Homeಕರ್ನಾಟಕಕಲ್ಲಡ್ಕ ಶಾಲೆಯ ಬಾಬ್ರೀ ಡ್ರಾಮಾ! ದ್ವೇಷ ಬಿತ್ತನೆಗೊಂಡ ಮನಸ್ಸು ದ್ವೇಷವನ್ನಷ್ಟೇ ಕೊಡಬಲ್ಲದು

ಕಲ್ಲಡ್ಕ ಶಾಲೆಯ ಬಾಬ್ರೀ ಡ್ರಾಮಾ! ದ್ವೇಷ ಬಿತ್ತನೆಗೊಂಡ ಮನಸ್ಸು ದ್ವೇಷವನ್ನಷ್ಟೇ ಕೊಡಬಲ್ಲದು

- Advertisement -
- Advertisement -

ಕಲ್ಲಡ್ಕ ಪ್ರಭಾಕರ ಭಟ್ಟರ ಯಜಮಾನಿಕೆಯ ವಿದ್ಯಾಸಂಸ್ಥೆಗಳು ಒಂದರ ಹಿಂದೊಂದರಂತೆ ಸ್ಪರ್ಧೆಗೆ ಬಿದ್ದಂತೆ ವಿಕೃತಿ ಮೂಲಕವೇ ಲೋಕ ಪ್ರಸಿದ್ಧವಾಗುತ್ತಿವೆ! ಕಲ್ಲಡ್ಕದಲ್ಲಿ ಭಟ್ಟರು ನಡೆಸುವ ಶ್ರೀರಾಮ ವಿದ್ಯಾಕೇಂದ್ರದ ಮುಗ್ಧ ವಿದ್ಯಾರ್ಥಿಗಳಿಂದ ಬಾಬರಿ ಮಸೀದಿ ಗುಂಬಜಗಳನ್ನು ರಣೋತ್ಸಾಹದಲ್ಲಿ ಉರುಳಿಸುವ “ಪ್ರಹಸನ” ಆಡಿಸಲಾಗಿದೆ! ಅಲ್ಲಿಗೆ ಹಿಂದೂತ್ವದ ಹರಿಕಾರ ಕಲ್ಲಡ್ಕ ಭಟ್ಟರು ಪ್ರಾಂಜಲ ಮನಸ್ಸಿನ ಮಕ್ಕಳ ಹೃದಯದಲ್ಲಿ ಕಾರ್ಕೋಟಕ ವಿಷ ತುಂಬುವ ಕಾರ್ಯದಲ್ಲಿ ತಲ್ಲೀನನಾಗಿರುವುದು ಪಕ್ಕಾ ಆಗಿಹೋಗಿದೆ…

ಕಲ್ಲಡ್ಕದ ಶ್ರೀರಾಮಶಾಲೆಯ ಪ್ರತಿ ವರ್ಷದ ಕ್ರೀಡೋತ್ಸವದಲ್ಲಿ ಯಾವುದಾದರೊಂದು ಮತಾಂಧ ಮಸಲತ್ತಿನ ಕಾರ್ಯಕ್ರಮ ಮಾಡಿಸದಿದ್ದರೆ ಭಟ್ಟರಿಗೆ ನಿದ್ದೆಯೇ ಬೀಳುವುದಿಲ್ಲ. ಕೊಲ್ಲೂರು ದೇವಳದ ಹುಂಡಿ ಹಣ ವಿದ್ಯಾರ್ಥಿಗಳ ಉದ್ಧಾರದ ನೆಪದಲ್ಲಿ ಸ್ವಾಹಾ ಮಾಡುತ್ತಿದ್ದ ಭಟ್ಟರು, ಆ ಅನುದಾನ ನಿಂತಾಗ ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ರಮಾನಾಥ ರೈನನ್ನು ಧರ್ಮ ಭ್ರಷ್ಟನೆಂಬಂತೆ ಬಿಂಬಿಸಿ ಕಳೆದ ವರ್ಷದ ಕ್ರೀಡಾ ಉತ್ಸವದಲ್ಲಿ “ಆಟ” ಆಡಿಸಿದ್ದ. ಈ ಬಾರಿ ಬಾಬರಿ ಮಸೀದಿ ಧ್ವಂಸ ಮರುಸೃಷ್ಠಿ ನಾಟಕ ವಿದ್ಯಾರ್ಥಿಗಳಿಂದ ಮಾಡಿಸಿ ಭಟ್ಟರು ಕೇಕೆ ಹಾಕಿದ್ದಾರೆ. ಕೇಂದ್ರದ ಗೊಬ್ಬರ ಮಂತ್ರಿ ಸದಾನಂದ ಗೌಡ ಮತ್ತು ಪಾಂಡಿಚೇರಿ ಲೆಫ್ಟೆನೆಂಟ್ ಗವರ್ನರ್ ಕಿರಣ್‍ಬೇಡಿ ಮುಖ್ಯ ಅತಿಥಿಗಳಾಗಿದ್ದ ಈ ಕಾರ್ಯಕ್ರಮದಲ್ಲಿ ಕೇಸರಿ-ಬಿಳಿ ಬಣ್ಣದ ಕರಸೇವಕ ವೇಷದಲ್ಲಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರೋಷಾವೇಷದಲ್ಲಿ ಬಾಬರಿ ಮಸೀದಿ ಮೇಲೆ ದಾಳಿ ನಡೆಸಿದ್ದಾರೆ.

