Homeಕರ್ನಾಟಕಶ್ರದ್ಧಾಂಜಲಿ; ಕೃಷ್ಣ ಹೆಸರಿನ ಧರ್ಮರಾಯ!

ಶ್ರದ್ಧಾಂಜಲಿ; ಕೃಷ್ಣ ಹೆಸರಿನ ಧರ್ಮರಾಯ!

- Advertisement -
- Advertisement -

ಕೆ.ಆರ್ ಪೇಟೆಯ ಕೃಷ್ಣ ನಿಧನರಾಗಿದ್ದಾರೆ. ಈ ತಲೆಮಾರಿನ ರಾಜಕಾರಣಿಗಳು ಅನುಸರಿಸಲಾಗದ ಕೆಲವು ಮೌಲ್ಯಗಳನ್ನು ಬಿಟ್ಟುಹೋಗಿದ್ದಾರೆ. ಕೃಷ್ಣ ಮಂಡ್ಯ ಜಿಲ್ಲೆ ಕಂಡ ಅಪರೂಪದ ರಾಜಕಾರಣಿಗಳಾದ ಕೆ.ವಿ ಶಂಕರೇಗೌಡರು, ಎಚ್.ಟಿ ಕೃಷ್ಣಪ್ಪ, ಬಂಡಿ ಸಿದ್ದೇಗೌಡ, ಪಾಂಡವಪುರದ ಕೆಂಪಣ್ಣ, ಎಸ್.ಎಂ ಲಿಂಗಪ್ಪ ಇಂತಹವರ ಸಾಲಿಗೆ ಸೇರಿದವರು ಕೃಷ್ಣ. ಅವರು ಮೊದಲು ಮೇಷ್ಟರಾಗಿದ್ದವರು. ಆ ಹುದ್ದೆ ತೊರೆದು ರಾಜಕಾರಣಕ್ಕೆ ಬಂದರೂ ಕಡೆಯವರೆಗೂ ಬಡ ಮೇಷ್ಟರಂತೆಯೇ ಕಾಣುತ್ತಿದ್ದರು. ಅವರನ್ನು ಭೇಟಿಯಾಗಲು ಬಂದವರು ಹೇಳುವುದನ್ನ ಪೂರ್ಣ ಕೇಳಿಸಿಕೊಳ್ಳುವುದು, ಹೇಳಿದ್ದರಲ್ಲಿ ತಪ್ಪಾಗಿದ್ದರೆ ತಿದ್ದಿ ಬುದ್ಧಿ ಹೇಳುವ ಮೇಷ್ಟರ ಗುಣವನ್ನು ಬಿಡಲೇ ಇಲ್ಲ. ಅವರು 1983ರ ಕಾಂಗ್ರೆಸ್ ವಿರೋಧಿ ಅಲೆಯಿಂದ ಗೆದ್ದು ಬಂದವರು. ಆದರೆ ಕೆ.ಆರ್ ಪೇಟೆ ಜನಮನಗೆದ್ದು ಮೂರು ಬಾರಿ ಶಾಸಕರಾಗಿ, ಒಮ್ಮೆ ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ, ಕಡೆಗೆ ವಿಧಾನಸಭೆಯ ಸ್ಪೀಕರ್ ಆದರೂ ಸರಳ ಸಜ್ಜನಿಕೆಯ ಮೇಷ್ಟರಾಗಿ ಉಳಿದರು. ಕೃಷ್ಣರಿಗೆ ಎಲ್ಲ ಅವಕಾಶಗಳೂ ಒದಗಿಬರುವಂತೆ ಮಾಡಿದ ದೇವೇಗೌಡರು ಕೃಷ್ಣ ಅಲಂಕರಿಸಿದ್ದ ಸ್ಪೀಕರ್ ಸ್ಥಾನವನ್ನು ಬಹಳ ಚೆನ್ನಾಗಿ ಬಳಸಿಕೊಂಡರು. ಸ್ಪೀಕರ್ ಸ್ಥಾನದಲ್ಲಿ ಕುಳಿತು ಸಂವಿಧಾನಾತ್ಮಕವಾಗಿ ನಡೆದುಕೊಳ್ಳಲಾರದ ಯಾತನೆ ಅವರಿಗೆ ಕಡೆಯವರೆಗೂ ಉಳಿದಿತ್ತು. ಸಜ್ಜನ ರಾಜಕಾರಣಿಗಳಿಗೆ ಮುಖ ತೋರದಂತ ಕೀಳರಿಮೆ ಅನುಭವಿಸಿದ್ದರು.

