Homeಮುಖಪುಟಅತ್ಯಾಚಾರ ಪ್ರಕರಣ: ಕೇರಳ ಬಿಶಪ್ ಖುಲಾಸೆ ತೀರ್ಪಿನಲ್ಲಿ ಗೋಚರಿಸುವ ಪೂರ್ವಗ್ರಹಗಳು

ಅತ್ಯಾಚಾರ ಪ್ರಕರಣ: ಕೇರಳ ಬಿಶಪ್ ಖುಲಾಸೆ ತೀರ್ಪಿನಲ್ಲಿ ಗೋಚರಿಸುವ ಪೂರ್ವಗ್ರಹಗಳು

- Advertisement -
- Advertisement -

ಅಧಿಕಾರಯುತ ಸ್ಥಾನವೊಂದರಲ್ಲಿದ್ದ ವ್ಯಕ್ತಿಯನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಮುಕ್ತನಾಗಿ ನೀಡಿದ ತೀರ್ಪಿನ ಬಗ್ಗೆ ಒಂದು ನೋಟ. ತನ್ನ ನಿಯಂತ್ರಣ ಹಾಗೂ ಆಡಳಿತದ ಅಡಿಯಲ್ಲಿರುವ ಒಬ್ಬ ನನ್/ಕ್ರೈಸ್ತ ಸನ್ಯಾಸಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಆ ವ್ಯಕ್ತಿಯ ಮೇಲೆ ಹೊರೆಸಲಾಗಿತ್ತು, ಅದರ ಸೆಷನ್ ಕೇಸ್ ಸಂಖ್ಯೆ 457/2019 ಪ್ರಕರಣದಲ್ಲಿ ಕೊಟ್ಟಾಯಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ವಿಚಾರಣೆ ನಡೆಸಿ, ಆತನನ್ನು ಖುಲಾಸೆ ಮಾಡಿದೆ.

ಇದರ ದೂರುದಾರರು ಕೇರಳದ ಕುರವಿಲಂಗಡು ಊರಿನ ಸೆಂಟ್ ಫ್ರಾನ್ಸಿಸ್ ಮಿಷನ್ ಹೋಂನ ಮದರ್ ಸುಪೀರಿಯರ್ ಆಗಿದ್ದರು. ಸೆಂಟ್ ಫ್ರಾನ್ಸಿಸ್ ಮಿಷನ್ ಹೋಂ ಲ್ಯಾಟಿನ್ ಕ್ಯಾಥೋಲಿಕರ ಒಂದು ಪೂಜಾ ಸಮುಚ್ಚಯ ಆಗಿದ್ದು, ಜೀಸಸ್‌ನ ಮಿಷನರಿಗಳಿಗೆ ಸೇರಿದ್ದಾಗಿದೆ. ಆರೋಪಿಯನ್ನು ಲೈಂಗಿಕ ದೌರ್ಜನ್ಯ ಮತ್ತು ದೂರುದಾರರು ಹೆಸರಿಸಿದ ಇತರ ಅಪರಾಧಗಳಿಂದ ಖುಲಾಸೆಗೊಳಿಸಿ ತೀರ್ಪು ನೀಡಲಾಗಿದೆ.

