Homeಅಂತರಾಷ್ಟ್ರೀಯಶಿಂಜೊ ಅಬೆ ಹತ್ಯೆ; ಹಿಂತಿರುಗಿ ನೋಡಿದಾಗ..

ಶಿಂಜೊ ಅಬೆ ಹತ್ಯೆ; ಹಿಂತಿರುಗಿ ನೋಡಿದಾಗ..

- Advertisement -
- Advertisement -

ಜುಲೈ 8, 2022ರಂದು ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ನರ ಎಂಬ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಜಪಾನಿನಲ್ಲಿ ರಾಜ್ಯಸಭೆಗೆ ಸಮನಾದ ಹೌಸ್ ಆಫ್ ಕೌನ್ಸಿಲರ್ಸ್ ಚುನಾವಣೆಯಲ್ಲಿ ಅವರು ತನ್ನ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‌ಡಿಪಿ) ಪರ ಪ್ರಚಾರ ಮಾಡುತ್ತಿದ್ದಾಗ, ಅವರ ಹಿಂಬದಿಯಿಂದ ಮತ್ತು ಅತೀ ಹತ್ತಿರದಿಂದ ಗುಂಡು ಹಾರಿಸಲಾಗಿತ್ತು. ಅವರನ್ನು ನರ ವೈದ್ಯಕೀಯ ವಿಶ್ವವಿದ್ಯಾಲಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅಲ್ಲಿ ಅಸುನೀಗಿದರು. ನಿಗದಿಯಾಗಿದ್ದಂತೆ ಚುನಾವಣೆಯು ಜುಲೈ 10ರಂದು ನಡೆಯಿತು.

ಅವರ ಹತ್ಯೆಗೆ ಬಳಸಲಾದ ಬಂದೂಕು ಮನೆಯಲ್ಲೇ ತಯಾರಿಸಿದ್ದಾಗಿತ್ತು. ಎರಡು ಉದ್ದವಾದ ಕೊಳವೆಗಳನ್ನು ಕಪ್ಪು ಟೇಪಿನಿಂದ ಜೋಡಿಸಲಾಗಿತ್ತು. ಈ ಅಸ್ತ್ರವು ಒಟ್ಟಾರೆಯಾಗಿ ಸುಮಾರು 40 ಸೆಂಟಿಮೀಟರ್ ಉದ್ದ ಮತ್ತು 20 ಸೆಂಟಿಮೀಟರ್ ಅಗಲವಿತ್ತು. ಹೆಚ್ಚುಕಡಿಮೆ ಅದು ವಯಸ್ಕರು ಬಳಸುವ ಪಿಸ್ತೂಲಿನ ಗಾತ್ರದಲ್ಲಿತ್ತು. ಹತ್ಯೆಯ ಆರೋಪಿ ತೆತ್ಸುಯ ಯಮಗಮಿ ಎಂಬವನನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ. ಆತನ ಮನೆಯನ್ನು ಶೋಧಿಸಿದಾಗ ಬಂದೂಕಿನಂತಹ ಹಲವು ವಸ್ತುಗಳು ಪತ್ತೆಯಾದವು.

ಯಮಗಮಿ ಜಪಾನಿನ ನೌಕಾ ಆತ್ಮರಕ್ಷಣಾ ದಳದ ಒಬ್ಬ ಮಾಜಿ ನಾವಿಕ. ದಕ್ಷಿಣ ಕೊರಿಯಾ ಮೂಲದ ನವಯುಗದ ಕ್ರೈಸ್ತ ಧಾರ್ಮಿಕ ಚಳವಳಿಯಾದ ಯುನಿಫಿಕೇಶನ್ ಚರ್ಚ್ ಜಪಾನಿನಾದ್ಯಂತ ಹರಡುವುದರಲ್ಲಿ ಶಿಂಜೋ ಅಬೆ ಅವರ ಪಾತ್ರದ ಬಗ್ಗೆ ತಾನು ಕೋಪ ಹೊಂದಿರುವುದಾಗಿ ಯಮಗಮಿ ತನಿಖೆದಳಕ್ಕೆ ತಿಳಿಸಿದ್ದಾನೆ. ಆತನ ತಾಯಿ ಈ ಚರ್ಚಿನ ಸದಸ್ಯೆಯಾಗಿದ್ದು, ಆಕೆ ಅದಕ್ಕೆ ದೇಣಿಗೆಗಳನ್ನು ನೀಡುತ್ತಿದ್ದುದರಿಂದ, ಚರ್ಚ್ ಆಕೆಯನ್ನು ದಿವಾಳಿ ಮಾಡಿದೆ ಎಂದು ಆತ ಆರೋಪಿಸಿದ್ದಾನೆ. ಶಿಂಜೋ ಅಬೆ ಈ ಗುಂಪಿಗೆ ಹತ್ತಿರವಾಗಿದ್ದರು ಎಂದು ಆತ ನಂಬಿದ್ದರೂ, ಈ ಆರೋಪಕ್ಕೆ ಯಾವುದೇ ಆಧಾರ ಇರುವಂತೆ ಕಾಣುವುದಿಲ್ಲ.

