Homeಕರ್ನಾಟಕಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಬೇಕು – ‘ಉದ್ಯೋಗಕ್ಕಾಗಿ ಯುವಜನರು’ ಏನು ಹೇಳುತ್ತಾರೆ?

ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಬೇಕು – ‘ಉದ್ಯೋಗಕ್ಕಾಗಿ ಯುವಜನರು’ ಏನು ಹೇಳುತ್ತಾರೆ?

- Advertisement -
- Advertisement -

ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗಾಗಿ ಎಂದು ಟ್ವಿಟ್ಟರ್ ಟ್ರೆಂಡಿಂಗ್ಗೆ ಕರೆ ಎನ್ನುವ ಈ ಸಂದೇಶಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tweetನ ಲಿಂಕ್:

ಹಲವು ಕನ್ನಡ ಹೋರಾಟಗಾರರು ಈ ಒಂದು ಪ್ರಚಾರಾಂದೋಲನಕ್ಕೆ ಕರೆ ಕೊಟ್ಟಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ಕಾರ್ಯಕರ್ತರನ್ನು ನಾನುಗೌರಿ.ಕಾಂ ಮಾತಾಡಿಸಿತು. ಅವರೇನು ಹೇಳುತ್ತಾರೆ ಬನ್ನಿ ನೋಡೋಣ.

‘ನಮ್ಮ ದೇಶ ಮಾತ್ರವಲ್ಲದೇ ಇಡೀ ಪ್ರಪಂಚಾದ್ಯಂತ ಇಂದು ನಿರುದ್ಯೋಗ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಇಂತಹಸಂದರ್ಭದಲ್ಲಿ ದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ನಿರುದ್ಯೋಗದ ಪ್ರಮಾಣ ಕಡಿಮೆಯೇ ಇದೆ. ಆದರೆಕರ್ನಾಟಕದಲ್ಲಿರುವ ಬಹುಪಾಲು ಉದ್ಯೋಗಗಳು ಅಭದ್ರವಾದವುಗಳಾಗಿವೆ. ಯಾವುದೇ ಸೌಲಭ್ಯಗಳಿಲ್ಲದೆ, ಕಡಿಮೆಸಂಬಳಕ್ಕೆ ದುಡಿಸಿಕೊಳ್ಳುವುದಲ್ಲದೇ ಇದರ ವಿರುದ್ಧ ದನಿಯೆತ್ತಿದ್ದರೆ ಅವರು ಕೆಲಸ ಕಳೆದುಕೊಳ್ಳಬೇಕಾದ ಅತಂತ್ರಸ್ಥಿತಿಯಲ್ಲಿದ್ದಾರೆ.’ ಎಂದು ಮಾತು ಶುರು ಮಾಡಿದ ಉದ್ಯೋಗಕ್ಕಾಗಿ ಯುವಜನರು ಸಂಚಾಲಕರಾದ ಸರೋವರ್ ಬೆಂಕಿಕೆರೆ ಅದನ್ನು ವಿಸ್ತರಿಸಿದರು.

‘ಇಂತಹ ಸಂದರ್ಭದಲ್ಲಿಯೇ ಕರ್ನಾಟಕಕ್ಕೇ ಅದರಲ್ಲೂ ಬೆಂಗಳೂರಿಗೆ ಹೊರಗಿನಿಂದ ಉದ್ಯೋಗ ಅರಸಿ ಬರುತ್ತಿರುವವಸಂಖ್ಯೆ ಬಹಳ ಹೆಚ್ಚಾಗಿದೆ. ಮುಖ್ಯವಾಗಿ ಉತ್ತರಪ್ರದೇಶ, ಬಿಹಾರ, ಗುಜರಾತ್ ಸೇರಿದಂತೆ ಉತ್ತರ ಭಾರತದ ಜನರುಅತ್ಯಧಿಕ ಸಂಖ್ಯೆಯಲ್ಲಿ ಬೆಂಗಳೂರಿನತ್ತ ವಲಸೆ ಬರುತ್ತಿದ್ದಾರೆ. ಉದ್ಯೋಗ ಹುಡುಕುವವರ ಸಂಖ್ಯೆ ಹೆಚ್ಚಾದಷ್ಟು ಉದ್ಯೋಗಭದ್ರತೆ ಕಡಿಮೆಯಾಗುತ್ತಿದೆ.’

