Homeಕರ್ನಾಟಕ"ಕರ್ನಾಟಕ ರಾಷ್ಟ್ರ ಸಮಿತಿ" ನೂತನ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ... ಎಚ್.ಎಸ್ ದೊರೆಸ್ವಾಮಿಯವರಿಂದ ಉದ್ಘಾಟನೆ

“ಕರ್ನಾಟಕ ರಾಷ್ಟ್ರ ಸಮಿತಿ” ನೂತನ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ… ಎಚ್.ಎಸ್ ದೊರೆಸ್ವಾಮಿಯವರಿಂದ ಉದ್ಘಾಟನೆ

- Advertisement -
- Advertisement -

ಜನಪರ ಹೋರಾಟಗಾರ ರವಿ ಕೃಷ್ಣ ರೆಡ್ಡಿಯವರ ನೇತೃತ್ವದಲ್ಲಿ “ಕರ್ನಾಟಕ ರಾಷ್ಟ್ರ ಸಮಿತಿ” ಎಂಬ ನೂತನ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತರಲಾಗಿದೆ. ಕೆ.ಆರ್.ಎಸ್ ಎಂದು ಕರೆಯಲ್ಪಡುವ ಈ ಪಕ್ಷವು ಪ್ರಾದೇಶಿಕ-ಪ್ರಾಮಾಣಿಕ ಎಂಬ ಘೋಷವಾಕ್ಯಗಳನ್ನು  ಹೊಂದಿದ್ದು ಮುಂಬರುವ ಚುನಾವಣೆಗಳಲ್ಲಿ ಸಕ್ರಿಯವಾಗಿ ಸ್ಪರ್ಧಿಸಲಿದೆ.

ಇಂದು ಬೆಂಗಳೂರಿನಲ್ಲಿ ಪಕ್ಷದ ಉದ್ಘಾಟನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್ ದೊರೆಸ್ವಾಮಿಯವರು “ಇಂದು ಬಡತನ ಹೆಚ್ಚಾಗುತ್ತಿದೆ. ನಿರುದ್ಯೋಗ ಮಿತಿ ಮೀರುತ್ತಿದೆ. ದೇಶದ ಸಂಪತ್ತನ್ನೆಲ್ಲ ಕೇವಲ ಶೇ.10 ರಷ್ಟು ಜನ ನುಂಗಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಹಳಷ್ಟು ಜನ ಭೂಮಿ ವಸತಿಯಿಲ್ಲದೇ ಬೀದಿಪಾಲಾಗಿದ್ದಾರೆ. ಶಿಕ್ಷಣ, ಆರೋಗ್ಯ ನೀಡಬೇಕಾದ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ ಹಾಗಾಗಿ ಪರ್ಯಾಯ ಪಕ್ಷಗಳು ಅಗತ್ಯವಾಗಿವೆ” ಎಂದರು.

ನಾವು ಸರ್ಕಾರದ ಬಳಿ ಭಿಕ್ಷೆ ಕೇಳುತ್ತಿಲ್ಲ. ಬಡವರ ಹಕ್ಕು ಕೇಳುತ್ತಿದ್ದೇವೆ. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಜನರನ್ನು ಹೀಗೆ ಇಟ್ಟಿರುವುದಕ್ಕೆ ಈ ಸರ್ಕಾರಗಳಿಗೆ ನಾಚಿಕೆಯಾಗುವುದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು ಸರ್ಕಾರಗಳಿಗೆ ಕ್ರಿಮಿನಲ್ ಗಳು ಆಯ್ಕೆಯಾಗಿ ಹೋಗುತ್ತಿದ್ದಾರೆ. ಅವರ ಕೆಲಸ ಏನು? ಕೊಲೆ ಮಾಡುವುದಾ? ಎಂದು ಪ್ರಶ್ನಿಸಿದರು.