ಜನಾಭಿಪ್ರಾಯವಿಲ್ಲದ ನಾಯಕನನ್ನು ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸುವ ಸಮಯದಲ್ಲಿ ಕೃಷ್ಣ, ದೇವೇಗೌಡರ ಸೂಚನೆಯಂತೆ ನಡೆದುಕೊಂಡರು. ಇದರ ಫಲವಾಗಿ ಆ ಮುಂದಿನ ಚುನಾವಣೆಯಲ್ಲಿ ಸೋತರು. 2013ರಲ್ಲಿ ಮತ್ತೆ ಚುನಾವಣೆ ಎದುರಾದಾಗ ಜೆಡಿಎಸ್ ವರಿಷ್ಠರು ಟಿಕೆಟ್ ನೀಡಲಿಲ್ಲ. ನಿಜಕ್ಕೂ ಕೃಷ್ಣ ಮಾಡಿದ ಉಪಕಾರಕ್ಕೆ ಜೆಡಿಎಸ್ ಕಡೆಯವರೆಗೂ ಅವರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಆ ಸಮಯಕ್ಕಾಗಲೇ ಅವರು ಉಪಯೋಗಿಸಿ ಬಿಸಾಕಿದ ವಸ್ತುವಿನಂತಾಗಿದ್ದರು. ಏಕೆಂದರೆ ಬಾಂಬೆಯಿಂದ ಸೂಟ್‌ಕೇಸ್ ಹಿಡಿದು ಬಂದ ನಾರಾಯಣಗೌಡರು ಆಗಲೇ ಲಕಲಕ ಹೊಳೆಯುತ್ತಿದ್ದರು. ಇಂತಹವರ ಎದುರು ನಿವೃತ್ತ ಉಪಾಧ್ಯಾಯನಂತೆ ಕಾಣುವ ಕೃಷ್ಣ ಯಾರಿಗೆ ಬೇಕು! ಈ ಮೊದಲು ಅವರು ಚುನಾವಣೆಗೆ ನಿಂತಾಗ ಜನಗಳೇ ಚಂದಾ ಎತ್ತಿ ಚುನಾವಣೆಯಲ್ಲಿ ಗೆಲ್ಲಿಸಿದ್ದರು. ಆದರೆ ಈಗ ಅಂತಹ ಮೌಲ್ಯಗಳೇ ಪತನಗೊಂಡು ಮತದಾರನೆ ರಾಜಕಾರಣಿ ಕೈಯಿಂದ ಚಂದಾ ವಸೂಲಿಗಿಳಿಯುತ್ತಿದ್ದಾನೆ. ಆದ್ದರಿಂದ ಕೃಷ್ಣ ಮೂಲೆಗುಂಪಾದರು. ಅವರು ಕಡೆಯಲ್ಲಿ ಕಾಂಗ್ರೆಸ್ ಸೇರಿದರೂ ನಾರಾಯಣಗೌಡರೆದುರಿಗೆ ನಿಲ್ಲಲಾಗಲಿಲ್ಲ. ಕೃಷ್ಣರಂತಹ ಸಜ್ಜನ ರಾಜಕಾರಣಿಯನ್ನ ಬೆಂಬಲಿಸಿದ್ದ ಕೆ.ಆರ್ ಪೇಟೆ ಈಗ ಬಿಜೆಪಿ ಪಾಲಾಗಿದೆ. ಈ ಅನಾಹುತಕ್ಕೆ ಕಾರಣ ಕೃಷ್ಣರನ್ನ ದುರುಪಯೋಗಪಡಿಸಿಕೊಂಡವರು.

