Homeಕರ್ನಾಟಕಲಂಕೇಶ್ ಮೋಹಕ ರೂಪಕಗಳು ಕಟ್ಟಿಕೊಡುವ ವ್ಯಕ್ತಿಚಿತ್ರಣಗಳು...

ಲಂಕೇಶ್ ಮೋಹಕ ರೂಪಕಗಳು ಕಟ್ಟಿಕೊಡುವ ವ್ಯಕ್ತಿಚಿತ್ರಣಗಳು…

- Advertisement -
- Advertisement -

| ಕುಮಾರ ರೈತ |

ಪಿ. ಲಂಕೇಶ್ ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ, ಪತ್ರಿಕಾರಂಗವನ್ನು ಪ್ರಭಾವಿಸಿದವರು. ಇವರ ವರ್ತುಲದಲ್ಲಿದ್ದವರು ತಾವು ಕಂಡ ಲಂಕೇಶ್ ಅವರನ್ನು ಚಿತ್ರಿಸಿದ್ದಾರೆ. ಆದರೆ ಆ ಕೃತಿಗಳಲ್ಲಿ ಲಂಕೇಶರು ಚೆದುರಿದ ಚಿತ್ರಗಳು ಎನ್ನುವ ಹಾಗೆ ಕಾಣಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿಯೇ ಅವರ ವಿದ್ಯಾರ್ಥಿ, ಅನುಗಾಲದ ಗೆಳೆಯ ಶೂದ್ರ ಶ್ರೀನಿವಾಸ್ ಅವರು “ಲಂಕೇಶ್ ಮೋಹಕ ರೂಪಗಳ ನಡುವೆ” ಕೃತಿ ಬರೆದಿದ್ದಾರೆ.

ಕೃತಿಯ ಆರಂಭದಲ್ಲಿ ಶೂದ್ರ ಶ್ರೀನಿವಾಸ್ ಹೀಗೆ ಹೇಳುತ್ತಾರೆ “ಡಾ. ಜಾನ್ಸನ್ ಮತ್ತು ಬಾಸ್ ವೆಲ್ ಎಂಬ ಎರಡು ದೀಪಸ್ತಂಭಗಳನ್ನು ರೂಪಕವಾಗಿಟ್ಟುಕೊಂಡು ‘ಲಂಕೇಶ್; ಮೋಹಕ ರೂಪಗಳ ನಡುವೆ’ ಕೃತಿಯನ್ನು ನೋಡಲು ಪ್ರಯತ್ನಿಸಿರುವೆ. ಇಲ್ಲಿ ನನಗೆ ಲಂಕೇಶ್ ಅವರ ವ್ಯಕ್ತಿತ್ವವೇ ಪ್ರಧಾನ” ಲೇಖಕರ ಇರಾದೆ ಹೀಗಿದ್ದರೂ ಅದು ಅವರು ಅಂದುಕೊಂಡ ಚೌಕಟ್ಟನ್ನೂ ಮೀರಿ ಬೆಳೆದು, ಚಿತ್ರಪಟಗಳಂತೆ ಸರಿದು ಹೋಗುವ ವ್ಯಕ್ತಿಚಿತ್ರಗಳಾಗಿವೆ.

ಲಂಕೇಶ್ ಅವರ ಒಡನಾಟದಲ್ಲಿ, ಸಾಂಗತ್ಯದಲ್ಲಿ, ಪರಿಧಿಯಲ್ಲಿ ಕರ್ನಾಟಕ ಸಾಂಸ್ಕೃತಿಕ-ರಾಜಕೀಯ ಲೋಕದ ಗಣ್ಯರುಗಳು ಬಂದು ಹೋಗಿದ್ದಾರೆ. ಲಂಕೇಶರ ವ್ಯಕ್ತಿತ್ವವನ್ನು ಇಡಿಯಾಗಿ ಹಿಡಿಯ ಹೊರಟ ಶೂದ್ರ ಶ್ರೀನಿವಾಸರು ಇಂಥ ಬಹುತೇಕರ ವ್ಯಕ್ತಿಚಿತ್ರಣವನ್ನೂ ಕಟ್ಟಿಕೊಡುತ್ತಾರೆ. ಅದೇ ಕಾಲದಲ್ಲಿ ಆ ವ್ಯಕ್ತಿಗಳ ಕಣ್ಣುಗಳಲ್ಲಿ ಲಂಕೇಶ್ ಚಿತ್ರಿತವಾದ ರೀತಿಯೂ ಇಲ್ಲಿ ಅನಾವರಣಗೊಂಡಿದ್ದೆ. ಇದು ‘ಲಂಕೇಶ್; ಮೋಹಕ ರೂಪಗಳ ನಡುವೆ’ ಕೃತಿಯ ಬಹುಮುಖ್ಯ ವೈಶಿಷ್ಟ್ಯ.

ಶೂದ್ರ ಶ್ರೀನಿವಾಸ್ ಈ ಕೃತಿಯನ್ನು ಏಕೆ ಬರೆದರು ಎಂಬುದೂ ಪ್ರಶ್ನೆ. ತಮಗೆ ಪಾಠ ಮಾಡಿದ, ಪ್ರಭಾವಿಸಿದ, ಸಾಮಿಪ್ಯದಿಂದ ರೇಗಿಸಿದ, ನೋಯಿಸಿದ ಲಂಕೇಶರು ಇಲ್ಲವಾದ ನಂತರವೂ ಮನೋಭಿತ್ತಿಯಲ್ಲಿ ಅನುಗಾಲವೂ ಕಾಡುತ್ತಿರುವುದರಿಂದ ಬಿಡುಗಡೆ ಪಡೆದು ನಿರಾಳವಾಗುವ ಹಿನ್ನೆಲೆಯಲ್ಲಿ ಬರೆದಿದ್ದಾರೆ ಎಂಬುದು ಇದನ್ನೋದುವಾಗ ಗಮನಕ್ಕೆ ಬರುತ್ತದೆ. ಆದ್ದರಿಂದಲೇ ತಮ್ಮ ಆರಂಭದ ಮಾತುಗಳಿಗೆ ಅವರಿಟ್ಟ ಹೆಸರು “ನಿರಾಳವಾಗುವುದೆಂದರೆ”.

