Homeಮುಖಪುಟಕೇರಳ: ರಾಮಾಯಣ ರಸಪ್ರಶ್ನೆ ಸ್ಪರ್ಧೆ ವಿಜೇತರಾದ ಇಸ್ಲಾಮಿಕ್ ಅಧ್ಯಯನ ವಿದ್ಯಾರ್ಥಿಗಳು

ಕೇರಳ: ರಾಮಾಯಣ ರಸಪ್ರಶ್ನೆ ಸ್ಪರ್ಧೆ ವಿಜೇತರಾದ ಇಸ್ಲಾಮಿಕ್ ಅಧ್ಯಯನ ವಿದ್ಯಾರ್ಥಿಗಳು

- Advertisement -
- Advertisement -

ಕೇರಳದಲ್ಲಿ ನಡೆದ ರಾಜ್ಯ ಮಟ್ಟದ ರಾಮಾಯಣ ರಸಪ್ರಶ್ನೆಯಲ್ಲಿ ವಿಜೇತರಾದ ಐವರು ವಿದ್ಯಾರ್ಥಿಗಳಲ್ಲಿ ಇಸ್ಲಾಮಿಕ್ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಾದ ಮುಹಮ್ಮದ್ ಬಾಸಿತ್‌ ಎಂ. ಮತ್ತು ಮುಹಮ್ಮದ್ ಜಾಬಿರ್ ಪಿ.ಕೆ. ಕೂಡಾ ಸ್ಥಾನ ಪಡೆದು ದೇಶದ ಗಮನ ಸೆಳೆದಿದ್ದಾರೆ. ಈ ಇಬ್ಬರೂ ರಾಜ್ಯದ ಮರ್ಕಝ್ ವಲಾಂಚೇರಿಯ ಕೆ.ಕೆ.ಎಚ್‌.ಎಂ. ಇಸ್ಲಾಮಿಕ್ ಮತ್ತು ಆರ್ಟ್ಸ್ ಕಾಲೇಜಿನ ಇಸ್ಲಾಮಿಕ್ ಅಧ್ಯಯನ ಕೋರ್ಸ್‌ (ವಾಫಿ)ನ ವಿದ್ಯಾರ್ಥಿಗಳಾಗಿದ್ದಾರೆ.

ರಾಮಾಯಣದ ಆಳವಾದ ಅಧ್ಯಯನದ ಆಧಾರದ ಮೇಲೆ ಜುಲೈ 23 ರಿಂದ ಜುಲೈ 25 ರ ನಡುವೆ ಕೇರಳದ ಪ್ರಕಾಶನ ಸಂಸ್ಥೆ ಡಿ.ಸಿ. ಬುಕ್ಸ್ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿತ್ತು. ತಮ್ಮ ಕಾಲೇಜಿನಲ್ಲಿ ಅಧ್ಯಯನದ ಭಾಗವಾಗಿ ರಾಮಾಯಣವನ್ನು ಓದಿಕೊಂಡಿದ್ದ ಜಾಬೀರ್ ಮತ್ತು ಬಾಸಿತ್ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಇತರ ವಿದ್ಯಾರ್ಥಿಗಳೆಂದರೆ ನವನೀತ್ ಗೋಪನ್, ಅಭಿರಾಮ್ ಎಂಪಿ ಮತ್ತು ಗೀತು ಕೃಷ್ಣನ್.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬಗ್ಗೆ ಮಾತನಾಡಿದ ಧರ್ಮಶಾಸ್ತ್ರ ಅಧ್ಯಯನದ ಹಿರಿಯ ವಿದ್ಯಾರ್ಥಿಯಾಗಿರುವ ಜಾಬೀರ್, “ಎಲ್ಲಾ ಧರ್ಮಗಳು ಮಾನವೀಯತೆಯ ಶಾಂತಿಯುತ ಜೀವನಕ್ಕಾಗಿ ಮಾಡಲ್ಪಟ್ಟಿವೆ. ಆದರೆ ಅವುಗಳ ಸುತ್ತಲಿನ ಎಲ್ಲಾ ಇತರ ಉದ್ವಿಗ್ನತೆಗಳು ಮಾನವ ನಿರ್ಮಿತ” ಎಂದು ಹೇಳಿದ್ದಾರೆ.