‘ಕಡಿಮೆ ಸಂಬಳಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವುದರಿಂದ ಕಂಪನಿಗಳು ಹೆಚ್ಚು ಲಾಭ ಮಾಡಲುಸಾಧ್ಯವಾಗುವುದಲ್ಲದೇ ಅವರು ಸಂಘ ಕಟ್ಟಿಕೊಂಡು ಹಕ್ಕು ಕೇಳುವಂತಿಲ್ಲ. ಒಂದು ವೇಳೆ ಯಾರಾದರೂ ನೌಕರರುಪ್ರತಿಭಟಿಸಲು ಮುಂದಾದರೆ ಅವರನ್ನು ಸುಲಭವಾಗಿ ಕೆಲಸದಿಂದ ವಜಾ ಮಾಡಬಹುದು. ಏಕೆಂದರೆ ಇನ್ನೂ ಕಡಿಮೆಸಂಬಳ ಕೊಟ್ಟರೂ ಸಹ ಕೆಲಸಕ್ಕೆ ಸೇರಲು ಹೊರಗಡೆ ದೊಡ್ಡ ದಂಡೇ ಕಾಯುತ್ತಿದೆಯಲ್ಲ?’

ಆದರೆ ‘ಉತ್ತರ ಭಾರತದ ಈ ಜನರು ವಲಸೆಯಿಂದ ಅವರಿಗೂ ನಮಗೂ ಇಬ್ಬರಿಗೂ ಅಪಾಯಗಳಿವೆ’ ಎನ್ನುತ್ತಾರೆ ಉದ್ಯೋಗಕ್ಕಾಗಿ ಯುವಜನರು ಕಾರ್ಯಕರ್ತ ಅನಿಲ್ ಕುಮಾರ್ ಚಿಕ್ಕದಾಳವಾಟ್ಟ. ‘ಬಹಳಷ್ಟು ಕಂಪನಿಗಳು ಬೇರೆರಾಜ್ಯದ ಜನರಿಗೆ ಮೊದಲ ಆದ್ಯತೆ ನೀಡುತ್ತಾರೆ. ಏಕೆಂದರೆ ಅವರು ಪರಕೀಯರಾದ್ದರಿಂದ ಒಗ್ಗಟ್ಟು ಇರುವುದಿಲ್ಲ, ಸಂಘಕಟ್ಟುವುದಿಲ್ಲ ಎಂಬುದಾಗಿದೆ. ಇದರಿಂದ ಅವರ ಕಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವುದಲ್ಲದೇ ಕಡಿಮೆ ಸಂಬಳಕ್ಕೆಜೀತ ಮಾಡಿಸಬಹದು. ಇಲ್ಲಿನ ಸ್ಥಳೀಯರಾದರೆ ಮೋಸ ಮಾಡಲು ಸಾಧ್ಯವಿಲ್ಲ, ಸುಲಭಕ್ಕೆ ಕೆಲಸದಿಂದ ತೆಗೆಯಲುಸಾಧ್ಯವಿಲ್ಲವೆಂಬ ಮನೋಭಾವ ಬಹಳಷ್ಟು ಕಂಪನಿಗಳದು’.

