Homeಕರ್ನಾಟಕಬೆಂಗಳೂರು :ಕೊರೊನಾ ನಿಯಮಗಳನ್ನು ಪಾಲಿಸದ ಗರುಡಾ ಮಾಲ್‌ಗೆ 20 ಸಾವಿರ ರೂ. ದಂಡ

ಬೆಂಗಳೂರು :ಕೊರೊನಾ ನಿಯಮಗಳನ್ನು ಪಾಲಿಸದ ಗರುಡಾ ಮಾಲ್‌ಗೆ 20 ಸಾವಿರ ರೂ. ದಂಡ

- Advertisement -
- Advertisement -

ಮಾಲ್‌ಗೆ ಪ್ರವೇಶಿಸುವವರನ್ನು ಪರೀಕ್ಷಿಸುವಲ್ಲಿ ಸರಿಯಾದ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸದ ಆರೋಪದ ಮೇಲೆ ಗರುಡಾ ಮಾಲ್ ವಿರುದ್ಧ ಬಿಬಿಎಂಪಿ 20,000 ರೂಪಾಯಿ ದಂಡ ವಿಧಿಸಿದೆ.

ಬೆಂಗಳೂರು ಮಹಾನಗರ ಪಾಲಿಕೆ ಇತ್ತೀಚೆಗೆ ಹೊರಡಿಸಿರುವ ನಿರ್ದೇಶನದ ಪ್ರಕಾರ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಎಂದು ಪರೀಕ್ಷಿಸಲು ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ವಿವಿಧ ಮಾಲ್‌ಗಳ ಪರಿಶೀಲನೆಯನ್ನು ಕೈಗೊಂಡಿದ್ದರು.

ಇತ್ತಿಚೆಗೆ ಮಾಲ್ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಹಾಕಿಸಿರುವುದು ಕಡ್ಡಾಯ ಮಾಡಿ ಬಿಬಿಎಂಪಿ ಆದೇಶಿಸಿದೆ. ಇದನ್ನು ಅನುಸರಿಸಲಾಗುತ್ತಿದೆ ಎಂದು ಪರಿಶೀಲನೆ ನಡೆಸಿತ್ತು. ಈ ವೇಳೆ ಗರುಡಾ ಮಾಲ್‌ನಲ್ಲಿ ನಿಯಮಗಳು ಅನುಸರಿಸದಿರುವುದು ಕಂಡು ಬಂದು ಮಾಲ್‌ಗೆ ದಂಡ ವಿಧಿಸಿದೆ.

ಇದನ್ನೂ ಓದಿ: ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು: ‘ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ’ಎಂದು ಎಚ್‌ಡಿಕೆ ಆಕ್ರೋಶ

“ಕಳೆದ ವಾರ ಗರುಡಾ ಮಾಲ್‌ನಲ್ಲಿ ನಾವು ತಪಾಸಣೆ ನಡೆಸಿದ್ದೇವೆ, ಅಲ್ಲಿ ಎಲ್ಲ ನಿಯಮಗಳನ್ನೂ ಅನುಸರಿಸಲಾಗುತ್ತಿತ್ತು. ಆದರೆ ಶನಿವಾರ, ಮಾಲ್‌ಗೆ ಭೇಟಿ ನೀಡುವವರಿಗೆ ಎರಡು ಬಾರಿ ಲಸಿಕೆ ನೀಡಲಾಗಿದೆಯೇ ಎಂದು ಅವರು ಪರಿಶೀಲಿಸುತ್ತಿಲ್ಲ ಎಂಬುದು ನಮಗೆ ತಿಳಿಸು ಬಂದು. ಜೊತೆಗೆ ಮಳಿಗೆಗಳಲ್ಲಿನ ಸಿಬ್ಬಂದಿಗಳು ಮಾಸ್ಕ್ ಧರಿಸಿರಲಿಲ್ಲ ಮತ್ತು ದೈಹಿಕ ಅಂತರದ ಮಾರ್ಗಸೂಚಿಗಳನ್ನು ಅನುಸರಿಸಲಿಲ್ಲ” ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಡಾ. ಬಾಲಸುಂದರ್ ಹೇಳಿದ್ದಾರೆ.

“ಇದು ಮೊದಲ ಘಟನೆಯಾಗಿದೆ, ಇತರ ಮಾಲ್‌ಗಳಿಗೆ ಎಚ್ಚರಿಕೆಯಾಗಿ ಸಣ್ಣ ಮೊತ್ತದ ದಂಡ ವಿಧಿಸಿದ್ದೇವೆ. ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪರಿಶೀಲಿಸದ, ಸರಿಯಾದ ಪ್ರೋಟೋಕಾಲ್‌ಗಳನ್ನು ಅನುಸರಿಸದ ಮಾಲ್‌ಗಳು ಕಂಡುಬಂದರೆ ಮುಂದೆ ಹೆಚ್ಚಿನ ದಂಡವನ್ನು ವಿಧಿಸಲು ನಾವು ಯೋಚಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: 5 ನೇ ದಿನವೂ ಮುಂದುವರೆದ ಐಟಿ ದಾಳಿ; 200 ಕೋಟಿ ರೂ. ನಗದು ವಶಕ್ಕೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...