ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ವಜ್ಜಲ್ ಹಲ್ಲೆ ಪ್ರಕರಣದಲ್ಲಿ 5 ದಿನ ಕಳೆದರು ದೂರು ದಾಖಲಾಗಿಲ್ಲ ಎಂದು ಕಾಂಗ್ರೆಸ್ ಕಿಡಿ ಕಾರಿದೆ. ಆಡಳಿತದಲ್ಲಿ ಯುಪಿ ಮಾಡೆಲ್ ಅನುಸರಿಸಿ ಕರ್ನಾಟಕವನ್ನು ‘ಗೂಂಡಾರಾಜ್’ ಆಗಿ ಪರಿವರ್ತಿಸುತ್ತಿದೆ ಎಂದು ಆರೋಪಿಸಿದೆ.
ಕಳೆದ ಭಾನುವಾರ ರಾತ್ರಿ ವಸಂತನಗರದ ಎಂಬೆಸಿ ಹ್ಯಾಬಿಟೆಟ್ ಅಪಾರ್ಟ್ಮೆಂಟ್ ಬಳಿ ಕಾರು ಪಾರ್ಕಿಂಗ್ ವಿಚಾರಕ್ಕೆ ಉದ್ಯಮಿಯೊಬ್ಬರ ಮಗ ವಿಕ್ರಮ್ ರೈ ಅವರ ಮೇಲೆ ಆಂಜನೇಯ ವಜ್ಜಲ್ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
“ಬಿಜೆಪಿಯ ಮಾನಪ್ಪ ವಜ್ಜಲ್ ಅವರ ಪುತ್ರರು ಅಮಾಯಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಐದು ದಿನ ಕಳೆದರೂ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದೇಕೆ ಗೃಹಸಚಿವರೇ? ದೂರು ಸ್ವೀಕರಿಸದಂತೆ ನೀವೇ ಪ್ರಭಾವ ಬೀರಿದಿರಾ..? ಬಿಜೆಪಿ ನಾಯಕರು, ಅವರ ಪುತ್ರರು ತಮ್ಮನ್ನು ತಾವು ಪಾಳೆಗಾರರು ಎಂದು ಭ್ರಮಿಸಿ ಗೂಂಡಾಗಿರಿ ನಡೆಸುತ್ತಿದ್ದಾರೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ‘ಶಿವರಾಮ ಕಾರಂತ ಬಡಾವಣೆ’ ವಿವಾದ – ಸಮಸ್ಯೆ ಪರಿಹರಿಸುವಂತೆ 17 ಹಳ್ಳಿಗಳಿಂದ ಬೃಹತ್ ಪ್ರತಿಭಟನೆಗೆ ಸಜ್ಜು
ಬಿಜೆಪಿಯ ಮಾನಪ್ಪ ವಜ್ಜಲ್ ಅವರ ಪುತ್ರರು ಅಮಾಯಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಐದು ದಿನ ಕಳೆದರೂ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದೇಕೆ ಗೃಹಸಚಿವರೇ? ದೂರು ಸ್ವೀಕರಿಸದಂತೆ ನೀವೇ ಪ್ರಭಾವ ಬೀರಿದಿರಾ?
ಬಿಜೆಪಿ ನಾಯಕರು, ಅವರ ಪುತ್ರರು ತಮ್ಮನ್ನು ತಾವು ಪಾಳೆಗಾರರು ಎಂದು ಭ್ರಮಿಸಿ ಗೂಂಡಾಗಿರಿ ನಡೆಸುತ್ತಿದ್ದಾರೆ.#ಬಿಜೆಪಿಗೂಂಡಾಗಿರಿ
— Karnataka Congress (@INCKarnataka) September 17, 2021
“ಬಿಜೆಪಿ ನಾಯಕರು, ನಾಯಕರ ಮಕ್ಕಳು ಕಂಡ ಕಂಡಲ್ಲಿ ಕುಡಿದು, ಕಂಡ ಕಂಡವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದರ ಬದಲು ‘ಬಾರ್ ಸಲಹೆಗಾರ’ ಸಿ.ಟಿ.ರವಿ ಮಾರ್ಗದರ್ಶನದಲ್ಲಿ ಬಿಜೆಪಿ ಕಚೇರಿಯಲ್ಲಿಯೇ ಬಾರ್ ತೆರೆದುಕೊಳ್ಳಲಿ. ಅಲ್ಲೇ ಕುಡಿದುಕೊಳ್ಳಲಿ, ಅಲ್ಲೇ ಬಡಿದುಕೊಳ್ಳಲಿ, ಜನರಿಗೆ ತೊಂದರೆ ಕೊಡುವುದನ್ನ ಬಿಡಲಿ!” ಎಂದಿದೆ.
