Homeಕರ್ನಾಟಕದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತಿದ್ದ ಲಲಿತಮ್ಮ

ದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತಿದ್ದ ಲಲಿತಮ್ಮ

- Advertisement -
- Advertisement -

ಲಲಿತಮ್ಮನವರು ಹುಟ್ಟಿದ್ದು ಮದ್ದೂರು ತಾಲೂಕು ಕೌಡ್ಲೆ. ಬೆಳೆದಿದ್ದು ಬೆಂಗಳೂರು. ದೊರೆಸ್ವಾಮಿಯವರ ಜೊತೆ ಮದುವೆ (ದೊರೆಸ್ವಾಮಿಯವರ ಪ್ರಕಾರ “ಒಂದು ರೀತಿಯಲ್ಲಿ ಲವ್ ಮ್ಯಾರೇಜ್”!) ಡಿಸೆಂಬರ್ 1950. ಭರ್ತಿ 69 ವರ್ಷಗಳ ಸಹಜೀವನ ನಡೆಸಿ ಈಗ ತಮ್ಮ 89 ವರ್ಷನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಜೀವನ ಪೂರ್ತಿ ದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತ ಸಾರ್ಥಕ ಬದುಕು ಬದುಕಿದರು. ಗಂಡನಾದ ಜಂಗಮ ತಿಂಗಳಿಗೆ ಕೈಗೆ ತಂದಿಡುತ್ತಿದ್ದ 100 ರೂ. ಮಾಸಾಶನದಲ್ಲಿ 34 ರೂಪಾಯಿ ಮನೆ ಬಾಡಿಗೆ ಕಟ್ಟಿ, ಮೂರೋ ನಾಲಕೋ ರೂಪಾಯಿ ಮನೆಗೆಲಸದಾಕೆಗೆ ಕೊಟ್ಟು ಮಿಕ್ಕಿದ್ದರಲ್ಲಿ ಎರಡು ಮಕ್ಕಳ ಎಲ್ಲ ಬೇಕುಬೇಡಗಳನ್ನು ನಿಭಾಯಿಸಿ ಮನೆ ತೂಗಿಸಿಕೊಂಡು ಬಂದ ಗಟ್ಟಿಗಿತ್ತಿ ಅವರಾಗಿದ್ದರು.

ಗಂಡ ಸತತ ನಾಲ್ಕು ವರ್ಷಗಳ ಕಾಲ ಭೂದಾನ ಚಳವಳಿಯ ಸಂಘಟಕರಾಗಿ ತಿಂಗಳಲ್ಲಿ ಮೂರುವಾರ ಊರೂರು ತಿರುಗಿ ಒಂದು ವಾರ ಮಾತ್ರ ಮನೆಯಲ್ಲಿರುತ್ತಿದ್ದುದು.

ಖಾದಿ ಪ್ರಸಾರ ಇತ್ಯಾದಿ ಕಾರಣ

ನಂತರ ಕೂಡ ದೊರೆಸ್ವಾಮಿಯವರು ಖಾದಿ ಪ್ರಸಾರ, ಪರಿಸರ ಚಳವಳಿ, ಶಾಲೆಗಳು-ಸಹಕಾರಿ ಸಂಘಗಳು, ಭ್ರಷ್ಟಾಚಾರ ವಿರೋಧಿ ಚಳವಳಿ ಇವೇ ಮುಂತಾದವುಗಳಲ್ಲಿ ಎಡೆಬಿಡದೆ ತೊಡಗಿಸಿಕೊಂಡು ತಿಂಗಳಲ್ಲಿ ಮೂರು ವಾರ ಹೊರಗೆ ಇರುತ್ತಿದ್ದವರೇ. ಕೈಗಾ ಚಳವಳಿಯಲ್ಲಿ ಸತತ ಎರಡು ವರ್ಷ ಆ ಕಡೆಯೇ ಇದ್ದವರು. ಆಗೆಲ್ಲ ಅಮ್ಮ ‘ಏಕಾಂಗವೀರ’ರೇ!

ಸಬ್‍ಇನ್‍ಸ್ಪೆಕ್ಟರ್‍ಗೇ ಗದರಿದರು!

