Homeಮುಖಪುಟಕೇರಳ ಚಲನಚಿತ್ರೋತ್ಸವ : ಪ್ಯಾಲೆಸ್ತೀನ್ ಕುರಿತ 4 ಸಿನಿಮಾಗಳು ಸೇರಿ 19 ಚಲನಚಿತ್ರಗಳ ಪ್ರದರ್ಶನಕ್ಕೆ ಅನುಮತಿ...

ಕೇರಳ ಚಲನಚಿತ್ರೋತ್ಸವ : ಪ್ಯಾಲೆಸ್ತೀನ್ ಕುರಿತ 4 ಸಿನಿಮಾಗಳು ಸೇರಿ 19 ಚಲನಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದ ಕೇಂದ್ರ

- Advertisement -
- Advertisement -

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 2025ರ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 19 ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದೆ ಎಂದು ರಾಜ್ಯದ ಆಡಳಿತಾರೂಢ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಮರಿಯನ್ ಅಲೆಕ್ಸಾಂಡರ್ ಬೇಬಿ ಹೇಳಿದ್ದಾರೆ. ಈ ಪಟ್ಟಿಯಲ್ಲಿ ಪ್ಯಾಲೆಸ್ತೀನ್ ಕುರಿತ ಸಿನಿಮಾಗಳೂ ಇವೆ ಎಂದು ತಿಳಿಸಿದ್ದಾರೆ.

ಚಲನಚಿತ್ರೋತ್ಸವ ಡಿಸೆಂಬರ್ 12ರಂದು ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಪ್ರಾರಂಭಗೊಂಡಿದ್ದು, ಡಿಸೆಂಬರ್ 19ರಂದು ಕೊನೆಗೊಳ್ಳಲಿದೆ.

ಪ್ಯಾಲೆಸ್ತೀನ್ ಕುರಿತಾದ ಚಲನಚಿತ್ರಗಳಾದ “ಪ್ಯಾಲೆಸ್ಟೈನ್ 36”, “ಯೆಸ್ ಒನ್ಸ್ ಅಪೋನ್ ಅ ಟೈಮ್ ಇನ್ ಗಾಝಾ” ಮತ್ತು “ಆಲ್ ದಾಟ್ಸ್ ಲೆಫ್ಟ್ ಆಫ್ ಯು” ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲಾಗಿದೆ. ಈ ಚಿತ್ರಗಳು ಈಗಾಗಲೇ ಚಲನಚಿತ್ರೋತ್ಸವದಲ್ಲಿ ಆರಂಭಿಕ ಪ್ರದರ್ಶನ (initial screening) ಕಂಡಿದ್ದವು ಎಂದು ವರದಿಗಳು ಹೇಳಿವೆ.

“ಪ್ಯಾಲೆಸ್ಟೈನ್ 36” ಎಂಬ ಅರೆಬಿಕ್ ಮತ್ತು ಇಂಗ್ಲಿಷ್ ಭಾಷೆಯ ಚಲನಚಿತ್ರವು ಚಲನಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿತ್ತು.

ಡಿಸೆಂಬರ್ 12ರಂದು ನಡೆದ 30ನೇ ಅಂತಾರಾಷ್ಟ್ರೀಯ ಕೇರಳ ಚಲನಚಿತ್ರೋತ್ಸವದ (ಐಎಫ್‌ಎಫ್‌ಕೆ 2025) ಉದ್ಘಾಟನಾ ಸಮಾರಂಭದಲ್ಲಿ, ಕೇರಳದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರು ಪ್ಯಾಲೆಸ್ತೀನ್‌ಗೆ ರಾಜ್ಯದ ಬೆಂಬಲದ ಬಗ್ಗೆ ಮಾತನಾಡಿದ್ದರು. ಕೇರಳದ ಜನರು ಯಾವಾಗಲೂ ಪ್ಯಾಲೆಸ್ತೀನ್ ಜನತೆಯ ಪರವಾಗಿ ಇದ್ದಾರೆ. ಈ ಕಾರಣಕ್ಕಾಗಿಯೇ ಉದ್ಘಾಟನಾ ಚಿತ್ರವಾಗಿ “ಪ್ಯಾಲೆಸ್ಟೈನ್ 36” ಅನ್ನು ಆಯ್ಕೆ ಮಾಡಿಲಾಗಿದೆ ಎಂದು ಹೇಳಿದ್ದರು. ಈ ಕಾರ್ಯಕ್ರಮದಲ್ಲಿ ಭಾರತದಲ್ಲಿನ ಪ್ಯಾಲೆಸ್ತೀನ್ ರಾಯಭಾರಿ ಅಬ್ದುಲ್ಲ ಎಂ. ಅಬು ಶಾವೇಶ್ ಅವರು ಅತಿಥಿಯಾಗಿ ಭಾಗವಹಿಸಿದ್ದರು ಮತ್ತು ಕೇರಳದ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದರು.