ಈ ಪ್ರಕರಣದ ಆರೋಪಿ ಫ್ರಾಂಕೋ ಮುಲಕ್ಕಲ್ ಜಲಂಧರ ಡಯಾಸಿಸ್‌ನ (ಚರ್ಚ್ ವ್ಯಾಪ್ತಿಗೆ ಸಂಬಂಧಿಸಿದ್ದು) ಬಿಷಪ್ ಆಗಿದ್ದರು, ಅಲ್ಲಿ ಪೂಜಾ ಸಮುಚ್ಚಯದ ಪ್ರಿನ್ಸಿಪಾಲ್(ಪ್ರಮುಖ) ಸ್ಥಾನವನ್ನು ನೆಲೆಗೊಳಿಸಲಾಗಿದೆ. ಈ ಸೆಂಟ್ ಫ್ರಾನ್ಸಿಸ್ ಮಿಷನ್ ಸಂಸ್ಥೆಯು ಜಲಂಧರ್ ಡಯಾಸಿಸ್‌ನ ನೇರ ನಿಯಂತ್ರಣಕ್ಕೆ ಒಳಪಟ್ಟಿತ್ತು. ಈ ಆರೋಪಿಯು ಕೇರಳಕ್ಕೆ ನಿರಂತರ ಭೇಟಿ ನೀಡುತ್ತಿದ್ದರು ಹಾಗೂ ಆ ಕಾನ್ವೆಂಟ್‌ನಲ್ಲಿಯೇ ತಂಗುತ್ತಿದ್ದರು. ಆರೋಪಿಯು, ತನ್ನ ಈ ಭೇಟಿಗಳ ಸಮಯದಲ್ಲಿ ದೂರುದಾರರ ಮೇಲೆ ಹಲವಾರು ದಿನಗಳಲ್ಲಿ ಸತತವಾಗಿ 13 ಸಲ ಬಲಾತ್ಕಾರ ಮಾಡಿದ್ದ ಎಂದು ದೂರುದಾರ ಮಹಿಳೆ ಆರೋಪಿಸಿದ್ದರು.

ಆರೋಪಿಯನ್ನು ದೋಷಮುಕ್ತಗೊಳಿಸಿದ ತೀರ್ಪನ್ನು ನೋಡಿದರೆ, ಒಂದು ಸಂಸ್ಥೆಯ ಮುಖ್ಯಸ್ಥನು ತನ್ನ ಅಧೀನದಲ್ಲಿರುವ ವ್ಯಕ್ತಿಯ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ತಿಳಿವಳಿಕೆ ಅಥವಾ ಸೂಕ್ಷ್ಮತೆ ಇಲ್ಲದೇ ಇರುವುದು ಅದರಲ್ಲಿ ಎದ್ದು ಕಾಣುತ್ತದೆ. ಸಾಕ್ಷ್ಯಗಳು ತೋರಿಸುವುದೇನೆಂದರೆ, ಈ ಲೈಂಗಿಕ ದೌರ್ಜನ್ಯದ ಕೃತ್ಯಗಳು ಪದೇಪದೇ ನಡೆದಿವೆ ಎಂದು. ಆದರೆ ಈ ತೀರ್ಪು ಒಂದು ಧಾರ್ಮಿಕ ಸಂಸ್ಥೆಯಲ್ಲಿ ಬಿಷಪ್‌ನಂತಹ ಉನ್ನತ ಹಾಗೂ ಅಧಿಕಾರಯುತ ಸ್ಥಾನದಲ್ಲಿರುವ ವ್ಯಕ್ತಿಯ ವಿರುದ್ಧ ಒಬ್ಬ ನನ್ ಹೊರಬಂದು ದೂರು ದಾಖಲಿಸಲು ಏನೆಲ್ಲ ಕಷ್ಟ ಪಡಬಹುದು ಎಂಬುದನ್ನು ಗಣನೆಗೇ ತೆಗೆದುಕೊಂಡಿಲ್ಲ. ಇಂತಹ ಅಪರಾಧಗಳ ಮೂಲದಲ್ಲಿ ಯಾವೆಲ್ಲ ಕಾರಣಗಳು ಅಡಗಿರುತ್ತವೆ ಎಂಬುದುನ್ನು ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಈ ತೀರ್ಪು ಸಂತ್ರಸ್ತೆಯು ನೀಡಿದ ಸಾಕ್ಷ್ಯಗಳನ್ನು ಮತ್ತು ಅತ್ಯಂತ ಸ್ಪಷ್ಟವಾಗಿ ಗೋಚರಿಸುವ ನಿಜಸಂಗತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅಧಿಕಾರದ ದುರ್ಬಳಕೆ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಎಸಗುವುದಕ್ಕೆ ಸುಲಭವಾಗಿಸುವ ತಳಹದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಹಾಗೂ ಪರೀಕ್ಷಿಸಿಲ್ಲ. ಇದು ಅಧಿಕಾರದ ಸ್ಥಾನದಲ್ಲಿ ಇರುವ ಬಲಾಢ್ಯರಿಗೆ ಸ್ಪಷ್ಟ ಸಂದೇಶವನ್ನು ನೀಡುತ್ತದೆ; ಅವರು ತಮ್ಮ ಅಧಿಕಾರವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು ಹಾಗೂ ವಿವಾದಗಳ ಮತ್ತು ಸಾಕ್ಷ್ಯಗಳ ಕಾನೂನಿನ ಜಟಿಲ ವ್ಯವಸ್ಥೆಯ ಹಿಂದೆ ಅವಿತುಕೊಂಡು, ದೋಷಮುಕ್ತರಾಗಬಹುದೆಂದು.

