Homeದಲಿತ್ ಫೈಲ್ಸ್ದಲಿತರು ಭಾಗವಹಿಸುತ್ತಾರೆ ಎಂಬ ಭಯದಲ್ಲಿ ಜಾತ್ರೆ ರದ್ದು?: ದಲಿತ ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಇಂದಿಗೂ ಸಾಮಾಜಿಕ...

ದಲಿತರು ಭಾಗವಹಿಸುತ್ತಾರೆ ಎಂಬ ಭಯದಲ್ಲಿ ಜಾತ್ರೆ ರದ್ದು?: ದಲಿತ ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಇಂದಿಗೂ ಸಾಮಾಜಿಕ ಬಹಿಷ್ಕಾರ

ಸ್ಪೃಶ್ಯತೆಯನ್ನು ತೊಲಗಿಸಲು ಸಾಧ್ಯವಿಲ್ಲದಿದ್ದರೆ, ಸರಕಾರಿ ಯೋಜನೆಗೆ ತನ್ನ ಮಗನ ಹೆಸರಿಟ್ಟು ಏನು ಪ್ರಯೋಜನ ಎಂದು ವಿನಯನ ತಂದೆ ಚಂದ್ರಶೇಖರ ಶಿವಪ್ಪ ಕೇಳುತ್ತಾರೆ

- Advertisement -
- Advertisement -

ಕರ್ನಾಟಕವು ತನ್ನ ಅಸ್ಪೃಶ್ಯತಾ ವಿರೋಧಿ ಕಾರ್ಯಕ್ರಮಕ್ಕೆ ಈ ದಲಿತ ಬಾಲಕನ ಹೆಸರಿಟ್ಟಿದೆ. ಆದರೆ, ಆದದ್ದೇನು? ಆ ಊರಿನ ಗ್ರಾಮಸ್ಥರು ಆ ಬಾಲಕನ ಕುಟುಂಬಕ್ಕೇ ಸಾಮಾಜಿಕ ಬಹಿಷ್ಕಾರ ಹಾಕಿ ಹೊರದಬ್ಬಿದ್ದಾರೆ!

2021ರ ಸೆ. 4 ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ದಲಿತ ಸಮುದಾಯದ ವಿನಯ ಹೆಸರಿನ ಮಗುವೊಂದು ಆಕಸ್ಮಿಕವಾಗಿ ದೇವಸ್ಥಾನ ಪ್ರವೇಶಿಸಿದಕ್ಕೆ ಮಗುವಿನ ಕುಟುಂಬಕ್ಕೆ ಗ್ರಾಮಸ್ಥರು ದಂಡ ವಿಧಿಸಿದ್ದರು. ದೇವಸ್ಥಾನ ಶುದ್ಧಿಕರಿಸಿ ಅಸ್ಪೃಶ್ಯತೆ ಆಚರಿಸಿದ್ದರು. ಈ ಘಟನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕ ಸರಕಾರವು ತನ್ನ ಅಸ್ಪೃಶ್ಯತಾ ವಿರೋಧಿ ಯೋಜನೆಗೆ ಯಾವ ದಲಿತ ಹುಡುಗನ ಹೆಸರಿಟ್ಟಿತೋ, ಅದೇ ಹುಡುಗನ ಕುಟುಂಬವನ್ನೇ ಊರವರು ಸಾಮಾಜಿಕ ಬಹಿಷ್ಕಾರ ಹಾಕಿ ಹೊರದಬ್ಬಿದ ಘಟನೆಯೊಂದನ್ನು “ಇಂಡಿಯನ್ ಎಕ್ಸ್‌ಪ್ರೆಸ್” ವರದಿ ಮಾಡಿದೆ.

ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಸ್ಪೃಶ್ಯತೆಯ ಕುರಿತು ಅರಿವು ಮೂಡಿಸುವ “ವಿನಯ ಸಾಮರಸ್ಯ ಯೋಜನೆ”ಯನ್ನು ಬಸವರಾಜ ಬೊಮ್ಮಾಯಿ ಸರಕಾರ ಘೋಷಿಸಿದ್ದು, ಇದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾದ ಎಪ್ರಿಲ್ 14ರಂದು ಚಾಲನೆಗೊಳ್ಳಲಿದೆ.

ಮೂರು ವರ್ಷಗಳ ದಲಿತ ಮಗು ವಿನಯ, ಮಳೆಯಿಂದ ರಕ್ಷಣೆ ಪಡೆಯಲು ಆಕಸ್ಮಿಕವಾಗಿ ಕೊಪ್ಪಳ ಜಿಲ್ಲೆಯಲ್ಲಿ ಇದಕ್ಕಾಗಿ ಗ್ರಾಮದ ಮುಖಂಡರು ಅವನ ಕುಟುಂಬಕ್ಕೆ 25,000 ರೂ.ಗಳ ದಂಡ ವಿಧಿಸಿತ್ತು. ಮಾಧ್ಯಮಗಳಲ್ಲಿ ವರದಿಯಾದ ನಂತರ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಗಳ ಬಂಧನವೂ ಆಗಿತ್ತು. ಆದರೆ ಆ ಕುಟುಂಬಕ್ಕೆ ನ್ಯಾಯ ಸಿಕ್ಕಿತೆ? ಇಲ್ಲ ಇದೀಗ ಅದು ಸಾಲದು ಎಂಬಂತೆ ಈ ಕುಟುಂಬವು ಇನ್ನೂ ಹೆಚ್ಚಿನ ದೌರ್ಜನ್ಯಕ್ಕೆ ಒಳಗಾಗಿದೆ.