‘ಒಟ್ಟಾರೆಯಾಗಿ ಲಾಭ, ಅತಿಹೆಚ್ಚಿನ ಲಾಭಕ್ಕಾಗಿ ಈ ಬಂಡವಾಳಶಾಹಿ ಕಂಪನಿಗಳು ಸರ್ಕಾರಗಳ ಬೆಂಬಲದೊಂದಿಗೆಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ನಿರುದ್ಯೋಗ, ಅರೆ ನಿರುದ್ಯೋಗ ಹೆಚ್ಚಳಗೊಳ್ಳಲು ಕಾರಣರಾಗುತ್ತಿದ್ದಾರೆ. ಇನ್ನುಸರ್ಕಾರಗಳು ಸಹ ಚುನಾವಣಾ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಯ ಭರವಸೆಗಳನ್ನು ನೀಡುವುದು ಬಿಟ್ಟರೆನಿಜವಾಗಿಯೂ ಸುಭದ್ರ ಉದ್ಯೋಗ ಸೃಷ್ಟಿಸುವತ್ತ ಗಮನ ಹರಿಸುತ್ತಿಲ್ಲ. ಇದರಿಂದ ನರಳುವವರು ಬಡವರು,ಹಿಂದುಳಿದವರು, ಮಹಿಳೆಯರು ಮತ್ತು ತಳಸಮುದಾಯದವರೇ ಆಗಿದ್ದಾರೆ’.

‘ಈ ಹಿನ್ನೆಲೆಯಲ್ಲಿ ತಮಿಳು ನಾಡಿನಲ್ಲಿ, ಅಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ತಮಿಳರಿಗೆ ಮೀಸಲಾಗಬೇಕೆಂದು ಆಗ್ರಹಿಸಿಹೋರಾಟ ಆರಂಭಿಸಿದ್ದಾರೆ. ಹಿಂದಿ ವಿರುದ್ಧದ ಹೋರಾಟ, ಏಕ ಸಂಸ್ಕøತಿಯ ವಿರುದ್ಧದ ಹೋರಾಟದಲ್ಲಿ ಮೊದಲಿಗರಾಗಿರುವ ದ್ರಾವಿಡರಿಂದ ಸ್ಫೂರ್ತಿ ಪಡೆದು ಕನ್ನಡ ನಾಡಿನಲ್ಲೂ ಇದನ್ನು ಪಸರಿಸಲು ಕನ್ನಡ ಅಭಿಮಾನಿಗಳುಮುಂದಾಗಿದ್ದಾರೆ. ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು ಎಂಬುದು ಅವರ ಆಶಯ. ಇದಕ್ಕೆ ನಮ್ಮ ಬೆಂಬಲವೂ ಇದೆ, ಆದರೆ ಇದು ಸ್ಥಳೀಯರು ವರ್ಸಸ್ ಹೊರಗಿನವರು ಎಂಬ ಸಂಘರ್ಷಕ್ಕೆ ಕಾರಣವಾಗುವ ಬದಲು, ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಮಧ್ಯಪ್ರವೇಶಿಸಿದರು ಸರೋವರ್.

‘ಒಟ್ಟಾರೆ ಉದ್ಯೋಗಗಳ ಸಂಖ್ಯೆ ಹೆಚ್ಚಾದಲ್ಲಿ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ಉದ್ಯೋಗಗಳುಸೃಷ್ಟಿಯಾಗುವುದರ ಬದಲಿಗೆ ಕಡಿತವಾಗುತ್ತಿರುವುದರಿಂದ ಈ ಸಮಸ್ಯೆ ದಿನೇ ದಿನೇ ಉಲ್ಭಣಗೊಳ್ಳುತ್ತಿದೆ. ಕೆಲವೊಮ್ಮೆಈ ಸಮಸ್ಯೆಗೆ ಸರ್ಕಾರವನ್ನು, ಅವರ ಆರ್ಥಿಕ ನೀತಿಗಳನ್ನು ಟೀಕಿಸುವುದರ ಬದಲು ಬೇರೆ ರಾಜ್ಯದ ವಲಸಿಗರನ್ನುದೂಷಿಸುವುದು ನಡೆದಿದೆ. ಇದು ಸರಿಯಾದುದ್ದಲ್ಲ. ಅವರು ಸಹ ಸರ್ಕಾರದ ನಿರ್ಲಕ್ಷ್ಯತನದ ಕಾರಣದಿಂದಾದ ಬಡವರೆಹೊರತು ಮತ್ಯಾರು ಅಲ್ಲ. ಒಟ್ಟಾರೆ ನಮ್ಮ ಪಾಲಿಸಿಗಳು ಬದಲಾಗದ ಹೊರತು ಪರಿಸ್ಥಿತಿ ಬದಲಾಗುವುದಿಲ್ಲ ಅನ್ನುವುದಕಟುವಾಸ್ತವವಾಗಿದೆ.