ತೀರ್ಪುಗಳ ವಿರುದ್ಧ ಅಪೀಲ್ ಸಲ್ಲಿಸಬಹುದು, ಅವುಗಳನ್ನು ಬದಲಿಸಬಹುದು. ಅಂದರೆ, ತೀರ್ಪುಗಳು ಕಂಡುಕೊಂಡ ಸಂಗತಿಗಳು ತಪ್ಪಾಗಿರುವ ಸಾಧ್ಯತೆಯೂ ಇರುತ್ತದೆ.

ಇಲ್ಲಿರುವ ಪ್ರಮುಖ ಅಂಶವೇನೆಂದರೆ, ದೂರುದಾರಳಿಗೆ ತೋರಿದ ಅಗೌರವ, ದೂರುದಾರಳ ಸ್ವಾಭಿಮಾನಕ್ಕೆ ಆದ ಅವಮಾನ, ಗಾಯ ಮತ್ತು ಹಾನಿ. ಅವನ್ನೆಲ್ಲ ಅಳಿಸಿಹಾಕಬಹುದೇ ಅಥವಾ ಹಾನಿಯ ನಷ್ಟವನ್ನು ತುಂಬಬಹುದೇ? ನ್ಯಾಯಾಲಯವು ಆ ದೂರುದಾರಳ ಘನತೆಯನ್ನು ಸಾರ್ವಜನಿಕವಾಗಿ ಕಸಿದುಕೊಂಡಿರುವುದು ಸರಿಯೇ?

ಇದನ್ನೂ ಓದಿ: ಕೇರಳ: ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಬಿಷಪ್ ಫ್ರಾಂಕೋ ಖುಲಾಸೆ

ಬಲಾತ್ಕಾರಕ್ಕೆ ಒಳಗಾದ ನಂತರ ಸಂತ್ರಸ್ತೆ ಹೀಗೆ ಇರಬೇಕು, ಹಾಗೆ ಇರಬೇಕು, ಅವರ ನಡತೆ, ಅವರ ಚಹರೆಯ ಹಾವಭಾವಗಳು ಒಂದು ರೀತಿಯಲ್ಲಿ ಇರಬೇಕು ಎಂಬ ತಿಳಿವಳಿಕೆ ಚಾಲ್ತಿಯಲ್ಲಿದೆ. ಸಂತ್ರಸ್ತೆಯು ಸಮಾರಂಭಗಳಲ್ಲಿ ಪಾಲ್ಗೊಂಡಿದ್ದು, ಆ ಸಮಾರಂಭಗಳ ವಿಡಿಯೋದಲ್ಲಿ ಸಂತ್ರಸ್ತೆ ನಗುಮುಖದೊಂದಿಗೆ ಕಾಣಿಸಿಕೊಂಡಿದ್ದಾರೆ ಎಂದು ತೀರ್ಪಿನ ವಿವರಗಳಲ್ಲಿ ಬರೆಯಲಾಗಿದೆ. ಇದು ಹೇಗೆ ಪ್ರಸ್ತುತ? ಅಂದರೆ ಈ ಸೆಷನ್ ನ್ಯಾಯಾಲಯವು, ಒಂದು ಸಾರ್ವಜನಿಕ ಸಮಾರಂಭದಲ್ಲಿ ಅದರ ಪ್ರಮುಖ ಸದಸ್ಯೆಯಾಗಿರುವ ಆ ದೂರುದಾರಳ ಚಹರೆಯ ಹಾವಭಾವ ಹೇಗಿತ್ತು ಎಂಬುದರ ಆಧಾರದ ಮೇಲೆ ಆ ವ್ಯಕ್ತಿಯ ಮೇಲೆ ಬಲಾತ್ಕಾರ ಆಗಿದೆಯೋ ಇಲ್ಲವೋ ಎಂದು ತೀರ್ಮಾನಿಸುವುದೇ? ಒಬ್ಬ ಮಹಿಳೆಯು ಬಲಾತ್ಕಾರಕ್ಕೆ ಒಳಗಾದ ಮೇಲೆ ಹೇಗಿರಬೇಕು ಎಂಬುದರ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಪೂರ್ವಾಗ್ರಹಪೀಡಿತ ಅಭಿಪ್ರಾಯಗಳ ಮೇಲೆ ಈ ತೀರ್ಪು ನಿಂತಂತಿದೆ.

