Homeಎಕಾನಮಿಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕಾದ ಭಾರೀ ಅನ್ಯಾಯ : ಪರಿಹಾರವೇನು

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕಾದ ಭಾರೀ ಅನ್ಯಾಯ : ಪರಿಹಾರವೇನು

ಕರ್ನಾಟಕ ಮೊದಲಿನಿಂದಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ನೇರ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಮತ್ತು ದೆಹಲಿಯ ನಂತರ ಮೂರನೇ ಸ್ಥಾನದಲ್ಲಿದೆ.

- Advertisement -
- Advertisement -

ನಮಗೆಲ್ಲಾ ತಿಳಿದಿರುವ ಹಾಗೆ ನಮ್ಮ ದೇಶ ಭಾರತ ಹಲವು ರಾಜ್ಯಗಳು ಸೇರಿ ಆಗಿರುವಂತದು. ಹಾಗೆಯೇ ನಮ್ಮ ಕರ್ನಾಟಕ ರಾಜ್ಯವೂ ಭಾರತದ ಅವಿಭಾಜ್ಯ ಅಂಗ.

ಇಡೀ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿ ಹೊತ್ತ ಭಾರತದ ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಜ್ಯಗಳ ಸಮಗ್ರ ಅಭಿವೃದ್ಧಿಗೆ ಅವುಗಳ ಅಗತ್ಯಕ್ಕನುಗುಣವಾಗಿ ಆರ್ಥಿಕ ಬೆಂಬಲವನ್ನು ಕೊಡುವ ಕರ್ತವ್ಯ ನಿಭಾಯಿಸಬೇಕಾಗಿರುತ್ತದೆ.

ಕೇಂದ್ರದ ಬೆಂಬಲವನ್ನು ಸದುಪಯೋಗಿಸಿಕೊಳ್ಳುವ ರಾಜ್ಯಗಳು ಸಮಗ್ರ ಅಭಿವೃದ್ಧಿ ಹೊಂದುತ್ತಾ ಅದರ ಫಲವಾಗಿ ತಮ್ಮ ರಾಜ್ಯಗಳಲ್ಲಿ ಹೆಚ್ಚು ಹೆಚ್ಚು ತೆರಿಗೆ ಸಂಗ್ರಹಿಸಲು ಶಕ್ತವಾಗುತ್ತವೆ. ಹೊಸ ಜಿಎಸ್ಟಿ ಪದ್ಧತಿ ಜಾರಿಗೆ ಬಂದಮೇಲೆ ಅಬಕಾರಿ ಸುಂಕ, ಪೆಟ್ರೋಲ್ ಸುಂಕ ಮತ್ತಿತರ ಕೆಲ ತೆರಿಗೆ ಹೊರತುಪಡಿಸಿ ಬಹುತೇಕ ಉಳಿದೆಲ್ಲಾ ವಲಯದ ತೆರಿಗೆಯನ್ನೂ ರಾಜ್ಯಗಳು ಕೇಂದ್ರಕ್ಕೆ ತಲುಪಿಸಿ ಅಲ್ಲಿಂದ ತಮ್ಮ ಪಾಲಿನ ಜಿಎಸ್ಟಿ ತೆರಿಗೆ ಪಾಲನ್ನು ಪಡೆದು ಅದನ್ನು ರಾಜ್ಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತವೆ.

ಹೀಗೆ ತಮ್ಮ ಪ್ರಯತ್ನ ಮತ್ತು ಕೇಂದ್ರದ ಆರ್ಥಿಕ ಬೆಂಬಲ ಇವೆರಡನ್ನೂ ಬಳಸಿ ಅಭಿವೃದ್ಧಿಯ ದಾರಿಯಲ್ಲಿ ಸರಿಯಾಗಿ ಮುನ್ನಡೆಯುತ್ತಿರುವಂತ ರಾಜ್ಯಗಳು ದೇಶದ ಒಟ್ಟಾರೆ ಅಭಿವೃದ್ಧಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿರುತ್ತವೆ. ಅಂತಹ ರಾಜ್ಯಗಳನ್ನು ಗುರುತಿಸಿ ಅವುಗಳಿಗೆ ಮತ್ತಷ್ಟು ಉತ್ತೇಜನ ನೀಡುವುದು ಕೇಂದ್ರದ ಆದ್ಯ ಕರ್ತವ್ಯವಾಗಿರಬೇಕಾಗಿರುತ್ತದೆ.

ಆದರೆ, ನಮ್ಮ ಕರ್ನಾಟಕದ ವಿಷಯದಲ್ಲಿ ಆಗುತ್ತಿರುವುದು ಇದಕ್ಕೆ ತದ್ವಿರುದ್ಧವಾಗಿದೆ. ಕರ್ನಾಟಕ ಮೊದಲಿನಿಂದಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ನೇರ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಮತ್ತು ದೆಹಲಿಯ ನಂತರ ಮೂರನೇ ಸ್ಥಾನದಲ್ಲಿದೆ. ದೇಶದ ಒಟ್ಟು ನೇರ ತೆರಿಗೆಯಲ್ಲಿ ಶೇ. 61ರಷ್ಟು ಈ ಮೂರು ರಾಜ್ಯಗಳಿಂದಲೇ ಬರುತ್ತಿದೆ ಮತ್ತು ದೇಶದ ಒಟ್ಟು ತೆರಿಗೆಯಲ್ಲಿ ನೇರ ತೆರಿಗೆಯ ಪಾಲು ಶೇ. 50ಕ್ಕಿಂತ ಹೆಚ್ಚಿದೆ.

ಇದು ಕರ್ನಾಟಕದ ಅಭಿವೃದ್ಧಿಯ ವೇಗವನ್ನು ಒಂದು ಮಟ್ಟಿಗೆ ತೋರುತ್ತದೆ. ಆರ್ಥಿಕತೆಯ ಜೊತೆಗೆ ಕರ್ನಾಟಕವು ಮಾನವ ಅಭಿವೃದ್ಧಿಯಲ್ಲೂ ಗಮನಾರ್ಹ ಬೆಳವಣಿಗೆ ಸಾಧಿಸಿದೆ. 1971 ರಿಂದ 2011 ರ ನಡುವೆ ಜನಸಂಖ್ಯೆ ಸ್ಫೋಟವನ್ನು ಕರ್ನಾಟಕ ಗಮನಾರ್ಹವಾಗಿ ತಡೆದಿದ್ದು 2011 ರ ವೇಳೆಗೆ ಒಂದು ಆರೋಗ್ಯಕರ ಜನಸಂಖ್ಯಾ ಬೆಳವಣಿಗೆಯ ಹಂತವನ್ನು ತಲುಪಿದೆ.

ಆದರೆ, ಕರ್ನಾಟಕದ ಈ ಸಮಗ್ರ ಅಭಿವೃದ್ಧಿಯೇ ಈ ರಾಜ್ಯಕ್ಕೆ ಈಗ ಮುಳುವಾಗಿ ಪರಿಣಮಿಸಿದೆ. ನಮ್ಮ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ಕೊಡಬೇಕಿದ್ದ ಕೇಂದ್ರವು ಅದರ ಬದಲಿಗೆ ಕೇಂದ್ರದ ಅನುದಾನದಲ್ಲಿ ಕಡಿತ ಮಾಡುವ ಮೂಲಕ ಶಿಕ್ಷೆ ವಿಧಿಸಿದೆ. ಹದಿನೈದನೇ ಹಣಕಾಸು ಆಯೋಗವು ರಾಜ್ಯಗಳಿಗೆ ಕೇಂದ್ರದ ಅನುದಾನ ನಿಗದಿ ಮಾಡಲು 2011 ರ ಜನಸಂಖ್ಯೆಯನ್ನು ಮಾನದಂಡವನ್ನಾಗಿ ಪರಿಗಣಿಸಿದೆ. 2011 ರ ಜನಗಣತಿಯ ಪ್ರಕಾರ ಹೆಚ್ಚಿನ ಜನಸಂಖ್ಯೆ ಇರುವ ರಾಜ್ಯಕ್ಕೆ ಹೆಚ್ಚಿನ ಅನುದಾನ. ಅಂದರೆ, ಸರಿಯಾದ ಅಭಿವೃದ್ಧಿ ಮಾರ್ಗದಲ್ಲಿ ಸಾಗಿ ಜನಸಂಖ್ಯೆಯನ್ನು ನಿಯಂತ್ರಿಸಿದ ಕರ್ನಾಟಕದಂತ ರಾಜ್ಯಕ್ಕೆ ಮತ್ತೂ ಹೆಚ್ಚಿನ ಪ್ರೋತ್ಸಾಹ ಕೊಡುವ ಬದಲು ಶಿಕ್ಷೆ ವಿಧಿಸಿದಂತಾಗಿದೆ.

