ಔಧ್ಯಮಿಕ ಸೋಲು ಮತ್ತು ಒತ್ತಡಗಳ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಎಸ್.ಎಂ ಕೃಷ್ಣರ ಅಳಿಯ, ಕಾಫಿ ಡೇ ಸ್ಥಾಪಕ ಸಿದ್ಧಾರ್ಥರವರ ಮನದಾಳದ ಮುಖ್ಯ ಮಾತುಗಳು ಇಲ್ಲಿವೆ..
ನನ್ನ ಯಶಸ್ಸಿಗೆ ಕಾರಣ – ನನ್ನ ತಂದೆ
ನಾನು ಸದಾ ಚಿರಋಣಿಯಾಗಿರುವದು – ಮಹೇಂದ್ರಭಾಯಿ
ನಾನು ಅತ್ಯಂತ ರಿಲ್ಯಾಕ್ಸ್ ಆಗಿರುವುದು – ಚಿಕ್ಕಮಗಳೂರಿನ ನಮ್ಮ ಪೂರ್ವಜರ ಮನೆಯಲ್ಲಿ, ಕಾಫಿ ಪ್ಲ್ಯಾಂಟೇಷನ್‍ನಲ್ಲಿ ಸುತ್ತಾಡುವಾಗ
ಅತ್ಯಂತ ಶಾಂತಿಯುತ ಸಮಯ – ಕಲ್ಕತ್ತಾದ ರಾಮಕೃಷ್ಣ ಆಶ್ರಮದಲ್ಲಿ
ಅತ್ಯಂತ ದುಃಖದ ದಿನ – 2007 ಡಿಸೆಂಬರ್ 31, ಕೊಲ್ಕತ್ತಾದ ಒಂದು ಕೆಫೆ ಕಾಫಿ ಡೇ ಅಲ್ಲಿ ಗ್ರಾಹಕರಿಗೆ ಸರ್ವ್ ಮಾಡಿದಾಗ
ಅತ್ಯಂತ ಪ್ರಮುಖ ನಿರ್ಧಾರ – ಕಾಫಿ ಡೆ ಬ್ರ್ಯಾಂಡ್ ಸೃಷ್ಟಿಸುವುದು
ನಿದ್ರೆ ಕಳೆದುಕೊಂಡ ದಿನಗಳು – ಸ್ಟಾರ್‍ಬಕ್ಸ್ ಭಾರತಕ್ಕೆ ಬರುತ್ತಿರುವಾಗ
ಅತ್ಯಂತ ದೊಡ್ಡ ಸಂತೃಪ್ತಿಯ ವಿಷಯ – 43,000 ಜನರಿಗೆ ಉದ್ಯೋಗ ನೀಡಿದ್ದು
ನನ್ನ ಈಗಿನ ಕನಸು – ವಿಶ್ವದ ಮೂರು ಅತ್ಯಂತ ದೊಡ್ಡ ಕಾಫಿ ಬ್ರ್ಯಾಂಡ್‍ಗಳಲ್ಲಿ ಒಂದು ಎಂತಾಗುವುದು
ಇಶಾನ್ ಮತ್ತು ಅಮೃತಾಗೆ ನಿಮ್ಮ ಸಲಹೆ – ನಿಮ್ಮ ಕನಸಿನ ಬೆನ್ನು ಹತ್ತಿ, ಸಕಾರಾತ್ಮಕವಾಗಿ ಯೋಚಿಸಿ, ಕಠಿಣ ಶ್ರಮ ಪಡಿ, ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಿ, ಇಲ್ಲದಿದ್ದರೆ ಯಾವ ಪ್ರತಿಫಲವೂ ಸಿಗುವುದಿಲ್ಲ.
ಪರಮಸುಖ – ಅಮ್ಮ ಮಾಡಿದ ಮಲೆನಾಡಿನ ಊಟ, ಅಂಡಮಾನ್‍ನಲ್ಲಿ ಹ್ಯಾವ್‍ಲಾಕ್, ಕ್ಯಾಪಚಿನೊ
(ಸಿದ್ಧಾರ್ಥ್ ರವರು ನೀಡಿದ ಸಂದರ್ಶನದಿಂದ ತೆಗೆದುಕೊಳ್ಳಲಾಗಿದೆ)