ಈ ತೀರ್ಪು ಕೆಲವು ಇತರ ಸಂಬಂಧಗಳ ಸುಳ್ಳು ಮತ್ತು ಅಸ್ಪಷ್ಟ ಆರೋಪಗಳಿಗೆ ಸೀಮಿತಗೊಳ್ಳದೇ, ದೂರುದಾರಳ ದೈಹಿಕ ಭಾಗಗಳ ವೈದ್ಯಕೀಯ ವರದಿಗಳು ಮತ್ತು ಇತರ ದಾಖಲೆಗಳನ್ನೂ ಪರಿಶೀಲಿಸಲು ಶುರು ಮಾಡುತ್ತದೆ, ಲೈಂಗಿಕ ದೌರ್ಜನ್ಯದ ಕೃತ್ಯಕ್ಕೂ ಇವುಗಳಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಈ ತನಿಖೆ ಮಾಡುತ್ತದೆ. ಅದು ದೂರುದಾರಳಿಗೆ ಮೂರನೆಯ ಮೊಲೆತೊಟ್ಟು ಇತ್ತೆ, ಇದೆಯೇ ಅಥವಾ ಆ ಮೊಲೆತೊಟ್ಟನ್ನು ತೆಗೆದುಹಾಕಲು ಆಪರೇಷನ್ ಮಾಡಿಸಿಕೊಂಡಿದ್ದಾರೆಯೇ ಎಂಬುದನ್ನು ಪರೀಕ್ಷಿಸುತ್ತದೆ. ಆ ದೂರುದಾರಳಿಗೆ ಎಷ್ಟು ಮೊಲೆತೊಟ್ಟು ಇದ್ದವು ಎಂಬ ಪ್ರಶ್ನೆ ಹೇಗೆ ಈ ಪ್ರಕರಣಕ್ಕೆ ಪ್ರಸ್ತುತ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಅದಕ್ಕೂ ಆರೋಪಿ ಬಲಾತ್ಕಾರ ಎಸಗಿದ್ದಕ್ಕೂ ಎತ್ತಣ ಸಂಬಂಧ?

ನನ್ ಮೇಲೆ ಬಲಾತ್ಕಾರದ ಅಪರಾಧ ಎಸಗಲಾಗಿದೆಯೇ ಇಲ್ಲವೋ ಎಂದು ತೀರ್ಮಾನಿಸಲು, ಅದಕ್ಕೆ ಸಂಬಂಧಿಸದ ದೂರುದಾರಳ ದೈಹಿಕ ಅಂಗಳ ಸಾಕ್ಷ್ಯದ ಪರೀಕ್ಷೆ ಮತ್ತು ಟಿಪ್ಪಣಿಗಳು ಸಂಪೂರ್ಣವಾಗಿ ಅನಗತ್ಯ ಮತ್ತು ಅವಮಾನಕಾರಿಯಾಗಿವೆ.