ಈ ಹೊಸ ಮಾನದಂಡವನ್ನು ಅನುಸರಿಸಿದ ಕೇಂದ್ರ ಸರ್ಕಾರ ಈ ಸಾರಿಯ 2020-21 ರ ಬಜೆಟ್ ನಲ್ಲಿ ಹೋದ ವರ್ಷಕ್ಕಿಂತ 5,495 ಕೋಟಿ ರೂಪಾಯಿಗಳಷ್ಟು ಕಡಿಮೆ ಅನುದಾನವನ್ನು ಕರ್ನಾಟಕಕ್ಕೆ ನಿಗದಿಪಡಿಸಿದೆ. 2019-20 ರಲ್ಲಿ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು 36,675 ಕೋಟಿ ರೂಪಾಯಿಗಳಾಗಿದ್ದರೆ ಈ ವರ್ಷ ಅದನ್ನು 31,180 ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ.

ಇದರಿಂದಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಮನಗಂಡ ಹಣಕಾಸು ಆಯೋಗವೇ ಕೊರತೆ ಬೀಳುವ 5,495 ಕೋಟಿಗಳನ್ನು ವಿಶೇಷ ಅನುದಾನದ ಅಡಿಯಲ್ಲಿ ಕೊಡಬೇಕೆಂದು ಹೇಳಿದ್ದರೂ ಕೂಡ ಕೇಂದ್ರ ಸರ್ಕಾರ ಕೊಡುವ ಮನಸ್ಸು ಮಾಡುತ್ತಿಲ್ಲ.

ಇನ್ನು ಈ ಹೊಸ ಫಾರ್ಮುಲಾದಿಂದಾಗಿ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಕನಿಷ್ಟ ಮೂವತ್ತು ಸಾವಿರ ಕೋಟಿಗಳಷ್ಟು ಅನುದಾನದ ಕೊರತೆ ಬೀಳಲಿದ್ದು ರಾಜ್ಯದ ಅಭಿವೃದ್ಧಿಗೆ ಭಾರೀ ತೊಂದರೆಯಾಗಲಿದೆ.

ಇದರ ಜೊತೆಗೆ, ಈ 2019-20 ರ ಸಾಲಿನಲ್ಲಿ ಕರ್ನಾಟಕದ ಪಾಲಿಗೆ ಬರಬೇಕಿದ್ದ ಜಿಎಸ್ಟಿಯಲ್ಲಿ ಅಂದಾಜು ಹತ್ತುಸಾವಿರ ಕೋಟಿ ರೂಪಾಯಿಗಳಷ್ಟನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಆರ್ಥಿಕ ಹಿಂಜರಿತದ ನಡುವೆಯೂ ಕರ್ನಾಟಕ ರಾಜ್ಯದಲ್ಲಿ ತೆರಿಗೆ ಸಂಗ್ರಹ ಉತ್ತಮವಾಗಿಯೇ ಇದೆ (ಮೋಟಾರು ವಾಹನ ಮತ್ತು ಸ್ಟ್ಯಾಂಪ್ ಸುಂಕ ಹೊರತುಪಡಿಸಿ). ಆದರೂ ಕೇಂದ್ರ ರಾಜ್ಯದ ಪಾಲಿನ ಜಿಎಸ್ಟಿ ಹಣವನ್ನು ಯಾವಾಗ ಕೊಡಲಾಗುವುದೆಂದು ಹೇಳುತ್ತಿಲ್ಲ.

