Homeಚಳವಳಿರೈತರನ್ನು ಕಾರ್ಪೊರೇಟ್ ಕಾಲಡಿಗೆ ದೂಕುತ್ತಿರುವ ಕೇಂದ್ರ ಸರ್ಕಾರ: ಬಿ.ಸಿ ಬಸವರಾಜ್

ರೈತರನ್ನು ಕಾರ್ಪೊರೇಟ್ ಕಾಲಡಿಗೆ ದೂಕುತ್ತಿರುವ ಕೇಂದ್ರ ಸರ್ಕಾರ: ಬಿ.ಸಿ ಬಸವರಾಜ್

- Advertisement -
- Advertisement -

ಭಾರತದಲ್ಲಿ 70 ಕೋಟಿಗಿಂತ ಹೆಚ್ಚಿನ ಜನ ನೇರವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಇಲ್ಲಿ ಫುಡ್ ಪ್ರೊಸೆಸಿಂಗ್ ಪ್ರಾಡಕ್ಟ್‌ಗಳದು ಹಲವಾರು ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷಿ ಕಾಯ್ದೆಗಳ ಮೂಲಕ ಅತಿದೊಡ್ಡ ರೈತ ವಲಯವನ್ನು ಕಾರ್ಪೊರೇಟ್ ಕಾಲಡಿಯಲ್ಲಿ ಇಡಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಾಧ್ಯಾಪಕರಾದ ಬಿ.ಸಿ ಬಸವರಾಜು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಜನಶಕ್ತಿ ಸಂಘಟನೆಯು ಬೆಂಗಳೂರಿನ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಐತಿಹಾಸಿಕ ರೈತಾಂದೋಲನ ಕಲಿಸುವ ಪಾಠ- ತೋರುವ ಹಾದಿ: ಮಂಥನ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಕಾಯ್ದೆಗಳು ಜಾರಿಯಾದರೆ ಕೃಷಿ ವಹಿವಾಟಿನಲ್ಲಿ ಶೇ.90 ಪಾಲನ್ನು ಕಾರ್ಪೋರೇಟ್ ಕಂಪನಿಗಳು ಪಡೆಯುತ್ತಿವೆ. ಹಾಗಾಗಿ ಕೃಷಿ ಕಾಯ್ದೆಗಳ ಹಿಂದೆ ಕಾರ್ಪೋರೇಟ್ ಹಿತಾಸಕ್ತಿ ಸ್ಪಷ್ಟವಾಗಿದೆ ಎಂದರು.

ಜಾಗತೀಕರಣಕ್ಕೆ ತೆರೆದುಕೊಂಡ ದಿನಗಳಿಂದಲೂ ಕಾರ್ಪೋರೇಟ್ ಕಂಪನಿಗಳು ದೇಶವನ್ನು ಆಳುತ್ತಿವೆ. ಕಾರ್ಪೊರೇಟ್ ಕಂಪನಿಗಳು ದಿನದಿಂದ ದಿನಕ್ಕೆ ಪ್ರಬಲವಾಗುತ್ತ ಬಂದಿದೆ. ಯುಪಿಎ ಅವಧಿಯಲ್ಲಿ ಕಾರ್ಪೋರೇಟ್ ಪರವಾಗಿ ನಿಲುವುಗಳನ್ನು ತಾಳುತ್ತಿದ್ದರೂ ಜನಸಮಾನ್ಯರಿಗೂ ಉಸಿರಾಡಲು ಸ್ಪಲ್ಪ ಅವಕಾಶವಿತ್ತು. ಆದರೆ ಎನ್‌ಡಿಎ ಸಂಪೂರ್ಣವಾಗಿ ಕಾರ್ಪೊರೇಟ್‌ಗಳ ಕೈಗೊಪ್ಪಿಸಿವೆ.ಅವರು ಭಾವನಾತ್ಮಕ ವಿಷಯದ ಮೇಲೆಯೇ ಚುನಾವಣೆಯ ಗೆಲ್ಲುವ ಭರವಸೆ ಇರುವುದರಿಂದ ಭ್ರಷ್ಟಾಚಾರವನ್ನು ಕಾನೂನಾತ್ಮಕವಾಗಿಸಲಾಗುತ್ತಿದೆ. ಎಲೆಕ್ಟರೊಲ್ ಬಾಂಡ್‌ಗಳು ಬಂದ ಮೇಲಂತೂ ಭ್ರಷ್ಟಾಚಾರ ವ್ಯಾಪಕವಾಗಿದೆ” ಎಂದರು.

