ಓಲಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟದ ನಂತರದ ಮತ್ತು ಸೇವಾ ಗುಣಮಟ್ಟದ ಕುರಿತು ನಡೆಯುತ್ತಿರುವ ವಾಕ್ಸಮರದದ ನಡುವೆಯೇ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಸೋಮವಾರ ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಅವರ ಉದ್ಯೋಗದ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅವರು ಕೆಲ ಷರತ್ತುಗಳನ್ನೂ ಇಟ್ಟುದ್ದಾರೆ.
ಈ ತಿಂಗಳ ಆರಂಭದಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಕುನಾಲ್ ಕಮ್ರಾ, “ಓಲಾದೊಂದಿಗೆ ಕೆಲಸ ಮಾಡುವ ಅಗರ್ವಾಲ್ ಅವರ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಯಾವುದೇ ಆಯ್ಕೆಯಿಲ್ಲ” ಎಂದು ಹೇಳಿದ್ದಾರೆ. “ಸಾವಿರಾರು ಬಾರಿ ಟ್ಯಾಗ್ ಮಾಡಿದ ನಂತರ ನಾನು ಓಲಾ ಉದ್ಯೋಗಿ ಎಂದು ಭಾವಿಸುತ್ತೇನೆ” ಎಂದು ಅವರು ಹೇಳಿದರು.
I have no choice but to accept @bhash’s offer to work with OLA…
After being tagged thousands of times I anyway feel like I am an OLA employee.
OLA can seal this collaboration by committing to the below action points & looking forward to joining. pic.twitter.com/flqOgIkUo6— Kunal Kamra (@kunalkamra88) October 28, 2024
ಅಕ್ಟೋಬರ್ 6 ರಂದು ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸೇವಾ ಕೇಂದ್ರದ ಪರಿಸ್ಥಿತಿ ಕುರಿತು ಧ್ವನಿ ಎತ್ತಿದ ಬಳಿಕ, ಓಲಾ ಸಿಇಓ ಕುನಾಲ್ ಕಮ್ರಾ ಅವರನ್ನು ಬಂದು ಸಹಾಯ ಮಾಡುವಂತೆ ಆಹ್ವಾನಿಸಿದ್ದರು.
ಓಲಾ ಸೇವಾ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯ ಇವಿ ಸ್ಕೂಟರ್‌ಗಳನ್ನು ನಿಲ್ಲಿಸಿರುವುದನ್ನು ತೋರಿಸುವ ಚಿತ್ರವನ್ನು ಕಮ್ರಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದಾಗ ವಾಗ್ವಾದ ಪ್ರಾರಂಭವಾಯಿತು.
“ಭಾರತೀಯ ಗ್ರಾಹಕರು ಧ್ವನಿ ಹೊಂದಿದ್ದಾರೆಯೇ? ಅವರು ಇದಕ್ಕೆ ಅರ್ಹರೇ? ದ್ವಿಚಕ್ರ ವಾಹನಗಳು ಅನೇಕ ದೈನಂದಿನ ಕೂಲಿ ಕಾರ್ಮಿಕರ ಜೀವನಾಡಿ” ಎಂದು ಹಾಸ್ಯನಟ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಭವಿಶ್ ಅಗರ್ವಾಲ್, ಇದು ಪೇಯ್ಡ್ ಟ್ವೀಟ್ ಎಂದು ಹೇಳಿದ್ದಾರೆ.