ಇದರಿಂದಾಗಿ, ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಭಾರೀ ಹಣದ ಕೊರತೆ ಬೀಳಲಿದೆ. ರಸ್ತೆಗಳ ಅಗಲೀಕರಣ, ಕುಡಿಯುವ ನೀರಿನ ಯೋಜನೆಗಳು, ತ್ಯಾಜ್ಯ ನಿರ್ವಹಣೆ, ಶಿಕ್ಷಣ ಮತ್ತು ಆರೋಗ್ಯ ಉನ್ನತೀಕರಣದಂತಹ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಬೀಳಲಿದೆ. ಅಭಿವೃದ್ಧಿ ಯೋಜನೆಗಳಿರಲಿ, ಈಗ ಸರ್ಕಾರ ನಡೆಸುತ್ತಿರುವ ಹಲವಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೇ ಹಣಕಾಸಿನ ಕೊರತೆ ಉಂಟಾಗುತ್ತದೆ.

ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ, ಕರ್ನಾಟಕದಲ್ಲಿ ಪ್ರವಾಹದಿಂದ ಆದ ನಷ್ಟ ಅಂದಾಜು 38,000 ಕೋಟಿ ರೂಪಾಯಿಗಳು. ಆದರೆ ಕೇಂದ್ರ ಸರ್ಕಾರ ಅದರಲ್ಲಿನ ಶೇಕಡಾ ಹತ್ತರಷ್ಟನ್ನೂ ಬಿಡುಗಡೆ ಮಾಡಲಿಲ್ಲ. ಅದರಿಂದಾಗಿ ಇಂದಿಗೂ ಪ್ರವಾಹ ಸಂತ್ರಸ್ತ ಮಕ್ಕಳು ಹಾಳುಬಿದ್ದ ಶಾಲೆಗಳಲ್ಲಿಯೇ ಕಲಿಯುವಂತ ಪರಿಸ್ಥಿತಿ ಇದೆ.

ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಅತ್ಯಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಅತ್ಯವಶ್ಯ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಸಾಲ ಮಾಡಬೇಕಾಗುತ್ತದೆ.

ಆದರೆ ಆರ್ಥಿಕ ನಿಯಮಗಳ ಪ್ರಕಾರ (FRBM – Fiscal responsibility and budget management) ರಾಜ್ಯ ಸರ್ಕಾರ ತನ್ನ ರಾಜ್ಯದ ಒಟ್ಟು ಜಿಡಿಪಿಯ ಗರಿಷ್ಟ (ಕರ್ನಾಟಕದ ಜಿಡಿಪಿ ಒಟ್ಟು 18 ಲಕ್ಷ ಕೋಟಿ ರೂಪಾಯಿಗಳು) ಶೇ.3 ರಷ್ಟು ಮಾತ್ರ ಸಾಲ ಮಾಡಬಹುದು.

ರಾಜ್ಯದ ಸಾಲ ಜಿಡಿಪಿಯ ಶೇ. 3 ರ ಮಿತಿಯೊಳಗಿದ್ದರೆ ಅದನ್ನು ಆರೋಗ್ಯಕರ ಆರ್ಥಿಕತೆ ಎಂದು ಪರಿಗಣಿಸಲಾಗುತ್ತದೆ. ಈಗ ಕರ್ನಾಟಕದ ಸಾಲ 42,000 ಕೋಟಿಗಳಷ್ಟಿದ್ದು ಗರಿಷ್ಠ 54,000 ಕೋಟಿಯ ತನಕ ಸಾಲ ಮಾಡಬಹುದಾಗಿರುತ್ತದೆ. ಅಂದರೆ ಈಗ ರಾಜ್ಯ ಸರ್ಕಾರ ಇನ್ನೂ 12,000 ಕೋಟಿಗಳಷ್ಟು ಸಾಲಮಾಡಬಹುದು. ಆದರೆ, ಅಷ್ಟು ದುಡ್ಡು ರಾಜ್ಯದ ಅಭಿವೃದ್ಧಿ ಕಾರ್ಯಕ್ಕೆ ಸಾಲದಿರುವುದರಿಂದ ಸರ್ಕಾರ FRBM ಮಿತಿಯನ್ನು ಮೀರಿ ಸಾಲ ಮಾಡಬೇಕಾಗುತ್ತದೆ. ಇದು ರಾಜ್ಯದ ಆರ್ಥಿಕತೆಯನ್ನು ಮತ್ತೂ ದುರ್ಬಲಗೊಳಿಸಲಿದೆ.