ಈ ಘಟನೆಯ ನಂತರ ಮುಖ್ಯವಾಗಿ ಗಾಣಿಗ ಸಮುದಾಯದವರೇ ಇರುವ 1,500ರಷ್ಟು ಗ್ರಾಮಸ್ಥರು ಈ ದಲಿತ ಕುಟುಂಬಕ್ಕೆ ಎಂತಾ ಕಿರುಕುಳ ನೀಡಿದ್ದಾರೆಂದರೆ, ಆ ಕುಟುಂಬ ತನ್ನ ಕೃಷಿ ಜಮೀನನ್ನೂ, ಊರನ್ನೂ ಬಿಟ್ಟುಹೋಗಿದೆ.

ಈ ಜಾತಿ ತಾರತಮ್ಯ ಮತ್ತು ದೌರ್ಜನ್ಯದ ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾದವರು ಜಾಮೀನಿನ ಮೇಲೆ ಹೊರಬಂದಿದ್ದು, ಈಗ ಗ್ರಾಮವನ್ನೇ ಆಳುತ್ತಿದ್ದಾರೆ ಎಂದು ವಿನಯನ ಕುಟುಂಬದವರು ಹೇಳುತ್ತಾರೆ..

ದಲಿತರು ಭಾಗವಹಿಸಬಹುದು ಎಂಬ ಭಯದಿಂದ ವರ್ಷ ವರ್ಷವೂ ನಡೆಯುವ ಊರ ಜಾತ್ರೆಯನ್ನೂ ರದ್ದುಗೊಳಿಸಲಾಗಿದೆ ಎಂದು ಅವರು ಹೇಳುತ್ತಾರೆ. ಆದರೆ, ಜಾತ್ರೆ ರದ್ದಾಗಿರುವ ಬಗ್ಗೆ ತಮಗೇನೂ ಮಾಹಿತಿಯಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳಿರುವುದಾಗಿ ವರದಿ ತಿಳಿಸುತ್ತದೆ.

“ಊರಲ್ಲಿ ನಡೆದ ಎಲ್ಲಾ ಕೆಟ್ಟದಕ್ಕೂ ನಮ್ಮ ಕುಟುಂಬವೇ ಕಾರಣ ಎಂದು ಊರವರು ದೂರುತ್ತಾರೆ. ಒಂದು ವೇಳೆ ಏನಾದರೂ ತುರ್ತಾದ ಉಪಕಾರ ಆಗಬೇಕಿದ್ದರೂ, ಅದು ಈ ಊರಿನಲ್ಲಿ ಸಿಗುವ ಸಾಧ್ಯತೆ ಇಲ್ಲ” ಎಂದವರು ಹೇಳುತ್ತಾರೆ. ಈ ಕುಟುಂಬವು ಈಗ ಚಂದ್ರಶೇಖರ ಅವರ ತಾಯಿಯ ಊರಾದ ಯಲಬುರ್ಗಾದಲ್ಲಿ ವಾಸಿಸುತ್ತಿದೆ.

ಚಂದ್ರಶೇಖರ ಅವರಿಗೆ ಸರಕಾರದಿಂದ ಒಂದು ಲಕ್ಷ ರೂ. ಪರಿಹಾರ ದೊರೆತಿದ್ದು, ಅವರೊಂದು ಕಾರು ತೊಳೆಯುವ ಅಂಗಡಿಯನ್ನು ಆರಂಭಿಸುವ ಯೋಚನೆ ಹೊಂದಿದ್ದಾರೆ. ಆದರೆ, ಮಿಯಾಪುರದಲ್ಲಿರುವ ತನ್ನ ಜಮೀನನ್ನು ರಕ್ಷಿಸಲು ಅಥವಾ ಬದಲಿ ಜಮೀನು ಪಡೆಯಲು ಸರಕಾರದೊಂದಿಗೆ ನಡೆಸಿದ ಪ್ರಯತ್ನ ಫಲ ನೀಡಿಲ್ಲ ಎಂದವರು ಹೇಳುತ್ತಾರೆ.

“ನಾನಿನ್ನು ಸರಕಾರಿ ಅಧಿಕಾರಿಗಳ ಮುಂದೆ ಕೈಯೊಡ್ಡಿ ಬೇಡಲು ಹೋಗುವುದಿಲ್ಲ. ನನಗಿದು ಈಗ ಸಾಕಾಗಿ ಹೋಗಿದೆ” ಎನ್ನುತ್ತಾರವರು.