ತುರ್ತುಪರಿಸ್ಥಿತಿ ಅವಧಿಯಲ್ಲಿ ದೊರೆಸ್ವಾಮಿಯವರು ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದರು. ಆಗ ಅಮ್ಮ ಪ್ರತಿವಾರ ಕೋಡುಬಳೆ, ನಿಪ್ಪಟ್ಟು, ಚಕ್ಕುಲಿ, ರವೆಉಂಡೆ, ಪುಳಿಯೋಗರೆ… ಹೀಗೆ ಏನಾದರೊಂದು ತಿಂಡಿಯನ್ನು ಎಲ್ಲ ಸತ್ಯಾಗ್ರಹಿಗಳಿಗೂ ಆಗುವಷ್ಟು ಮಾಡಿಕೊಂಡು ಜೈಲುಭೇಟಿಗೆ ಹೋಗುವರು. ಎಲ್ಲರೂ ಗಂಟೆ ಕಾಲ ಕೂತು ಹರಟುತ್ತ ಕುರುಕುತ್ತ ಸಮಯ ಕಳೆಯುವರು. ಜೈಲು ಸಿಬ್ಬಂದಿ ಕೂಡ ಸಾಮಾನ್ಯವಾಗಿ ಅಡ್ಡಿಪಡಿಸುತ್ತಿರಲಿಲ್ಲ.

ಆದರೆ ಒಮ್ಮೆ ಯಾರೋ ಒಬ್ಬ ಹೊಸಬ ‘ಉತ್ಸಾಹಿ’ ಸಬ್‍ಇನ್‍ಸ್ಪೆಕ್ಟರ್‍ಗೆ ಗ್ರಹಚಾರ ಕೆಟ್ಟುಬಿಟ್ಟಿತ್ತು! “ಅದನ್ನೆಲ್ಲ ಇಲ್ಲಿ ತರಬಾರದಮ್ಮ. ಇದು ಜೈಲು. ಗೊತ್ತು ತಾನೆ? ಇಲ್ಲಿ ಅದನ್ನೆಲ್ಲ ಅಲೋ ಮಾಡಲ್ಲ” ಅಂದರು. ಅಮ್ಮ ಅವರಿಗೆ ಸಮಾಧಾನವಾಗಿಯೇ ತಿಳಿಹೇಳಿ ನೋಡಿದರು. ಆತ ಜಗ್ಗಲಿಲ್ಲ. ತನ್ನ ಮಗನ ವಯಸ್ಸಿನ ಆತನಿಗೆ “ಇದೇನಪ್ಪ. ಇಷ್ಟು ದಿನ ಬಿಡುತ್ತಿದ್ದರು, ನಿಮ್ಮದೊಂದು ಹೊಸ ರೂಲ್ಸಾ?” ಎಂದರು ಅಮ್ಮ. ಆತನದು ಬಿಸಿರಕ್ತ. ತನ್ನ ರೂಲುದೊಣ್ಣೆ ಅಡ್ಡಹಿಡಿದು ತಡೆದು ಬಿಟ್ಟ. ಅಮ್ಮ ರಣಚಂಡಿಯಾಗಿ ಬಿಟ್ಟರು!

“ಏನು ಮಾಡ್ತೀಯೋ ಮಾಡ್ಕೋ. ಜೈಲಿಗೆ ಹಾಕ್ತೀಯಾ? ತಯಾರಾಗಿಯೇ ಬಂದಿದೀನಿ. ಈ ತಿಂಡಿಯನ್ನು ಮಾತ್ರ ನಾನು ಹಂಚದೆ ವಾಪಸ್ ಹೋಗೋಳಲ್ಲ..” ಎನ್ನುತ್ತಾ ಅವನ ರೂಲ್ ದೊಣ್ಣೆಯನ್ನೂ ಅವನನ್ನೂ ತಳ್ಳಿ ನುಗ್ಗಿ ನಡೆದೇಬಿಟ್ಟರು. ಇದು ಯಾಕೋ ವಿಕೋಪಕ್ಕೆ ಹೋಗಬಹುದೆಂದು ಹೆದರಿದ ಇತರ ಸಿಬ್ಬಂದಿ ಓಡಿಬಂದು ಇಬ್ಬರನ್ನೂ ಸಮಾಧಾನಪಡಿಸಿದರು. ಅಮ್ಮನಿಗೆ, “ಸಾಹೇಬ ಹೊಸಬ. ನಿಧಾನವಾಗಿ ನಾವು ಅವನಿಗೆ ಹೇಳ್ತೀವಿ. ಇವತ್ತೊಂದು ದಿನ ನಮ್ಮ ಕೈಲೇ ಕೊಡಿಯಮ್ಮ, ನಾವೇ ಹಂಚ್ತೀವಿ” ಅಂತ ರಣಚಂಡಿಯನ್ನು ಶಾಂತಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು!