ಶಿಂಜೋ ಅಬೆ ಜಪಾನಿನ ಇತಿಹಾಸದಲ್ಲಿಯೇ ಅತ್ಯಂತ ದೀರ್ಘ ಕಾಲ ಪ್ರಧಾನಿಯಾಗಿದ್ದ ವ್ಯಕ್ತಿ. ಅಷ್ಟು ಕಾಲ ಅಧಿಕಾರದಲ್ಲಿದ್ದ ಇನ್ನೊಬ್ಬ ಪ್ರಧಾನಿ ಎಂದರೆ, 1960ರ ದಶಕದಲ್ಲಿದ್ದ ಐಸಾಕು ಸ್ಯಾಟೊ ಮಾತ್ರ. ಇತ್ತೀಚಿನ ಎಲ್ಲಾ ಪ್ರಧಾನಿಗಳು ಹೆಚ್ಚೆಂದರೆ, ಒಂದು ಅವಧಿಗೆ ಮಾತ್ರ ಇದ್ದರು. ಅಬೆ ಎರಡು ಅವಧಿಯಲ್ಲಿ ನಾಲ್ಕು ಬಾರಿ ಪ್ರಧಾನಿಯಾಗಿದ್ದರು. ಮೊದಲ ಅವಧಿಯಲ್ಲಿ, 2006ರಲ್ಲಿ ಒಂದು ವರ್ಷ ಮತ್ತು ಎರಡನೆಯ ಅವಧಿಯಲ್ಲಿ 2012ರಿಂದ 2020ರ ತನಕ.

ಶಿಂಜೋ ಅಬೆಯನ್ನು ಇಪ್ಪತ್ತೊಂದನೇ ಶತಮಾನದ ಹೊಸತಲೆಮಾರಿನ ಅತಿಪೌರುಷದ ಸರ್ವಾಧಿಕಾರಿ ನಾಯಕರಲ್ಲಿ ಒಬ್ಬರೆಂದು ಕೆಲವೊಮ್ಮೆ ಪರಿಗಣಿಸಲಾಗುತ್ತದೆ. ಅವರ ಮೊದಲ ಅವಧಿ ಅದಾಗಲೇ ವಿವಾದಾಸ್ಪದವಾಗಿತ್ತು. ಮೊದಲಿಗೆ ಅವರು “ದೇಶಪ್ರೇಮ ಮತ್ತು ಸ್ವಂತ ಊರಿನ ಪ್ರೇಮವನ್ನು ಉತ್ತೇಜಿಸುವ” ಉದ್ದೇಶ ಹೊಂದಿದ್ದ ಮಸೂದೆಯೊಂದನ್ನು ಮುಂದಿಟ್ಟರು. ಅದು- ಜಪಾನ್ ಹಿಂದೆ ಮಾಡಿದ್ದ ತಪ್ಪುಗಳನ್ನು ಕಾಣಿಸುವ- ದೇಶದ ಇತಿಹಾಸದ ಕೆಲವು ಭಾಗಗಳನ್ನು ಅಳಿಸಿಹಾಕಿ, ಹೆಮ್ಮೆ- ಸಾಂಪ್ರದಾಯಿಕ ಶಿಂಟೋ ಮೌಲ್ಯಗಳನ್ನು ಬೆಳೆಸುವ, ಸಾಮ್ರಾಜ್ಯಶಾಹಿ ಪರಂಪರೆಯ ಕುರಿತು ಹೆಮ್ಮೆಯನ್ನು ಉತ್ತೇಜಿಸುವ ಕಾರ್ಯಕ್ಕೆ ಅಡಿಪಾಯ ಹಾಕುವ ಉದ್ದೇಶ ಹೊಂದಿತ್ತು.