ತೀರಾ ಅಸಹ್ಯವೆಂದರೆ, ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ ಸಹ ಈ ಕಾನೂನುಬಾಹಿರ ಆಟಾಟೋಪ ಆಸ್ವಾದಿಸಿದ್ದಾರೆ. ಅಷ್ಟೇ ಅಲ್ಲ, ಕಲ್ಲಡ್ಕ ಭಟ್ಟರ ತರಬೇತಿಯಲ್ಲಿ ದಾರಿ ತಪ್ಪುತ್ತಿರುವ ಮಕ್ಕಳ ಸಾಧನೆಯನ್ನು ಪ್ರಶಂಸಿಸಿ ಟ್ವೀಟ್ ಸಹ ಮಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಧರ್ಮಸೂಕ್ಷ್ಮ ‘ಮನರಂಜನೆ’ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆ ಕಣ್ಣು-ಬಾಯಿ ಬಿಟ್ಟುಕೊಂಡು ನೋಡಿತೇ ವಿನಃ ಇದು ಅನಾಹುತಕಾರಿ ಅತಿರೇಕದ ಮಿಮಿಕ್ರಿ ಎಂದು ತಡೆಯುವ ಕರ್ತವ್ಯ ಪ್ರಜ್ಞೆ ಪ್ರದರ್ಶಿಸಲಿಲ್ಲ!! ಕಲ್ಲಡ್ಕ ಭಟ್ಟರ ಅಡಿಯಾಳಿನಂತಿರುವ ಶ್ರೀರಾಮ ಶಾಲೆಯಲ್ಲಿ ಈ ವಿಧ್ವಂಸಕತೆಗೂ ಮೊದಲು ಎಲ್.ಕೆ.ಆಡ್ವಾಣಿ ಹಿಂದೆ ಮಾಡಿದ್ದ ರಥಯಾತ್ರೆ ಕಿತಾಪತಿಯ ಅಣುಕು ಪ್ರದರ್ಶನವೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮಾಡಿಸಲಾಯಿತ್ತು.

ಕಲ್ಲಡ್ಕ ಭಟ್ಟರ ಧರ್ಮಕಾರಣಕ್ಕಾಗಿ ಶ್ರೀರಾಮ ಶಾಲೆಯಲ್ಲಿ ಕಲಿಯುವ ಮಕ್ಕಳು ದ್ವೇಷಾಸೂಯೆ-ಹಿಂಸೋನ್ಮಾದದ ಮನಃಸ್ಥಿತಿಯಲ್ಲಿ ಬೆಳೆಯಬೇಕಾಗಿ ಬಂದಿರುವುದು ದುರಂತ. ಬಾಸ್‍ನ ಸಂಪ್ರೀತಗೊಳಿಸಲು ಮಕ್ಕಳಿಗೆ ಮುಸ್ಲಿಮರ ದ್ವೇಷಿಸುವ, ಅಟ್ಟಾಡಿಸಿ ಹೊಡೆಯುವ “ವಿದ್ಯೆ” ಬೋಧಿಸುತ್ತಿರುವ ಶ್ರೀರಾಮ ಶಾಲೆಯ ಶಿಕ್ಷಕ ಗಣ ಅವರಿಗರಿವಿಲ್ಲದೆ ಸಮಾಜದ ಯುವಪೀಳಿಗೆಯನ್ನು ಸಮಾಜಘಾತುಕರಾಗಿ ತಯಾರಿಸುತ್ತಿದೆ. ಅಸಹಿಷ್ಣುತೆಯ ತರಬೇತಿ ಪಡೆಯುವ ಮಗು ಮುಂದೆ ಸಾಬರಿಗೇ ಘಾಸಿಗೊಳಿಸಬೇಕೆಂದೇನೂ ಇಲ್ಲ. ಭಿನ್ನಮತ ಬಂದಾಗ ಆ ಪಾಖಂಡಿ ಮಗು ಒಡಹುಟ್ಟಿದವರನ್ನೋ, ಸ್ವಂತ ಧರ್ಮದವರನ್ನೋ ಹಿಂಸಿಸಲು ಹಿಂಜರಿಯದು. ಇದು ಸರಳ ಸಮಾಜ ಶಾಸ್ತ್ರ. ಪಕ್ಕಾ ಮನೋವಿಜ್ಞಾನ ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಶ್ರೀರಾಮ ಶಾಲೆಯ ಮಕ್ಕಳ ತಲೆಯಲ್ಲಿ ತುಂಬುತ್ತಿರುವ ಧರ್ಮ ಪಾಠ ಹುಲಿ ಸವಾರಿ ಆಗುವುದು ಗ್ಯಾರಂಟಿ!!