“ನಾಡಿನಲ್ಲಿ ಉತ್ತಮ ಆಡಳಿತ ಮತ್ತು ನ್ಯಾಯವನ್ನು ಹೇಗೆ ಜಾರಿಗೆ ತರಬಹುದು ಎಂಬುದನ್ನು ರಾಮಾಯಣ ವಿವರಿಸುತ್ತದೆ. ರಾಮಾಯಣವು ರಾಮನನ್ನು ಆದರ್ಶ ರಾಜನೆಂದು ತೋರಿಸುತ್ತದೆ ಮತ್ತು ದೇಶದಲ್ಲಿ ಉತ್ತಮ ಆಡಳಿತ, ನ್ಯಾಯ, ಸದ್ಗುಣ ಮತ್ತು ಕರ್ತವ್ಯಗಳನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ತೋರಿಸುತ್ತದೆ. ಇದು ಜಗತ್ತಿನಲ್ಲಿ ಆದರ್ಶಪ್ರಾಯವಾಗಿ ನಡೆಯಬೇಕು. ಪವಿತ್ರ ಗ್ರಂಥದಲ್ಲಿ ದ್ವೇಷದ ಉಲ್ಲೇಖವಿಲ್ಲ. ಯಾವುದೇ ಧರ್ಮವು ದ್ವೇಷವನ್ನು ಉತ್ತೇಜಿಸುವುದಿಲ್ಲ” ಎಂದು ಜಾಬೀರ್ ಹೇಳಿದ್ದಾರೆ.

ಇದನ್ನೂ ಓದಿ: ನೆಲದ ಸೌಹಾರ್ದಕ್ಕೆ ಸರಣಿ ಕೊಲೆಗಳ ಕೊಡಲಿಯೇಟು; ಸಾಂಸ್ಕೃತಿಕ ಕ್ರಾಂತಿಗೆ ಓಗೊಡಬೇಕಿದೆ ಯುವಜನತೆ

“ತಮ್ಮ ಅಧ್ಯಯನದ ಭಾಗವಾಗಿ ವಿದ್ಯಾರ್ಥಿಗಳು ಎಲ್ಲಾ ಧರ್ಮಗಳ ಬಗ್ಗೆ ಕಲಿಯುತ್ತಾರೆ. ಹಾಗಾಗಿ ಧರ್ಮಗಳ ಪುಸ್ತಕಗಳನ್ನು ನೇರವಾಗಿ ಓದಿ ಅರ್ಥ ಮಾಡಿಕೊಳ್ಳಬಹುದು. ನಮ್ಮಲ್ಲಿ ಹೆಚ್ಚಿನವರು ನೇರವಾಗಿ ಓದುವ ಮತ್ತು ಅರ್ಥಮಾಡಿಕೊಳ್ಳುವ ಮೂಲಕ ಅವುಗಳನ್ನು ಕಲಿಯುತ್ತಾರೆ. ನಮ್ಮ ಕಾಲೇಜಿನ ಗ್ರಂಥಾಲಯವು ಎಲ್ಲಾ ಧಾರ್ಮಿಕ ಪವಿತ್ರ ಪುಸ್ತಕಗಳನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.