ಆದರೆ ಇದೇ ಸಂದರ್ಭದಲ್ಲಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ಈ ನಾಲ್ಕು ರಾಜ್ಯಗಳೇಉಳಿದೆಲ್ಲಾ ರಾಜ್ಯಗಳು ಕಟ್ಟುವಷ್ಟು ತೆರಿಗೆಯನ್ನು ಕಟ್ಟುತ್ತೇವೆ. ಆದರೆ ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಬರುವ ಅನುದಾನದವಿಷಯದಲ್ಲಿ ಮಾತ್ರ ತಾರತಮ್ಯ ಮಾಡಲಾಗುತ್ತಿದೆ. ಒಂದು ಒಕ್ಕೂಟ ವ್ಯವಸ್ಥೆಯಾಗಿ ಸರಿಯಾಗಿ ನಡೆಸಿಕೊಳ್ಳಬೇಕಾದಕೇಂದ್ರ ಸರ್ಕಾರವು ಉತ್ತರದ ರಾಜ್ಯಗಳ ಕಣ್ಣಿಗೆ ಬೆಣ್ಣೆ, ದಕ್ಷಿಣದ ರಾಜ್ಯಗಳ ಕಣ್ಣಿಗೆ ಸುಣ್ಣ ಎಂಬ ರೀತಿ ವರ್ತಿಸುತ್ತಿದೆ.ರೈತರ ಸಾಲಮನ್ನಾ, ಅಂತರಾಜ್ಯ ನದಿಗಳ ವಿವಾದ, ಹಿಂದಿ ಹೇರಿಕೆಯ ವಿಷಯದಲ್ಲಿ ಇದು ಸ್ಪಷ್ಟವಾಗಿದೆ.’

ಇಂತಹ ಸಂದರ್ಭದಲ್ಲಿ ತಮಿಳುನಾಡು ಇದೆಲ್ಲದರ ವಿರುದ್ಧ ದನಿಯೆತ್ತುತ್ತಿದೆ. ಕರ್ನಾಟಕವೂ ಕೈಜೋಡಿಸುತ್ತಿದೆ. ಇದರಜೊತೆಗೇನೆ ಸ್ಥಳೀಯರು ಎಂದರೇನು, ಕರ್ನಾಟಕದವರು ಬೇರೆ ರಾಜ್ಯಕ್ಕೆ ವಲಸೆ ಹೋಗುವುದಿಲ್ಲವೇ? ಎಂಬ ಪ್ರಶ್ನೆಯೂಎದುರಾಗಿದೆ. ಇದರಿಂದ ಉದ್ಯೋಗದ ಕುರಿತು, ಸ್ಥಳೀಯತೆಯ ಕುರಿತು ಚರ್ಚೆಗೆ ಒಳ್ಳೆಯ ಸಂದರ್ಭ ಬಂದಿದೆ. ಹಾಗಾಗಿಎಲ್ಲಾ ದೃಷ್ಟಿಕೋನಗಳಿಂದಲೂ ಆರೋಗ್ಯ ಚರ್ಚೆ ನಡೆಸಲು ನಾನುಗೌರಿ.ಕಾಂ ವೇದಿಕೆ ಒದಗಿಸುತ್ತದೆ. ಓದುಗರು ಸಹಬರೆಯಬೇಕೆಂದು ಕೋರುತ್ತೇವೆ.

ನಿಮ್ಮ ಬರಹಗಳನ್ನು 7353770202ಗೆ ವಾಟ್ಸಾಪ್ ಮೂಲಕ ಅಥವಾ [email protected] ಗೆ ಇ-ಮೇಲ್ ಮೂಲಕ ಕಳಿಸಬಹುದು.

ಇದನ್ನು ಓದಿ

ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೆ ಮೀಸಲಿರಲಿ ಪ್ರಚಾರಾಂದೋಲನದ ಕುರಿತು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...