Homeಮುಖಪುಟದಾಖಲೆ ಬರೆದ ಪೆಟ್ರೋಲ್, ಡೀಸೆಲ್ ಬೆಲೆಗಳು: ಮುಂಬೈನಲ್ಲಿ ಸೆಂಚುರಿ ಬಾರಿಸಿದ ಪೆಟ್ರೋಲ್

ದಾಖಲೆ ಬರೆದ ಪೆಟ್ರೋಲ್, ಡೀಸೆಲ್ ಬೆಲೆಗಳು: ಮುಂಬೈನಲ್ಲಿ ಸೆಂಚುರಿ ಬಾರಿಸಿದ ಪೆಟ್ರೋಲ್

- Advertisement -
- Advertisement -

ಇವತ್ತು ಆರ್ಥಿಕ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ 100 ರೂ. ದಾಟುವುದರೊಂದಿಗೆ ಸಾರ್ವಕಾಲಿಕ ದಾಖಲೆ ಬರೆದಿದೆ. ಮೇ 2ರಿಂದ ಇಲ್ಲಿವರೆಗೆ 15 ನೇ ಬಾರಿಗೆ ದರ ಹೆಚ್ಚಿಸಲಾಗಿದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರಗಳು ಗರಿಷ್ಠ ಮಟ್ಟಕ್ಕೆ ತಲುಪಿವೆ.

ಮೇ 29 ರ ಶನಿವಾರದಂದು ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆಯನ್ನು 26 ಪೈಸೆ ಲೀಟರ್‌ಗೆ ಅಂದರೆ, 93.68 ರೂ.ನಿಂದ 93.94 ಕ್ಕೆ ಏರಿಸಿದರೆ, ಡೀಸೆಲ್ ಬೆಲೆಯನ್ನು 84.61 ರಿಂದ 28 ಪೈಸೆ ಹೆಚ್ಚಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಪ್ರಕಾರ ಪ್ರತಿ ಲೀಟರ್‌ಗೆ ಈಗ ಡಿಸೇಲ್ ದರ 84.89 ರೂ.ಗೆ ತಲುಪಿದೆ.

ಪಶ್ಚಿಮ ಬಂಗಾಳ, ತಮಿಳುನಾಡು ಸೇರಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದರ ಪರಿಷ್ಕರಣೆಯಲ್ಲಿ 18 ದಿನಗಳ ವಿರಾಮವನ್ನು ನೀಡಿದ್ದ ಕಂಪನಿಗಳು, ಮೇ 2ರಂದು ಫಲಿತಾಂಶಗಳು ಹೊರಬಿದ್ದ ದಿನದಿಂದ ಇಲ್ಲಿವರೆಗೆ 15 ಸಲ ದರ ಏರಿಕೆ ಮಾಡಿವೆ.

ಪೆಟ್ರೋಲ್ ಮುಂಬಯಿಯಲ್ಲಿ 100 ರೂ. ಗಡಿ ದಾಟಿದ್ದು ಅದು ಈಗ 100.19 ರೂ ಆಗಿದೆ. ಮುಂಬೈನಲ್ಲಿ ಡೀಸೆಲ್ ದರ 92.17 ರೂ.ಗೆ ಏರಿದೆ. ಇದಲ್ಲದೆ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಹಲವಾರು ನಗರಗಳಲ್ಲಿ ಪೆಟ್ರೋಲ್ ದರವು ಈಗಾಗಲೇ 100 ರೂ ದಾಟಿದೆ. ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್‌ನಿಂದಾಗಿ ದೇಶದ ರಾಜ್ಯಗಳಲ್ಲಿ ಇಂಧನ ದರಗಳು ಬದಲಾಗುತ್ತವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ, ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸೇರಿದಂತೆ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ವಿದೇಶಿ ವಿನಿಮಯ ದರಗಳಲ್ಲಿನ ಯಾವುದೇ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡು ದೇಶೀಯ ಇಂಧನದ ದರವನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ಹೊಂದಿಸುತ್ತವೆ. ಇಂಧನ ಬೆಲೆಯಲ್ಲಿನ ಯಾವುದೇ ಬದಲಾವಣೆಗಳನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ತರಲಾಗುತ್ತದೆ.

ಪೆಟ್ರೋಲ್, ಡೀಸೆಲ್ ಬೆಲೆಗಳು ರೆಕಾರ್ಡ್ ಹೈನಲ್ಲಿ, ಪೆಟ್ರೋಲ್ ಮುಂಬೈನಲ್ಲಿ 100 ರೂ ಆದರೆ
ದೆಹಲಿ, ಬೆಂಗಳೂರು, ಚೆನ್ನೈ ಮುಂಬೈನಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾಗಿದೆ.

ಈ ನಡುವೆ, ಮೇ 28 ರ ಶುಕ್ರವಾರ, ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ದರವು ಪ್ರತಿ ಬ್ಯಾರೆಲ್‌ಗೆ ಶೇ 0.30 ರಷ್ಟು ಏರಿಕೆ ಕಂಡು 69.67 ಡಾಲರ್‌ಗೆ ತಲುಪಿದೆ.


ಇದನ್ನೂ ಓದಿ: 99.94 ರೂ ತಲುಪಿದ ಪೆಟ್ರೋಲ್ ದರ: ಬ್ಯಾಟಿಂಗ್ ದೈತ್ಯ ಡಾನ್ ಬ್ರಾಡಮನ್‌ಗೆ ಮುಂಬೈ ಶ್ರದ್ದಾಂಜಲಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...