ವಾಫಿ ಕೋರ್ಸ್‌ ವಿದ್ಯಾರ್ಥಿಗಳು ಇಸ್ಲಾಮಿಕ್ ಅಧ್ಯಯನಗಳೊಂದಿಗೆ ತಮ್ಮ ಪದವಿ ಅಧ್ಯಯನವನ್ನು ನಡೆಸುತ್ತಾರೆ. ಈ ಕೋರ್ಸ್‌ನ ಪ್ರಮಾಣಪತ್ರ ಪಡೆಯಬೇಕೆಂದಿದ್ದರೆ ನಾವು ವಿಶ್ವವಿದ್ಯಾಲಯದ ಅನುಮೋದಿತ ಪದವಿಯನ್ನು ಹೊಂದಿರಬೇಕು. ಅದರ ಹೊರತಾಗಿ ನಾವು ಇತರ ಎಲ್ಲಾ ಧರ್ಮಗಳು ಮತ್ತು ಸಂಸ್ಕೃತಿಗಳ ಬಗ್ಗೆ ಕಲಿಯಬೇಕಾಗಿದೆ. ನಮ್ಮ ದೇಶವನ್ನು ವಿಶಾಲ ಮನಸ್ಸಿನ ರೀತಿಯಲ್ಲಿ ತಿಳಿದುಕೊಳ್ಳಲು ಮತ್ತು ಉತ್ತಮ ನಾಗರಿಕರಾಗಲು ನಮಗೆ ಇಲ್ಲಿ ಕಲಿಸಲಾಗುತ್ತದೆ ಎಂದು ಜಾಬಿರ್ ಹೇಳಿದ್ದಾರೆ.

ಮಕ್ಕಳ ನಿಯತಕಾಲಿಕಗಳಲ್ಲಿ ಪ್ರಕಟವಾಗುವ ರಾಮಾಯಣ ಚಿತ್ರಕಥೆಗಳು ಮತ್ತು ಸಣ್ಣ ಕಥೆಗಳನ್ನು ಓದಿದ ಕಾರಣದಿಂದ ಬಾಲ್ಯದಿಂದಲೂ ರಾಮಾಯಣವನ್ನು ಕಲಿಯಲು ಆಸಕ್ತಿ ಹೊಂದಿದ್ದಾಗಿ ರಾಮಾಯಣ ಸ್ಪರ್ಧೆಯಲ್ಲಿ ವಿಜೇತರಾದ ಮತ್ತೊಬ್ಬ ವಿದ್ಯಾರ್ಥಿ ಬಾಸಿತ್ ಹೇಳುತ್ತಾರೆ.

ಇದನ್ನೂ ಓದಿ: ಮೂರೂವರೆ ವರ್ಷದಲ್ಲಿ 752 ಕೋಮು ಪ್ರಕರಣಗಳನ್ನು ಕಂಡ ’ಸೌಹಾರ್ದ ಕರ್ನಾಟಕ’

“ನಾನು ವಾಫಿ ಕೋರ್ಸ್‌‌ಗೆ ಬಂದಾಗ ಇಲ್ಲಿ ಎಲ್ಲಾ ಧಾರ್ಮಿಕ ಪವಿತ್ರ ಪುಸ್ತಕಗಳು ಇದ್ದವು. ಅವರೆಲ್ಲವೂ ಜ್ಞಾನದ ಆಗರಗಳಾಗಿದ್ದು, ರಾಮಾಯಣವು ಹಿಂದೂ ಧಾರ್ಮಿಕ ಜ್ಞಾನದ ಆಗರವಾಗಿದೆ” ಎಂದು ಅವರು ಹೇಳಿದ್ದಾರೆ. ಜಾಬೀರ್ ಮತ್ತು ಬಾಸಿತ್ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಧರ್ಮದ ಮೂಲಕ ಶಾಂತಿಯನ್ನು ಹರಡಲು ಆಶಿಸುವುದಾಗಿ ಹೇಳಿದ್ದಾರೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಧ್ಯಪ್ರಾಚ್ಯ ಸಂಘರ್ಷ| ಇರಾನ್ ಮೇಲಿನ ದಾಳಿಗೆ ಅಮೆರಿಕಾ ಭಾರತದ ಬಂದರುಗಳನ್ನು ಬಳಸುತ್ತಿದೆ ಎಂಬ ಹೇಳಿಕೆ ವೈರಲ್: ಭಾರತದ ಪ್ರತಿಕ್ರಿಯೆ ಏನು?