ಎರಡನೆಯದಾಗಿ, ಮಹಿಳೆಯರು ಜಪಾನಿನ ಸಾಮ್ರಾಜ್ಞೆಯಾಗುವ ಅವಕಾಶ ಒದಗಿಸುವ ತಿದ್ದುಪಡಿಯನ್ನು ಅಬೆ ವಿರೋಧಿಸಿದರು. ಈ ನಿಲುವುಗಳು ಅಬೆಯ ಜನಪ್ರಿಯತೆಯನ್ನು ಕುಸಿಯುವಂತೆ ಮಾಡಿ ಅವರ ಪಕ್ಷ ಎಲ್‌ಡಿಪಿ ಮುಂದಿನ ಚುನಾವಣೆಯಲ್ಲಿ ಸೋಲುವಂತಾಯಿತು. ಹಾಗಾಗಿ ಅವರ ಪ್ರಧಾನಿ ಹುದ್ದೆ ಒಂದು ವರ್ಷ ಮಾತ್ರಕ್ಕೇ ಸೀಮಿತವಾಯಿತು.

ಅವರ ಎರಡನೇ ಮತ್ತು ದೀರ್ಘ ಅಧಿಕಾರಾವಧಿಯು 2012ರಲ್ಲಿ ಆರಂಭವಾಯಿತು. ಆವರು ಸಾಂಪ್ರದಾಯಿಕತೆ ಮತ್ತು ರಾಷ್ಟ್ರದ ಹೆಮ್ಮೆ ಎಂಬ ತಳಹದಿಯಲ್ಲಿಯೇ ಮುಂದುವರಿದರು. ಅವರ ಸಾಂಪ್ರದಾಯಿಕತೆಯಲ್ಲಿ ಇತಿಹಾಸವನ್ನು ತಿದ್ದಿಬರೆಯುವುದು ಸೇರಿತ್ತು. ಅಂದರೆ, ಜಪಾನಿನ ಸಾಮ್ರಾಜ್ಯಶಾಹಿಯು ಚೀನ ಮತ್ತು ಕೊರಿಯಾದ ಮೇಲೆ ನಡೆಸಿದ ಯುದ್ಧಗಳು, ಆ ಕಾಲದಲ್ಲಿ ನಡೆಸಿದ ಭೀಕರ ಯುದ್ಧಾಪರಾಧಗಳನ್ನು ನಿರಾಕರಿಸುವುದು, ಮರೆಯುವುದು ಆಥವಾ ಅವುಗಳನ್ನು ಸಂಭ್ರಮಿಸುವುದು ಕೂಡಾ ಸೇರಿತ್ತು.

ಅವರ ನಾಲ್ಕನೇ ಮತ್ತು ಕೊನೆಯ ಅವಧಿಯಲ್ಲಿ- ಹೋಲಿಕೆಯಲ್ಲಿ ಚಿಕ್ಕದೆನಿಸುವಂತಿದ್ದರೂ- ಹಲವಾರು ಹಗರಣಗಳು ಅವರಿಗೆ ಹೊಡೆತ ನೀಡಿದವು. ಇವುಗಳಲ್ಲಿ ಸಂಬಂಧಿಕರು ಮತ್ತು ಸಂಬಂಧಿಕರಿಗೆ ವಿಶೇಷ ಉಪಕಾರ ಮಾಡಿದ್ದು, ಪಶ್ಚಿಮ ಜಪಾನಿನ ಕುರೊಕವದ ಪ್ರವಾಹ ಸಂತ್ರಸ್ತರ ಬಗ್ಗೆ ಅಸಡ್ಡೆ ತೋರಿದ್ದು ಇತ್ಯಾದಿ ಸೇರಿವೆ. ಇವೆಲ್ಲವೂ ಅಧಿಕಾರ ಕೊನೆಗೊಳಿಸುವಷ್ಟು ದೊಡ್ಡದಲ್ಲದಿದ್ದರೂ, ಅವರ ಜನಪ್ರಿಯತೆ ಏರುವ ಬದಲು ಕುಸಿಯಲು ಕಾರಣವಾದವು. ಜೊತೆಗೆ ಅದೇ ತಿಂಗಳು ಆರೋಗ್ಯವೂ ಕೆಟ್ಟ ಕಾರಣದಿಂದ ಸೆಪ್ಟೆಂಬರ್ 2020ರಲ್ಲಿ ಅವರು ಪ್ರಧಾನಿ ಹುದ್ದೆಯಿಂದ ನಿವೃತ್ತಿ ಪಡೆದರು.

