Homeಮುಖಪುಟಜಾರ್ಖಂಡ್‌: ಬಡತನ, ಅನಾರೋಗ್ಯದಿಂದ ಐದು ತಿಂಗಳ ಹಸುಳೆಯನ್ನು ಮಾರಿದ ದಂಪತಿ

ಜಾರ್ಖಂಡ್‌: ಬಡತನ, ಅನಾರೋಗ್ಯದಿಂದ ಐದು ತಿಂಗಳ ಹಸುಳೆಯನ್ನು ಮಾರಿದ ದಂಪತಿ

- Advertisement -
- Advertisement -

ಕಿತ್ತು ತಿನ್ನುವ ಬಡತನದಿಂದ ಹೆತ್ತವರೆ ತಮ್ಮ ಐದು ತಿಂಗಳ ಹಸುಗೂಸನ್ನು 5,000 ರೂಪಾಯಿಗಳಿಗೆ ಮಾರಾಟ ಮಾಡಿರುವ ಹೃದಯ ವಿದ್ರಾವಕ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ವರದಿಯಾಗಿದೆ. ಒಂದು ವರದಿಯ ಪ್ರಕಾರ ಭಾರತವು ವಿಶ್ವ ಹಸಿವು ಸೂಚ್ಯಂಕದಲ್ಲಿ 101ನೇ ಸ್ಥಾನಕ್ಕೆ ಕುಸಿದಿದೆ.

ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಬಜರಂಗ ನಾಯಕ್ ಮತ್ತು ಅವರ ಪತ್ನಿ ಗುಡಿಯಾ ದೇವಿ ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದರು. ಇದರ ಜೊತೆಗೆ ಗುಡಿಯಾ ದೇವಿ ಕ್ಷಯ ರೋಗದಿಂದ ಬಳಲುತ್ತಿದ್ದರು. ಹೀಗಾಗಿ, ಆಕೆಯ ಚಿಕಿತ್ಸೆ ಹಣವಿಲ್ಲದೆ, ಈ ದಂಪತಿ ತಮ್ಮ ಮಗುವನ್ನೇ ಮಾರಾಟ ಮಾಡಿದ್ದಾರೆ.

ಈ ದಂಪತಿ ಈ ಹಿಂದೆಯೂ ಒಮ್ಮೆ ತಮ್ಮ ಮೂರು ವರ್ಷದ ಮಗಳು ದೀಪಾಲಿ ಕುಮಾರಿಯನ್ನೂ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಸ್ಥಳೀಯರು ಅವರನ್ನು ತಡೆದು ಸ್ಥಳೀಯ ಆಡಳಿತಕ್ಕೆ ಒಪ್ಪಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

“ನಮಗೆ ನಾಲ್ವರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳು 9 ವರ್ಷದ ಆಕಾಶ್ ಕುಮಾರ್ ಮತ್ತು ಖುಷಿ ಕುಮಾರಿ ಪಾಟ್ನಾ ಬಳಿಯ ಬಿಹ್ತಾ ಎಂಬಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಹೆಂಡತಿಯ ಚಿಕಿತ್ಸೆಗಾಗಿ, ನಾವು ನಮ್ಮ ಚಿಕ್ಕ ಮಗುವನ್ನು ಮಾರಾಟ ಮಾಡಬೇಕಾಯಿತು” ಎಂದು ಬಜರಂಗ್ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಸೇನಾ ಸಮವಸ್ತ್ರ ಧರಿಸಿದ್ದ ಪ್ರಕರಣ: ಪ್ರಧಾನಿ ಕಚೇರಿಗೆ ನೋಟಿಸ್ ಜಾರಿ