ಇರಾನ್ ಮೇಲೆ ನೌಕಾ ದಾಳಿ ನಡೆಸಲು ಅಮೆರಿಕ ಭಾರತದ ಬಂದರುಗಳನ್ನು ಬಳಸುತ್ತಿದೆ ಎಂಬ ವೈರಲ್ ಹೇಳಿಕೆಗಳನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ಅಲ್ಲದೇ ಈ ಆರೋಪಗಳನ್ನು "ನಕಲಿ"  ಮತ್ತು “ಆಧಾರರಹಿತ” ಎಂದು ಕರೆದಿದೆ. ಬುಧವಾರ ವಿದೇಶಾಂಗ...

ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ‘ಪ್ರಗತಿಪರ ಸೌಹಾರ್ದ ಸಂಘಟನೆಗಳ’ ಆಗ್ರಹ

ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿದ ಕರ್ನಾಟಕ ಸಮಸ್ತ ಪ್ರಗತಿಪರ ಸೌಹಾರ್ದ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ಆಗ್ರಹಿಸಿದ್ದಾರೆ. ಚಿಕ್ಕಮಗಳೂರಿನ ಬಾಬಾ ಬುಡನ್‌...

ಖಮೇನಿ ನಿಧನಕ್ಕೆ ತಡವಾಗಿ ಸಂತಾಪ ಸೂಚಿಸಿದ ಭಾರತ; ಇರಾನ್‌ ರಾಯಭಾರ ಕಚೇರಿಯಲ್ಲಿನ ಪುಸ್ತಕದಲ್ಲಿ ವಿಕ್ರಮ್ ಮಿಶ್ರಿ ಸಹಿ

ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಭಾರತ ತಡವಾಗಿ ಸಂತಾಪ ಸೂಚಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಗುರುವಾರ ನವದೆಹಲಿಯ ಇರಾನಿನ ರಾಯಭಾರ ಕಚೇರಿಯಲ್ಲಿ ಸಂತಾಪ ಸೂಚಿಸುವ ಪುಸ್ತಕಕ್ಕೆ...

ಉಕ್ರೇನ್, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ತ್ವರಿತವಾಗಿ ಕೊನೆಗೊಳಿಸಲು ಬೆಂಬಲಿಸುತ್ತೇನೆ: ಫಿನ್ಲೆಂಡ್‌ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಪಶ್ಚಿಮ ಏಷ್ಯಾ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷಗಳಿಗೆ "ತ್ವರಿತ ಅಂತ್ಯ" ವನ್ನು ತರಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ, ಯಾವುದೇ ಸಮಸ್ಯೆಯನ್ನು ಮಿಲಿಟರಿ ಮುಖಾಮುಖಿಯ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು...

ಮಹಾರಾಷ್ಟ್ರ| ಬಣ್ಣ ಎರಚಿದ ಮೊಮ್ಮಗನ ಮೇಲೆ ಬಿಸಿ ನೀರು ಸುರಿದ ಮಹಿಳೆ; ಬಾಲಕನ ಸ್ಥಿತಿ ಗಂಭೀರ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕೊರಾಡಿ ಪ್ರದೇಶದಲ್ಲಿ ಹೋಲಿ ಆಡುತ್ತಿದ್ದಾಗ ನಾಲ್ಕು ವರ್ಷದ ಮೊಮ್ಮಗ ತನ್ನ ಮೇಲೆ ಬಣ್ಣ ಎರಚಿದ್ದರಿಂದ ಕೋಪಗೊಂಡ ಅಜ್ಜಿ ಮಗುವಿನ ಮೇಲೆ ಕುದಿಯುವ ನೀರನ್ನು ಸುರಿದಿರುವ ವಿಡಿಯೋ ಇದೀಗ ವೈರಲ್...

ಭಾರತದ ಕಾಲ ಬುಡದಲ್ಲಿ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ : 100ರಷ್ಟು ಸಿಬ್ಬಂದಿ ಸಾವಿಗೀಡಾದರೂ ಮೋದಿ ಸರ್ಕಾರ ಮೌನ!