ಇನ್ನೊಂದು ಅಂಶವೇನೆಂದರೆ, ಮಹಿಳಾ ದೂರುದಾರಳ ಬಳಸಿದ ಭಾಷೆ ಅಥವಾ ಅಲ್ಲಿಯ ಸಂಸ್ಕೃತಿಯನ್ನು ಈ ತೀರ್ಪು ಪರಿಗಣಿಸದೇ ಇದ್ದದ್ದು. ಆ ಕಂಗ್ರಗೇಷನ್‌ನಲ್ಲಿ ದೂರುದಾರಳು ಒಬ್ಬ ನನ್ ಆಗಿದ್ದರ ಹಿನ್ನೆಲೆ, ಅವರು ತಮ್ಮನ್ನು ತಾವು ವ್ಯಕ್ತಪಡಿಸುವ ರೀತಿ, ತಮ್ಮ ದೇಹದ ಮೇಲೆ ಆದ ಆಘಾತ/ಘಟನೆಯನ್ನು ವಿವರಿಸಲು ಅವರಿಗೆ ಇರುವ ನಾಚಿಕೆ ಮತ್ತು ಹಿಂಜರಿಕೆ, ಅವರ ಖಾಸಗಿತನ, ಇವುಗಳಿಗೆಲ್ಲ ಯಾವುದೇ ಪ್ರಾಮುಖ್ಯತೆ ನೀಡಲಾಗಿಲ್ಲ. ತನ್ನನ್ನು ಹಾಸಿಗೆಯನ್ನು ಹಂಚಿಕೊಳ್ಳಲು ಒತ್ತಾಯಿಸಲಾಯಿತು ಎಂದು ನನ್ ಬಳಸಿರುವ ಭಾಷೆ, ಇದರ ಅರ್ಥ, ಆರೋಪಿಯು ಒತ್ತಾಯಪೂರ್ವಕವಾಗಿ ಅವಳೊಂದಿಗೆ ಸಂಭೋಗ ಮಾಡುತ್ತಿದ್ದಾನೆ ಎಂದು ಸ್ಪಷ್ಟವಾಗುತ್ತದೆ. ಆದರೆ ತೀರ್ಪು ಹೇಳುವುದೇನೆಂದರೆ, ದೂರುದಾರಳು, ’ಅವಳನ್ನು ಅವನೊಂದಿಗೆ ಹಾಸಿಗೆ ಹಂಚಿಕೊಳ್ಳಲು ಒತ್ತಾಯ ಮಾಡಲಾಯಿತು’ ಎಂದಷ್ಟೇ ಹೇಳಿದ್ದು, ಹಾಗೂ ’ಅವನು ಅವಳನ್ನು ಸತತವಾಗಿ ಬಲಾತ್ಕಾರ ಎಸಗಿದ್ದಾನೆ ಎಂದು ಸ್ಪಷ್ಟವಾಗಿ, ಸ್ಪಷ್ಟವಾದ ಪದಗಳಲ್ಲಿ ಹೇಳಿಲ್ಲ’ ಎನ್ನುತ್ತದೆ. “ಅವನು ನನ್ನ ಮೇಲೆ ಸತತವಾಗಿ ಬಲಾತ್ಕಾರ ಎಸಗಿದ್ದಾನೆ” ಎಂಬುದರ ಬದಲಿಗೆ “ಅವನು ತನ್ನ ಹಾಸಿಗೆಯನ್ನು ಹಂಚಿಕೊಳ್ಳಲು ನನ್ನನ್ನು ಒತ್ತಾಯಿಸಿದ್ದಾನೆ” ಎಂದು ಹೇಳಿದ್ದಾರೆಂಬ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ದೋಷಮುಕ್ತ ಎಂದು ಘೋಷಿಸಲಾಗಿದೆ. ಭಾರತದ ಹೆಚ್ಚಿನ ಭಾಷೆಗಳಲ್ಲಿ ವ್ಯಕ್ತಿಯೊಬ್ಬ ತನ್ನ ಹಾಸಿಗೆಯನ್ನು ಹಂಚಿಕೊಳ್ಳುವಂತೆ ಹೇಳುತ್ತಿದ್ದಾನೆ ಎಂದರೆ ಅವನು ಲೈಂಗಿಕ ಸಂಬಂಧ ಬಯಸುತ್ತಿದ್ದಾನೆ ಎಂದರ್ಥ. ಇಂಗ್ಲಿಷಿನಲ್ಲಿಯೂ, ’ನನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಿಯಾ ಅಂದರೆ ನನ್ನೊಂದಿಯೆ ಮಲಗುವೆಯಾ ಅಂದರೆ ಅದರರ್ಥ ನಾನು ನಿನ್ನೊಂದಿಗೆ ಲೈಂಗಿಕ ಸಂಬಂಧ ಬಯಸುತ್ತಿದ್ದೇನೆ.” ಎಂದಾಗುತ್ತದೆ.

