ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಹರಿಯಾಣದ ಅಂಬಾಲಾ ಜಿಲ್ಲೆಗೆ ತಲುಪಿದ್ದು ಅಲ್ಲಿ ಸೋಮವಾರ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು 21ನೇ ಶತಮಾನದ ಕೌರವರು ಎಂದು ಕರೆದಿದ್ದಾರೆ.
“ಕೌರವರು ಯಾರು? ನಾನು ಮೊದಲು ನಿಮಗೆ 21 ನೇ ಶತಮಾನದ ಕೌರವರ ಬಗ್ಗೆ ಹೇಳುತ್ತೇನೆ. ಅವರು ಖಾಕಿ ಚಡ್ಡಿ ಧರಿಸುತ್ತಾರೆ, ಅವರು ಶಾಖೆಗಳನ್ನು ಮಾಡಿ ತಮ್ಮ ಕೈಯಲ್ಲಿ ಲಾಠಿ ಹಿಡಿದುಕೊಳ್ಳುತ್ತಾರೆ… ಭಾರತದ ಇಬ್ಬರು ಮೂವರು ಬಿಲಿಯನೇರ್‌ಗಳು ಈ ಕೌರವರ ಜೊತೆ ನಿಂತಿದ್ದಾರೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪಿಎಂ ಮೋದಿ ನೇತೃತ್ವದ ಆಡಳಿತಾರೂಢ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ನಾಯಕ, “ಪಾಂಡವರು ನೋಟು ಅಮಾನ್ಯೀಕರಣವನ್ನು ಮಾಡಿ, ತಪ್ಪು ಜಿಎಸ್‌ಟಿಯನ್ನು ಜಾರಿಗೆ ತಂದಿದ್ದಾರೆಯೇ? ಅವರು ಎಂದಾದರೂ ಹಾಗೆ ಮಾಡುತ್ತಾರೆಯೇ? ಎಂದಿಗೂ ಇಲ್ಲ. ಏಕೆಂದರೆ, ಅವರು ತಪಸ್ವಿಗಳಾಗಿರುವುದರಿಂದ ಮತ್ತು ನೋಟು ಅಮಾನ್ಯೀಕರಣ, ತಪ್ಪು ಜಿಎಸ್‌ಟಿ, ಕೃಷಿ ಕಾನೂನುಗಳು ಈ ನೆಲದ ತಪಸ್ವಿಗಳಿಂದ ಕದಿಯಲು ಒಂದು ಮಾರ್ಗವಾಗಿದೆ ಎಂದು ಅವರಿಗೆ ತಿಳಿದಿತ್ತು….”
“ನರೇಂದ್ರ ಮೋದಿ ಅವರು ಈ ನಿರ್ಧಾರಗಳಿಗೆ ಸಹಿ ಹಾಕಿದರು. ನೀವು ನಂಬಿ ಅಥವಾ ಬಿಡಿ, ಭಾರತದ ಇಬ್ಬರಿಂದ ಮೂವರು ಬಿಲಿಯನೇರ್‌ಗಳ ಶಕ್ತಿ ಇದರ ಹಿಂದೆ ಇತ್ತು” ಎಂದು ಅವರು ಹೇಳಿದ್ದಾರೆ.
“ಜನರಿಗೆ ಇದು ಅರ್ಥವಾಗುತ್ತಿಲ್ಲ, ಆದರೆ ಅಂದಿನ ಹೋರಾಟವೇ ಇಂದು ಕೂಡಾ ಇದೆ. ಯಾರ ನಡುವೆ ಈ ಹೋರಾಟ? ಪಾಂಡವರು ಯಾರು?. ಪಾಂಡವರು ಈ ನೆಲದ ಮೇಲೆ ಎಂದಾದರೂ ದ್ವೇಷವನ್ನು ಹರಡುತ್ತಾರೆಯೆ? ಮತ್ತು ಅಮಾಯಕರ ಮೇಲೆ ಯಾವುದಾದರೂ ಅಪರಾಧ ಮಾಡಿರುವ ಬಗ್ಗೆ ಎಂದಾದರೂ ಜನರು ಕೇಳಿದ್ದಾರೆಯೇ?” ಎಂದು ಅವರು ಕೇಳಿದ್ದಾರೆ.
“ಒಂದೆಡೆ ಈ ಐವರು ತಪಸ್ವಿಗಳಿದ್ದರೆ ಮತ್ತೊಂದೆಡೆ ಕಿಕ್ಕಿರಿದ ಸಂಘಟನೆ. ಪಾಂಡವರೊಂದಿಗೆ ಎಲ್ಲ ಧರ್ಮದವರೂ ಇದ್ದಾರೆ. ಈ ಭಾರತ್ ಜೋಡೋ ಯಾತ್ರೆಯಂತೆ, ಯಾರೂ ಎಲ್ಲಿಂದ ಬರುತ್ತಾರೆ ಎಂದು ಯಾರನ್ನೂ ಕೇಳುವುದಿಲ್ಲ. ಇದು ಪ್ರೀತಿಯ ಅಂಗಡಿ. ಪಾಂಡವರೂ ಅನ್ಯಾಯದ ವಿರುದ್ಧ ನಿಂತಿದ್ದರು, ಅವರೂ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆದಿದ್ದರು. ಇದು ಮಹಾಭಾರತದ ನಾಡು” ಎಂದು ರಾಹುಲ್ ಹೇಳಿದ್ದಾರೆ.



RSS ನವರು ಕೌರವರು ಅಲ್ಲ ! ☺️☺️
ಚಡ್ಡಿಗಳು ಶಕುನಿಗಳು, BJP ಯವರು ಕೌರವರು. 😢😢