ನಮ್ಮ ಭಾರತದ ಸಂವಿಧಾನ ಏನು ಹೇಳುತ್ತದೆ? ನಾವು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತೇವೆಯೇ? ನಮಗೆ ಭವಿಷ್ಯವಿದೆಯೇ? ಗ್ಯಾಟ್ ಒಪ್ಪಂದ ಆಗಿದೆ. ಪಿ.ವಿ ನರಸಿಂಹರಾವ್ ಹೋಗಿ ಸಹಿ ಮಾಡಿದ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಆಳುವವರು, ಬಂಡವಾಳಿಗರು ಸೇರಿ ದೇಶವನ್ನು ಮಾರುತ್ತಿದ್ದಾರೆ. ನೆಲ ಜಲವನ್ನು ದೋಚುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಹಲವಾರು ಪಕ್ಷಗಳಿವೆ. ಅವುಗಳಲ್ಲಿ ಒಬ್ಬ ನಾಯಕನಾಗುತ್ತಾನೆ. ಉಳಿದವರು ಆಗುವುದಿಲ್ಲ. ನಾಯಕನಾದವನು ತನ್ನ ಸೀಟು ಭದ್ರಪಡಿಸಿಕೊಳ್ಳಲು ಮಾತ್ರ ಕೆಲಸ ಮಾಡುತ್ತಾನೆ. ನಮ್ಮಲ್ಲಿ ಹಾಗಾಗಬಾರದು. ನಾವು ಜನರಿಗಾಗಿ ಕೆಲಸ ಮಾಡುಬೇಕು, ಆಂತರೀಕ ಪ್ರಜಾಪ್ರಭುತ್ವ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜಕೀಯ ದಿವಾಳಿಯೆದ್ದಿದೆ. ನಾಯಕತ್ವದ ಅಭಾವವಿದೆ. ಇದಕ್ಕೆ ಪ್ರತಿಯಾಗಿ ಅವರು ಮಾಡಿದ ತಪ್ಪುಗಳನ್ನು ಗುರುತುಮಾಡಿ ಒಂದು ಆದರ್ಶಯುತ ರಾಜಕಾರಣವನ್ನು ನಾವು ಮಾಡಬೇಕಿದೆ. ನಾನು ಸವೋದಯವನ್ನು ಬಯಸುವವನು. ನಾನು ಬೇರೆ ಯಾವ ಪಕ್ಷಗಳ ಜೊತೆಗೂ ಇಲ್ಲ. ನೀವೆಲ್ಲರೂ ಒಂದು ಹೊಸ ದಾರಿ ತೋರಿಸಿದರೆ ಒಳ್ಳೆಯದು ಎಂದರು.

ನಿಮ್ಮ ಪಕ್ಷ ಚುನಾವಣೆ ಮತ್ತು ಹೋರಾಟ ಎರಡನ್ನು ಮಾಡಬೇಕು. ಕೇವಲ ಚುನಾವಣೆಗಳಿಗೆ ಸೀಮಿತರಾಗಬಾರದು. ದೇಶದ ಸಮಸ್ಯೆಗಳನ್ನು ಬಗೆಹರಿಸಲು ಹೋರಾಡಬೇಕು. ರಾಜ್ಯದಲ್ಲಿ ಭೂಮಿಗಾಗಿ ಚಳವಳಿ ನಡೆಯುತ್ತಿದೆ. ನೀವು ಕೈ ಜೋಡಿಸಬೇಕು. ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು, ಪ್ರಾಮಾಣಿಕವಾಗಿ ಕೆಲಸಮಾಡಿ ನಿಮಗೆ ಶುಭವಾಗಲಿ ಎಂದು ದೊರೆಸ್ವಾಮಿ ತಿಳಿಸಿದರು.

ಭ್ರಷ್ಟಚಾರ ವಿರೋಧಿ ಹೋರಾಟಗಾರರಾದ ಎಸ್.ಆರ್ ಹೀರೇಮಠರವರು ಮಾನತಾಡಿ ನಮ್ಮ ಜೀವನದುದ್ದಕ್ಕೂ ಇಂತಹ ಜನಪರ ಪ್ರಯೋಗಗಳಿಗೆ ಬೆಂಬಲವಿದೆ ಎಂದರು.