ಭಾರತದಿಂದ ಕೇವಲ 300 ಕಿಲೋ ಮೀಟರ್ ದೂರದಲ್ಲಿ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ 'ಐಆರ್‌ಐಎಸ್ ದೆನಾ' ಮೇಲೆ ಅಮೆರಿಕ ಜಲಾಂತರ್ಗಾಮಿ ಬುಧವಾರ (ಮಾ.4) ಭೀಕರ ದಾಳಿ ನಡೆಸಿದೆ. ಈ ಘಟನೆಯಲ್ಲಿ ಇರಾನ್‌ ನೌಕೆಯಲ್ಲಿದ್ದ 180 ಸಿಬ್ಬಂದಿಯ...

ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆ ಮೇಲೆ ದಾಳಿ: ‘ರಾಜಿ ಮಾಡಿಕೊಂಡ ಪ್ರಧಾನಿ ಕಾರ್ಯತಂತ್ರದ ಸ್ವಾಯತ್ತತೆ ಬಿಟ್ಟುಕೊಟ್ಟರು: ರಾಹುಲ್ ಟೀಕೆ

ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಐರಿಸ್ ದೇನಾದ ಮೇಲೆ ಅಮೆರಿಕಾ ದಾಳಿ ಮಾಡಿದ ಒಂದು ದಿನದ ನಂತರ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ...

ಟ್ರಂಪ್ ಬೆದರಿಕೆಗೆ ಹೆದರದ ಸ್ಪೇನ್ ಪ್ರಧಾನಿ; ಇರಾನ್ ಮೇಲಿನ ದಾಳಿಗೆ ಸೇನಾ ನೆಲೆ ಬಳಸಲು ಅನುಮತಿ ನಿರಾಕರಿಸಿದ ಪೆಡ್ರೊ ಸ್ಯಾಂಚೆಜ್

ಇರಾನ್ ಮೇಲೆ ದಾಳಿ ಮಾಡಲು ಅಮೆರಿಕದ ವಿಮಾನಗಳು ತನ್ನ ನೆಲೆಗಳನ್ನು ಬಳಸಲು ಅನುಮತಿಸಲು ಮ್ಯಾಡ್ರಿಡ್ ನಿರಾಕರಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಟೀಕೆಗಳಿಗೆ ಬುಧವಾರ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ತಿರುಗೇಟು...

ಭಾರತದಿಂದ ಹಿಂದಿರುಗುತ್ತಿದ್ದ ಯುದ್ಧನೌಕೆ ಮೇಲೆ ಹಠಾತ್ ದಾಳಿ : ಅಮೆರಿಕ ಪಶ್ಚಾತ್ತಾಪ ಪಡಲಿದೆ ಎಂದ ಇರಾನ್

ಭಾರತೀಯ ನೌಕಾಪಡೆಯ ಆಹ್ವಾನದ ಮೇರೆಗೆ ಸಮರಾಭ್ಯಾಸದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ ಐಆರ್‌ಐಎಸ್ ದೆನಾ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆಸಿ ಅದನ್ನು ಮುಳುಗಿಸಿದೆ. ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ ಸುಮಾರು 40 ನಾಟಿಕಲ್...

ದೆಹಲಿ| ಹೋಳಿ ಹಬ್ಬ ಸಡಗರದಲ್ಲಿ ಕುಡಿದು ವಾಹನ ಚಾಲನೆ; 1,200 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು

ಹೋಳಿ ಹಬ್ಬದಂದು ನಗರದಾದ್ಯಂತ ನಡೆಸಿದ ವಿಶೇಷ ಪರಿಶೀಲನೆಯಲ್ಲಿ ದೆಹಲಿ ಸಂಚಾರ ಪೊಲೀಸರು 1,200 ಕ್ಕೂ ಹೆಚ್ಚು ವಾಹನ ಚಾಲಕರ ವಿರುದ್ಧ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಪಶ್ಚಿಮ ವಲಯದಿಂದ ಅತಿ ಹೆಚ್ಚು...