ಅಬೆಯ ಅರ್ಥಶಾಸ್ತ್ರ

ಪ್ರಧಾನಿಯಾಗಿರುವಷ್ಟು ಕಾಲ ಅಬೆ, ತನ್ನ ಧೋರಣೆಗಳ (ಅಬೆಯಾನಿಕ್ಸ್) ಮೂಲಕ ದೊಡ್ಡ ಉದ್ದಿಮೆಗಳ ಹಿತಾಸಕ್ತಿಗಳಿಗೆ ನೆರವಾದರು. ಅವರು ತನ್ನ ಅರ್ಥನೀತಿಯು ಮೂರು ಬಾಣಗಳ ಮೇಲೆ ನಿಂತಿದೆ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಅವೆಂದರೆ- ಹೆಚ್ಚಿನ ಸಾಲ, ಆರ್ಥಿಕತೆಯನ್ನು ಉತ್ತೇಜಿಸಲು ಹೆಚ್ಚಿನ ಸರಕಾರಿ ವೆಚ್ಚ ಮತ್ತು ರಾಚನಿಕ ಸುಧಾರಣೆ. ಒಂದೊಂದು ಬಾಣವನ್ನು ಮುರಿಯಬಹುದು; ಮೂರು ಬಾಣಗಳನ್ನು ಜೊತೆಯಾಗಿ ಮುರಿಯಲಾಗದು ಎಂಬ ಹಳೆಯ ಜಪಾನಿ ಕತೆಯಿಂದ ಈ ಬಾಣಗಳನ್ನು ಎತ್ತಿಕೊಂಡದ್ದು.

ಅಬೆ ಅಧಿಕಾರಕ್ಕೆ ಬಂದಾಗ ಯಾವೆಲ್ಲ ರಾಚನಿಕ ಸುಧಾರಣೆಗಳು ಬೇಕು ಎಂಬ ಬಗ್ಗೆ ಅವರ ಪಕ್ಷದ ಸದಸ್ಯರಲ್ಲಿ ಒಮ್ಮತವಿರಲಿಲ್ಲ. ಯಾವೆಲ್ಲಾ ತೆರಿಗೆಗಳನ್ನು ಕಡಿತಗೊಳಿಸಬೇಕು, ಯಾವೆಲ್ಲಾ ಸರಕಾರಿ ವೆಚ್ಚಗಳನ್ನು ಕಡಿತಗೊಳಿಸಬೇಕು ಎಂಬ ಬಗ್ಗೆಯೂ ಒಮ್ಮತವಿರಲಿಲ್ಲ. ಅದರ ನಂತರ, ಅಬೆಯ ಅರ್ಥಶಾಸ್ತ್ರವೇ ಅರ್ಥಕಳೆದುಕೊಂಡಿತು. ಅದು ನೀತಿ ನಿರೂಪಣೆಯ ಬದ್ಧತೆಯನ್ನು ಉಳಿಸಿಕೊಳ್ಳಲಿಲ್ಲ ಬದಲಿಗೆ ತಮ್ಮ ಐಡಿಯಾಗಳ ಸರಕನ್ನು ಜನರಿಗೆ ಮಾರುವುದಕ್ಕೆ ದಾರಿಯಾಯಿತು.

