ಕಳೆದ ಜುಲೈನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಲ್ಯಾಂಡ್‌ಲೈನ್ ಫೋನ್‌ಗೆ ಖಲಿಸ್ತಾನ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಧ್ವನಿಯಲ್ಲಿ ಮೊದಲೆ ರೆಕಾರ್ಡ್ ಮಾಡಲಾದ ಸಂದೇಶವನ್ನು ಕಳುಹಿಸಲಾಗಿದ್ದು, ಅದರಲ್ಲಿ ಭಾರತೀಯ ಸಂಸತ್ತು ಮತ್ತು ಕೆಂಪು ಕೋಟೆ ಪ್ರದೇಶದ ಮೇಲೆ ಬಾಂಬ್ ದಾಳಿ ಮಾಡುವ ಬೆದರಿಕೆ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ನ್ಯಾಯಮಂಡಳಿಗೆ ತಿಳಿಸಿದೆ ಎಂದು ಗುರುವಾರ ದಿ ಹಿಂದೂ ವರದಿ ಮಾಡಿದೆ. ಖಲಿಸ್ತಾನ್ ಪ್ರತ್ಯೇಕತಾವಾದಿ
ಅಷ್ಟೆ ಅಲ್ಲದೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದರಾದ ಎ.ಎ. ರಹೀಮ್ ಮತ್ತು ವಿ. ಶಿವದಾಸನ್ ಅವರ ಮೊಬೈಲ್ ಫೋನ್‌ಗಳಿಗೆ ಕೂಡಾ ಅದೇ ಸಂದೇಶವನ್ನು ಕಳುಹಿಸಿ ಬೆದರಿಕೆ ಹಾಕಲಾಗಿದೆ ಎಂದು ಪತ್ರಿಕೆಯ ವರದಿ ಹೇಳಿದೆ. ಖಲಿಸ್ತಾನ್ ಪ್ರತ್ಯೇಕತಾವಾದಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜನವರಿ 27 ರಂದು ನ್ಯಾಯಮಂಡಳಿ ನೀಡಿದ ಆದೇಶವು, ಪನ್ನುನ್ ಅವರ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಮೇಲಿನ ಕೇಂದ್ರ ಸರ್ಕಾರದ ನಿಷೇಧವನ್ನು ಇನ್ನೂ ಐದು ವರ್ಷಗಳ ಕಾಲ ಎತ್ತಿಹಿಡಿದಿದೆ. ಐದು ವರ್ಷಗಳ ಹಿಂದೆ 2019 ರಲ್ಲಿ ಈ ಸಂಘಟನೆಯನ್ನು ಮೊದಲ ಬಾರಿ ನಿಷೇಧಿಸಲಾಗಿತ್ತು ಮತ್ತು ಜುಲೈ 10 ರಂದು ಈ ಆದೇಶವನ್ನು ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಲಾಯಿತು.
ಅಮೆರಿಕನ್ ಮತ್ತು ಕೆನಡಾದ ಪ್ರಜೆಯಾದ ಪನ್ನುನ್, ಸಿಖ್ಖರಿಗೆ ಸ್ವತಂತ್ರ ದೇಶವಾದ ಖಲಿಸ್ತಾನವನ್ನು ನೀಡಬೇಕು ಎಂದು ಪ್ರತಿಪಾದಿಸುವ ಪ್ರತ್ಯೇಕವಾದಿಯಾಗಿದ್ದಾರೆ. 2020 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಅವರನ್ನು “ವೈಯಕ್ತಿಕ ಭಯೋತ್ಪಾದಕ” ಎಂದು ಘೋಷಿಸಲಾಯಿತು.
2021 ರಿಂದ, ಸಿಖ್ಸ್ ಫಾರ್ ಜಸ್ಟೀಸ್ ಭಾರತದಿಂದ ಪ್ರತ್ಯೇಕ ಸಿಖ್ ದೇಶವನ್ನು ರಚಿಸಬೇಕು ಎಂಬ ಬಗ್ಗೆ ಕೆನಡಾ ಸೇರಿದಂತೆ ವಿದೇಶಗಳಲ್ಲಿ ಹಲವಾರು ಅನಧಿಕೃತ “ಜನಮತಸಂಗ್ರಹ” ಗಳನ್ನು ಆಯೋಜಿಸಿದೆ. 2018 ರಿಂದ ಹಲವಾರು ರಾಜ್ಯ ಪೊಲೀಸ್ ಪಡೆಗಳು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಸಿಖ್ ಫಾರ್ ಜಸ್ಟೀಸ್ ವಿರುದ್ಧ ಕನಿಷ್ಠ 122 ಪ್ರಕರಣಗಳನ್ನು ದಾಖಲಿಸಿವೆ. ಈವರೆಗೆ ಪ್ರಕರಣಗಳಲ್ಲಿ ಒಟ್ಟು 105 ಜನರನ್ನು ಬಂಧಿಸಲಾಗಿದೆ ಎಂದು ದಿ ಹಿಂದೂ ಮಾಡಿದೆ.