ಇನ್ನು ಬಿಜೆಪಿ ನಾಯಕರು ನಡೆಸಿರುವ ಹಲ್ಲೆಗಳ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್,
*ಶಾಸಕ ಸಿದ್ದು ಸವದಿಯವರಿಂದ ಮಹಿಳೆ ಮೇಲೆ ಹಲ್ಲೆ – ಬಂಧನವಿಲ್ಲ
*ಮಾಜಿ ಸಚಿವರು ಅತ್ಯಾಚಾರ ಎಸಗಿದರೂ – ಬಂಧನವಿಲ್ಲ
*ಮಾನಪ್ಪ ವಜ್ಜಲ್‌ರ ಪುತ್ರರಿಂದ ಮಾರಣಾಂತಿಕ ಹಲ್ಲೆ – ದೂರು ದಾಖಲಿಸಲಿಲ್ಲ. ಬಿಜೆಪಿ ಆಡಳಿತದಲ್ಲಿ ಯುಪಿ ಮಾಡೆಲ್ ಅನುಸರಿಸಿ ಕರ್ನಾಟಕವನ್ನು ‘ಗೂಂಡಾರಾಜ್’ ಆಗಿ ಪರಿವರ್ತಿಸುತ್ತಿದೆ ಎಂದು ಕ್ರಾಂಗ್ರೆಸ್ ಆರೋಪಿಸಿದೆ.
◆ಶಾಸಕ ಸಿದ್ದು ಸವದಿಯವರಿಂದ ಮಹಿಳೆ ಮೇಲೆ ಹಲ್ಲೆ – ಬಂಧನವಿಲ್ಲ
◆ಮಾಜಿ ಸಚಿವರು ಅತ್ಯಾಚಾರ ಎಸಗಿದರೂ – ಬಂಧನವಿಲ್ಲ
◆ಮಾನಪ್ಪ ವಜ್ಜಲ್‌ರ ಪುತ್ರರಿಂದ ಮಾರಣಾಂತಿಕ ಹಲ್ಲೆ – ದೂರು ದಾಖಲಿಸಲಿಲ್ಲ@BJP4Karnataka ಆಡಳಿತದಲ್ಲಿ ಯುಪಿ ಮಾಡೆಲ್ ಅನುಸರಿಸಿ ಕರ್ನಾಟಕವನ್ನು 'ಗೂಂಡಾರಾಜ್' ಆಗಿ ಪರಿವರ್ತಿಸುತ್ತಿದೆ.#ಬಿಜೆಪಿಗೂಂಡಾಗಿರಿ
— Karnataka Congress (@INCKarnataka) September 17, 2021
ಸದ್ಯ ಆಂಜನೇಯ ವಜ್ಜಲ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಂಚ್ ಮಾಡುವ ಆಯುಧದಿಂದ ವಿಕ್ರಮ್ ರೈ ಮೇಲೆ ಹಲ್ಲೆ ಮಾಡಿದ್ದಾರೆ. 10 ರಿಂದ 15 ಹುಡುಗರನ್ನ ಕರೆಸಿ ಹಲ್ಲೆ ಮಡಿದ್ದಾರೆ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 124, 324, 504, 506, 149 ಅಡಿ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸೆ.27ರ ಭಾರತ ಬಂದ್ ಯಶಸ್ಸಿಗೆ ಒಕ್ಕೊರಲ ಕರೆ