ಒಟ್ಟಾರೆಯಾಗಿ, ಮೊದಲಿಂದಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕ ಕೇಂದ್ರ ಸರ್ಕಾರದ ಅವಕೃಪೆಯಿಂದಾಗಿ ಅನ್ಯಾಯವಾಗಿ ಆರ್ಥಿಕ ಕ್ಷೋಭೆಗೆ ಸಿಲುಕಿ ಅಭಿವೃದ್ಧಿ ಹೊಂದಲು ಕಷ್ಟಪಡುವಂತಹ ಸ್ಥಿತಿ ಎದುರಾಗಿದೆ. ಒಂದು ಕಡೆ ತಾನು ವೇಗವಾಗಿ ಸಮಗ್ರ ಅಭಿವೃದ್ಧಿ ಹೊಂದುತ್ತಾ ಮತ್ತೊಂದು ಕಡೆ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಸಂಗ್ರಹಿಸಿ ಕೊಡುತ್ತಿದ್ದರೂ ಕೇಂದ್ರದ ತಪ್ಪು ನೀತಿಯಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಯಾವ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿವೆಯೋ ಆ ಸರ್ಕಾರಗಳು ತಮ್ಮ ಪಾಲಿನ ಜಿಎಸ್ಟಿ ಹಣಕ್ಕೋಸ್ಕರ ಕೇಂದ್ರದ ಮೇಲೆ ಸುಪ್ರೀಂಕೋರ್ಟ್ ಮೊರೆಹೋಗುವ ಧಮಕಿ ಹಾಕಿವೆ. ಆದರೆ, ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳು ತಮ್ಮದೇ ಪಕ್ಷದ ಕೇಂದ್ರ ಸರ್ಕಾರವನ್ನು ತಮ್ಮ ನ್ಯಾಯಯುತ ಪಾಲನ್ನು ಕನಿಷ್ಟ ಗಟ್ಟಿ ದನಿಯಲ್ಲಿಯೂ ಕೇಳಲಾಗದೆ ಉಳಿದಿವೆ (ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಆಗ ಕಾಂಗ್ರೆಸ್ ರಾಜ್ಯ ಸರ್ಕಾರಗಳ ಸ್ಥಿತಿಯೂ ಇದೇ ಆಗಿರುತ್ತಿತ್ತು). ನಮ್ಮ ಕರ್ನಾಟಕದಿಂದ ಇಪ್ಪತ್ತೈದು ಬಿಜೆಪಿ ಸಂಸದರಿದ್ದೂ ಕೂಡ ತನ್ನ ನ್ಯಾಯಯುತ ಪಾಲನ್ನು ಕೇಂದ್ರದಿಂದ ಪಡೆಯಲು ರಾಜ್ಯ ವಿಫಲವಾಗಿದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ನಮ್ಮ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಪಾಲನ್ನು ಗಟ್ಟಿ ದನಿಯಲ್ಲಿ ಕೇಳಿ ದಕ್ಕಿಸಿಕೊಳ್ಳಬೇಕಾದರೆ ನಮ್ಮ ರಾಜ್ಯದ್ದೇ ಒಂದು ಸ್ವಾಭಿಮಾನಿ, ಪ್ರಾಮಾಣಿಕ, ಪ್ರಬಲ ಪ್ರಾದೇಶಿಕ ಪಕ್ಷ ಅನಿವಾರ್ಯವಾಗಿ ಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...