ಉದ್ಘಾಟನಾ ಸಮಾರಂಭದಲ್ಲಿ, 2025ರ ಏಪ್ರಿಲ್‌ನಲ್ಲಿ ನಿಧನರಾದ ನಿರ್ದೇಶಕ ಶಾಜಿ ಎನ್. ಕಾರುಣ್ ಅವರಿಗೆ ಗೌರವ ಸಲ್ಲಿಸುತ್ತಾ, ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರು, “ಈ ಚಲನಚಿತ್ರೋತ್ಸವವು ಮತೀಯವಾದ ಮತ್ತು ಸರ್ವಾಧಿಕಾರವಾದಕ್ಕೆ ಪ್ರತಿರೋಧ ತೋರುವ ಹಾಗೂ ವಾಕ್‌ ಸ್ವಾತಂತ್ರ್ಯ ಮತ್ತು ಸೃಜನಶೀಲ ಅಭಿವ್ಯಕ್ತಿಯನ್ನು ಆಚರಿಸುವ ವೇದಿಕೆ” ಎಂದು ಹೇಳಿದ್ದರು.

ಚಲನಚಿತ್ರೋತ್ಸವವನ್ನು ಕೇರಳ ರಾಜ್ಯ ಚಲಚಿತ್ರ ಅಕಾಡೆಮಿ ಆಯೋಜಿಸುತ್ತದೆ. ಇದು ರಾಜ್ಯದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಗೆ ವರದಿ ಮಾಡುವ ಸ್ವಾಯತ್ತ ಸಂಸ್ಥೆಯಾಗಿದೆ. ಈ ವಾರ್ಷಿಕ ಕಾರ್ಯಕ್ರಮಕ್ಕೆ ಸಾವಿರಾರು ಪ್ರತಿನಿಧಿಗಳು ಭಾಗವಹಿಸುತ್ತಾರೆ. 2025ರ 30ನೇ ಆವೃತ್ತಿಯಲ್ಲಿ 13,000ಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಆಯೋಜಕರು ಚಲನಚಿತ್ರಗಳ ಹೆಸರುಗಳನ್ನು ಮುಂಚಿತವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಅನುಮೋದನೆಗಾಗಿ ಸಲ್ಲಿಸುತ್ತಾರೆ. ಸಚಿವಾಲಯವು ರಾಜತಾಂತ್ರಿಕ ಸಂಬಂಧಗಳಿಗೆ ಹಾನಿಯಾಗುವಂತೆ ತೋರುವ ಚಿತ್ರಗಳನ್ನು ನಿರಾಕರಿಸಬಹುದು.

ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದ್ದಕ್ಕೆ ಯಾವುದೇ ಕಾರಣಗಳನ್ನು ನೀಡಲಾಗಿಲ್ಲ ಎಂದು ಕೇರಳ ರಾಜ್ಯ ಚಲಚಿತ್ರ ಅಕಾಡೆಮಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ‘ದಿ ಹಿಂದೂ’ ವರದಿ ಮಾಡಿದೆ.

ಅನುಮತಿ ನಿರಾಕರಣೆಯಿಂದ ಚಲನಚಿತ್ರೋತ್ಸವದ ವೇಳಾಪಟ್ಟಿಯಲ್ಲಿ ಅಂತರ ಉಂಟಾಗಿದೆ ಎಂದು ವರದಿಯಾಗಿದೆ.