ಲಂಕೇಶರನ್ನು ಹತ್ತಿರದಿಂದ ಕಾಣದೇ ಅವರ ಕೃತಿಗಳ ಮೂಲಕವೇ ಪರಿಚಯಿಸಿಕೊಂಡವರು ಅನೇಕ. ಅವರ ವ್ಯಕ್ತಿ ಚಿತ್ರಣ ನೀಡುವ ಪುಸ್ತಕಗಳಿಂದ, ಗೊತ್ತಿದ್ದವರು, ಗೊತ್ತಿಲ್ಲದವರು ಹೇಳುವ ವರ್ಣರಂಜಿತ ಹೇಳಿಕೆಗಳಿಂದ ಅಸ್ಪಷ್ಟ ವ್ಯಕ್ತಿಚಿತ್ರಣವನ್ನೂ ಕಟ್ಟಿಕೊಂಡಿರುತ್ತಾರೆ. ಆದರೆ ಈ ಕೃತಿ ಅವರ ಬಗ್ಗೆ ಸ್ಪಷ್ಟ ಚಿತ್ರಣವನ್ನು ಕಟ್ಟಿಕೊಡಲು ಯತ್ನಿಸುತ್ತದೆ. ಇದಿಷ್ಟೇ ಅಲ್ಲ; ಈ ಕೃತಿಯಿಂದ 50 ವರ್ಷಗಳ ಕರ್ನಾಟಕದ ರಾಜಕೀಯ – ಸಾಂಸ್ಕೃತಿಕ – ರಾಜಕೀಯ ದಿನಗಳ ಪರಿಚಯವೂ ಆಗುತ್ತದೆ.

ಸಾಹಿತಿ ರಾಜೇಂದ್ರ ಚೆನ್ನಿ ಅವರ ಮುನ್ನಡಿಯಲ್ಲಿ “ಲಂಕೇಶರ ಬಗ್ಗೆಗಿನ ಕೃತಿಯನ್ನು ಓದುವುದು, ಕೆಲವು ದಶಕಗಳ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ ಓದಿದಂತೆ. ಕೊನೇಪಕ್ಷ ಎರಡು ತಲೆಮಾರುಗಳ ಪ್ರಜ್ಞೆಯನ್ನು ರೂಪಿಸಿದ ಎಲ್ಲ ಸಾಂಸ್ಕೃತಿಕ ಘಟನೆಗಳ ಹಿಂದೆ ಲಂಕೇಶ್ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಇದ್ದಾರೆ. ಲಂಕೇಶ್ ಪತ್ರಿಕೆ ಸೆಕ್ಯುಲರ್ ಸಂವೇದನೆ ಕಾಪಾಡಿ ಬೆಳೆಸಿದೆ. ರಾಜಕೀಯ ಹಾಗೂ ಇತರ ಅಧಿಕಾರ ಕೇಂದ್ರಗಳನ್ನು ಆದಷ್ಟು ಮಟ್ಟಿಗೆ ಎಚ್ಚರವಾಗಿಸಿದೆ. ಶೂದ್ರರ ನಿರೂಪಣೆಯಲ್ಲಿ ಆ ಕಾಲದ ಎಲ್ಲ ಮುಖ್ಯಘಟನೆಗಳೂ ಬಂದು ಹೋಗುತ್ತವೆ” ಎಂದಿದ್ದಾರೆ.

ಲಂಕೇಶರ ಯೌವ್ವನ, ಗರ್ವ, ಆರ್ಥಿಕ ಅಸಹಾಯಕತೆ, ಶ್ರೀಮಂತಿಕೆ, ಜನಪ್ರಿಯತೆ ಎಲ್ಲವನ್ನೂ ಕಂಡ ಲೇಖಕರು ಅವರು ಸಾಯುವ ಕೆಲವು ದಿನಗಳ ಮುಂಚೆ ಭೇಟಿ ಮಾಡುತ್ತಾರೆ. ಆಗ ಲಂಕೇಶರು ಹೇಳುವ ಮಾತುಗಳು ಓದುಗರನ್ನು ಆರ್ದ್ರಗೊಳಿಸುತ್ತವೆ. ಮನುಷ್ಯನ ಅಸಹಾಯಕ ಘಳಿಗೆಗಳು ದಿಗಿಲು ಮೂಡಿಸುವಂತೆ, ನಮ್ಮೊಳಗನ್ನು ನಾವೇ ನೋಡಿಕೊಳ್ಳುವಂತೆ ಮಾಡುತ್ತವೆ…

ಕೃತಿ: ಲಂಕೇಶ್ ಮೋಹಕ ರೂಪಗಳ ನಡುವೆ

ಲೇಖಕ: ಶೂದ್ರ ಶ‍್ರೀನಿವಾಸ್

ಪ್ರಕಾಶನ: ಪಲ್ಲವ ಪ್ರಕಾಶನ, ಬಳ್ಳಾರಿ, ಸಂಪರ್ಕ ಸಂಖ್ಯೆ: 94803 53507

ಪುಟಗಳು: 282, ಬೆಲೆ: 250 ರೂ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...