ಮುಜಾಫರ್‌ನಗರ: ಗ್ರಾ.ಪಂ ಅಧ್ಯಕ್ಷ ಕೊಲೆ ಪ್ರಕರಣ- 10 ವರ್ಷಗಳ ಬಳಿಕ ಐವರಿಗೆ ಜೀವಾವಧಿ ಶಿಕ್ಷೆ

ಒಪ್ಪಿಗೆಗೆ ಸಂಬಂಧಿಸಿದಂತೆ, ಬಿಷಪ್ ಒಂದು ಅಧಿಕಾರಯುತ ಸ್ಥಾನದಲ್ಲಿ ಇದ್ದಿದ್ದನ್ನು ಈ ತೀರ್ಪು ಗುರುತಿಸುತ್ತದೆ. ಹಾಗಾಗಿ, ಈ ಅಪರಾಧವನ್ನು ’ಅಗ್ರವೇಟೆಡ್ ರೇಪ್’ (ಸಂತ್ರಸ್ತೆಯ ದೈಹಿಕ ಗಾಯಗಳಿಗೂ ಕಾರಣವಾಗಿ) ಎಂದು ಪರಿಗಣಿಸಬೇಕು ಹಾಗೂ ಸಾಕ್ಷ್ಯದ ಹೊರೆ ಆರೋಪಿಯ ಮೇಲೆ ಇರಬೇಕು.

ಒಪ್ಪಿಗೆಯನ್ನು ಒತ್ತಾಯಿಸಲಾದಾಗ, ಅದು ಎಂತಹ ಒಪ್ಪಿಗೆಯಾಗಿರುತ್ತೆ ಎಂದರೆ ಅದನ್ನು ಒಪ್ಪಿಗೆ ಎನ್ನಲಾಗುವುದಿಲ್ಲ ಅಥವಾ ಅಪರಾಧಿಯು ಅಧಿಕಾರದ ಸ್ಥಾನದಲ್ಲಿ ಇದ್ದಾಗ, ಆ ಸಂತ್ರಸ್ತೆಯು ಆ ಸಂಸ್ಥೆಯಲ್ಲಿ ಇರಬೇಕಾಗುವುದು, ಅಪರಾಧಿಯ ಮನ್ನಣೆಯ ಮೇಲೆ ಅವಲಂಬಿತವಾಗಿರುವಾಗ, ಹಾಗೂ ಸಂತ್ರಸ್ತೆಯು ಭಯಗೊಂಡಿದ್ದಲ್ಲಿ, ಹಲವಾರು ಕಾರಣಕ್ಕೆ ಹೆದರಿರಬಹುದು, ತಾನು ಆ ವ್ಯಕ್ತಿಯ ಅಧೀನದಲ್ಲಿರುವ ಸ್ಥಾನದಲ್ಲಿರುವುದರಿಂದ ಅಥವಾ ಒಪ್ಪಿಗೆ ನೀಡಲೇಬೇಕು ಎಂದು ಅಂದುಕೊಂಡಿದ್ದಾಗ, ಅಥವಾ ಆ ಸಂಸ್ಥೆಯಲ್ಲಿರುವ ಶ್ರೇಣಿಕರಣದ ವ್ಯವಸ್ಥೆಯ ಕಾರಣದಿಂದ, ಅವಳು ತಕ್ಷಣವೇ ಕಿರುಚಿಕೊಳ್ಳದೇ, ಸದ್ದು ಗದ್ದಲ ಮಾಡದೇ ಇದ್ದರೂ ಅಥವಾ ತತ್ತತ್‌ಕ್ಷಣ ದೂರು ದಾಖಲಿಸದೇ ಇದ್ದರೂ ಅಥವಾ ಒಪ್ಪಿಗೆ ನೀಡಿದ್ದರೂ, ಅದನ್ನು ಒಪ್ಪಿಗೆ ಎಂದು ಪರಿಗಣಿಸಲು ಆಗುವುದಿಲ್ಲ.