“ಅವರಿಗೆ ಯಲಬುರ್ಗಾದಲ್ಲಿ ಜಮೀನು ದೊರಕಿಸಿ, ಮನೆ ಕಟ್ಟಲು ನೆರವಾಗುವ ಪ್ರಯತ್ನ ಮಾಡಲಾಗಿದೆ” ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.

ಈ ಪ್ರಕರಣದಲ್ಲಿ ಹೋರಾಟ ನಡೆಸಿದ್ದ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕರಿಯಪ್ಪ ಗುಡಿಮನಿಯವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಸರ್ಕಾರಕ್ಕೆ ಅಶ್ಪಶ್ಯತೆ ಆಚರಣೆ ತಡೆಗಟ್ಟುವ ನಿಜವಾದ ಕಾಳಜಿ ಇದ್ದಲ್ಲಿ, ರಾಜ್ಯದ ಸಮಸ್ತ ಜನರಲ್ಲಿ ಕಾನೂನು ಅರಿವು ಮೂಡಿಸಬೇಕಿದೆ. ಜಿಲ್ಲಾಡಳಿತ ಜಾತೀಯತೆ ಕ್ರೂರ ಆಚರಣೆ ಎಂಬುದಾಗಿ ಅರಿವು ಮೂಡಿಸಬೇಕು. ಜಾತಿ ದೌರ್ಜನ್ಯವೆಸಗಿದವರಿಗೆ ಕಠಿಣ ಶಿಕ್ಷೆ ಇದೆ ಎಂದು ದೊಡ್ಡ ದೊಡ್ಡ ಹೋರ್ಡಿಂಗ್‌ಗಳ ಮೂಲಕ, ಟಿವಿ-ಪತ್ರಿಕೆ ಜಾಹೀರಾತುಗಳ ಮೂಲಕ ಜನರಿಗೆ ಅರಿವು ಮತ್ತು ಎಚ್ಚರಿಕೆ ಮೂಡಿಸಬೇಕು” ಎಂದರು.

ಜಾತಿಯನ್ನು ಮನುಷ್ಯರು ಸೃಷ್ಟಿಸಿದ್ದಾರೆಯೆ ಹೊರತು ದೇವರಲ್ಲ. ಹಾಗಾಗಿ ದಲಿತ ದಮನಿತರ ಮೇಲೆ ದೌರ್ಜನ್ಯವೆಸಗುವುದು ಅಪರಾಧವಾಗಿದೆ ಎಂದು ಸವರ್ಣಿಯ ಸಮುದಾಯಗಳಿಗೆ ಮನವರಿಕೆ ಮಾಡಿಕೊಡಬೇಕಿದೆ. ಅದೇ ಸಂದರ್ಭದಲ್ಲಿ ದಲಿತ ದಮನಿತರು ಆರ್ಥಿಕವಾಗಿ-ಸಾಮಾಜಿಕವಾಗಿ ಮೇಲೆತ್ತಲು ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಬೇಕು. ಅದೇ ಸಂದರ್ಭದಲ್ಲಿ ಸಮಾನತೆ-ಸಾಮರಸ್ಯದ ಕಾರ್ಯಕ್ರಮಗಳನ್ನು ಪ್ರಜ್ಞಾಪೂರ್ವಕವಾಗಿ ಏರ್ಪಡಿಸಬೇಕು. ಅದನ್ನು ಸರ್ಕಾರ ಜಾರಿಗೆ ತರುತ್ತಿರುವ ವಿನಯ ಸಾಮರಸ್ಯ ಯೋಜನೆಯನ್ನು ಪರಿಣಾಮಕಾರಿ ಜಾರಿಗೆ ತರಬೇಕು ಎಂದು ಕರಿಯಪ್ಪ ಗುಡಿಮನಿ ಒತ್ತಾಯಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ; ಕೊಪ್ಪಳದಲ್ಲಿ ದಲಿತ ಮಗು ದೇವಸ್ಥಾನ ಪ್ರವೇಶಿಸಿದಕ್ಕೆ ದಂಡ ಪ್ರಕರಣ: ದೂರು ದಾಖಲಿಸದಕ್ಕೆ ದಲಿತ ಸಂಘಟನೆಗಳ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಯ್ಯೋ ….ನಮ್ಮೂರಲ್ಲಿ ದಲಿತರು ದೈವಕ್ಷೇತ್ರ ಪ್ರವೇಶ ಮಾಡ್ತಾರೆಂದು ಆ ಕ್ಷೇತ್ರವನ್ನೇ ಮುಚ್ಚಿದ್ದಾರೆ. ೨೦೧೮ ರಿಂದ ನಮ್ಮ ಗ್ರಾಮ ದೈವಸ್ಥಾನ ಮುಚ್ಚಲ್ಪಟ್ಟಿದೆ. ಇಲ್ಲಿಯವರೇನೂ ಎಲ್ಲಿಗೂ ಓಡಿಹೋಗಿಲ್ಲ. ನಿರಂತರ ಹೋರಾಟಗಳ ಮೂಲಕ ಮುಚ್ಚಿದವರ ನಿದ್ದೆಗೆಡಿಸುತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...