2019 ನೇ ಸಾಲಿನಲ್ಲಿ ದೇಶದಲ್ಲಿ ಉತ್ಪನವಾದ ಒಟ್ಟು ಸಂಪತ್ತಿನ ಶೇ.80 ರಷ್ಟು ಪಾಲು ಶೇ.01 ರಷ್ಟು ಜನರ ಪಾಲಾಗಿದೆ. ಕೊರೊನಾ ನಂತರ ಎಲ್ಲಾ ಉದ್ದಿಮೆಗಳು ನಷ್ಟದಲ್ಲಿದ್ದರೆ 11 ಜನ ಕಾರ್ಪೋರೇಟ್‌ಗಳ ಆಸ್ತಿಯಲ್ಲಿ ಶೇ.35 ರಷ್ಟು ಹೆಚ್ಚಾಯಿತು. ಇದೆಲ್ಲವೂ ಈ ಕಾಯ್ದೆಗಳು ಕಾರ್ಪೋರೇಟ್ ಪರವಾಗಿವೆ ಎನ್ನಲು ಸಾಕ್ಷಿ. ಮೋದಿಯವರು ಹಿಂದೆ ಎಂಎಸ್‌ಪಿ ಕಾನೂನುಬದ್ಧಗೊಳಿಸಬೇಕು ಎಂದಿದ್ದರು. ಅಧಿಕಾರಕ್ಕೆ ಬಂದಾಗ ಅದನ್ನು ಮರೆತರು. ಅಧಿಕಾರದಲ್ಲಿದ್ದಾಗ ಒಂದು ರೀತಿ, ಅಧಿಕಾರ ಕಳೆದುಕೊಂಡಾಗ ಒಂದು ರೀತಿ ವರ್ತಿಸುವುದನ್ನು ಕಾಣಬಹುದು ಎಂದು ಎಂದು ಬಸವರಾಜ್‌ರವರು ತಿಳಿಸಿದರು.

ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, “ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಾನೂನುಗಳು ಸಂಪೂರ್ಣವಾಗಿ ಜಾರಿಯಾಗಬೇಕಾದರೆ ರಾಜ್ಯಗಳು ಸಹ ಅವುಗಳಿಗೆ ಪೂರಕವಾಗಿ ಕಾನೂನುಗಳನ್ನು ತರಬೇಕು. ಇಂದು ದೇಶದಲ್ಲಿ 16 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಆ ಯಾವ ರಾಜ್ಯಗಳು ಈ ಕೃಷಿ ಕಾನೂನನ್ನು ಜಾರಿಗೆ ತರುವ ಪ್ರಯತ್ನ ಮಾಡಲಿಲ್ಲ. ಆದರೆ ಕರ್ನಾಟಕ ಜಾರಿಗೆ ತಂದಿರುವುದು ನಮ್ಮ ದುರಂತ” ಎಂದರು.

ಇದರ ಪರಿಣಾಮವಾಗಿ ರೈತರು ಹಳ್ಳಿಗಳಿಂದ ಕಳೆದುಹೋಗುತ್ತಿದ್ದಾರೆ. ಕೃಷಿ ಮಾರುಕಟ್ಟೆ ಮತ್ತು ಕೃಷಿ ಭೂಮಿ ರೈತರ ಕೈತಪ್ಪುತ್ತಿದೆ. ಎಪಿಎಂಸಿ ಕಾಯ್ದೆ ಜಾರಿಗೆ ಬಂದರೆ ಕೆಲವೇ ತಿಂಗಳಿನಲ್ಲಿ ನಮ್ಮ ಮಾರುಕಟ್ಟೆ ಶಕ್ತಿ ಕಳೆದುಕೊಳ್ಳುತ್ತದೆ ಎಂದು ನಾವು ಎಚ್ಚರಿಸಿದ್ದೆವು. ಅದರಂತೆ ಈಗ
ಕೃಷಿ ಉತ್ಪನನ್ನ ಮಾರುಕಟ್ಟೆ ವರದಿ ತೆಗೆಸಿಕೊಂಡಿದ್ದೇನೆ. ಶೇ. 80ರಷ್ಟು ಭಾಗ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿಲ್ಲ. ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಮತ್ತು ತಮಗಿಷ್ಟ ಬಂದಂತೆ ಮಾಡಲು ವ್ಯಾಪಾರಿಗಳು ಮುಂದಾಗುತ್ತಿದ್ದಾರೆ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಟಿ.ಯಶವಂತ್‌ರವರು ಮಾತನಾಡಿ “2018ರ ಅಂಕಿಅಂಶದ ಪ್ರಕಾರ ಕನಿಷ್ಠ ಭೂಮಿ ಇಲ್ಲದ ಶೇ. 35ರಷ್ಟು ಜನರು ದೇಶದಲ್ಲಿದ್ದಾರೆ. ಒಂದು ಎಕರೆ, ಅರ್ಧ ಎಕರೆ ಹೊಂದಿರುವ ಸಣ್ಣ ರೈತರನ್ನೆಲ್ಲ ಭೂಮಿ ಹೀನರು ಎಂದು ತಿಳಿದರೆ ಈ ಪ್ರಮಾಣ ಶೇ. 90ರಷ್ಟಾಗುತ್ತದೆ. ಭೂ ಕಾಯ್ದೆ ತಿದ್ದುಪಡಿಯ ಅಪಾಯ ಇರುವುದು ಇಲ್ಲಿ. ನಾನು ರೈತ ಸಂಘಕ್ಕೆ ಬಂದಾಗ ಇದ್ದ ಒಂದು ಕ್ವಿಂಟಾಲ್ ಭತ್ತದ ಬೆಲೆ ಎಷ್ಟಿತ್ತೋ ಅಷ್ಟೇ ಈಗಲೂ ಇದೆ. ಹದಿನೈದು ವರ್ಷಗಳ ಹಿಂದೆ ಇದ್ದ ಚಪ್ಪಲಿ ಬೆಲೆ ಈಗಲೂ ಅಷ್ಟೇ ಇದೆಯೇ? ಎಂದು ಪ್ರಶ್ನಿಸಿದರು.