ಯಾವ ಕಾಲಘಟ್ಟದಲ್ಲಿ ಜೀವಿಸುತ್ತಿದ್ದೇವೆ ಎಂದರೆ ಕೆಲವೇ ದಿನಗಳ ಹಿಂದೆ ಇಡೀ ದೇಶವೇ ನೋಡುವಂತೆ ಕರ್ನಾಟಕದ ಮೂರು ಪಕ್ಷಗಳು ಮಾಡಿದ ರಾಜಕಾರಣ ನೋಡಿ ನಾವೆಲ್ಲರು ತಲೆತಗ್ಗಸಬೇಕು. 17 ಶಾಸಕರ ಜೊತೆ, ಮೂರು ಪಕ್ಷದ ನಾಯಕರು ವರ್ತಿಸಿದ ರೀತಿ, ರಾಜ್ಯಪಾಲರು ನಡೆದುಕೊಂಡ ವೈಖರಿ ಇಡೀ ರಾಜ್ಯಕ್ಕಾದ ಅವಮಾನವಾಗಿದೆ. ಪಾರ್ಟಿ ವಿಥ್ ಡಿಫರೆನ್ಸ್ ಎಂದು ಕರೆದುಕೊಳ್ಳುವ ಬಿಜೆಪಿಯವರು ಅತ್ಯಂತ ನಾಚಿಕೆಗೇಡಿನ ಆಪರೇಷನ್ ಕಮಲ ಮಾಡಿದ್ದರೆ ಎಂದರು.

ನನ್ನ ಜೀವಿತಾವಧಿಯಲ್ಲಿ ಎಂದೂ ಕೂಡ ರಾಜಕಾರಣ ಇಷ್ಟು ಕೀಳು ಮಟ್ಟಕ್ಕೆ ಇಳಿದಿರದಿಲ್ಲ. ಅಭಿವೃದ್ದಿ ಅನ್ನುವ ಹೆಸರಿನಲ್ಲಿ ಮಾಡಬಾರದ ಕೆಲಸ ಮಾಡಿ ಸೃಷ್ಟಿ ಮಾತೆಯ ಮೇಲೆ ಪ್ರಹಾರ ಮಾಡಿದ್ದೇವೆ. ಆಸೆ, ಅತಿ ಆಸೆ, ದುರಾಶೆಯಿಂದ ಪ್ರವಾಹವಾಗಿದೆ, ಪರಿಸರ ಸಮತೋಲನ ಕೆಡಿಸಿದ್ದೇವೆ. ಅದರ ಪರಿಣಾಮವನ್ನು ಈಗ ಅನಭವಿಸಬೇಕಾಗಿದೆ ಎಂದರು.

ಗಾಂಧೀಜಿಯವರು ಹೇಳಿದ ಹಾಗೆ ನಮಗೆ ಗುರಿ ಅಷ್ಟೇ ಮಹತ್ವವಲ್ಲ ದಾರಿಯೂ ಕೂಡ ಮುಖ್ಯ. ಸ್ವಾತಂತ್ರ್ಯ ಮತ್ತು ಸಮಾನತೆ ಎರಡು ಬೇಕು. ಇದಕ್ಕಾಗಿ ಈ ಪಕ್ಷ ಶ್ರಮಿಸಲಿ ಎಂದರು.

“ಕರ್ನಾಟಕ ರಾಷ್ಟ್ರ ಸಮಿತಿ”ಯ ಅಧ್ಯಕ್ಷರಾದ ರವಿಕೃಷ್ಙರೆಡ್ಡಿಯವರು ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಈ ಪಕ್ಷವನ್ನು ಸ್ಥಾಪಿಸಿದ್ದೇವೆ. ರಾಜ್ಯದಲ್ಲಿ ಜೆಸಿಬಿ ಪಕ್ಷಗಳ ದುರಾಡಳಿತದ ವಿರುದ್ಧ ಹೋರಾಡಲಿದ್ದೇವೆ, ಹೀಗಲ್ಲದಿದ್ದರೆ ಇನ್ಯಾವಾಗ? ನಾವಲ್ಲದಿದ್ದರೆ ಇನ್ಯಾರು? ಎಂದರು.

ಸುಪ್ರೀಂ ಕೋರ್ಟ್ ನ ನ್ಯಾಯವಾದಿಗಳಾದ ಶ್ರೀ ಕೆ.ವಿ ಧನಂಜಯರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. “ಕರ್ನಾಟಕ ರಾಷ್ಟ್ರ ಸಮಿತಿ”ಯ ಉಪಾಧ್ಯಕ್ಷರಾದ ಎಚ್.ಎಸ್ ಲಿಂಗೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ದೀಪಕ್ ಸಿ.ಎನ್, ಜಂಟಿ ಕಾರ್ಯದರ್ಶಿಗಳಾದ ರಘುಪತಿ ಭಟ್, ಮಲ್ಲಿಕಾರ್ಜುನ್ ಬಿ.ಎಸ್, ಖಜಾಂಚಿ ಅರವಿಂದ್ ಕೆ.ಬಿ ಉಪಸ್ಥಿತರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...