ತೆತ್ಸುಯ ಯಮಗಮಿ

ಅಬೆ ತಾನು ಪ್ರಧಾನಿಯಾಗಿರುವಷ್ಟು ಕಾಲ ಪರಮಾಣು ಶಕ್ತಿಯ ಪರವಾಗಿದ್ದರು. ಅಧಿಕಾರಕ್ಕೆ ಬರುವುದಕ್ಕೆ ಒಂದು ವರ್ಷ ಮೊದಲು ನಡೆದ ಫುಕುಶಿಮ ಅಣು ದುರಂತದ ಹೊರತಾಗಿಯೂ ಅವರು, ಅಣು ಶಕ್ತಿಗೆ ಬದಲಾಗಿ ಜಪಾನಿಗೆ ಬೇರೆ ದಾರಿಯಿಲ್ಲ ಎಂಬ ತನ್ನ ವಾದವನ್ನು ಮುಂದುವರಿಸಿದರು. ಫುಕುಶಿಮ ದುರಂತದ ನಂತರ ಜಪಾನಿನಲ್ಲಿ ಅಣುವಿರೋಧಿ ಭಾವನೆ ಎಷ್ಟು ಪ್ರಬಲವಾಗಿದೆಯೆಂದರೆ, ಅವರಿಗೆ ತಮ್ಮ ಧೋರಣೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಸಂವಿಧಾನದ ಪರಿಚ್ಛೇದ 9

ಅಬೆಯ ಅತ್ಯಂತ ವಿವಾದಾಸ್ಪದ ಕ್ರಮ ಎಂದರೆ, ಜಪಾನಿನ ಸಂವಿಧಾನದ 9ನೇ ಪರಿಚ್ಛೇದದ ಮರುವ್ಯಾಖ್ಯಾನಕ್ಕೆ ಹೊರಟದ್ದು. ಈ ಪರಿಚ್ಛೇದವು ಎರಡನೇ ಮಹಾಯುದ್ಧೋತ್ತರ ಸಂವಿಧಾನದ ಭಾಗವಾಗಿದ್ದು, ಯುದ್ಧವನ್ನು ಕಾನೂನುಬಾಹಿರಗೊಳಿಸುತ್ತದೆ. ’ಸಾಮೂಹಿಕ’ ಸ್ವರಕ್ಷಣೆಗೆ ವಿಶೇಷ ಅವಕಾಶ ಮಾಡಿಕೊಡುವ ಹೊಸ ವ್ಯಾಖ್ಯಾನವೊಂದನ್ನು ಅಬೆ ಪ್ರಸ್ತಾಪಿಸಿದ್ದರು. ಅದರ ಅರ್ಥ ಎಂದರೆ, ಜಪಾನಿನ ಮಿತ್ರ ರಾಷ್ಟ್ರವೊಂದರ ಮೇಲೆ ದಾಳಿ ನಡೆದಾಗ ಜಪಾನ್, ’ಸ್ವರಕ್ಷಣೆಯ ನೆಲೆಯಲ್ಲಿ’ ಯುದ್ಧ ಪ್ರವೇಶಿಸಬಹುದು ಎಂದಾಗಿದೆ. ಇದು ಜಪಾನನ್ನು ಮತ್ತೆ ಒಂದು ಮಿಲಿಟರಿ ಶಕ್ತಿಯಾಗಿ ಬೆಳೆಸುವುದಕ್ಕೆ ಮೊದಲ ಹೆಜ್ಜೆ ಎಂಬಂತೆ ಕಾಣಲಾಗುತ್ತದೆ. ಈ ಹೊಸ ವ್ಯಾಖ್ಯಾನಕ್ಕೆ ಭಾರೀ ವಿರೋಧ ಬಂದಾಗ ಅಬೆ, 9ನೇ ಪರಿಚ್ಛೇದದ ತಿದ್ದುಪಡಿಗೆ ಸಾರ್ವತ್ರಿಕ ಜನಮತಗಣನೆಯ ಬೇಡಿಕೆ ಮುಂದಿಟ್ಟರು. ಅದು ಈ ತನಕ ಅನುಷ್ಟಾನಕ್ಕೆ ಬಂದಿಲ್ಲ.