“ಎ ಪೊಯೆಟ್: ಅನ್‌ಕನ್ಸೀಲ್ಡ್ ಪೊಯೆಟ್ರಿ, ಬಮಾಕೊ, ನಿರ್ದೇಶಕ ಸೆರ್ಗೆಯ್ ಐಸೆನ್‌ಸ್ಟೈನ್‌ರ 1925 ರ ಕ್ಲಾಸಿಕ್ ಬ್ಯಾಟಲ್‌ಶಿಪ್ ಪೊಟೆಮ್‌ಕಿನ್, ಸ್ಪ್ಯಾನಿಷ್ ಚಲನಚಿತ್ರ ಬೀಫ್, ಕ್ಲಾಷ್, ಈಗಲ್ಸ್ ಆಫ್ ದಿ ರಿಪಬ್ಲಿಕ್, ಹಾರ್ಟ್ ಆಫ್ ದಿ ವುಲ್ಫ್, ರೆಡ್ ರೇನ್, ರಿವರ್‌ಸ್ಟೋನ್, ದಿ ಅವರ್ ಆಫ್ ದಿ ಫರ್ನೇಸಸ್, ಟನೆಲ್ಸ್: ಸನ್ ಇನ್ ದಿ ಡಾರ್ಕ್ (ಮಾಟ್ ಟ್ರೋಂಗ್ ಬಾಂಗ್ ಟಾಯ್), ಫ್ಲೇಮ್ಸ್, ಟಿಂಬಕ್ಟು, ವಾಜಿಬ್ ಅಂಡ್ ಸಂತೋಷ್” ಅನುಮತಿ ನಿರಾಕರಿಸಿರುವ ಇತರ ಚಿತ್ರಗಳಾಗಿವೆ.

ಬ್ಯಾಟಲ್‌ಶಿಪ್ ಪೊಟೆಮ್‌ಕಿನ್ ಮತ್ತು ನಿರ್ದೇಶಕ ಅಬ್ದುರಹ್ಮಾನೆ ಸಿಸಾಕೊ ಅವರ 2006 ರ ಸಾಕ್ಷ್ಯಚಿತ್ರ ಬಮಾಕೊವನ್ನು ಭಾರತದ ಚಲನಚಿತ್ರೋತ್ಸವಗಳಲ್ಲಿ ವ್ಯಾಪಕವಾಗಿ ಪ್ರದರ್ಶಿಸಲಾಗಿದೆ. ಈ ವರ್ಷ ಸಿಸಾಕೊ ಅವರಿಗೆ ಐಎಫ್‌ಎಫ್‌ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಆಹಾರದ ಆಯ್ಕೆಗಳೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ, ‘ಬೀಫ್’ ಚಿತ್ರಕ್ಕೆ ಅದರ ಹೆಸರಿನ ಕಾರಣದಿಂದಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ಬೇಬಿ ಹೇಳಿದ್ದಾರೆ.

ಚಲನಚಿತ್ರಗಳನ್ನು ಪ್ರದರ್ಶಿಸಲು ಅನುಮತಿ ನಿರಾಕರಿಸಿರುವುದು ಐಎಫ್‌ಎಫ್‌ಕೆಯನ್ನು ಹಳಿತಪ್ಪಿಸುವ ಅಸಂಬದ್ಧ ಮತ್ತು ಹುಚ್ಚುತನದ ಪ್ರಯತ್ನ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಅವರ ‘ತೀವ್ರ ಸರ್ವಾಧಿಕಾರಿ ಆಡಳಿತದ ನವ-ಫ್ಯಾಸಿಸ್ಟ್ ಪ್ರವೃತ್ತಿಗಳ ಇತ್ತೀಚಿನ ಉದಾಹರಣೆ’ ಎಂದು ಬೇಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಾವಿದರು, ಚಲನಚಿತ್ರ ನಿರ್ಮಾಪಕರು ಮತ್ತು ಎಲ್ಲಾ ಪ್ರಜಾಪ್ರಭುತ್ವ ಮನಸ್ಸಿನ ನಾಗರಿಕರು ಈ ಅವಮಾನಕರ ಕ್ರಮದ ವಿರುದ್ಧ ಧ್ವನಿ ಎತ್ತಬೇಕು ಎಂದು ಅವರು ಕರೆಕೊಟ್ಟಿದ್ದಾರೆ.

