲಿ ವಾಲಗ ಊದಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಜಲೀಲ್ ಸಾಹೇಬ್‌, “ನಾವು ‘ಜನಾರ್ದನ ದೇವಸ್ಥಾನ’, ‘ಮೂರನೇ ಮಾರಿಗುಡಿ’ ಮತ್ತು ‘ಹೊಸ ಮಾರಿಗುಡಿ’ ದೇವಸ್ಥಾನಗಳಿಗೂ ತಲತಲಾಂತರದಿಂದಲೂ ವಾಲಗ ಚಾಕರಿ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮದು ಸಾವಿರಾರು ವರ್ಷಗಳ ಪರಂಪರೆ, ನನ್ನ ತಂದೆ, ಅಜ್ಜ, ಅವರ ಅಜ್ಜ ಹೀಗೆ…ವಾಲಗ ಚಾಕರಿ ಮಾಡುತ್ತಲೆ ಬರುತ್ತಿದ್ದೇವೆ. ಈ ವರ್ಷ ಕೂಡಾ ವಾಲಗ ಊದಿ ಚಾಕರಿ ಮಾಡಿದ್ದೇವೆ. ನಮ್ಮನ್ನು ಯಾರೂ ಬರಬೇಡಿ ಎಂದು ಹೇಳಿಲ್ಲ” ಎಂದು ಹೇಳಿದ್ದಾರೆ.

ಕೋವಿಡ್-19 ನಿರ್ಬಂಧಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಮೂರು ದೇವಸ್ಥಾನಗಳಲ್ಲಿ ವಾರ್ಷಿಕ ಜಾತ್ರೆ ನಡೆದಿರಲಿಲ್ಲ ಮತ್ತು ಹರಾಜು ಕೂಡ ನಡೆದಿರಲಿಲ್ಲ. ಈ ಹಿಂದೆ ದೇವಸ್ಥಾನದ ವಠಾರದಲ್ಲಿ ಜಾತ್ರೆಯ ಸಂತೆ ಇಡಲು ಸ್ಥಳಗಳನ್ನು ಮುಸ್ಲಿಮರು ಕೂಡಾ ಪಡೆಯುತ್ತಿದ್ದರು.

ಇದನ್ನೂ ಓದಿ: ಮೈಸೂರು: ಸರ್ಕಾರಿ ಶಾಲೆಯ ಅಭಿವೃದ್ಧಿಗೆ 2.5 ಎಕರೆ ಜಮೀನು ದಾನ ಮಾಡಿದ ಮುಸ್ಲಿಂ ಕುಟುಂಬ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Very good. Very appreciated the act of all beloved Hindus for uplifting the value of Democracy and secularism. Fundamentalist may try to destroy harmony and peace in the name of religion but common people irrespective of any religion don’t care about them. Thanks to Nanu Gauri. Com for revealing the truth in midst of untruth and fantasy of other media

LEAVE A REPLY

Please enter your comment!
Please enter your name here

- Advertisment -

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...