ಹರಿಯಾಣದ ಕರ್ನಾಲ್‌ನಲ್ಲಿ ರೈತರ ಮೇಲೆ ನಡೆದಿದ್ದ ಮಾರಣಾಂತಿಕ ಲಾಠಿಚಾರ್ಜ್ ವಿರೋಧಿಸಿ ಇಂದು (ಮಂಗಳವಾರ) ರೈತರು ಕರ್ನಾಲ್ ಮಿನಿ ಸೆಕ್ರೆಟರಿಯೇಟ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ. ಜೊತೆಗೆ ಕಿಸಾನ್ ಮಹಾಪಂಚಾಯತ್ ಕೂಡ ನಡೆಯಲಿದೆ. ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.
ಪ್ರತಿಭಟನೆ ಜೊತೆಗೆ ಕರ್ನಾಲ್ ಕಿಸಾನ್ ಮಹಾಪಂಚಾಯತ್ ನಡೆಯಲಿದೆ. ಲಾಠಿಚಾರ್ಜ್ ನಡೆಸಿ ರೈತರ ಮೇಲೆ ಹಲ್ಲೆ ಮಾಡಿದ್ದ ಸರ್ಕಾರ ಈಗ ಕರ್ನಾಲ್‌ನಲ್ಲಿ 144 ಸೆಕ್ಷನ್ ಜಾರಿ ಮಾಡಿದೆ. ಜೆತೆಗೆ ಇಂಟರ್‌ನೆಟ್ ಸ್ಥಗಿತಗೊಳಿಸಿದೆ.
ಈ ಹೋರಾಟವನ್ನು ಹತ್ತಿಕ್ಕಲು ಕರ್ನಾಲ್ ಜಿಲ್ಲಾಡಳಿತ ಮಧ್ಯರಾತ್ರಿ 12.30 ರಿಂದಲೇ ಇಂಟರ್ನೆಟ್ ಸೇವೆ ಬಂದ್ ಮಾಡಿದೆ. ಕರ್ನಾಲ್ ಸೇರಿದಂತೆ 5 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಸೆಪ್ಟೆಂಬರ್ 7ರ ಮಧ್ಯರಾತ್ರಿ (11.59 pm) ಹಿಂಪಡೆಯಲಿದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇದನ್ನೂ ಓದಿ: ಹರಿಯಾಣ: ಹಲ್ಲೆಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ಒತ್ತಾಯ
“ರಾಜ್ಯ ಸರ್ಕಾರವು ಕಿಸಾನ್ ಮಹಾಪಂಚಾಯತ್‌ಗಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ. ಶಾಂತಿಯುತವಾಗಿ ತಮ್ಮ ಸಾರ್ವಜನಿಕ ಸಭೆಯನ್ನು ನಡೆಸುವಂತೆ ನಾವು ನಮ್ಮ ರೈತರಿಗೆ ಮನವಿ ಮಾಡುತ್ತೇವೆ” ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
144 ಸೆಕ್ಷನ್ ಜಾರಿ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿರುವುದಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಸಿಂಗ್ ಅವರನ್ನು ಟೀಕಿಸಿದೆ.
Ahead of farmers protest in Karnal, administration imposed section 144 with internet shutdown. Instead of condemning Ayush Sinha's Shamefull act, @mlkhattar is encouraging it!
Stay Strong, Stay United ~ Support Farmers! #KarnalProtest_AgainstLathicharge
— Kisan Ekta Morcha (@Kisanektamorcha) September 7, 2021
ಇದನ್ನೂ ಓದಿ: ಐತಿಹಾಸಿಕ ಕಿಸಾನ್ ಮಹಾಪಂಚಾಯತ್: ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ ರೈತರು
ಆಗಸ್ಟ್ 28 ರ ಶನಿವಾರದಂದು ಹರಿಯಾಣದ ಕರ್ನಾಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಾಠಿಚಾರ್ಜ್ ನಡೆಸಲಾಗಿತ್ತು. ರೈತರ ತಲೆ ಬುರುಡೆ ಹೊಡೆಯಿರಿ ಎಂದು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿರುವ ಆಯುಷ್ ಸಿನ್ಹಾ ಆದೇಶ ನೀಡಿದ್ದರು. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Haryana: Security personnel deployed in Karnal ahead of Kisan Mahapanchayat.
Visuals from new Anaj Mandi area in Karnal. pic.twitter.com/mfnQ7rSEDn
— ANI (@ANI) September 7, 2021
ಹವಾಮಾನ ವೈಪರೀತ್ಯ ಮತ್ತು ಪೊಲೀಸರ ಭಾರೀ ನಿಯೋಜನೆಯ ನಡುವೆ, ರೈತರು ಕರ್ನಾಲ್‌ನ ಧಾನ್ಯ ಮಾರುಕಟ್ಟೆಯನ್ನು ತಲುಪಲು ಆರಂಭಿಸಿದ್ದಾರೆ. ಎಸ್‌ಕೆಎಂ ಮುಖಂಡರಾದ ರಾಕೇಶ್ ಟಿಕಾಯತ್, ಯೋಗೇಂದ್ರ ಯಾದವ್, ರಾಜೇವಾಲ್, ಗುರ್ನಾಮ್ ಸಿಂಗ್ ಚಾರುಣಿ ಮತ್ತು ದರ್ಶನ್ ಪಾಲ್ ಕೂಡ ಕಿಸಾನ್ ಮಹಾಪಂಚಾಯತ್‌ಗೆ ಆಗಮಿಸುತ್ತಿದ್ದಾರೆ.
ಪ್ರತಿಭಟನೆ ಮತ್ತು ಕಿಸಾನ್ ಮಹಾಪಂಚಾಯತ್ ಹಿನ್ನೆಲೆ ಹರಿಯಾಣ ಸರ್ಕಾರ ಬಿಗಿ ಪೊಲೀಸ್ ಬಂದೋಬಸ್ ಮಾಡಿದೆ.
ಇದನ್ನೂ ಓದಿ: ‘ರೈತರ ತಲೆ ಒಡೆಯಿರಿ’ ಎಂದು ಆದೇಶಿಸಿದ ಅಧಿಕಾರಿಯ ವಿರುದ್ಧ ಕ್ರಮ: ಹರಿಯಾಣ ಡಿಸಿಎಂ ಹೇಳಿಕೆ