“ನೀವು ತುಂಬಾ ಕಾಳಜಿ ವಹಿಸುತ್ತಿರುವುದರಿಂದ, ಬನ್ನಿ ಮತ್ತು ನಮಗೆ ಸಹಾಯ ಮಾಡಿ! ಈ ಪಾವತಿಸಿದ (ಪೇಯ್ಡ್) ಟ್ವೀಟ್‌ಗಾಗಿ ಅಥವಾ ನಿಮ್ಮ ವಿಫಲ ಹಾಸ್ಯ ವೃತ್ತಿಯಿಂದ ನೀವು ಗಳಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ನಾನು ಪಾವತಿಸುತ್ತೇನೆ. ನಾವು ಸೇವಾ ನೆಟ್‌ವರ್ಕ್ ಅನ್ನು ವೇಗವಾಗಿ ವಿಸ್ತರಿಸುತ್ತಿದ್ದೇವೆ ಮತ್ತು ಬ್ಯಾಕ್‌ಲಾಗ್‌ಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು” ಎಂದು ಅವರು ಬರೆದಿದ್ದಾರೆ.
ಈಗ, ಓಲಾ ವಿವಿಧ “ಆಕ್ಷನ್ ಪಾಯಿಂಟ್‌ಗಳಿಗೆ” ಬದ್ಧರಾಗುವ ಮೂಲಕ “ಈ ಸಹಯೋಗವನ್ನು ಮುಚ್ಚಬಹುದು” ಎಂದು ಕಮ್ರಾ ಹೇಳಿದರು.
“ಓಲಾ ಎಲೆಕ್ಟ್ರಿಕ್ ತಮ್ಮ ಸೇವಾ ಬಿಕ್ಕಟ್ಟನ್ನು ಪರಿಹರಿಸಲು ತಮ್ಮ ಬದ್ಧತೆಯಲ್ಲಿ ದೃಢವಾಗಿ ನಿಲ್ಲಬೇಕು. ಅಧಿಕೃತ ಸೇವಾ ಕೇಂದ್ರಗಳಲ್ಲಿ ಸೇವಾ ವಿನಂತಿಯಿಂದ ಏಳು ವ್ಯವಹಾರ ದಿನಗಳಲ್ಲಿ ಎಲ್ಲ ಸ್ಕೂಟರ್ ರಿಪೇರಿಗಳನ್ನು ಪೂರ್ಣಗೊಳಿಸಲು ಓಲಾ ಬದ್ಧವಾಗಿರಬೇಕು” ಎಂದು ಅವರು ಒತ್ತಾಯಿಸಿದರು.
ಏಳು ದಿನಗಳ ನಂತರದ ರಿಪೇರಿಗಾಗಿ, “ಗ್ರಾಹಕರು ಮೊದಲು ತಾತ್ಕಾಲಿಕ ಬದಲಿ ಸ್ಕೂಟರ್ ಅಥವಾ ರಿಪೇರಿ ಪೂರ್ಣಗೊಳ್ಳುವವರೆಗೆ ದೈನಂದಿನ ಸಾರಿಗೆ ಮರುಪಾವತಿ ₹500 ಅನ್ನು ಪಡೆಯುತ್ತಾರೆ” ಎಂದು ಅವರು ಹೇಳಿದರು.
“ಹೆಚ್ಚುವರಿಯಾಗಿ, ಗ್ರಾಹಕರು ವಿಳಂಬವಾದ ದಿನಕ್ಕೆ ₹500 ಗಳಿಸುತ್ತಾರೆ (₹ 50,000 ವರೆಗೆ)” ಎಂದು ಕುನಾಲ್ ಕಮ್ರಾ ಹೇಳಿದರು.
ಪ್ರತಿ ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು ವಿಮೆಗಳೊಂದಿಗೆ ಮಾರಾಟ ಮಾಡಬೇಕು. ಒಂದು ವಾಹನಕ್ಕೆ ಮತ್ತು ಇನ್ನೊಂದು ಸೇವೆಗಳಿಗೆ. ಸೇವಾ ವಿಮೆಯು ಗ್ರಾಹಕರಿಗೆ ಉಚಿತವಾಗಿರಬೇಕು ಎಂದು ಕಮ್ರಾ ಷರತ್ತು ಮುಂದಿಟ್ಟಿದ್ದಾರೆ. ಅಗರ್ವಾಲ್ ಅವರು ಕಮ್ರಾ ಬೇಡಿಕೆಗಳಿಗೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ಓಲಾ ವಿಚಾರವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿರುವ ಕುನಾಲ್ ಕಮ್ರಾ, “ಮಹಾರಾಷ್ಟ್ರದ ಸರ್ವಿಸ್ ಸೆಂಟರ್‌ನಲ್ಲಿ ಎಲ್ಲ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕೆಟ್ಟ ಸ್ಥಿತಿಯಲ್ಲಿ ಇವೆ. ಅವುಗಳನ್ನು ನೋಡಿಕೊಳ್ಳಲು ಯಾವುದೇ ಅರ್ಹ ಇಂಜಿನಿಯರ್‌ಗಳು ಅಥವಾ ತಂತ್ರಜ್ಞರು ಆನ್-ಸೈಟ್‌ನಲ್ಲಿ ಇಲ್ಲ” ಎಂದು ಆರೋಪಿಸಿದ್ದಾರೆ. “ಭಾರತೀಯ ಗ್ರಾಹಕರ ಕಷ್ಟಗಳನ್ನು ನೋಡಿ” ಎಂದು ವಿನಂತಿಸಿದರು.
“ಸಚಿವ ನಿತಿನ್ ಗಡ್ಕರಿ ದಯವಿಟ್ಟು ಭಾರತೀಯ ಗ್ರಾಹಕರ ಕಷ್ಟವನ್ನು ನೋಡಿ, ಅವರ ಧ್ವನಿ ಕೇಳುತ್ತಿಲ್ಲ. ಅವರು ಕೆಲಸ ಮಾಡಲು ಸಾಧ್ಯವಿಲ್ಲ. ಅವರು ಪ್ರಾಥಮಿಕವಾಗಿ ಓಲಾ ಜವಾಬ್ದಾರಿಯಾಗಿರುವ ಸಮಸ್ಯೆಯನ್ನು ಪರಿಹರಿಸಲು ಕೆಟ್ಟ ಸಾಲಗಳನ್ನು ತೆಗೆದುಕೊಳ್ಳುತ್ತಿದ್ದಾರೆ.. ಸರ್ಕಾರಿ ಸಂಸ್ಥೆಗಳು ಯಾವಾಗ ಮಧ್ಯಪ್ರವೇಶಿಸುತ್ತವೆ” ಎಂದು ಪ್ರಶ್ನಿಸಿದ್ದಾರೆ.
Minister @nitin_gadkari please look at the plight of indian customers,
their voices aren’t heard.
They can’t get to work.
They are taking bad loans to solve an issue that is primarily Ola’s responsibility…
When will government agencies intervene? https://t.co/nJYapedavI— Kunal Kamra (@kunalkamra88) October 28, 2024
ಕಳೆದ ವಾರ ಓಲಾ ಎಲೆಕ್ಟ್ರಿಕ್‌ನ ಮುಖ್ಯ ಹಣಕಾಸು ಅಧಿಕಾರಿ ಹರೀಶ್ ಅಭಿಚಂದನಿ ಅವರು, “ಓಲಾ ಎಲೆಕ್ಟ್ರಿಕ್‌ನ ಸಮಗ್ರ ಪರಿಹಾರ ಕಾರ್ಯವಿಧಾನದ ಪ್ರಕಾರ, ಗ್ರಾಹಕರ ಸಂಪೂರ್ಣ ತೃಪ್ತಿಗಾಗಿ ಶೇ.99 ರಷ್ಟು ದೂರುಗಳನ್ನು ಪರಿಹರಿಸಲಾಗಿದೆ” ಎಂದು ಹೇಳಿದ್ದರು.
ಇದನ್ನೂ ಓದಿ; ಪ್ಯಾಲೆಸ್ತೀನ್‌ಗೆ ನೆರವಾಗುವ UNRWA ನಿಷೇಧಕ್ಕೆ ಕಾನೂನು ಅಂಗೀಕರಿಸಿದ ಇಸ್ರೇಲ್


