Homeಕರ್ನಾಟಕನಂದಿನಿ ಹಾಲಿನ ದರ ಲೀಟರ್‌ಗೆ 3 ರೂ. ಹೆಚ್ಚಿಸಲು ಹಾಲು ಒಕ್ಕೂಟಗಳ ಒತ್ತಾಯ

ನಂದಿನಿ ಹಾಲಿನ ದರ ಲೀಟರ್‌ಗೆ 3 ರೂ. ಹೆಚ್ಚಿಸಲು ಹಾಲು ಒಕ್ಕೂಟಗಳ ಒತ್ತಾಯ

- Advertisement -
- Advertisement -

ದೇಶದಲ್ಲಿ ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಹಾಲು ಸೇರಿದಂತೆ ಡೈರಿ ಉತ್ಪನ್ನಗಳ ಬೆಲೆಯನ್ನು ಏರಿಕೆ ಮಾಡಬೇಕು ಎಂದು ಹಾಲು ಉತ್ಪಾದಕ ಒಕ್ಕೂಟಗಳು ಬೇಡಿಕೆ ಇಟ್ಟಿವೆ. ಸರ್ಕಾರವು ಬೆಲೆ ಏರಿಕೆಗೆ ಒಪ್ಪಿಗೆ ನೀಡಿದರೆ ಪ್ಯಾಕೆಟ್‌ ಹಾಲಿನ ಬೆಲೆ ಮೂರು ರೂ. ಹೆಚ್ಚಾಗಲಿದೆ.

ಈಗಾಗಲೇ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಡೈರಿ ಉತ್ಪನ್ನಗಳ ಬೆಲೆಯೂ ಹೆಚ್ಚಾದರೆ ಜನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಸದ್ಯ ಒಂದು ಲೀಟರ್ ನಂದಿನಿ ಟೋನ್ಡ್ ಹಾಲಿನ (ಬ್ಲೂ ಪ್ಯಾಕೆಟ್) ಪ್ರಸ್ತುತ ಬೆಲೆ 37 ರೂ. ಇದೆ. ಬೆಲೆ ಏರಿಕೆಯಾದರೆ 40 ರೂ.ಗೆ ಏರಿಕೆಯಾಗಲಿದೆ. ಅದೇ ಸಮಯದಲ್ಲಿ, ಹಸಿರು ಮತ್ತು ಕೇಸರಿ ಬಣ್ಣದ ಹಾಲಿನ ಪ್ಯಾಕೆಟ್ ಮತ್ತು ಮೊಸರುಗಳ ಬೆಲೆಯೂ ಹೆಚ್ಚಾಗುತ್ತದೆ.

“ಕಳೆದ ಎರಡೂವರೆ ವರ್ಷಗಳಿಂದ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಿಂದಾಗಿ ಸಂಗ್ರಹಣೆ ಮತ್ತು ಪೂರೈಕೆ ವೆಚ್ಚವು 30ರಿಂದ 40 % ರಷ್ಟು ಏರಿಕೆಯನ್ನು ಕಂಡರೂ ಸಹ ಹಾಲಿನ ಬೆಲೆಯನ್ನು ಹೆಚ್ಚಿಸಿಲ್ಲ. 14 ಹಾಲು ಒಕ್ಕೂಟಗಳು ನಷ್ಟದ ಹಾದಿಯಲ್ಲಿ ಸಾಗುತ್ತಿವೆ. ಹಾಗಾಗಿ ಸರ್ಕಾರ ಈಗಲೇ ಹಾಲಿನ ದರ ಹೆಚ್ಚಳಕ್ಕೆ ಅನುಮತಿ ನೀಡಬೇಕು’’ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಂಸ್ಕೃತ ವಿವಿಗೆ ದುಡ್ಡು ಸುರಿಯುವ ಬದಲು ಸರ್ಕಾರಿ ಶಾಲೆ ಉಳಿಸಿ: ಕನ್ನಡಿಗರ ಆಗ್ರಹ

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಯ ಸಾಮಾನ್ಯ ಸಭೆಯಲ್ಲಿ ಲೀಟರ್‌ ಹಾಲಿಗೆ 3 ರೂಪಾಯಿ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಒಕ್ಕೂಟಗಳು ಒಂದು ಲೀಟರ್ ಹಾಲಿನ ಸಂಗ್ರಹಣೆ ದರವನ್ನು 30 ರಿಂದ 25 ರೂ.ಗೆ ಇಳಿಸಿವೆ. 3 ರೂಪಾಯಿ ಹೆಚ್ಚಳದಲ್ಲಿ ರೈತರಿಗೆ 2.5 ರೂಪಾಯಿ ಸಿಗಲಿದ್ದು, ಸಂಘಗಳು 50 ಪೈಸೆ ಉಳಿಸಿಕೊಳ್ಳಲಿವೆ ಎಂದು ಒಕ್ಕೂಟಗಳು ಹೇಳಿವೆ.

ಕೆಎಂಎಫ್ ಮತ್ತು ಇತರ ಹಾಲು ಒಕ್ಕೂಟಗಳು ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ಮಾರಾಟದಲ್ಲಿನ ಕುಸಿತದಿಂದಾಗಿ ಆರ್ಥಿಕವಾಗಿ ನಷ್ಟ ಅನುಭವಿಸಿವೆ ಎಂದು ಹೇಳಿದ್ದು, ಕಳೆದ ಆರು ತಿಂಗಳಿನಿಂದ ಬೆಲೆಗಳನ್ನು ಪರಿಷ್ಕರಿಸಲು ಪ್ರಯತ್ನಿಸುತ್ತಿವೆ.

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ನಿಯೋಗವೊಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತ್ತು.

ಸರ್ಕಾರವು ಹಾಲು ಒಕ್ಕೂಟಗಳ ಬೇಡಿಕೆಯನ್ನು ಒಪ್ಪಿಕೊಳ್ಳುವ ಸಾಧ್ಯತೆಯಿದ್ದು, 1 ಅಥವಾ 2 ರೂಪಾಯಿ ಹೆಚ್ಚಳಕ್ಕೆ ಅವಕಾಶ ನೀಡುತ್ತದೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: ರಾಮನಗರ: ರೇಷ್ಮೆ ಮಾರುಕಟ್ಟೆಯಲ್ಲಿ ಶೋಷಣೆ ಆರೋಪ – ಪತ್ರ ಅಭಿಯಾನ ಆರಂಭಿಸಿದ ರೈತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...