ರಕ್ಷಣಾ ಸಚಿವರಿಗೆ ಕಳುಹಿಸಲಾಗಿದೆ ಎಂಬ ಬೆದರಿಕೆ ಧ್ವನಿಯಲ್ಲಿ, ಸಿಖ್ಖರು ಭಾರತ ಸರ್ಕಾರದ ಅಡಿಯಲ್ಲಿ “ಅಸ್ತಿತ್ವದ ಬೆದರಿಕೆಗಳನ್ನು” ಎದುರಿಸುತ್ತಿದ್ದಾರೆ ಮತ್ತು ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯನ್ನು ಮಾಡಲು ಬಯಸದಿದ್ದರೆ ಸಂಸದರು ಮನೆಯಲ್ಲೇ ಇರಬೇಕೆಂದು ಪನ್ನುನ್ ಎಚ್ಚರಿಸಿದ್ದಾರೆ ಎಂದು ನ್ಯಾಯಮಂಡಳಿಗೆ ಕೇಂದ್ರ ಸರ್ಕಾರ ನೀಡಿದ ಅಫಿಡವಿಟ್ ಸಲ್ಲಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.
“ಈ ಕರೆ ಅಂತರರಾಷ್ಟ್ರೀಯ ಸಂಖ್ಯೆಯಿಂದ ಬಂದಿದ್ದು, ಇಂಟರ್‌ಪೋಲ್ ಸಹಾಯದಿಂದ ಬಳಕೆದಾರರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಗೃಹ ಸಚಿವಾಲಯವನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. 2023 ರಲ್ಲಿ ಪಂಜಾಬ್‌ನಲ್ಲಿ ನಡೆದ ರೈಲ್ವೆ ಧ್ವಂಸ ಪ್ರಕರಣಗಳಲ್ಲಿ ಸಿಖ್ಸ್ ಫಾರ್ ಜಸ್ಟೀಸ್‌ನೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಅಲ್ಲದೆ, ಮಾರ್ಚ್ 14, 2023 ರಂದು, ಭಟಿಂಡಾದ ಲೆಹ್ರಾ ಮಾವುತ್ ಗ್ರಾಮದಲ್ಲಿ ಹಳಿಯ ಕ್ಲಿಪ್‌ಗಳನ್ನು ಸಿಖ್ಸ್ ಫಾರ್ ಜಸ್ಟೀಸ್ ಸದಸ್ಯರು ತೆಗೆದುಹಾಕಿದ್ದಾರೆ ಎಂದು ಅಫಿಡವಿಟ್ ಆರೋಪಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ. ನಾಲ್ಕು ದಿನಗಳ ನಂತರ, ಪನ್ನುನ್ ಅವರ ನಿರ್ದೇಶನದ ಮೇರೆಗೆ ಅವರು ಪತ್ರಾಲಾ ರೈಲು ನಿಲ್ದಾಣದ ಬಳಿಯ ರೈಲ್ವೆ ಹಳಿಯಿಂದ ಸುಮಾರು 50 ಕ್ಲಾಂಪ್‌ಗಳನ್ನು ತೆಗೆದುಹಾಕಿದ್ದಾರೆ ಎಂದು ಸರ್ಕಾರ ಅರೋಪಿಸಿದೆ.
ಇದನ್ನೂಓದಿ: ಇದು ಹಿಂದುತ್ವದ ಸರ್ಕಾರ; 10, 12 ನೇ ತರಗತಿಯ ಪರೀಕ್ಷೆಯಲ್ಲಿ ಬುರ್ಖಾ ನಿಷೇಧಿಸಿ – ಮಹಾರಾಷ್ಟ್ರ ಬಿಜೆಪಿ ಸಚಿವ ಒತ್ತಾಯ
ಇದು ಹಿಂದುತ್ವದ ಸರ್ಕಾರ; 10, 12 ನೇ ತರಗತಿಯ ಪರೀಕ್ಷೆಯಲ್ಲಿ ಬುರ್ಖಾ ನಿಷೇಧಿಸಿ – ಮಹಾರಾಷ್ಟ್ರ ಬಿಜೆಪಿ ಸಚಿವ ಒತ್ತಾಯ