ರೈತ ನಾಯಕಿ ಕವಿತಾ ಕುರುಗಂಟಿ ಮಾತನಾಡಿ, “ರೈತರ ಹೋರಾಟ ಈಗ ಶುರುವಾಗಿದ್ದಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಹೋರಾಟ ನಡೆಸಲಾಗುತ್ತಿದೆ. ಸಂಪೂರ್ಣ ಸಾಲ ಮನ್ನಾ, ಎಂಎಸ್‌ಪಿ ಶಾಸನಬದ್ಧತೆಗಾಗಿ 2017 ರಿಂದ ಹೋರಾಟ ನಡೆಯುತ್ತಿದೆ” ಎಂದರು.

“ರೈತರು ಹೇಳಿದ ಎಲ್ಲ ಮಾತುಗಳು ನಿಜವಾಗಿದೆ. ಎಪಿಎಂಸಿ- ಕುರಿತು ವ್ಯಕ್ತಪಡಿಸಿದ ಆತಂಕ ನಿಜವಾಗಿದೆ. ಇಂದಿನ ಪ್ರಜಾವಾಣಿಯ ಮುಖಪುಟದ ವರದಿಯು ಇದನ್ನೇ ಹೇಳುತ್ತಿದೆ. ಎಪಿಎಂಸಿ ಬಿಟ್ಟು ಹೊರಗಡೆ ವ್ಯಾಪಾರ ಮಾಡಿದರೆ ರೈತರಿಗೆ ಮೋಸವಾಗುತ್ತದೆ. ಈ ತಿದ್ದುಪಡಿ ಕಾಯ್ದೆಗಳಿಂದ ರೈತರಿಗೆ ಯಾವ ರೀತಿ ಉಪಯೋಗವಾಗುತ್ತದೆ ಎಂದು ಕೇಳಿದರೆ ಪ್ರಧಾನಿ ಮೋದಿಯವರ ಬಳಿ ಉತ್ತರವಿಲ್ಲ” ಎಂದು ತಿಳಿಸಿದರು.

ಪಂಜಾಬ್‌ನಲ್ಲಿ ಬಿಜೆಪಿ ಶಾಸಕರು, ಸಂಸದರು ಎಲ್ಲೇ ಹೋದರು ರೈತರು ಮುತ್ತಿಗೆ ಹಾಕುತ್ತಾರೆ. ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸುತ್ತಾರೆ. ರಾತ್ರಿ ಹೊತ್ತು ಅವರು ಕಾರ್ಯಕ್ರಮಗಳನ್ನು ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಇದನ್ನು ದೇಶದ್ಯಂತ ವಿಸ್ತರಿಸಬೇಕು ಎಂದರು.

ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್‌ರವರು ಸಮಾರೋಪ ನುಡಿಗಳನ್ನಾಡುತ್ತಾ “ಇದೊಂದು ಐತಿಹಾಸಿಕ ಸಂದರ್ಭ, ಇದರಲ್ಲಿ ರೈತ ಸಮುದಾಯ ಮಾಡು ಇಲ್ಲವೆ ಮಡಿ ಎಂಬ ಹೋರಾಟಕ್ಕಿಳಿದಿದೆ. ಈ ಸಂದರ್ಭದಲ್ಲಿ ಅನ್ನದ ರುಣ ಹೊಂದಿರುವ ನಾವೆಲ್ಲರೂ ಅವರೊಂದಿಗೆ ಕೈಜೋಡಿಸುವುದು ನಮ್ಮ ಕರ್ತವ್ಯ, ನಮ್ಮ ದೇಶ ಮತ್ತು ಅನ್ನದಾತರ ಉಳಿವಿಗಾಗಿ ಒಗ್ಗೂಡೋಣ” ಎಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು, ನವೆಂಬರ್ 10ರಿಂದ 20ರವೆಗೆ ಕರ್ನಾಟಕ ಜನಶಕ್ತಿ ‘ಹಳ್ಳಿ ಉಳಿಸಿ’ ಅಭಿಯಾನ ಹಮ್ಮಿಕೊಂಡಿರುವುದಾಗಿ ತಿಳಿಸಿದರು.


ಇದನ್ನೂ ಓದಿ: ದೆಹಲಿ ಹೋರಾಟದಲ್ಲಿ ಮೃತಪಟ್ಟ ಹೆಚ್ಚಿನ ರೈತರು 3 ಎಕರೆಗಿಂಲೂ ಕಡಿಮೆ ಜಮೀನು ಹೊಂದಿರುವವರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...