ಸಿಪಿಐ(ಎಂ) ಗೆ ಸಂಯೋಜಿತವಾಗಿರುವ ಯುವ ಸಂಘಟನೆಯಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಚಲನಚಿತ್ರೋತ್ಸವದ ಪ್ರಮುಖ ಸ್ಥಳಗಳ ಪೈಕಿ ಒಂದರಲ್ಲಿ ಪ್ರತಿಭಟನೆ ನಡೆಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸರ್ಕಾರಿ ಕಾರ್ಯಕ್ರಮದಲ್ಲಿ ಮಹಿಳಾ ವೈದ್ಯೆಯ ಹಿಜಾಬ್ ತೆಗೆಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಬಿಹಾರ ರಾಜಧಾನಿ ಪಾಟ್ನಾದಲ್ಲಿ ಸೋಮವಾರ (ಡಿ.15) ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇಮಕಾತಿ ಪತ್ರಗಳನ್ನು ಹಸ್ತಾಂತರಿದ್ದು, ಇದೇ ಸಂದರ್ಭದಲ್ಲಿ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ಅನ್ನು ತೆಗೆದಿರುವ ವಿಡಿಯೋವೊಂದು ವೈರಲ್...

ಎಸ್‌ಐಆರ್ ಬಳಿಕ ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿ ಪ್ರಕಟ : 58 ಲಕ್ಷ ಹೆಸರು ಡಿಲೀಟ್!

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ಮಂಗಳವಾರ (ಡಿಸೆಂಬರ್ 16) ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಸಾವು, ವಲಸೆ ಮತ್ತು ಎಣಿಕೆ ನಮೂನೆಗಳನ್ನು ಸಲ್ಲಿಸದಿರುವುದು...

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ-ರಾಹುಲ್ ಗಾಂಧಿ ವಿರುದ್ಧದ ಇಡಿ ದೂರು ಪರಿಗಣಿಸಲು ದೆಹಲಿ ಕೋರ್ಟ್ ನಕಾರ

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ ಎನ್ನಲಾದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಹಣ ಅಕ್ರಮ ವರ್ಗಾವಣೆ ದೂರನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ (ಡಿಸೆಂಬರ್...

ಕಾನೂನುಗಳಿಗೆ ಹಿಂದಿ ಬಳಸುವುದರಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ಪಿ.ಚಿದಂಬರಂ

ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಗಳ ಶೀರ್ಷಿಕೆಗಳಲ್ಲಿ ಇಂಗ್ಲಿಷ್ ಲಿಪಿಯಲ್ಲಿ ಬರೆಯಲಾದ ಹಿಂದಿ ಪದಗಳನ್ನು ಬಳಸುವ ಅಭ್ಯಾಸ ಹೆಚ್ಚುತ್ತಿದೆ. ಈ ಪ್ರವೃತ್ತಿಯಿಂದ ಹಿಂದಿ ಮಾತನಾಡದ ನಾಗರಿಕರು ಮತ್ತು ರಾಜ್ಯಗಳಿಗೆ ಅನ್ಯಾಯವಾಗಿದೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದರು. ಈ...

ಸಿಡ್ನಿ ಶೂಟೌಟ್‌: ಭಾರತೀಯ ಪಾಸ್‌ಪೋರ್ಟ್‌ ಬಳಸಿ ಫಿಲಿಪೈನ್ಸ್‌ಗೆ ಪ್ರಯಾಣಿಸಿದ್ದ ತಂದೆ-ಮಗ?