ಮುಂದಿನ ಅಂಶ, ದೂರುದಾರಳಿಗೆ ಅಥವಾ ಸಾಕ್ಷಿಗಳ ಹೇಳಿಕೆಗಳಿಗೆ ಸೂಕ್ತವಾದ ವಿಶ್ವಾಸಾರ್ಹತೆ ನೀಡದೇ ಇರುವುದು, ಈ ಹಿಂದೆ ಆಗಲೇ ಸ್ಥಾಪಿತವಾಗಿರುವ ಬಲಾತ್ಕಾರದ ಕಾನೂನಿನ ಮಾನದಂಡಗಳಿಗೆ ವಿರುದ್ಧವಾಗಿ, ಈ ತೀರ್ಪು ಇಲ್ಲಿನ ಆರೋಪಿಗೆ ಅನುಕೂಲ ಒದಗಿಸಿದೆ. ಈ ತೀರ್ಪು ಸಂದೇಶಗಳ ಮತ್ತು ಇ-ಮೇಲ್‌ಗಳ ಹರವಿಗೆ ಹೋಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಅನ್ನು ತಂದು ಒಪ್ಪಿಸಿಲ್ಲ ಎಂಬುದನ್ನು ಆರೋಪಿಯನ್ನು ದೋಷಮುಕ್ತಗೊಳಿಸಲು ಸಂಬಂಧವಿಲ್ಲದ ಸಾಧನಗಳನ್ನಾಗಿ ಬಳಸಲಾಗಿದೆ.

ಕೊನೆಯದಾಗಿ, ಈ ತೀರ್ಪು ಮಾಡುವುದೇನೆಂದರೆ, ಆರೋಪಿಯ ವಿರುದ್ಧ ದೂರು ದಾಖಲಿಸಲು ಇರುವ ಕಾರಣಗಳನ್ನು ಅಥವಾ ವಿವರಣೆಗಳನ್ನು ಅಥವಾ ಆಧಾರಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತದೆ, ಉದಾಹರಣೆಗೆ, ಈ ಬಿಷಪ್ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಉನ್ನತ ಸ್ಥಾನಕ್ಕೆ ಏರಿದ್ದರಿಂದ ಆಗಬಹುದಾದ ನಕಾರಾತ್ಮಕ ವೃತ್ತಿಪರ ಪೈಪೋಟಿ ಅಥವಾ ಹಗೆತನ, ಆಂತರಿಕ ರಾಜಕೀಯ, ತಡವಾಗಿ ದೂರು ದಾಖಲಾಗಿದ್ದು, ಸಂಸ್ಥೆಯ ಇತರ ಸದಸ್ಯರು ರಾಜಿ ಮಾಡುವಂತೆ ದೂರುದಾರರಿಗೆ ಹೇಳಿದ್ದು, ಇವೆಲ್ಲವುಗಳನ್ನು ಆರೋಪಿಯನ್ನು ಖುಲಾಸೆಗೊಳಿಸಲು ಅನುಕೂಲಕರ ಅಂಶಗಳನ್ನಾಗಿ ಬಳಸಲಾಗಿದೆ. ಹಾಗೂ ಪ್ರತಿಯೊಂದು ವಿಷಯದಲ್ಲಿ ಪ್ರತಿಕೂಲವಾದ ಊಹೆಯನ್ನು ಸಂತ್ರಸ್ತೆಯ ವಿರುದ್ಧ ಬಳಸಲಾಗಿದೆ.

ಶೀಲಾ ರಾಮನಾಥನ್
ಕನ್ನಡಕ್ಕೆ: ರಾಜಶೇಖರ ಅಕ್ಕಿ


ಇದನ್ನೂ ಓದಿ: ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋ ಖುಲಾಸೆ ವಿರುದ್ಧ ಮೇಲ್ಮನವಿಗೆ ಯೋಜಿಸಿದ ಕೇರಳ ಪೊಲೀಸ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Whatever happened it is absulatly wrong
    Again this case should take it to Suprem Court. Nunes who suffered should get Right Judgement. And the Bishop who spoiled her virginity should get proper punishment as per the law.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...