ಮೂಲತಃ ಸಿಮ್ಡೆಗಾದಲ್ಲಿರುವ ಬಂಗ್ರು ಪ್ರದೇಶದ ದಂಪತಿ ಪ್ರಸ್ತುತ ಗುಮ್ಲಾದಲ್ಲಿ ನೆಲೆಸಿದ್ದಾರೆ. ಗುಡಿಯಾ ಮತ್ತು ಅವರ ಮೂರು ವರ್ಷದ ಮಗಳು ಚಿಂದಿ ಅಂಗಡಿಯ ಆಶ್ರಯದಲ್ಲಿ ವಾಸಿಸುತ್ತಿದ್ದಾರೆ. ಬಜರಂಗ್ ಫುಟ್‌ಪಾತ್‌ನಲ್ಲಿ ಮಲಗಿ ಜೀವನ ಸಾಗಿಸುತ್ತಿದ್ದಾರೆ. “ಬಡತನದಿಂದಾಗಿ ನಮ್ಮ ನವಜಾತ ಶಿಶುವನ್ನು ನೋಡಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ” ಎಂದು ಗುಡಿಯಾ ಹೇಳಿದ್ದಾರೆ.

ಸದ್ಯ ಮಾರಾಟ ಮಾಡಿರುವ ಐದು ತಿಂಗಳ ಶಿಶುವನ್ನು ಮರಳಿ ತರಲು ಆಡಳಿತಾಧಿಕಾರಿಗಳು ಸಾಮಾಜಿಕ ಕಾರ್ಯಕರ್ತರಿಗೆ ಸೂಚಿಸಿದೆ. ಅಧಿಕಾರಿಗಳು ದಂಪತಿಗೆ ಪಡಿತರ ಮತ್ತು ಬಟ್ಟೆ ಲಭ್ಯವಾಗುವಂತೆ ನೆರವು ನೀಡಿದ್ದಾರೆ. ಕ್ಷಯ ರೋಗದಿಂದ ಬಳಲುತ್ತಿರುವ ಗುಡಿಯಾ ಅವರ ಚಿಕಿತ್ಸೆಗೂ ವ್ಯವಸ್ಥೆ ಮಾಡಿದ್ದಾರೆ. ಗುಡಿಯಾಗೆ ಟಿಬಿ ಸೇರಿದಂತೆ ಹಲವು ಕಾಯಿಲೆಗಳಿದ್ದು, ಚಿಕಿತ್ಸೆ ಆರಂಭಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

“ಮಗುವನ್ನು ಮಾರಾಟ ಮಾಡಿದ ದಂಪತಿಯನ್ನು ಭೇಟಿ ಮಾಡಿ, ಮಗುವನ್ನು ಮರಳಿ ತರುವಂತೆ ನಗರ ವ್ಯವಸ್ಥಾಪಕ ಮತ್ತು ವಾರ್ಡ್ ಆಯುಕ್ತರಿಗೆ ಸೂಚಿಸಿದ್ದೇನೆ. ಅವರಿಗೆ ಸಮಸ್ಯೆಗಳು ಎದುರಾದರೆ, ಸ್ಥಳೀಯ ಪೊಲೀಸ್ ಠಾಣೆಯು ಮಗುವನ್ನು ಪೋಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಬಿಹಾರದ ಪಾಟ್ನಾದಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿರುವ ಗುಡಿಯಾ ದೇವಿಯ ಇಬ್ಬರು ಮಕ್ಕಳನ್ನು ಕರೆತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಉಪವಿಭಾಗಾಧಿಕಾರಿ ರವಿ ಆನಂದ್ ಹೇಳಿದ್ದಾರೆ.


ಇದನ್ನೂ ಓದಿ: ಕುಂದಾಪುರ ಕಾಲೇಜಿನಲ್ಲೂ ‘ಕೇಸರಿ ಶಾಲು ವಿವಾದ’; ಹಿಜಾಬ್‌ ಧರಿಸಿ ಬರದಂತೆ ಪ್ರಿನ್ಸಿಪಾಲ್‌ ಹೇಳಿದ್ದಾರೆಂದು ಪೋಷಕರ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...