ಕ್ವಾಡ್ ಒಪ್ಪಂದ

ಅಬೆಯ ಆಡಳಿತದ ಆತ್ಯಂತ ಗಮನಾರ್ಹ ಅಂಶ ಎಂದರೆ, ಮಿಲಿಟರೀಕರಣದ ವಿರುದ್ಧ ಜಪಾನಿನ ಐತಿಹಾಸಿಕವಾದ ನೀತಿಗೆ ವಿರುದ್ಧವಾಗಿ ನಿಂತದ್ದು. ಎರಡನೇ ಜಾಗತಿಕ ಯುದ್ಧದ ನಂತರ ಜಪಾನ್ ಈ ಪ್ರದೇಶದಲ್ಲೇ ಅತ್ಯಂತ ತಟಸ್ಥ ನೀತಿಯ ದೇಶವಾಗಿ ಪ್ರಸಿದ್ಧಿ ಪಡೆದಿದೆ. ಅಬೆ ಇದನ್ನು ಸ್ವಲ್ಪ ಮಟ್ಟಿಗಾದರೂ ಬದಲಿಸಲು ಬಯಸಿದ್ದರು.

ಭಾರತದಲ್ಲಿರುವ ನಮಗೆ, ಜಪಾನ್, ಭಾರತ, ಆಸ್ಟ್ರೇಲಿಯಾ ಮತ್ತು ಯುಎಸ್‌ಎ ನಡುವೆ ಸಮನ್ವಯಿತ ವ್ಯೂಹಾತ್ಮಕ ಭದ್ರತಾ ಮಾತುಕತೆಗೆ 2007ರಲ್ಲಿ ಜಪಾನ್ ಮಾಡಿದ್ದ ಪ್ರಯತ್ನಗಳ ಬಗ್ಗೆ ಗೊತ್ತಿದೆ. ಕ್ವಾಡ್ (QUAD- ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್), ಹಲವು ಅಡೆತಡೆಗಳ ಹೊರತಾಗಿಯೂ ಯುಎಸ್‌ಎಯ ಮಿಲಿಟರಿ ಮೈತ್ರಿಕೂಟದ ಪೌರ್ವಾತ್ಯ ವಿಸ್ತರಣೆಯ ಭಾಗವಾಗುವ ಎಲ್ಲಾ ಆಶಯಗಳನ್ನು ಹೊಂದಿತ್ತು. ಅದರ ಸ್ಥಾಪನೆಗೆ ಚೀನಾದ ವಿರೋಧದ ಕಾರಣದಿಂದಾಗಿ ಈ ಪ್ರಸ್ತಾಪದಲ್ಲಿ ಚೀನಾದ ಉಲ್ಲೇಖವನ್ನು ಮರೆಮಾಚಲು ಯತ್ನಿಸಿದ್ದ ಜಪಾನ್, ನಂತರ ಈ ಪ್ರಸ್ತಾಪವನ್ನೇ ನೆನೆಗುದಿಗೆ ತಳ್ಳಿ ಸುಮ್ಮನೇ ಕುಳಿತಿತ್ತು. ಅದಕ್ಕೆ ಮತ್ತೆ ಜೀವ ಬಂದದ್ದು ಒಂದು ದಶಕದ ನಂತರ- ಯುಎಸ್‌ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆವರ ಚೀನಾ ವಿರೋಧಿ ಧೋರಣೆಯನ್ನು ಜಪಾನ್ ಬಂಡವಾಳ ಮಾಡಿಕೊಂಡಾಗ. ಈ ನಿಟ್ಟಿನಲ್ಲಿ ಶಿಂಜೋ ಅಬೆಯ ನಿಲುವು ಯುಎಸ್‌ಎಯ ಹಿತಾಸಕ್ತಿಗಳಿಗೆ ಅನುಗುಣವಾಗಿಯೇ ಇತ್ತು. ಕೆಲವರು ಕಾಡ್‌ಅನ್ನು ಏಷ್ಯಾದ ನ್ಯಾಟೋ ಎಂದು ಕರೆದಿದ್ದಾರೆ. ಇದರ ಪ್ರಕಾರ ಜಪಾನ್ ಯುಎಸ್‌ಎಯ ಸೇನಾನೆಲೆಗಳಿಗೆ; ಬಹುಶಃ ಪರಮಾಣು ಅಸ್ತ್ರಗಳಿಗೂ ಆಶ್ರಯ ನೀಡಬಹುದು.