ಸಿಡ್ನಿಯಲ್ಲಿ ಹದಿನೈದು ಜನರನ್ನು ಗುಂಡಿಕ್ಕಿ ಕೊಂದ ತಂದೆ ಮತ್ತು ಮಗನನ್ನು ಪಾಕಿಸ್ತಾನಿ ಪ್ರಜೆಗಳು ಎಂದು ಈಗಾಗಲೇ ಗುರುತಿಸಲಾಗಿದೆ ಎಂಬ ಹಿಂದಿನ ವರದಿಗಳಿಗೆ ವಿರುದ್ಧವಾಗಿ, ಇಬ್ಬರೂ ಕಳೆದ ತಿಂಗಳು ನವೆಂಬರ್‌ನಲ್ಲಿ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಬಳಸಿ...

ವರದಕ್ಷಿಣೆ ನಿರ್ಮೂಲನೆ ತುರ್ತು ಸಾಂವಿಧಾನಿಕ, ಸಾಮಾಜಿಕ ಅಗತ್ಯ: ಸುಪ್ರೀಂ ಕೋರ್ಟ್

ನವದೆಹಲಿ: ವರದಕ್ಷಿಣೆ ನಿರ್ಮೂಲನೆ ತುರ್ತು ಸಾಂವಿಧಾನಿಕ ಮತ್ತು ಸಾಮಾಜಿಕ ಅಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಸ್ತಿತ್ವದಲ್ಲಿರುವ ಕಾನೂನುಗಳು "ನಿಷ್ಪರಿಣಾಮಕಾರಿತ್ವ" ಮತ್ತು "ದುರುಪಯೋಗ" ಎರಡರಿಂದಲೂ ಬಳಲುತ್ತಿವೆ ಮತ್ತು ದುಷ್ಟ ಪದ್ಧತಿ ಇನ್ನೂ ವ್ಯಾಪಕವಾಗಿ...

ಮಣಿಪುರ ಹಿಂಸಾಚಾರ: ಸೋರಿಕೆಯಾದ ಸಂಪೂರ್ಣ ಆಡಿಯೋ ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2023ರ ಜನಾಂಗೀಯ ಹಿಂಸಾಚಾರದಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪಾತ್ರವನ್ನು ಸೂಚಿಸಿರುವ ಅರ್ಜಿಯಲ್ಲಿ ಲಭ್ಯವಿರುವ ಸಂಪೂರ್ಣ ಸೋರಿಕೆಯಾದ ಆಡಿಯೋ ತುಣುಕುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ ಎಂದು...

ಎಸ್‌ಐಆರ್‌ ಭಯಕ್ಕೆ ಮತ್ತೊಂದು ಬಲಿ: ಬಂಗಾಳದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ, ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದ ಭಯದಿಂದ ವೃದ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತರನ್ನು ರಣಘಾಟ್‌ನ...

MGNREGA ಬದಲು VB-G Ram G : ರಾಜ್ಯಗಳ ಮೇಲೆ 40 ಶೇಕಡ ಆರ್ಥಿಕ ಹೊರೆ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಮತ್ತು ಅದರಡಿ ರೂಪಿಸಲಾದ ನರೇಗಾ ಯೋಜನೆಯ ಹೆಸರನ್ನು ಬದಲಿಸಲು ಕೇಂದ್ರ...

ಕೇರಳ: ಕೊಲ್ಲಂ ಕಾರ್ಪೊರೇಷನ್‌ನಲ್ಲಿ 25 ವರ್ಷಗಳ ಎಲ್‌ಡಿಎಫ್‌ ಆಳ್ವಿಕೆ ಕೊನೆಗೊಳಿಸಿದ ಯುಡಿಎಫ್

2025 ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಅತ್ಯಂತ ಅಚ್ಚರಿಯ ರಾಜಕೀಯ ಫಲಿತಾಂಶಳನ್ನು ನೀಡಿವೆ. ಅದರಲ್ಲಿ, ಕೊಲ್ಲಂ ಕಾರ್ಪೊರೇಷನ್‌ನಲ್ಲಿ ಎಡಪಂಥೀಯ ಪ್ರಜಾಸತ್ತಾತ್ಮಕ ರಂಗದ ನಿರಂತರ 25 ವರ್ಷಗಳ ನಿಯಂತ್ರಣವನ್ನು ಯುನೈಟೆಡ್...