ಕೃಷ್ಣ ಅಜಾತಶತ್ರು. ಅವರನ್ನ ಟೀಕಿಸಲು ಮತ್ತು ವಿರೋಧಿಸಲು ಕಾರಣಗಳೇ ಇಲ್ಲದಂತೆ ಬದುಕಿದವರು. ಅವರೊಮ್ಮೆ ನಾಗಮಂಗಲ ಐಬಿಗೆ ಬಂದಾಗ ಜನತಾದಳದ ಕಾರ್ಯಕರ್ತನೊಬ್ಬ ಕೇಳಿಸಿಕೊಳ್ಳಲು ಅಸಹ್ಯವಾಗುವ ಬೈಗುಳದಿಂದ ಬೈದ. ಕೃಷ್ಣ ನಗುತ್ತಲೇ ಅದನ್ನ ಸಹಿಸಿಕೊಂಡರು. ಅಂತಹ ಅಸಮಾನ್ಯ ತಾಳ್ಮೆ ಹೊಂದಿದ್ದರು. ಆದರೆ, ಸಾವಿರಾರು ರೂಪಾಯಿ ಸಂಬಳ ಎಣಿಸುವ ಅಧಿಕಾರಿಗಳು ಜನಗಳ ಕೆಲಸ ಮಾಡಿಕೊಡದಿದ್ದರೆ ಅಧಿಕಾರಿಗೆ ಭೂತ ಬಿಡಿಸುತ್ತಿದ್ದರು. ಇದು ಯಾರಿಗೂ ಗೊತ್ತಾಗುತ್ತಿರಲಿಲ್ಲ, ಯಾಕೆಂದರೆ ಅಧಿಕಾರಿಯನ್ನು ತಮ್ಮ ಛೇಂಬರಿಗೆ ಕರೆದು, ಬಾಗಿಲು ಹಾಕಿಕೊಂಡು, ಏರುದನಿಯಲ್ಲಿ ಬೈಯ್ಯುತ್ತಾ, “ಜನಗಳನ್ನು ನನ್ನವರೆಗೂ ಬುಟ್ಟಿದ್ದೀಯಾ, ನೀನ್ಯಾಕ್ಲ ಇರದು? ವಸಿ ಸಂಬ್ಳ ತಗತಿಯೇನೂ” ಎಂದು ಮಂಗಳಾರತಿ ಮಾಡಿ, ಎಚ್ಚರಿಸಿ, ರಿಪೇರಿ ಕೆಲಸ ಮುಗಿಸಿದಂತೆ ಈಚೆ ಬಂದು, ನಂತರ ಎಂದಿನ ಪ್ರಸನ್ನತೆ ಮತ್ತು ಸಮಾಧಾನದಿಂದ “ಸಾಯಬ್ರಿಗೇಳಿದ್ದೀನಿ, ಅವುರು ಮಾಡಿಕೊಡ್ತಾರೆ ಹೋಗ್ರಪ್ಪ ಎಂದು ಕಳಿಸುತ್ತಿದ್ದರು. ಇದು ಈ ಲೋಕಕ್ಕೆ ಗೊತ್ತಿಲ್ಲದಂತೆ ನಡೆದ ವ್ಯವಹಾರ.

ಕೃಷ್ಣ ಶಾಸಕ, ಮಂತ್ರಿ, ಸ್ಪೀಕರ್ ಹೀಗೆ ಹಲವಾರು ಹುದ್ದೆ ನಿಭಾಯಿಸಿದವರು. ದುಡ್ಡು ಮಾಡಿದವರಲ್ಲ. ಅದಾಗಿ ಬಂದುದನ್ನು ಬಡವರಿಗೆ, ಅನಾರೋಗ್ಯದವರಿಗೆ ಹಂಚುತ್ತಿದ್ದರು. ಮಹಾರಾಜ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ಪತ್ನಿ ಇಂದಿರಮ್ಮ ಮತ್ತು ಸಾಕುಮಗಳು ಮಂಜುಳ ಇದಿಷ್ಟೆ ಅವರ ಸಂಸಾರವಾಗಿದ್ದರೂ ಇಡೀ ತಾಲೂಕನ್ನೇ ಬಂಧು ಬಳಗವಾಗಿ ಪರಿಗಣಿಸಿದ್ದರು. ಸಾಮಾನ್ಯರಂತೆ ಸರಕಾರಿ ಬಸ್ಸಿನಲ್ಲಿ, ಆಟೋದಲ್ಲಿ ಓಡಾಡುತ್ತಿದ್ದರು. ಸದ್ಯಕ್ಕೆ ಈ ತರಹ ರಾಜಕಾರಣಿ ಮಂಡ್ಯ ಜಿಲ್ಲೆಯಲ್ಲಿ ಯಾರೂ ಇಲ್ಲ ಎಂಬುದೇ ನೋವಿನ ಸಂಗತಿ.


ಇದನ್ನೂ ಓದಿ: ಶ್ರದ್ಧಾಂಜಲಿ; ಗಾಂಧಿವಾದಿ ಚಳುವಳಿಯ ಪಿತಾಮಹ ಎಚ್ ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...