ಈ ಪ್ರದೇಶದಲ್ಲಿ ಭಾರತ ಮತ್ತು ಜಪಾನಿನ ಸಾಮೂಹಿಕ ಪ್ರಭಾವವನ್ನು ವಿಸ್ತರಿಸುವ ಮಾತುಕತೆಗಳೂ ನಡೆದಿದ್ದವು. ಆಫ್ರಿಕಾದಲ್ಲಿ ಮೈತ್ರಿಕೂಟದ ಜಾಲವನ್ನು ವಿಸ್ತರಿಸುವ ಸಾಧ್ಯತೆಗಳ ಕುರಿತೂ ಮಾತುಕತೆಗಳು ನಡೆದಿದ್ದವು. ಆದರೆ, ಈ ಮಾತುಕತೆಗಳು ಪ್ರಗತಿ ಕಾಣಲಿಲ್ಲ.

ಅಬೆಯ ನಂತರ

ನಂತರದ ಚುನಾವಣೆಯಲ್ಲಿ ಶಿಂಜೋ ಆಬೆಯ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯು ಮೂರನೇ ಒಂದರಷ್ಟು ಜನಮತ ಪಡೆದು, ಡಯಟ್‌ನ (ಸಂಸತ್ತು) 248 ಸ್ಥಾನಗಳಲ್ಲಿ 119 ಸ್ಥಾನಗಳನ್ನು ಗೆದ್ದಿತು. ಇದು ಡಯಟ್‌ನಲ್ಲಿ ಈ ಪಕ್ಷವನ್ನು ಅತೀ ದೊಡ್ಡ ಪಕ್ಷವನ್ನಾಗಿ ಮಾಡಿದೆ. ಇದೊಂದು ಪ್ರಬಲವಾದ ಬದಲಾವಣೆಯೇನಲ್ಲ. ಆದುದರಿಂದ, ಚುನಾವಣೆಯ ಫಲಿತಾಂಶವನ್ನು ಅಬೆಯ ಹತ್ಯೆಯ ಜೊತೆಗೆ ತಳಕುಹಾಕಲು ಯಾವುದೇ ಕಾರಣಗಳಿಲ್ಲ. ಅಬೆ ಬಿಟ್ಟುಹೋದ ಪರಂಪರೆ ಸಂಕೀರ್ಣವಾಗಿದೆ. ಅವರ ಮಿಲಿಟರಿ ಮತ್ತು ಆರ್ಥಿಕ ಧೋರಣೆಗಳು ಈಗಾಗಲೇ ನೆಲೆಯೂರಿರುವ ಪ್ರವೃತ್ತಿಯ ಪರಿಣಾಮಗಳಾಗಿವೆ. ಆಡಳಿತದ ಕುರಿತು ಅವರ ’ಅಬೆನಾಮಿಕ್ಸ್’ ಹಾದಿಯು ಈಗಾಗಲೇ ಅವರ ಬೆಂಬಲಿಗರ ನಡುವೆಯೂ ಬಹುಮಟ್ಟಿಗೆ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಪ್ರಧಾನಿಯಾಗಿ ಅವರ ದೀರ್ಘಕಾಲದ ಆಡಳಿತವನ್ನು ಸ್ಥಿರತೆಯ ಕಾಲಘಟ್ಟ ಎಂದು ಕಾಣಬಹುದಾದರೂ, ಜಪಾನಿನ ಮಟ್ಟಿಗೆ ಅದು ಕ್ಷಣಿಕವೇ. ಸಂಪ್ರದಾಯವಾದಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ- ಶಿಂಜೋ ಅಬೆ ಇದ್ದರೂ, ಇಲ್ಲದಿದ್ದರೂ ಅಧಿಕಾರದಲ್ಲಿ ಮುಂದುವರಿದಿದೆ.

ಕಿಶೋರ್ ಗೋವಿಂದ
ಕನ್ನಡಕ್ಕೆ; ನಿಖಿಲ್ ಕೋಲ್ಪೆ


ಇದನ್ನೂ ಓದಿ: ಇಸ್ರೇಲ್‌ನ ಅತೀ ದೊಡ್ಡ ಬಂದರು ‘ಅದಾನಿ ಗ್ರೂಪ್’ ವಶಕ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...