ದೊರೆಸ್ವಾಮಿಯವರು ಅಮ್ಮನನ್ನು ನೆನೆದು ಹೇಳುತ್ತಾರೆ..

“70 ವರ್ಷಗಳ ಸಾರ್ಥಕ ಬದುಕು ಒಟ್ಟಿಗೆ ಕಳೆದೆವು. ಕಷ್ಟ ಸುಖ ಎಲ್ಲವನ್ನೂ ಕಂಡಿದ್ದೀವಿ. ಕಷ್ಟವನ್ನು ಪಟ್ಟಿದ್ದೀವಿ, ಸುಖವನ್ನು ಹಂಚಿಕೊಂಡಿದ್ದೆವು. ನಿಮ್ಮಂತ ನೂರಾರು ಗೆಳೆಯರನ್ನು ಪಡೆಯಲಿಕ್ಕೆ ಅವಳು ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಅವಳು ನನ್ನ ಪಾಡಿಗೆ ನನ್ನನ್ನು ಬಿಟ್ಟು ಮನೆ ಮತ್ತು ಮಕ್ಕಳನ್ನು ನೋಡಿಕೊಂಡಿದ್ದರಿಂದಲೇ ನಾನು ಊರೂರು ತಿರುಗಿಕೊಂಡು ನಿಮ್ಮೆಲ್ಲರ ಪ್ರೀತಿಯನ್ನು ಗಳಿಸಲಿಕ್ಕೆ ಸಾಧ್ಯವಾಯಿತು. ನನಗೆ ನೀವೆಲ್ಲರೂ ಸೇರಿ ಸಮಾಜ ನನ್ನ ರಕ್ಷಣೆಗೆ ನಿಲ್ಲುತ್ತದೆ. ಒಂದು ವೇಳೆ ನಾನೇ ಮೊದಲು ಹೊರಟುಹೋಗಿದ್ದರೆ ಅವಳನ್ನು ಯಾರು ನೋಡಿಕೊಳ್ಳುತ್ತಿದ್ದರು ಎಂಬ ಆತಂಕ ಕಾಡುತ್ತಿತ್ತು. ಆ ಆತಂಕ ಇವತ್ತು ದೂರವಾಗಿದೆ. ಅವಳು ಮುಂದೆ ಹೋಗಿದ್ದಾಳೆ. ಇದು ನಿಜವಾಗಿಯೂ ಸಮಾಧಾನದ ದಿನವಾಗಿದೆ.

ಹೌದು ಅವಳಿಲ್ಲದಿರುವುದು ಹಲವು ದಿನಗಳು ಕಾಡುತ್ತದೆ ನಿಜ. ಆದರೂ ಪರವಾಗಿಲ್ಲ. ನೀವೆಲ್ಲರೂ ಇದ್ದೀರಿ, ಇಷ್ಟೊಂದು ಜನ ನನ್ನ ವಿಶ್ವಾಸಿಗಳು, ಸ್ನೇಹಿತರೂ, ಹಿತೈಷಿಗಳಾಗಿದ್ದಿರಿ. ನಿಮ್ಮೆಲ್ಲರ ಬೆಂಬಲದೊಂದಿಗೆ ಇನ್ನುಳಿದ ಜೀವನವನ್ನು ಕಳೆಯಬಲ್ಲೆ ಎಂಬುದಾಗಿ ದೊರೆಸ್ವಾಮಿಯವರು ಅಮ್ಮನನ್ನು ನೆನಪಿಸಿಕೊಳ್ಳುತ್ತಾರೆ.

ಸಾವಿನಲ್ಲೂ ಮಾದರಿ

ಶ್ರೀಮತಿ ಲಲಿತಮ್ಮನವರಿಗೆ ದೊರೆಸ್ವಾಮಿಯವರು ಮತ್ತವರ ಕುಟುಂಬವರ್ಗದವರು ಯಾವುದೇ ಸಾಂಪ್ರದಾಯಿಕ ಅಂತ್ಯಸಂಸ್ಕಾರ ಮಾಡದೆ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೋಸ್ಕರ ದೇಹದಾನ ಮಾಡಿದ್ದಾರೆ. ಸಮಾಜಕ್ಕೆ ಮಾದರಿ ಮತ್ತು ಆದರ್ಶವಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...