ಇಸ್ರೇಲ್ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರಿಗೆ ಆತಿಥ್ಯ ವಹಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಸ್ಮೋಟ್ರಿಚ್ ಅವರನ್ನು ತೀವ್ರ ಬಲಪಂಥೀಯ ಉಗ್ರಗಾಮಿ. ಇಸ್ರೇಲ್‌ನ ಕ್ರೂರ ಆಕ್ರಮಣ ಮತ್ತು ವಿಸ್ತರಣಾವಾದಿ ಕಾರ್ಯಸೂಚಿಯ ಮುಖ್ಯಸ್ಥ” ಎಂದು ಬಣ್ಣಿಸಿದ್ದಾರೆ.
“ಗಾಜಾದಲ್ಲಿ ನರಮೇಧ ನಡೆಯುತ್ತಿರುವ ಸಮಯದಲ್ಲಿ, ನೆತನ್ಯಾಹು ಆಡಳಿತದ ಪ್ರತಿನಿಧಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದು ಪ್ಯಾಲೆಸ್ತೀನ್‌ನೊಂದಿಗಿನ ಭಾರತದ ಐತಿಹಾಸಿಕ ಒಗ್ಗಟ್ಟಿಗೆ ದ್ರೋಹವಾಗಿದೆ” ಎಂದು ಅವರು ಹೇಳಿದರು.
ಪ್ಯಾಲೆಸ್ತೀನ್‌ಗೆ ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಹಾದಿಯನ್ನು ಅನುಸರಿಸದೆ ಇರುವಾಗ ಇಸ್ರೇಲ್‌ನೊಂದಿಗೆ ಮಿಲಿಟರಿ, ಭದ್ರತೆ ಮತ್ತು ಆರ್ಥಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಶೋಚನೀಯ ಎಂದು ಎಡಪಂಥೀಯ ಅನುಭವಿ ಹೇಳಿದರು.
Strongly condemn the Union Government’s decision to host Israeli Finance Minister Bezalel Smotrich, a far-right extremist and a chief architect of Israel’s brutal occupation and expansionist agenda. At a time when a genocide is unfolding in Gaza, entering into agreements with…
— Pinarayi Vijayan (@pinarayivijayan) September 9, 2025
ಸ್ಮೋಟ್ರಿಚ್ ಸೆಪ್ಟೆಂಬರ್ 8 ರಿಂದ 10 ರವರೆಗೆ ಮೂರು ದಿನಗಳ ಭಾರತ ಭೇಟಿಯಲ್ಲಿದ್ದಾರೆ.
ಅವರು ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಪರಸ್ಪರರ ದೇಶಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಗುರಿಯೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದರು.
ಉತ್ತರ ಪ್ರದೇಶ: ಕಾರಿಗೆ ಬೈಕ್ ತಾಕಿದ್ದಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ


