ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಘಟನೆ ವಿರುದ್ದ ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂ ಧ್ವನಿ ಎತ್ತಿದ್ದಾರೆ. ‘ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸುತ್ತಿರುವುದು ಉಡುಪುಗಳ ಏಕರೂಪತೆ ಜಾರಿಗೊಳಿಸಲು ಅಲ್ಲ, ಬದಲಾಗಿ ಮುಸ್ಲಿಮರನ್ನು ಯಾವುದೇ ನೆಪದಲ್ಲಿ ಗುರಿಯಾಗಿಸುವುದೇ ಇದರ ಉದ್ದೇಶ’ ಎಂದು ಅವರು ಗುರುವಾರ ಹೇಳಿದ್ದಾರೆ.
ಇತ್ತೀಚೆಗಷ್ಟೇ ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವ ವಿವಾದ ಜೀವಂತ ಇರುವಾಗಲೇ, ಜಿಲ್ಲೆಯ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲೂ ಅದೇ ರೀತಿಯ ವಿವಾದ ಪ್ರಾರಂಭವಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದನ್ನು ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದು ವಿವಾದ ಮಾಡಿದ್ದಾರೆ.
ಇದನ್ನೂ ಓದಿ: ಕುಂದಾಪುರ ಕಾಲೇಜಿನಲ್ಲೂ ‘ಕೇಸರಿ ಶಾಲು ವಿವಾದ’; ಹಿಜಾಬ್ ಧರಿಸಿ ಬರದಂತೆ ಪ್ರಿನ್ಸಿಪಾಲ್ ಹೇಳಿದ್ದಾರೆಂದು ಪೋಷಕರ ಆರೋಪ
ಇದರ ನಂತರ ಆಡಳಿತ ಮಂಡಳಿ ಹಾಗೂ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿದ್ಯಾರ್ಥಿಗಳ ಪೋಷಕರೊಂದಿಗೆ ಸಭೆ ನಡೆಸಿ, ಹಿಜಾಬ್ ಧರಿಸಿ ಬರುವುದನ್ನು ವಿರೋಧಿಸಿದ್ದರು.
ಕುಂದಾಪುರ ಕಾಲೇಜಿನ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಕಾರ್ತಿ ಪಿ. ಚಿದಂಬರಂ, “ಹಿಜಾಬ್ ಅನ್ನು ನಿಷೇಧಿಸುತ್ತಿರುವ ಈ ಕ್ರಮವು ವಿದ್ಯಾರ್ಥಿಗಳ ಉಡುಪುಗಳಲ್ಲಿ ಏಕರೂಪತೆಯನ್ನು ಜಾರಿಗೊಳಿಸಲು ಅಲ್ಲ. ಇಸ್ಲಾಮಿಕ್ ನಂಬಿಕೆಯ ಜನರು ಯಾವುದೇ ನೆಪದಲ್ಲಿ ಗುರಿಯಾಗುತ್ತಾರೆ ಎಂಬ ಸ್ಪಷ್ಟ ಸಂಕೇತವನ್ನು ಕಳುಹಿಸುವುದಾಗಿದೆ. ಇದೇ ರೀತಿಯ ನಿಯಮ ಸಿಖ್ ಪೇಟದ ವಿರುದ್ದ ಮಾಡುಲು ಯಾವುದೇ ಸಂಸ್ಥೆಗೆ ಮಾಡಲು ಧೈರ್ಯವಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
The move to ban the Hijab is not to enforce some uniformity in attire among students. It is to send an overt signal to the people of the Islamic faith that they will be targeted on any pretext. Will any institution have the courage to do the same thing against the Sikh headgear?
— Karti P Chidambaram (@KartiPC) February 3, 2022
ಇದನ್ನೂ ಓದಿ: ಹಿಜಾಬ್ ವಿವಾದ: ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಿಲ್ಲ ಎಂದ ಶಿಕ್ಷಣ ಇಲಾಖೆ
ಇಂದು ಕುಂದಾಪುರ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸುವುದನ್ನು ಕಾಲೇಜ್ ನಿರಾಕರಿಸಿದೆ. ವಿದ್ಯಾರ್ಥಿನಿಯರಿಗೆ ಕಾಲೇಜಿನ ಗೇಟ್ ಮುಚ್ಚಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿಯರು “ಪರೀಕ್ಷೆಗೆ ಇನ್ನು 2 ತಿಂಗಳು ಬಾಕಿ ಇರುವಾಗ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ” ಎಂದು ಕಣ್ಣೀರು ಹಾಕಿದ್ದಾರೆ.
Deplorable scenes unfolding in Karnataka, another govt college not allowing Girls with #hijab to enter classrooms. The students are crying and requesting the principal not to ruin their future with just 2 months to go for exams. pic.twitter.com/sYJzTsLuuX
— Deepak Bopanna (@dpkBopanna) February 3, 2022
ವಿದ್ಯಾರ್ಥಿನಿಯರು, “ಕಾಲೇಜಿಗೆ ಪ್ರವೇಶ ಪಡೆಯುವ ವೇಳೆಯೆ ಹಿಜಾಬ್ ಧರಿಸಲು ಅನುಮತಿಯಿಲ್ಲ ಎಂದು ಹೇಳಿದ್ದರೆ, ನಾವು ಬೇರೆ ಕಾಲೇಜಿಗೆ ಸೇರುತ್ತಿದ್ದೆವು. ಈಗ ಪರೀಕ್ಷೆಗೆ ಎರಡು ತಿಂಗಳಿದೆ. ಈಗ ಹೊಸದಾಗಿ ನಿಯಮ ತಂದರೆ ನಮ್ಮ ಕಲಿಕೆಗೆ ತೊಂದರೆಯಾಗುತ್ತದೆ. ನಮ್ಮ ಭವಿಷ್ಯ ಯಾಕೆ ಹಾಳು ಮಾಡುತ್ತಿದ್ದೀರ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ v/s ಕೇಸರಿ ಶಾಲು: ಮತೀಯ ದ್ವೇಷದ ಹಿಂದೆ ಎಬಿವಿಪಿ ಕೈವಾಡ- ಎಸ್‌ಎಫ್‌ಐ



ಈ ಗುಲಾಮರು ಯಾವಾಗಲು ಮೊಸರಲ್ಲಿ ಕಲ್ಲು ಹಾಕಿ ಕಲ್ಲು ಹುಡುಕುವ ಕೆಲಸ ಮಾಡೋದ್ರಲ್ಲಿ ನಿಸ್ಸೀಮರು,ಆದರೆ ಅವರ ಬೇಳೆಕಾಳುಗಳು ಈಗ ಬೇಯಲ್ಲಾ ,ಬೇಯಲು ಜನ ಬಿಡೋಲ್ಲಾ ,ಈ ಚಿದಂಬರಂ ಗೆ ಬಗನಿ ಗೂಟ ಗ್ಯಾರಂಟಿ ಸಮ ವಸ್ತ್ರ ವಿಚಾರಕ್ಕೆ ಬಂದರೆ