ಇವತ್ತು ಕರಾವಳಿಯಲ್ಲಿ ಆಗುತ್ತಿರುವುದು ಹಿಂದೂ ಧರ್ಮ ರಕ್ಷಣೆ ಸ್ವಧರ್ಮದವರಿಗೇ ತಿರುಗುಬಾಣವಾಗುತ್ತಿದೆ. ದನ ಸಾಗಿಸುತ್ತಾರೆಂಬ ಅನುಮಾನದಲ್ಲಿ ಪಾಪದ ಹಿಂದೂ ಹುಡುಗರೇ ಹತರಾಗಿದ್ದಾರೆ. ಸಹಪಾಠಿಗಳೊಂದಿಗೆ ಮಾತಾಡಿದರೂ ಸಾಕು, ಹಿಂದೂ ಹುಡುಗಿಯರು ವ್ಯಭಿಚಾರಿಣಿ ಪಟ್ಟ ಪಡೆದು ಹಿಂಸೆ-ಹಲ್ಲೆ ಅನುಭವಿಸಬೇಕಾಗಿ ಬಂದಿದೆ. ಹಲವು ಹಿಂದೂ ಹುಡುಗಿಯರ ಬದುಕು ಅನೈತಿಕ ಪೊಲೀಸ್‍ಗಿರಿಯಿಂದ ಬರ್ಬಾದಾಗಿ ಹೋಗಿದೆ. ಶ್ರೀರಾಮ ಶಾಲೆಯಲ್ಲಿ ಕಲಿಯುತ್ತಿರುವ ಮಗು ಅನಾಹುತಕಾರಿ ಅನೈತಿಕ ಪೊಲೀಸ್ ಆಗುತ್ತದೆಯೇ ಹೊರತು ಸಂಯಮ-ಸಹಬಾಳ್ವೆಯ ನೈತಿಕ ಶಿಷ್ಟಾಚಾರದ ಪ್ರಜೆಯಾಗಲು ಹೇಗೆ ಸಾಧ್ಯ? ಬೇವು ಬಿತ್ತಿ ಮಾವು ಬೇಕೆಂದರೆ ಹೇಗೆ?

ಭಟ್ಟರ ಆಟ-ಹೂಟಗಳನ್ನು ಶ್ರೀರಾಮ ಶಾಲೆ, ವಿವೇಕಾನಂದ ಕಾಲೇಜಿನಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ಅರ್ಥಮಾಡಿಕೊಳ್ಳಬೇಕಾದ ಸಂದರ್ಭವಿದು. ಭಟ್ಟರ ಶಾಲೆಯಲ್ಲಿ ಕೊಡುತ್ತಿರುವ ಅಸಹಿಷ್ಣುತೆ, ವ್ಯಗ್ರತೆ, ಸಂಘಟಿತ ಅಪರಾಧ ಕಲೆಯ ತರಬೇತಿಯ ಅಡ್ಡ ಪರಿಣಾಮ ಆಗುವುದು ತಮ್ಮ ಕುಂಟುಂಬದಲ್ಲೇ ಎಂಬುದು ಪಾಲಕರಿಗೆ ಅರಿವಾಗಬೇಕಿದೆ. ಶಾಲೆಯಂಥ ತೀರಾ ಸೂಕ್ಷ್ಮ ಮನಸ್ಸುಗಳಿರುವಲ್ಲಿ ಧ್ವಂಸ-ದ್ವೇಷದ ಕೇಸರಿ ಕಾರ್ಯಕ್ರಮ ನಡೆಸಿದ ಕಲ್ಲಡ್ಕ ಭಟ್ಟರಿಗೆ ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಮಂಗಳಾರತಿ ಆಗುತ್ತಿದೆ. ಭಟ್ಟರ ಮೇಲೆ ಕೇಸೇನೊ ದಾಖಲಾಗಿದೆ. ಆದರೆ, ಬಿಜೆಪಿ ಸರ್ಕಾರಕ್ಕೆ ಭಟ್ಟರಂತವರ ಕೋಮು ಅಜೆಂಡಾ ಅರ್ಥವಾದಷ್ಟು ಸಲೀಸಾಗಿ ಮಕ್ಕಳ ಮನೋಸಂಕೀರ್ಣತೆಯ ಮೇಲಾಗುತ್ತಿರುವ ಸೂಕ್ಷ್ಮ ಎಲ್ಲಿ ಅರ್ಥವಾದೀತು. ಪ್ರಕರಣ ಗಟ್ಟಿಯಾಗಿ ನಿಲ್ಲುವ ಸಂಭವವೇ ಇಲ್ಲ. ಆದರೆ ತಮ್ಮ ಮಕ್ಕಳು ರೂಪುಗೊಳ್ಳುತ್ತಿರುವ ಭಯಾನಕ ಭವಿಷ್ಯವನ್ನು ಈಗ ಹೆತ್ತವರೇ ಅರ್ಥ ಮಾಡಿಕೊಂಡು ಮುನ್ನೆಚ್ಚರಿಕೆ ವಹಿಸಬೇಕಿದೆಯಷ್ಟೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...